ಅಮೇಥಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೨೯ ನೇ ಸಾಲು:
ಅಮೇಥಿಯು ಸುಲ್ತಾನ್‌ಪುರದ ನೈಋತ್ಯ ದಿಕ್ಕಿನಿಂದ ಸುಮಾರು ೪೦ ಕಿ.ಮೀ.ನ ರಾಯ್‌ಬರೇಲಿ-ಅಮೇಥಿ-ಸುಲ್ತಾನ್‌ಪುರ್ ರಸ್ತೆಯಮೇಲೆ ಪೂರ್ಣ ವಿಸ್ತಾರದಲ್ಲಿ ೨೬ ಡಿಗ್ರೀ ೯ ನಿಮಿಷ ಉತ್ತರ ದಿಕ್ಕಿನಲ್ಲಿ ಮತ್ತು ರೇಖಾಂಶದಲ್ಲಿ ೮೧ ಡಿಗ್ರೀ ೪೯ ನಿಮಿಷ ಪೂರ್ವ ದಿಕ್ಕಿನಲ್ಲಿದೆ. ಇದನ್ನು ರಾಯ್ಪುರ್-ಅಮೇಥಿ ಎಂದು ಸಹ ಕರೆಯಲಾಗುತ್ತದೆ, ಇದಕ್ಕೆ ಕಾರಣ ರಾಯ್ಪುರ್ ರಾಮನಗರದಲ್ಲಿ ವಾಸಿಸಿದ ಅಮೇಥಿಯ ರಾಜನಿಗೆ ಸೇರಿದ್ದಾಗಿರುತ್ತದೆ. ಅವರ ಪೂರ್ವಜರು ರಾಯ್ಪುರ್-ಫುಲ್ವಾರಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ, ಅಲ್ಲಿ ಇಂದಿಗೂ ಹಳೆಯ ಕೋಟೆಯನ್ನು ಕಾಣಬಹುದಾಗಿದೆ. ಇಲ್ಲಿ ಹನುಮಾನ್‌ಗರ್ಹಿ ಎಂದು ಕರೆಯುವ ದೇವಸ್ಥಾನ ಮತ್ತು ಮಸೀದಿ ಸಹ ಇವೆ, ಇವೆರಡೂ ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಿದ್ದವಾಗಿವೆ. ರಾಮನಗರದ ಉತ್ತರ ದಿಕ್ಕಿನಲ್ಲಿ ಸುಮಾರು ಮೂರು ಕಿಲೋಮೀಟರುಗಳ ದೂರದಲ್ಲಿ, ಅವರು ಮರಣಹೊಂದಿದ ಸ್ಥಳದಲ್ಲಿ, ಪ್ರಸಿದ್ಧ ಕವಿಯಾದ ಸಂತ ಮಲಿಕ್ ಮಹಮದ್ ಜಯಸಿರವರ ಗೋರಿ ಇದೆ, ಮತ್ತು ಕೋಟೆಯನ್ನು ಬಚ್ಗೋಟಿ ರಾಜಸ್‌ರವರಿಂದ ನಿರ್ಮಿಸಲಾಯಿತು.
 
ಇದನ್ನು ಭಾರತೀಯ ನೆಹರು-ಗಾಂಧಿ ರಾಜಕೀಯ ರಾಜಮನೆತನದ ಅಧಿಕಾರದ ಸ್ಥಾನವಾಗಿಯು ಗುರುತಿಸಲಾಗುತ್ತದೆ. ಮಾಜಿ ಪ್ರಧಾನ ಮಂತ್ರಿ [[ಜವಾಹರಲಾಲ್ ನೆಹರು|ಜವಹರ್‌ಲಾಲ್ ನೆಹರು]], ಅವರ ಮಮ್ಮಕ್ಕಳಾದ [[ಸಂಜಯ್ ಗಾಂಧಿ|ಸಂಜಯ್]] ಮತ್ತು [[ರಾಜೀವ್ ಗಾಂಧಿ|ರಾಜೀವ್ ಗಾಂಧಿ]] ([[ಇಂದಿರಾ ಗಾಂಧಿ|ಇಂದಿರ ಗಾಂಧಿ]]ಯ ಮಕ್ಕಳು), ಹಾಗು ರಾಜೀವ್‌ರ ಪತ್ನಿಯಾದ [[ಸೋನಿಯಾ ಗಾಂಧಿ|ಸೋನಿಯ ಗಾಂಧಿ]] ಇವರೆಲ್ಲರೂ ಈ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ೨೦೦೪ರಲ್ಲಿ, ಕುಟುಂಬದ ಐದನೇ ಸದಸ್ಯರಾದ, ಸೋನಿಯ ಮತ್ತು ರಾಜೀವ್‌ರ ಮಗ ರಾಹುಲ್ ಗಾಂಧಿ, ೨೦೦೪ರ ಸಾರ್ವತ್ರಿಕ ಚುನಾವಣೆಯ ಸ್ಥಾನಕ್ಕೆ ಸುಲಭವಾಗಿ ಆಯ್ಕೆಯಾದರು. ಆ ಪ್ರದೇಶದ ಶೈಕ್ಷಣಿಕ ಮುಖ್ಯಸ್ಥಳವಾಗಿ ಇದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಪಾರ್ಮೇಷನ್ ಟೆಕ್ನಾಲಜಿ ಮತ್ತು ರಾಜರ್ಷಿ ರನನ್‌ಜಯ್ ಪೋಸ್ಟ್ ಗ್ರಾಜ್ಯುಯೇಟ್ ಕಾಲೇಜ್‌ ಅನ್ನು ಒಳಗೊಂಡಿದೆ. ಅಮೇಥಿಯು [[ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್|ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌]]ನ ವಿಭಾಗವಾದ ಏವಿಯೋನಿಕ್ಸ್‌‌ನ ಹೆಗ್ಗಳಿಕೆಗೂ ಪಾತ್ರವಾಗಿದೆ, ಈ ಸಂಸ್ಥೆಯು ಇಂಡಿಯನ್ ಏರ್‌ಪೋರ್ಸ್‌ಗೆ ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊತ್ತಿದೆ. ಅಮೇಥಿಯು ಇಂಡೋ ಘಲ್ಫ್ ಫೆರ್ಟಿಲೈಸರ್ಸ್‌ನ ಘಟಕವನ್ನು ಸಹ ಹೊಂದಿದೆ.
 
ಲಕ್ನೋದಲ್ಲಿ ೭ ಅಕ್ಟೋಬರ್ ೨೦೦೩ರಂದು, ರಾಜ್ಯದ ಸಚಿವ ಸಂಪುಟವು, ಅಮೇಥಿಯನ್ನು ಛತ್ರಪತಿ ಸಾಹುಜಿ ಮಹರಾಜ ನಗರ ಎಂದು ಮರು ಹೆಸರಿಸುವ ಮುಂಚಿನ ಪ್ರಕಟಣೆಯನ್ನು ರದ್ದುಪಡಿಸಿತು. ಈಗ ಅಮೇಥಿಯು ಅದರ ಮೊದಲಿನ ಹೆಸರಿನಿಂದಲೇ ಗುರುತಿಸಲಾಗುತ್ತದೆ ಎಂದು, ಮುಖ್ಯ ಕಾರ್ಯದರ್ಶಿಗಳಾದ ಅಖಂದ್ ಪ್ರತಾಪ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದರು. ಅಮೇಥಿಯು ಮುಷಿಗಂಜ್‌ನಲ್ಲಿ ಸಂಜಯ್ ಗಾಂಧಿ ಹಾಸ್ಪಿಟಲ್ ಹೆಸರಿನ ಪ್ರಸಿದ್ಧಆಸ್ಪತ್ರೆಯನ್ನು ಹೊಂದಿದೆ. ಸೊಸೈಟಿ ಫಾರ್ ಅನಿಮಲ್ ಹೆಲ್ತ್ ಅಗ್ರಿಕಲ್ಚರ್ ಸೈನ್ಸ್ ಆಂಡ್ ಹ್ಯುಮ್ಯಾನಿಟಿ ಅನ್ನುವುದು ಸುಪ್ರಸಿದ್ಧ ಸರಕಾರೇತರ ಸಂಸ್ಥೆಯಾಗಿದ್ದು, ಇದರ ನೊಂದಾಯಿತ ಕಛೇರಿಯು ಮನ್ಷಿಗಂಜ್‌ನಲ್ಲಿದೆ, ಇದು ಅಮೇಥಿಯಲ್ಲಿನ ಗ್ರಾಮೀಣ ಜೀವನದ ಮಾರ್ಪಾಟುಗೆ ಮೀಸಲಾಗಿದೆ.
೫೧ ನೇ ಸಾಲು:
 
==ಸಾರಿಗೆ==
ಅಮೇಥಿಯು ಉತ್ತರ ಪ್ರದೇಶದ ಮತ್ತು ಈಶಾನ್ಯ [[ಭಾರತ|ಭಾರತಭಾರತದ]] [[ಭಾರತೀಯ ರೈಲ್ವೆ|ಭಾರತೀಯ ರೈಲುಮಾರ್ಗಗಳು]] ಮತ್ತು ರಸ್ತೆಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಬಹಳಷ್ಟು ಪ್ರಮುಖ ಪ್ರದೇಶಗಳಿಗೆ ನೇರ ರೈಲು ಸಂಪರ್ಕ ವ್ಯವಸ್ಥೆಯಿದೆ, ಅವೆಂದರೆ [[ದೆಹಲಿ|ದೆಹಲಿ]], ಲಕ್ನೌ, [[ಕಾನ್ಪುರ|ಕಾನ್ಪುರ್]], [[ದೆಹರಾದೂನ್‌|ಡೆಹ್ರಾಡೂನ್]], [[ಹರಿದ್ವಾರ|ಹರಿದ್ವಾರ]], [[ಅಲಹಾಬಾದ್|ಅಲಹಬಾದ್]], [[ವಾರಾಣಸಿ|ವಾರಣಾಸಿ]], [[ಕೊಲ್ಕತ್ತ|ಕೊಲ್ಕತ್ತಾ]], [[ಪುರಿ|ಪುರಿ]] ಇನ್ನೂ ಹೆಚ್ಚಿನ ನಗರಗಳಿವೆ.
 
ಉತ್ತರ ಪ್ರದೇಶ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ನ ಹಲವಾರು ಬಸ್ಸುಗಳು ಅಮೇಥಿಯಿಂದ ಸ್ಥಳೀಯ ಹಾಗೂ ರಾಷ್ಟ್ರೀಯ ಸ್ಥಳಗಳೊಂದಿಗೆ ಸಂಪರ್ಕ ಹೊಂದುವಂತೆ ಕಾರ್ಯನಿರ್ವಹಿಸುತ್ತವೆ.
"https://kn.wikipedia.org/wiki/ಅಮೇಥಿ" ಇಂದ ಪಡೆಯಲ್ಪಟ್ಟಿದೆ