"ಅನಂತ ಪೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
|website= [http://www.unclepai.com/ ಅಧಿಕೃತ ಜಾಲತಾಣ]
}}
 
 
'''ಕಾರ್ಕಳ ವೆಂಕಟ್ರಾಯ ಅನಂತ್ ಪೈ''' ರವರು (೧೭ ಸೆಪ್ಟೆಂಬರ್ ೧೯೨೯ -೨೪ ಫೆಬ್ರುವರಿ ೨೦೧೧) ಭಾರತದ ಅಥವಾ ವಿಶ್ವದ ಮಕ್ಕಳಿಗೆ ’[[ಅಂಕಲ್ ಪೈ]]’ ಯೆಂದೇ ಪ್ರಸಿದ್ದರಾಗಿದ್ದಾರೆ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೈಶಲ್ಯಕ್ಕೆ ಸಾಕ್ಷಿಯಾಗಿವೆ.ಮಕ್ಕಳ ಸುಶುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ಕ್ಲಿಶ್ಟವಾದ ಪೌರಾಣಿಕ ಐತಿಹಾಸಿಕ ಕಥಾ ಸನ್ನಿವೇಷಗಳನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿ ರಂಜಿಸಿದ ಕೀರ್ತಿ 'ಪೈ'ರವರಿಗೆ ಸಲ್ಲುತ್ತದೆ. '[[ಅನಂತ್ ಪೈ]]' ಒಬ್ಬ ಸೃಜನಶೀಲ ಬರಹಗಾರರು. ಮಕ್ಕಳನ್ನು ಕಂಡರೆ ಅವರಿಗೆ ಅತೀವ ಪ್ರೀತಿ. ಸ್ವತಃ ಆವರಿಗೆ ಮಕ್ಕಳಿಲ್ಲದಿದ್ದರೂ ವಿಶ್ವದ ಮಕ್ಕಳಿಗಾಗಿ ಅವರು ರಚಿಸಿದ ಕಥಾಚಿತ್ರಗಳು ಅಪಾರ ;ಹಾಗೂ ಅನನ್ಯ. ಫೆಬ್ರವರಿ ೧೯ ರಂದು 'ಭಾರತದ ಮೊಟ್ಟಮೊದಲ ಕಾಮಿಕ್ಸ್ ಸಮಾವೇಶ'ದಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ ' ಪಡೆದು ಸನ್ಮಾನಿಸಲ್ಪಟ್ಟರು.
 
==ಪಂಚತಂತ್ರದ ಅಮೂಲ್ಯ ಕಥೆಗಳು==
'ಅಮರಚಿತ್ರ ಕಥೆಗಳ ಪುಸ್ತಕ'ಗಳಲ್ಲಿ 'ಪೈ'ರವರು ಹೆಣೆದಿರುವ 'ಪಂಚತಂತ್ರದ ಅದ್ಬುತ ಕಥೆಗಳು', 'ವಿಷ್ಣು ಶರ್ಮರ, ಜಾತಕ ಕಥೆ'ಗಳನ್ನುಆಧರಿಸಿವೆ. ಅದಲ್ಲದೆ, ಅಮರ ಚಿತ್ರ ಕಥಾ ಸಂಗ್ರಹ, ಧೀರ-ಶೂರ-ಯೋಧರ ಜೀವನ ಕಥೆಯ ಚಿತ್ರಗಳು, ಸಾಂಪ್ರದಾಯಿಕ, ಜನಪದೀಯ ಕೃತಿಗಳ ಸಂಗಮ. 'ಅಮರಚಿತ್ರ ಕಥೆಗಳ ಪುಸ್ತಕಗಳು' ವರ್ಷದಲ್ಲಿ ೩ ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ.
 
==ಜನನ, ಬಾಲ್ಯ, ವಿದ್ಯಾಭ್ಯಾಸ==
ಅವರ ತಂದೆ, ವೆಂಕಟ್ರಾಯ ಮತ್ತು ತಾಯಿ ಸುಶೀಲಾ ಪೈ. ಈ ಕೊಂಕಣಿ ಭಾಷೆಯನ್ನು ಮಾತಾಡುವ ದಂಪತಿಗಳ ಮಗನಾಗಿ ಅವರು, ೧೯೨೯ ರ ಸೆಪ್ಟೆಂಬರ್, ೧೭ ರಂದು [[ಕಾರ್ಕಳ]]ದಲ್ಲಿ ಜನಿಸಿದರು. ಅವ್ರು ಇನ್ನೂ ಎರಡುವರ್ಷದ ಮಗುವಾಗಿರುವಾಗಲೇ ತಂದೆತಾಯಿಗಳು ಮೃತರಾದರು. ಸಂಬಂಧಿಕರ ಸಹಕಾರದಿಂದ ಅನಂತ್ ರವರು ಬಾಲ್ಯಾವಸ್ಥೆಯನ್ನು ಕಳೆದರು. ಅವರು ತಮ್ಮ ೧೨ ನೆಯ ವಯಸ್ಸಿನಲ್ಲಿ [[ಬೊಂಬಾಯಿ]]ಗೆ ಬಂದರು. ಅಲ್ಲಿ ಬೊಂಬಾಯಿನ ಉಪನಗರವಾದ [[ಮಾಹಿಮ್]] ನ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ಮುಂದೆ, [[ಮುಂಬಯಿ]] ವಿಶ್ವವಿದ್ಯಾಲಯದ ಕೆಮಿಕಲ್ ಟೆಕ್ನೋಲಜಿ ವಿಭಾಗದಲ್ಲಿ ಎರಡು ಪದವಿಗಳನ್ನು ಗಳಿಸಿದರು.
 
==ಚಿತ್ರಕಲೆಯಲ್ಲಿ ನಿಷ್ಣಾತರು==
ಬಾಲ್ಯದಿಂದಲೇ ಚಿತ್ರಗಳನ್ನು ಸಮರ್ಪಕವಾಗಿ ಬರೆಯುತ್ತಿದ್ದ ಅನಂತ್ ರವರು, ಆ ಕಲೆಯನ್ನು ಚೆನ್ನಾಗಿ ಬೆಳೆಸಿಕೊಳ್ಳಲು ಅವರ ಬಂಧುವರ್ಗದವರು, ಸಹಾಯಮಾಡಿದರು. ಮುಂದೆ ಅವರು [[ಬೊಂಬಾಯಿ]]ನ ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯ ಪುಸ್ತಕ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಇಂದ್ರ ಜಾಲ ಕಾಮಿಕ್ಸ್ ನಲ್ಲಿ ಕೆಲಸಮಾಡುತ್ತಿರುವಾಗ, ಒಂದು ಕ್ವಿಝ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸನ್ನಿವೇಶ ಒದಗಿತು. ಭಾರತದ ಮಕ್ಕಳು, ಗ್ರೀಕ್, ರೋಮನ್ ದೇವಿ-ದೇವತೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು, ನಮ್ಮದೇಶದ [[ರಾಮಾಯಣ]], [[ಮಹಾಭಾರತ]] ಮುಂತಾದ ಮಹಾಕಾವ್ಯಗಳ ಬಗ್ಗೆ ತಿಳುವಳಿಕೆ ಇಲ್ಲದ್ದನು ಮನಗಂಡರು. ಈ ಸಂಗತಿ ಅವರಿಗೆ ಬೇಸರತಂದಿದ್ದಲ್ಲದೆ ಈ ಜಾಡಿನಲ್ಲಿ ತಾವು ಕೆಲಸಮಾಡಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಪುರಾಣಗಳ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ದಿಕ್ಕಿನಲ್ಲಿ ತಮ್ಮ ಚಿತ್ರಕಥೆಗಳನ್ನು ಹೆಣೆಯಲು ಹೆಣಗಿ ಯಶಸ್ವಿಯಾದರು.
 
==ಅಮರ ಚಿತ್ರ ಕಥೆ==
೧೯೬೭ ರಲ್ಲಿ, ಮೊಟ್ಟಮೊದಲು ಅನಂತ ಪೈ ಹೊರತಂದ ಚಿತ್ರಕಥಾ ಸಂಗ್ರಹವೆಂದರೆ ಅಮರಚಿತ್ರಕಥಾ. [[ಹಿಂದಿ]], [[ಇಂಗ್ಲೀಷ್]] ಭಾಷೆಗಳಲ್ಲಿ ಬರಹವಿದ್ದ ಈ ಪ್ರತಿಗಳು ಕಾಲಾಂತರದಲ್ಲಿ [[ಭಾರತ]]ದ ಹಲವು ಭಾಷೆಗಳಲ್ಲಿ, ನಂತರ ವಿಶ್ವ ಪ್ರಮುಖ ಭಾಷೆಗಳಲ್ಲಿ ಬರಲಾರಂಭಿಸಿದವು. ತೆನಾಲಿರಾಮನ ಚಿತ್ರದ ಜೊತೆ [[ತೆನಾಲಿ ರಾಮಕೃಷ್ಣ]] ನ ಕಥೆ ಓದಿದ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಅಚ್ಚೊತ್ತಿರುವ ವ್ಯಕ್ತಿತ್ವ ಅನನ್ಯವಾದದ್ದು. ಬೇರೆ ಪಾತ್ರಗಳಾದ [[ಸಾವಿತ್ರಿ]], [[ನಳ]] [[ದಮಯಂತಿ]], [[ವಸಂತಸೇನೆ]]-ಉದಯನ, [[ರಾಮ]], [[ಪರಶುರಾಮ]], [[ಶ್ರವಣಕುಮಾರ]], [[ಶಿಶುಪಾಲ]], [[ಜರಾಸಂಧ]], [[ಶಕುಂತಲೆ]], [[ಕಿತ್ತೂರು ಚೆನ್ನಮ್ಮ]], [[ರಾಣಿ ಅಬ್ಬಕ್ಕ]], ಎಲ್ಲ ಒಂದೊಂದು ಕಲ್ಪನೆಯನ್ನು ಉಳಿಸಿಹೋಗಿದ್ದಾರೆ.
==ಮಕ್ಕಳಿಗಾಗಿ ಪುಸ್ತಕಗಳೇ ಇರದಕಾಲದಲ್ಲಿ==
[[ಭಾರತ]]ದಲ್ಲಿ ಟೆಲಿವಿಶನ್ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ, ಪಟ್ಟಣಗಳಲ್ಲಿ, 'ಫ್ಯಾಂಟಮ್','ಸೂಪರ್ ಮ್ಯಾನ್', 'ಆರ್ಚಿ', ಮೊದಲಾದ ಇಂಗ್ಲೀಷ್ ಚಿತ್ರಕಥೆಗಳ ಪುಸ್ತಕಗಳು ಜನಪ್ರಿಯವಾಗಿದ್ದವು. ಭಾರತೀಯ ಭಾಷೆಗಳಲ್ಲಿ ಉತ್ತಮ ಮಟ್ಟದ ಕಥಾಚಿತ್ರಪುಸ್ತಕಗಳು ಹೆಚ್ಚಿಗೆ ಬಂದಿರಲಿಲ್ಲ. ಆ ಸಮಯದಲ್ಲಿ 'ಪೈ'ರವರ ದೂರಾಲೋಚನೆ, ಸಮಯಪ್ರಜ್ಞೆಯ ಜೊತೆಗೆ, ಸ್ವಾರಸ್ಯವಾದ ನಿರೂಪಣೆ, ಮತ್ತು ತಕ್ಕ ಚಿತ್ರಗಳ ಅಳವಡಿಕೆ ಕ್ರಮಗಳಿಂದ ಭಾರತದ ಪುರಾಣಗಳು ಮತ್ತು ಇತಿಹಾಸದಿಂದ ಆಯ್ದು ಸಿದ್ಧಪಡಿಸಿದ ಸುಂದರ ಕಥಾ ಪ್ರಸಂಗಗಳು ಒಮ್ಮೆಲೇ ಮಕ್ಕಳ ಆಸಕ್ತಿಯನ್ನು ಕೆರಳಿಸಿ ಜನಪ್ರಿಯವಾದವು.
 
==ದೇಶದಾದ್ಯಂತ 'ಪೈ'ರವರ ಪುಸ್ತಕಗಳು ಲಭ್ಯವಾದವು==
ಕತೆ ಪುಸ್ತಕ ಓದುವ ಗೀಳನ್ನು ಕೇವಲ ಮಕ್ಕಳಿಗಲ್ಲದೆ ವಯಸ್ಕರಿಗೂ ಅಭ್ಯಾಸ ಮಾಡಿಸಿದ ಹಿರಿಮೆ 'ಅಂಕಲ್ ಪೈ'ರವರದು ಈ ಬೆಳವಣಿಗೆಯಿಂದ ಸ್ಪೂರ್ಥಿಪಡೆದ ಪೈರವರು, ಸನ್, ೧೯೮೦ ರಲ್ಲಿ [[ಟಿಂಕಲ್]] ಎಂಬ 'ವ್ಯಂಗ್ಯ ಚಿತ್ರಪುಸ್ತಕ'ವನ್ನು ಮಾರುಕಟ್ಟೆಗೆ ತಂದರು. ಇದು ಮಕ್ಕಳು ದೊಡ್ಡವರೆನ್ನದೆ, ಮನೆಮಂದಿಗೆಲ್ಲ ಪ್ರಿಯವಾದ ಪತ್ರಿಕೆಯಾಗಿ ಪ್ರತಿಯೊಬ್ಬರ ಮನೆಯ 'ದೀವಾನ್ ಖಾನೆಯ ಶೋಭೆ'ಯಾಗಿ ಪರಿಣಮಿಸಿತು. ಈ ಎರಡು ಪುಸ್ತಕ ಸರಣಿಗಳು ಭಾರತೀಯ ಇತಿಹಸದಲ್ಲಿ ಪ್ರಥಮಬಾರಿ ದಾಖಲೆಯನ್ನು ಸೃಷ್ಟಿಸಿದವು. ೨೦ ಭಾಷೆಗಳಲ್ಲಿ ಪ್ರಕಟವಾದ ೪೪೦ ಶೀರ್ಶಿಕೆಗಳನ್ನು ಹೊಂದಿದ ೮.೬ ಮಿಲಿಯನ್ ಪ್ರತಿಗಳನ್ನು ಕೊಂಡು ಓದುತ್ತಿರುವುದನ್ನು ಊಹಿಸುವುದು ಕಷ್ಟವಾಗಿದೆ.'ಟಿಂಕಲ್' ಪತ್ರಿಕೆಯಲ್ಲಿ, [[Letters to Uncle Pai]], ಯೆಂಬ 'ಶಿರೋನಾಮ'ದಡಿಯಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಹೇಳುವ ಪರಿ ಅನನ್ಯವಾಗಿತ್ತು, ಮತ್ತು ಅದು ಆ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ ಸಹಿತ.
 
==ಟಿಂಕಲ್ ಪತ್ರಿಕೆಯ ತಾರೆಗಳು==
* 'ಸುಪ್ಪಂಡಿ',
* 'ಕಾಲಿಯ ದ ಕ್ರೊ',
* 'ತಂತ್ರಿ ದ ಮಂತ್ರಿ', ಚಿತ್ರಣಗಳು ವೈವಿಧ್ಯಮಯವಾಗಿದ್ದು ಮಕ್ಕಳ ಮನಸ್ಸನ್ನು ರಂಜಿಸಿವೆ.
 
==ಈಗ 'ಅಮರಚಿತ್ರಕಥ' ಮತ್ತಿತರ ಬ್ರಾಂಡ್ ಗಳು,'ಡಿಜಿಟಲ್ ಮಾದರಿಯಲ್ಲಿ ಲಭ್ಯ'==
'ಸಮೀರ್ ಪಟೇಲ್' ರ ಸ್ವಾಮಿತ್ವದಲ್ಲಿ 'ಅನಂತ ಪೈ'ರವರು, ಕಥೆಗಾರರಾಗಿ ಕೆಲಸಮಾಡುತ್ತಿದ್ದರು. ಈಗ 'ಅಮರಚಿತ್ರಕಥ' ಮತ್ತಿತರ ಕಥಾಚಿತ್ರದ ಬ್ರಾಂಡ್ ಸಂಗ್ರಹಗಳು, ಎ.ಸಿ.ಕೆ ಮೀಡಿಯಾದಲ್ಲಿ, 'ಡಿಜಿಟಲ್ ಅವತಾರ'ವನ್ನು ಪಡೆದಿವೆ. 'ರಾಮಾಯಣ', 'ಮಹಾಭಾರತ',ಮತ್ತು 'ಮದರ್ ತೆರೇಸ' ರಂತಹ ವ್ಯಕ್ತಿಸಂಗ್ರಹಗಳು ಲಭ್ಯ.
 
==ಪ್ರಶಸ್ತಿ ಗೌರವಗಳು==
* 'ಕೊಂಕಣಿ ಮಿಲೇನಿಯಂ ಪ್ರಶಸ್ತಿ'
* 'ಮರಾಠಿ ಬಾಲ್ ಕುಮಾರ್ ಸಾ ಸಂಸ್ಥೆಯ ಅಧ್ಯಕ್ಷಪದವಿ'
* ಸನ್, ೨೦೧೦ ರಲ್ಲಿ, ಮುಂಬೈನ ಉಪನಗರ ಚೆಂಬೂರಿನ ಕರ್ನಾಟಸಂಘದವರು ತಮ್ಮ ಸುವರ್ಣ ಮಹೋತ್ಸವದಲ್ಲಿ ಅನಂತ್ ಪೈರವರ ಸಾಧನೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿನೀಡಿ ಗೌರವಿಸಿದರು.
 
==ಮರಣ==
೮೧ ವರ್ಷದ ಹರೆಯದ,'ಅಂಕಲ್ ಪೈ'ರವರು, ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲೆ ಮೆಟ್ಟಿಲಿನಿಂದ ಕೆಳಗೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೧ ರ ಫೆಬ್ರವರಿ ತಿಂಗಳ, ೨೪ ರ ಗುರುವಾರ, ಸಾಯಂಕಾಲ ೫ ಗಂಟೆಗೆ, 'ಹೃದಯ ಸ್ತಂಭನ'ದಿಂದ ಮರಣಿಸಿದರು. ಮೃತರು, ಪ್ರೀತಿಯ ಪತ್ನಿ [[ಲಲಿತ]], ಹಾಗೂ ಅಪಾರ ಬಂಧುವರ್ಗ ಮತ್ತು ಅವರ ಕಾಮಿಕ್ ಪುಸ್ತಕಗಳನ್ನು ಪ್ರತಿತಿಂಗಳೂ ಕಾದಿದ್ದು ಪ್ರೀತಿಯಿಂದ ಓದುವ, ವಿಶ್ವದ ಅಸಂಖ್ಯ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/200445" ಇಂದ ಪಡೆಯಲ್ಪಟ್ಟಿದೆ