ಮಧ್ಯ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
'''ಮಧ್ಯ ಪ್ರದೇಶ''' ಹೆಸರು ಸೂಚಿಸುವಂತೆ ಮಧ್ಯ [[ಭಾರತ|ಭಾರತದಲ್ಲಿರುವ]] ಒಂದು ರಾಜ್ಯ. ಇದರ ರಾಜಧಾನಿ [[ಭೂಪಾಲ್|ಭೋಪಾಲ]]. ನವಂಬರ್ ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ [[ಛತ್ತೀಸ್‍ಘಡ್|ಛತ್ತೀಸ್‍ಘಡ]]ವನ್ನು ರಚಿಸುವ ಮೊದಲು ಇದು [[ಭಾರತ|ಭಾರತದಲ್ಲಿಯೇ]] ಅತ್ಯಂತ ದೊಡ್ಡ ರಾಜ್ಯವಾಗಿತ್ತು.
== ವಿಭಾಗಗಳು ==
ಮಧ್ಯ ಪ್ರದೇಶ ರಾಜ್ಯದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ :
೧. ಭೂಪಾಲ್, ಗ್ವಾಲಿಯರ್,: ಇಂದೋರ್ಭೂಪಾಲ್, ಜಬಲ್ಪುರ್ರ್ಯಾಸೆನ್,ರಾಜ್ ರೇವಾಗರ್, ಸಗರಂದ್ಸೆಹೋರ್, ಉಜ್ಜಯಿನಿ,ಮತ್ತು ಶಹಡೋಲ್ವಿದಿಶಾ ಜಿಲ್ಲೆಗಳು.
೨. ಗ್ವಾಲಿಯರ್ : ಅಶೋಕನಗರ, ಧಾತಿಯಾ, ಗುಣಾ, ಗ್ವಾಲಿಯರ್, ಮತ್ತು ಶಿವಪುರಿ ಜಿಲ್ಲೆಗಳು.
೩. ಇಂದೋರ್ : ಬಾರ್ವಾನಿ, ಬುರ್ಹಾನ್ ಪುರ್, ಧಾರ್, ಇಂದೋರ್, ಝುಬುವಾ,ಖಾಂಡ್ವಾ, ಆಲಿರಾಜ್ ಪುರ್, ಮತ್ತು ಖಾರ್ಗೋಣೆ ಜಿಲ್ಲೆಗಳು.
೪. ಜಬಲ್ಪುರ್: ಬಾಲ್ ಘಾಟ್, ಛಿಂದ್ ವಾರಾ, ಜಬಲ್ ಪುರ್, ಕಟ್ನಿ, ಮಾಂಡ್ಲಾ, ನರಸಿಂಗ್ ಪುರ್,ಮತ್ತು ಸಿಯೋನಿ ಜಿಲ್ಲೆಗಳು.
೫. ರೇವಾ : ರೇವಾ, ಸತ್ನಾ, ಸೀಧೀ, ಮತ್ತು ಸಿಂಗ್ರೌಲಿ ಜಿಲ್ಲೆಗಳು.
೬. ಸಗರಂದ್ : ಛತ್ತರ್ ಪುರ್, ದಾಮೋಹ್, ಪನ್ನಾ, ಸಾಗರ್, ಮತ್ತು ಟಿಕಮ್ ಗರ್ ಜಿಲ್ಲೆಗಳು.
೭. ಉಜ್ಜಯಿನಿ : ದೇವಾಸ್, ಮಂದ ಸೌರ್, ನೀಮಚ್, ರತ್ಲಾಂ, ಶಾಜಾಪುರ್, ಮತ್ತು ಉಜ್ಜಯಿನಿ ಜಿಲ್ಲೆಗಳು.
೮. ಶಹಡೋಲ್ : ಶಾಹ್ ದೋಲ್, ಅನುಪ್ಪುರ್, ಡಿಂಡೋರಿ, ಮತ್ತು ಉಮಾರಿಯಾ ಜಿಲ್ಲೆಗಳು.
 
==ಮಧ್ಯಪ್ರದೇಶದ ಖಾದ್ಯಗಳು==
ವಿಶಾಲವಾದ ರಾಜ್ಯಗಳಲ್ಲಿ ಒಂದಾದ 'ಮಧ್ಯಪ್ರದೇಶ'ದ ಖಾದ್ಯಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಗೋಧಿ ಮತ್ತು ಮಾಂಸಾಹಾರದ ಖಾದ್ಯಗಳು ಉತ್ತರ ಹಾಗೂ ಪಶ್ಚಿಮಭಾಗದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಅಕ್ಕಿ ಮತ್ತು ಮೀನಿನ ಆಹಾರಗಳು ಹೆಚ್ಚು ಪ್ರಚಲಿತದಲ್ಲಿವೆ. ಹಾಲು ಮತ್ತು ಹಾಲಿನ ಖಾದ್ಯಗಳು [[ಗ್ವಾಲಿಯರ್]] ಮತ್ತು [[ಇಂದೂರ್]] ನಗರಗಳಲ್ಲಿ ಹೆಚ್ಚು ತಯಾರಿಸಲ್ಪಡುತ್ತವೆ. ಮಾಳ್ವ ಪ್ರದೇಶದ ಅಡುಗೆಯಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ರಾಜಾಸ್ತಾನಿ ಮತ್ತು ಗುಜರಾತ್ ರಾಜ್ಯದ ಖಾದ್ಯಗಳ ಶೈಲಿಯ ಮಿಶ್ರಣವಿದೆ. ಜೋಳದೆ ತೆನೆ, ಮತ್ತು ಹಾಲಿನಿಂದ ಸಿದ್ಧವಾದ ಆಹಾರಪದಾರ್ಥಗಳಲ್ಲಿ ಅತಿ ಹೆಸರುವಾಸಿಯಾದ, 'ಭುಟ್ಟೇಕಿ ಕೀಸ್', 'ಗೋಧಿ ಹುಡ್', ಮತ್ತು ಮೊಸರಿನಲ್ಲಿ ತಯಾರಾದ 'ಚಕ್ಕೀ ಕಿ ಶಾಕ್' ಈ ಪ್ರದೇಶದ ಸ್ವಾದಿಷ್ಟ ತಿನಸುಗಳಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಸಿಹಿತಿಂಡಿಗಳ ಪಟ್ಟಿ ಹೀಗಿದೆ.
"https://kn.wikipedia.org/wiki/ಮಧ್ಯ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ