"ಬೆಲ್ವೆಡೆರೆ (ಅರಮನೆ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
(Translated from http://en.wikipedia.org/wiki/Belvedere_(palace) (revision: 420780746) using http://translate.google.com/toolkit with about 100% human translations.)
 
(numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ)
[[File:Belvedere 1753.jpg|thumb|250px|ಬೆಲ್ವೆಡೆರೆ ದುರ್ಗ – ನಕಾಸೆ ಕೆತ್ತನೆ; ಸುಮಾರು 1753ರ ಅವಧಿಗೆ ಸೇರಿದ್ದು]]
{{Refimprove|date=June 2010}}
ವಿಶಾಲವಾದ '''ಬೆಲ್ವೆಡೆರೆ''' ಸಂಕೀರ್ಣವು ಬರೋಕ್‌ ಶೈಲಿಯ ಎರಡು ಭವ್ಯವಾದ ಅರಮನೆಗಳಾದ ಮೇಲ್ಭಾಗದ ಮತ್ತು ಕೆಳಭಾಗದ ಬೆಲ್ವೆಡೆರೆ, ಕಿತ್ತಳೆಯ ತೋಟ, ಮತ್ತು ಅರಮನೆಯ ಕುದುರೆ ಲಾಯಗಳನ್ನು ಒಳಗೊಂಡಿದೆ. [[ವಿಯೆನ್ನ|ವಿಯೆನ್ನಾ]]ದ 3ನೇ೩ನೇ ಜಿಲ್ಲೆಯಲ್ಲಿ, ನಗರ ಕೇಂದ್ರದ ಆಗ್ನೇಯ ಭಾಗದಲ್ಲಿರುವ ಬರೋಕ್‌ ಶೈಲಿಯ ಉದ್ಯಾನದ ಭೂಪ್ರದೇಶವೊಂದರಲ್ಲಿ ಈ ಕಟ್ಟಡಗಳು ನೆಲೆಗೊಂಡಿವೆ. ಇದು ಬೆಲ್ವೆಡೆರೆ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಇದರ ನೆಲಗಟ್ಟುಗಳನ್ನು ಒಂದು ಲಘುವಾದ ಇಳುಕಲಿನ ಮೇಲೆ ನೆಲೆಗೊಳಿಸಲಾಗಿದೆ ಮತ್ತು ಇದು ಅಲಂಕಾರಿಕ ಶ್ರೇಣೀಕೃತ ಚಿಲುಮೆಗಳು ಹಾಗೂ ಕಿರು ಜಲಪಾತಗಳು, ಬರೋಕ್‌ ಶೈಲಿಯ ಶಿಲ್ಪಗಳು, ಮತ್ತು ಭವ್ಯವಾದ ಮೆತು ಕಬ್ಬಿಣದ ದ್ವಾರಗಳನ್ನು ಒಳಗೊಂಡಿದೆ. ಬರೋಕ್‌ ಶೈಲಿಯ ಅರಮನೆ ಸಂಕೀರ್ಣವನ್ನು ಸೆವಾಯ್‌‌ನ ಯುಜೀನ್‌‌‌‌ ರಾಜಕುಮಾರನಿಗೆ ಮೀಸಲಾದ ಒಂದು ಬೇಸಿಗೆ ನಿವಾಸವಾಗಿ ನಿರ್ಮಿಸಲಾಯಿತು.
ವಿಯೆನ್ನಾದಲ್ಲಿ ಕಂಡುಬಂದ ಬಹುಪಾಲು ನಿರ್ಮಾಣದ ಅವಧಿಯೊಂದರ ಸಂದರ್ಭದಲ್ಲಿ ಬೆಲ್ವೆಡೆರೆ ಅರಮನೆಯು ನಿರ್ಮಿಸಲ್ಪಟ್ಟಿತು; ಈ ಅವಧಿಯಲ್ಲಿ ವಿಯೆನ್ನಾ, ಚಕ್ರಾಧಿಪತ್ಯದ ರಾಜಧಾನಿಯಾಗಿ ಮತ್ತು ಆಳುತ್ತಿರುವ ರಾಜವಂಶಕ್ಕೆ ತವರುನೆಲವಾಗಿ ಎರಡೂ ಪಾತ್ರಗಳನ್ನು ನಿರ್ವಹಿಸಿತ್ತು. ನಗರದ ಬಹುತೇಕ ಭವ್ಯವಾದ ಸೌಧಗಳ ಪೈಕಿಯ ಅನೇಕವು ಈ ಚಾರಿತ್ರಿಕ ಯುಗಕ್ಕೆ ಸೇರಿದವಾಗಿವೆ. ರಾಜಕುಮಾರ ಯುಜೀನ್‌ನಿಂದ ಅನುವುಗೊಳಿಸಲ್ಪಟ್ಟ ಕಟ್ಟಡಗಳು, ಅದರಲ್ಲೂ ನಿರ್ದಿಷ್ಟವಾಗಿ ಬೆಲ್ವೆಡೆರೆ ಅರಮನೆಯು. ಅಂಥವುಗಳಲ್ಲಿ ಸೇರಿವೆ. ಒಟ್ಟೋಮನ್‌ ಸಾಮ್ರಾಜ್ಯದ ವಿರುದ್ಧವಾಗಿ ಪ್ರಧಾನ ದಂಡನಾಯಕ ರಾಜಕುಮಾರ ಸೆವಾಯ್‌‌ ಕೈಗೊಂಡ ಯುದ್ಧಗಳ ಒಂದು ಸರಣಿಯು ಯಶಸ್ವಿಯಾಗಿ ಸಮಾಪ್ತಿಯಾದಾಗಿನಿಂದ, ಈ ಏಳಿಗೆಯ ಅವಧಿಯು ದಾಖಲಿಸಲ್ಪಟ್ಟಿತು. 1697ರಲ್ಲಿ೧೬೯೭ರಲ್ಲಿ, ಸೆಂಟಾದಲ್ಲಿ ಅವನ ನಾಯಕತ್ವದಡಿಯಲ್ಲಿ ಟರ್ಕಿಷ್‌ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿದ್ದು, ಹಾಗೂ ಇದರ ಪರಿಣಾಮವಾಗಿ ಆಸ್ಟ್ರಿಯಾದೆಡೆಗಿನ ಅನುಕೂಲಕರ ಷರತ್ತುಗಳ ಅಡಿಯಲ್ಲಿ ಕಾರ್ಲೋವಿಟ್ಜ್‌‌ ಒಡಂಬಡಿಕೆಗೆ 1699ರಲ್ಲಿ೧೬೯೯ರಲ್ಲಿ ಸಹಿಹಾಕಿದ್ದು, 1683ರಿಂದಲೂ೧೬೮೩ರಿಂದಲೂ ಉತ್ಕಟಾವಸ್ಥೆಯಲ್ಲಿದ್ದ ಒಟ್ಟೋಮನ್‌ ಸಾಮ್ರಾಜ್ಯದೊಂದಿಗಿನ ಘರ್ಷಣೆಯನ್ನು ಅಂತಿಮವಾಗಿ ಕೊನೆಗೊಳಿಸಿದವು.
 
== ಕೆಳಭಾಗದ ಬೆಲ್ವೆಡೆರೆ ==
1697ರ೧೬೯೭ರ ನವೆಂಬರ್‌ 30ರಂದು೩೦ರಂದು, ಸ್ಟಾಟ್‌ಪಲಾಯಿಸ್‌ನ ನಿರ್ಮಾಣವನ್ನು ಆರಂಭಿಸಿದ ಒಂದು ವರ್ಷದ ನಂತರ, ಗಣನೀಯ ಗಾತ್ರದ ಜಮೀನನ್ನು ರಾಜಕುಮಾರ ಯುಜೀನ್‌ ಖರೀದಿಸಿದ. ಹಂಗರಿಗೆ ಮುಖ್ಯ ರಸ್ತೆಯಾಗಿದ್ದ ರೆನ್‌ವೆಗ್‌ನ ದಕ್ಷಿಣ ಭಾಗಕ್ಕೆ ಈ ಜಮೀನಿತ್ತು. ಬೆಲ್ವೆಡೆರೆಯ ತೋಟದ ಸಂಕೀರ್ಣಕ್ಕೆ ಸಂಬಂಧಿಸಿದ ಯೋಜನೆಗಳು ತತ್‌ಕ್ಷಣದಲ್ಲಿ ರೂಪಿಸಲ್ಪಟ್ಟವು. ತನ್ನ ಸ್ಟಾಟ್‌ಪಲಾಯಿಸ್‌ನ ಸೃಷ್ಟಿಕರ್ತನಾದ ಜೋಹಾನ್‌ ಬೆರ್ನಾರ್ಡ್‌ ಫಿಷರ್‌ ವಾನ್‌ ಎರ್ಲಾಕ್‌ ಬದಲಿಗೆ ಜೋಹಾನ್‌ ಲ್ಯೂಕಾಸ್‌ ವಾನ್‌ ಹಿಲ್ಡ್‌ಬ್ರಾಂಟ್‌‌ನನ್ನು ಈ ಯೋಜನೆಗೆ ಸಂಬಂಧಿಸಿದ ಪ್ರಧಾನ ವಾಸ್ತುಶಿಲ್ಪಿಯಾಗಿ ರಾಜಕುಮಾರ ಆರಿಸಿದ. ಪೀಡ್‌ಮಾಂಟ್‌ನಲ್ಲಿ ಒಂದು ಸೇನಾ ದಂಡಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಹಿಲ್ಡ್‌ಬ್ರಾಂಟ್‌ನನ್ನು (1668–1745೧೬೬೮–೧೭೪೫) ಸದರಿ ಸೈನ್ಯಾಧಿಪತಿಯು ಭೇಟಿಮಾಡಿದ್ದ ಹಾಗೂ ಬುಡಾಪೆಸ್ಟ್‌‌ನ ದಕ್ಷಿಣಕ್ಕಿದ್ದ ಡ್ಯಾನ್ಯೂಬ್‌ನಲ್ಲಿನ ಒಂದು ದ್ವೀಪವಾದ ಸೆಪೆಲ್‌‌‌ನಲ್ಲಿ ಹಿಲ್ಡ್‌ಬ್ರಾಂಟ್‌ ಅಷ್ಟುಹೊತ್ತಿಗಾಲೇ ಅವನಿಗಾಗಿ 1602ರಲ್ಲಿ೧೬೦೨ರಲ್ಲಿ ರಾಕೀವ್‌ ಅರಮನೆಯನ್ನು ನಿರ್ಮಿಸಿದ್ದ. ಅವನು ನಂತರದ ತನ್ನ ಸೇವಾವಧಿಯಲ್ಲಿ ಇತರ ಹಲವಾರು ಸೌಧಗಳನ್ನು ರಾಜಕುಮಾರ ಯುಜೀನ್‌ಗಾಗಿ ನಿರ್ಮಿಸುತ್ತಾ ಹೋದ. ಈ ವಾಸ್ತುಶಿಲ್ಪಿಯು ರೋಮ್‌ನಲ್ಲಿ ಕಾರ್ಲೋ ಫಾಂಟಾನಾ ಅಡಿಯಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಅಧ್ಯಯನ ನಡೆಸಿದ್ದ ಮತ್ತು ಕೋಟೆನಿರ್ಮಾಣಗಳನ್ನು ಮಾಡುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವ ಸಲುವಾಗಿ 1695೧೬೯೫-96ರಲ್ಲಿ೯೬ರಲ್ಲಿ ಚಕ್ರಾಧಿಪತ್ಯದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. 1696ರ೧೬೯೬ರ ನಂತರದಲ್ಲಿ, ಈತ ವಿಯೆನ್ನಾದಲ್ಲಿ ಓರ್ವ ಆಸ್ಥಾನ ವಾಸ್ತುಶಿಲ್ಪಿಯಾಗಿ ನೇಮಿಸಲ್ಪಟ್ಟ ಎಂಬುದಾಗಿ ದಾಖಲೆಗಳು ಹೇಳುತ್ತವೆ. ಬೆಲ್ವೆಡೆರೆ ಅರಮನೆಯ ರೀತಿಯಲ್ಲಿಯೇ, ಹಿಲ್ಡ್‌ಬ್ರಾಂಟ್ ಅತ್ಯಂತ ಮಹೋನ್ನತವಾದ ಸಾಧನೆಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದ್ದಾನೆ. ರಾಜಕುಮಾರ ಯುಜೀನ್‌ನಿಂದ ಅನುವುಗೊಳಿಸಲ್ಪಟ್ಟ ಸ್ಕ್ಲಾಸ್‌ ಹಾಫ್‌ ಅರಮನೆ, ಸ್ಕ್ವಾರ್ಜೆನ್‌ಬರ್ಗ್‌ ಅರಮನೆ (ಹಿಂದೆ ಇದು ಮ್ಯಾನ್ಸ್‌ಫೆಲ್ಡ್‌-ಫಾಂಡಿ ಅರಮನೆ ಎಂಬುದಾಗಿ ಕರೆಯಲ್ಪಡುತ್ತಿತ್ತು), ಕಿನ್ಸ್‌ಕಿ ಅರಮನೆ, ಮತ್ತು ವಚಾವು ಕಣಿವೆಯಲ್ಲಿರುವ ಸಮಗ್ರ ಗೋಟ್‌ವೀಗ್‌ ವಿರಕ್ತಗೃಹದ ಸ್ಥಿರಾಸ್ತಿಯು ಇದಕ್ಕೆ ನಿದರ್ಶನಗಳಾಗಿವೆ.
ರಾಜಕುಮಾರನು ತನ್ನ ಬೆಲ್ವೆಡೆರೆ ಯೋಜನೆಗಾಗಿ ವಿಯೆನ್ನಾದ ಹೊರವಲಯದಲ್ಲಿ ಜಮೀನನ್ನು ಖರೀದಿಸಲು ಯೋಜಿಸುತ್ತಿದ್ದ ಸಮಯದಲ್ಲಿ, ಸದರಿ ಪ್ರದೇಶವು ಸಂಪೂರ್ಣವಾಗಿ ಹಿಂದುಳಿದಿತ್ತು ಹಾಗೂ ಒಂದು ಭೂದೃಶ್ಯವಾಗಿಸಲ್ಪಟ್ಟ ತೋಟ ಮತ್ತು ಬೇಸಿಗೆ ಅರಮನೆಯನ್ನು ನಿರ್ಮಿಸುವುದಕ್ಕೆ ಅದು ಆದರ್ಶಪ್ರಾಯವಾದ ಸ್ಥಳವಾಗಿ ಪರಿಣಮಿಸಿತ್ತು. ಆದಾಗ್ಯೂ, ರಾಜಕುಮಾರನು ತನ್ನ ಸ್ವಾಧೀನಕಾರ್ಯವನ್ನು ಕೈಗೊಳ್ಳುವುದಕ್ಕೆ ಒಂದು ತಿಂಗಳು ಮುಂಚಿತವಾಗಿ, ಫಾಂಡಿಯ ರಾಜಕುಮಾರನಾದ ಚಕ್ರಾಧಿಪತ್ಯದ ಗ್ರಾಂಡ್‌ ಮಾರ್ಷಲ್‌ ಕೌಂಟ್‌ ಹೆನ್ರಿಕ್‌ ಫ್ರಾಂಜ್‌ ಮ್ಯಾನ್ಸ್‌ಫೆಲ್ಡ್, ನೆರೆಹೊರೆಯ ಜಮೀನನ್ನು ಖರೀದಿಸಿದ ಹಾಗೂ ಸದರಿ ಜಮೀನಿನಲ್ಲಿ ಒಂದು ತೋಟದ ಅರಮನೆಯನ್ನು ನಿರ್ಮಿಸಲು ಹಿಲ್ಡ್‌ಬ್ರಾಂಟ್‌ನನ್ನು ನಿಯೋಜಿಸಿದ. ಜಮೀನನ್ನು ಖರೀದಿಸುವುದಕ್ಕಾಗಿ ರಾಜಕುಮಾರ ಯುಜೀನ್‌ ಒಂದು ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಬೇಕಾಗಿ ಬಂತು; ಇದಕ್ಕಾಗಿ ಇನ್ನೂ ನಿರ್ಮಾಣ ಹಂತದಲ್ಲೇ ಇದ್ದ ತನ್ನ ಸ್ಟಾಟ್‌ಪಲಾಯಿಸ್‌ ಕಟ್ಟಡವನ್ನು ಆತ ಆಧಾರವಾಗಿ ಇಡಬೇಕಾಗಿ ಬಂತು. ತೋಟವನ್ನು ಹಂತ ಹಂತಗಳಲ್ಲಿ ವಿಸ್ತರಿಸುವ ಸಲುವಾಗಿ, 1708ರಲ್ಲಿ೧೭೦೮ರಲ್ಲಿ, 1716ರಲ್ಲಿ೧೭೧೬ರಲ್ಲಿ ಮತ್ತು ಇನ್ನೊಮ್ಮೆ 1717೧೭೧೭-18ರಲ್ಲಿ೧೮ರಲ್ಲಿ ಅವನು ನೆರೆಹೊರೆಯ ಹೆಚ್ಚುವರಿ ಜಮೀನಿನ ಪ್ರದೇಶಗಳನ್ನು ಖರೀದಿಸುತ್ತಾ ಹೋದ.
ಕಟ್ಟಡದ ಒಂದು ಪರಿಶೀಲನೆಗಾಗಿ ರಾಜಕುಮಾರ ಯುಜೀನ್‌ 1713ರ೧೭೧೩ರ ಜುಲೈ 5ರಂದು೫ರಂದು ಮನವಿಯನ್ನು ಸಲ್ಲಿಸಿದ, ಹೀಗಾಗಿ ಮೇಲ್ಭಾಗದ ಬೆಲ್ವೆಡೆರೆಯ ನಿರ್ಮಾಣವು 1712ರ೧೭೧೨ರ ವೇಳೆಗೆ ಆರಂಭವಾಗಿತ್ತು ಎಂಬುದಾಗಿ ದಾಖಲೆಗಳು ಸೂಚಿಸುತ್ತವೆ. ಸದರಿ ಕಾರ್ಯವು ಕ್ಷಿಪ್ರವಾಗಿ ಮುಂದುವರೆಯಿತು, ಮತ್ತು ಬೊಲೊಗ್ನಾದಿಂದ ಬಂದಿದ್ದ ಮಾರ್ಕ್ಯಾಂಟೋನಿಯೋ ಚಿಯಾರಿನಿ ಎಂಬಾತ 1715ರಲ್ಲಿ೧೭೧೫ರಲ್ಲಿ ಪ್ರಧಾನ ಸಭಾಂಗಣದಲ್ಲಿನ ಭ್ರಮಾತ್ಮಕ ವಾಸ್ತುಶಿಲ್ಪಕ್ಕೆ ಬಣ್ಣ ಹೊಡೆಯುವ ಕಾರ್ಯವನ್ನು ಶುರುಮಾಡಿದ್ದ. 1716ರ೧೭೧೬ರ ಏಪ್ರಿಲ್‌ನಲ್ಲಿ, ಕೆಳಭಾಗದ ಬೆಲ್ವೆಡೆರೆ ಹಾಗೂ ಸ್ಟಾಟ್‌ಪಲಾಯಿಸ್ ಕಟ್ಟಡಗಳನ್ನು ಫ್ಲೆಮಿಷ್‌ ರಾಯಭಾರಿ ಸಂದರ್ಶಿಸಿದ. ಕೆಳಭಾಗದ ಬೆಲ್ವೆಡೆರೆ ಕಟ್ಟಡವು ಆರಂಭಿಕ ನಗರಪ್ರದೇಶವೊಂದರಲ್ಲಿ ರೇಖಿಸಲ್ಪಡುತ್ತಾ ಹೋದಂತೆ, ಲಸ್ಟ್‌ಸ್ಕ್ಲಾಸ್‌‌‌‌‌ನಲ್ಲಿ ನಿರ್ಮಾಣವು ಮುಂದೆ ಸಾಗುತ್ತಿದ್ದ ಅದೇ ವೇಳೆಗೆ, ಸದರಿ ಜಮೀನುಗಳಲ್ಲಿ ವ್ಯಾಪಕವಾದ ಕಾರ್ಯವು ನಿರ್ವಹಿಸಲ್ಪಟ್ಟಿತು. 1717ರ೧೭೧೭ರ ಜನವರಿ ಮತ್ತು ಮೇ ತಿಂಗಳ ನಡುವೆ, ತೋಟಕ್ಕೆ ಸಂಬಂಧಿಸಿದ ಯೋಜನೆಗಳನ್ನು ಡೊಮಿನಿಕ್‌ ಗಿರಾರ್ಡ್‌ ಗಮನಾರ್ಹವಾಗಿ ಬದಲಾಯಿಸಿದ. ಇದರಿಂದಾಗಿ ಮುಂಬರಲಿದ್ದ ಬೇಸಿಗೆಯ ವೇಳೆಗೆ ಅದು ಸಂಪೂರ್ಣಗೊಳ್ಳಲು ಸಾಧ್ಯವಾಯಿತು. 1707೧೭೦೭-15ರ೧೫ರ ಅವಧಿಯಲ್ಲಿ ವರ್ಸೈಲ್ಲೆಸ್‌ನಲ್ಲಿ, ಫಾಂಟೈನಿಯೆರ್‌ ಡ್ಯೂ ರಾಯ್‌ ಅಥವಾ ರಾಜನ ಜಲವಿಭಾಗದ ಎಂಜಿನಿಯರ್ ಆಗಿ ನೇಮಿಸಲ್ಪಟ್ಟಿದ್ದ ಗಿರಾರ್ಡ್‌, 1715ರ೧೭೧೫ರ ನಂತರದಲ್ಲಿ ಬವೇರಿಯಾದ ಚುನಾಯಕ (ಇಲೆಕ್ಟರ್‌) ಮ್ಯಾಕ್ಸ್‌ ಎಮ್ಯಾನ್ಯುಯೆಲ್‌ಗೆ ಸಂಬಂಧಿಸಿದಂತೆ ಓರ್ವ ತೋಟ ಪರೀಕ್ಷಕನಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ. ಮ್ಯಾಕ್ಸ್‌ ಎಮ್ಯಾನ್ಯುಯೆಲ್‌ನ ಶಿಫಾರಸಿನ ಮೇರೆಗೆ ಅವನು ರಾಜಕುಮಾರ ಯುಜೀನ್‌ನ ಸೇವಾ-ಉದ್ಯೋಗಕ್ಕೆ ಪ್ರವೇಶಿಸಿದ ಎಂಬುದು ಗಮನಾರ್ಹ ಸಂಗತಿ.
 
ವಿಶೇಷ ಪ್ರದರ್ಶನಗಳನ್ನು ಆಯೋಜಿಸುವ ಸಲುವಾಗಿ ಕೆಳಭಾಗದ ಬೆಲ್ವೆಡೆರೆ ಮತ್ತು ಕಿತ್ತಳೆಯ ತೋಟಗಳನ್ನು ವಿಶೇಷವಾಗಿ ಅನುವುಗೊಳಿಸಲಾಗಿದೆ. ಆಮಂತ್ರಿತರಿಗೆ-ಮಾತ್ರವೇ ಮೀಸಲಾಗಿದ್ದ ಸ್ಪರ್ಧೆಯೊಂದನ್ನು ಗೆದ್ದ ನಂತರ, ವಾಸ್ತುಶಿಲ್ಪಿ ಸುಸಾನ್‌ ಜಾಟ್ಲ್‌ ಕಿತ್ತಳೆಯ ತೋಟವನ್ನು ಒಂದು ಆಧುನಿಕ ಪ್ರದರ್ಶನ ಭವನವಾಗಿ ಪರಿವರ್ತಿಸಿದ ಮತ್ತು ಅದೇ ವೇಳೆಗೆ ಕಟ್ಟಡದ ಬರೋಕ್‌ ಶೈಲಿಯ ಮೂಲವಿನ್ಯಾಸವನ್ನು ಹಾಗೇ ಉಳಿಸಿಕೊಂಡ. ''ಗಾರ್ಟೆನ್‌ಲಸ್ಟ್‌: ಡೆರ್‌ ಗಾರ್ಟನ್‌ ಇನ್‌ ಡೆರ್‌ ಕುನ್ಸ್ಟ್‌'' (''ಗಾರ್ಡನ್‌ ಪ್ಲೆಷರ್ಸ್‌: ದಿ ಗಾರ್ಡನ್‌ ಇನ್‌ ಆರ್ಟ್‌'' ) ಎಂಬ ಪ್ರದರ್ಶನದೊಂದಿಗೆ ಈ ಸಭಾಂಗಣವು 2007ರ೨೦೦೭ರ ಮಾರ್ಚ್‌ನಲ್ಲಿ ಪ್ರಾರಂಭವಾಯಿತು. ಕೆಲವೇ ತಿಂಗಳುಗಳ ನಂತರ, ವಿಯೆನ್ನಾ—ಪ್ಯಾರಿಸ್ ಎಂಬ ಪ್ರದರ್ಶನದೊಂದಿಗೆ ಕೆಳಭಾಗದ ಬೆಲ್ವೆಡೆರೆ ಮರುಪ್ರಾರಂಭವಾಯಿತು. ಕಟ್ಟಡದ ಮರುವಿನ್ಯಾಸವನ್ನು ಬರ್ಲಿನ್‌ ವಾಸ್ತುಶಿಲ್ಪಿಯಾದ ವಿಲ್‌ಫ್ರೈಡ್‌ ಕುಹ್ನ್‌ ಎಂಬಾತ ನಿರ್ವಹಿಸಿದ; ಈತ ಪ್ರವೇಶದ್ವಾರವನ್ನು ಮೂರು ಪಾರ್ಶ್ವಗಳ ಅಂಗಳದಲ್ಲಿನ (ಕೋರ್‌ ಡಿ'ಹಾನಿಯರ್‌) ಅದರ ಜಾಗಕ್ಕೆ ಹಿಂದಕ್ಕೆ ಸರಿಸಿದ. ಇದರಿಂದಾಗಿ ಕೆಳಭಾಗದ ಬೆಲ್ವೆಡೆರೆಯಿಂದ ಅಮೃತಶಿಲೆಯ ಭವನದ ಮಾರ್ಗವಾಗಿ ಮೇಲ್ಭಾಗದ ಬೆಲ್ವೆಡೆರೆಯ ತೋಟದ ಮುಖಭಾಗದೆಡೆಗೆ ಸಾಗುವ ದೃಷ್ಟಿಯ ಮೂಲವ್ಯಾಪ್ತಿಯು ಮತ್ತೊಮ್ಮೆ ಮುಕ್ತವಾದಂತಾಯಿತು. ಅಮೃತಶಿಲೆಯ ಭವನಕ್ಕೆ ಜೋಡಿಸಲ್ಪಟ್ಟಿದ್ದ ಮೂಲ ಕಿತ್ತಳೆಯ ತೋಟಗಳ ನಾನಾ ವಿಭಾಗಗಳನ್ನು ಅವುಗಳ ಮೂಲ ಸ್ಥಿತಿಗೆ ಮರಳಿಸಲಾಯಿತು. ಹೊಸ ಪ್ರದರ್ಶನದ ಕೋಣೆಗಳಿಗಾಗಿ ಈಗ ಸ್ಥಳಾವಕಾಶವು ಒದಗಿದಂತಾಗಿದೆ. ಭವ್ಯವಾದ ಬರೋಕ್‌ ಶೈಲಿಯ ಸಂಸ್ಥಾನದ ಕೋಣೆಗಳಾದ, ಅಮೃತಶಿಲೆಯ ಕಲಾ-ಚಿತ್ರಶಾಲೆ, ಬಂಗಾರದ ಕೋಣೆ, ಮತ್ತು ವಿಕಟಶಿಲ್ಪಗಳ ಭವನ ಇವುಗಳು ಬದಲಾಗದೆ ಉಳಿದುಕೊಂಡಿವೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿವೆ.
 
== ತೋಟಗಳು ==
== ಮೇಲ್ಭಾಗದ ಬೆಲ್ವೆಡೆರೆ ==
[[File:Upper Belvedere LCD-toneedit2 NR.jpg|thumb|250px|ಮೇಲ್ಭಾಗದ ಬೆಲ್ವೆಡೆರೆಯ ರಾತ್ರಿವೇಳೆಯ ನೋಟ]]
ಇತ್ತೀಚಿನ ಸಂಶೋಧನೆಯ ಅನುಸಾರ, ಮೇಲ್ಭಾಗದ ಬೆಲ್ವೆಡೆರೆಯ ನಿರ್ಮಾಣವು 1717ರಷ್ಟು೧೭೧೭ರಷ್ಟು ಮುಂಚೆಯೇ ಪ್ರಾರಂಭವಾಯಿತು. 1718ರ೧೭೧೮ರ ಬೇಸಿಗೆಯಲ್ಲಿ, ರಾಜಕುಮಾರ ಯುಜೀನ್‌ ಬೆಲ್‌ಗ್ರೇಡ್‌ನಿಂದ ತನ್ನ ಸೇವಕ ಬೆನೆಡೆಟ್ಟಿಗೆ ಕಳಿಸಿದ ಅರಮನೆಯ ಕುರಿತಾದ ಕಾರ್ಯದ ಪ್ರಗತಿಯನ್ನು ವಿವರಿಸುವ ಎರಡು ಪತ್ರಗಳ ನೆರವಿನಿಂದ ಈ ದಿನಾಂಕವನ್ನು ನಾವು ಖಚಿತವಾಗಿ ನಿರೂಪಿಸಬಹುದು. 1719ರ೧೭೧೯ರ ಅಕ್ಟೋಬರ್‌ 2ರ೨ರ ವೇಳೆ ನಿರ್ಮಾಣವು ಬಹಳಷ್ಟು ಮುಂದುವರಿದಿತ್ತು ಮತ್ತು ಈ ಸಂದರ್ಭದಲ್ಲಿ ಟರ್ಕಿಷ್‌ ರಾಯಭಾರಿ ಇಬ್ರಾಹಿಂ ಪಾಷಾನನ್ನು ಎದುರುಗೊಳ್ಳುವಲ್ಲಿ ರಾಜಕುಮಾರ ಸಮರ್ಥನಾಗಿದ್ದ. ಇದರಿಂದ ತಿಳಿದುಬರುವ ಮಾಹಿತಿಯ ಅನುಸಾರ, ಹಿಂದೆ ಅಂದುಕೊಂಡದಕ್ಕಿಂತ ಮುಂಚಿತವಾಗಿ ಒಳಾಂಗಣದ ಅಲಂಕರಣವೂ ಸಹ ಆರಂಭವಾಗಿದ್ದಿರಬೇಕು. ಅಂದರೆ, 1718ರಷ್ಟು೧೭೧೮ರಷ್ಟು ಮುಂಚಿತವಾಗಿ ಕಾರ್ಯವು ಆರಂಭವಾಯಿತು ಎಂಬ ಅಂಶವನ್ನು ರಾಜಕುಮಾರ ಯುಜೀನ್‌ನ ವ್ಯಾಪಕವಾದ ಪತ್ರವ್ಯವಹಾರದಿಂದ ನಿಶ್ಚಯವಾಗಿ ತೀರ್ಮಾನಿಸಲು ಸಾಧ್ಯವಿದೆ. ಅರಮನೆಯ ಖಾಸಗಿ ಪೂಜಾಮಂದಿರಕ್ಕೆ ಸಂಬಂಧಿಸಿದ ಹಿಂದೆರೆ ಹಾಗೂ ಬಂಗಾರದ ಕೋಣೆಯಲ್ಲಿನ ಒಳಮಾಳಿಗೆಯ ಹಸಿಚಿತ್ರ ಈ ಎರಡನ್ನೂ ಕಾರ್ಯರೂಪಕ್ಕೆ ತರುವ ಸಲುವಾಗಿ 1719ರಲ್ಲಿ೧೭೧೯ರಲ್ಲಿ ಅವನು ನೇಪಲ್ಸ್‌ ನಗರದ ವರ್ಣಚಿತ್ರ ಕಲಾವಿದ ಫ್ರಾನ್ಸೆಸ್ಕೊ ಸೊಲಿಮೆನಾ ಎಂಬಾತನನ್ನು ನಿಯೋಜಿಸಿದ. ಅದೇ ವರ್ಷದಲ್ಲಿ, ಅಮೃತಶಿಲೆಯ ಭವನದಲ್ಲಿ ಪ್ರಾತಿಭಾಸಿಕವಾದ ಭ್ರಮಾತ್ಮಕ ವಾಸ್ತುಶಿಲ್ಪದ ವರ್ಣಚಿತ್ರಕಲೆಯನ್ನು ಕಾರ್ಯರೂಪಕ್ಕೆ ತರುವ ದೃಷ್ಟಿಯಿಂದ ಗೇಂಟ್ಯಾನೊ ಫ್ಯಾಂಟಿಯನ್ನು ನಿಯೋಜಿಸಲಾಯಿತು. ಅಮೃತಶಿಲೆಯ ಭವನದಲ್ಲಿನ ಒಳಮಾಳಿಗೆಯ ಹಸಿಚಿತ್ರವನ್ನು ರೂಪಿಸುವ ಕಾರ್ಯಭಾರವನ್ನು 1720ರಲ್ಲಿ೧೭೨೦ರಲ್ಲಿ ಕಾರ್ಲೋ ಕಾರ್ಲೋನ್‌ ಎಂಬಾತನಿಗೆ ವಹಿಸಲಾಯಿತು. ಈ ಕಾರ್ಯವು 1721೧೭೨೧-23ರ೨೩ರ ಅವಧಿಯಲ್ಲಿ ನೆರವೇರಿತು.
ಸದರಿ ಭವ್ಯವಾದ ಕಟ್ಟಡವು 1723ರಲ್ಲಿ೧೭೨೩ರಲ್ಲಿ ಸಂಪೂರ್ಣಗೊಂಡಿತು. ಆದಾಗ್ಯೂ, ರಾಚನಿಕ ಸಮಸ್ಯೆಗಳ ಕಾರಣದಿಂದಾಗಿ ಸಾಲಾ ಟೆರೆನಾ ಕಟ್ಟಡವು ಕುಸಿಯುವ ಅಪಾಯವನ್ನು ಎದುರಿಸಿತು. ಆದ್ದರಿಂದ, ನಾಲ್ಕು ಮುಖ್ಯಾಧಾರದ (ಬಲುಭಾರವನ್ನು ಹೊರಬಲ್ಲ) ಸ್ತಂಭಗಳಿಂದ ಬೆಂಬಲಿಸಲ್ಪಟ್ಟ ಗುಮ್ಮಟ ಚಾವಣಿಯುಳ್ಳ ಒಳಮಾಳಿಗೆಯೊಂದನ್ನು 1732೧೭೩೨-33ರ೩೩ರ ಚಳಿಗಾಲದಲ್ಲಿ ಹಿಲ್ಡ್‌ಬ್ರಾಂಟ್‌ ಅಳವಡಿಸಬೇಕಾಗಿ ಬಂತು. ಇದರಿಂದಾಗಿ ಸದರಿ ಕೋಣೆಗೆ ಅದರ ಈಗಿನ ಚಹರೆಯು ಲಭ್ಯವಾಗಿದೆ ಎನ್ನಬಹುದು. ಅರಮನೆ ಸಂಕೀರ್ಣದ ಒಳಾಂಗಣ ಹಾಗೂ ಭೂದೃಶ್ಯದ ವಾಸ್ತುಶೈಲಿಯ ಲಕ್ಷಣಗಳ ಕುರಿತಾಗಿ ಇಂದು ನಮಗೆ ಇಷ್ಟೊಂದು ಚೆನ್ನಾಗಿ ಮಾಹಿತಿ ನೀಡಲ್ಪಟ್ಟಿದೆಯೆಂದರೆ, ಅದಕ್ಕೆ ಸಾಲೋಮನ್‌ ಕ್ಲೆಯ್ನರ್‌ನ ನಕಾಸೆ ಕೆತ್ತನೆಗಳಿಗೆ ಕನಿಷ್ಟಪಕ್ಷ ಕೊಂಚಮಟ್ಟಿಗಾದರೂ ಧನ್ಯವಾದಗಳನ್ನು ಅರ್ಪಿಸಬೇಕಾಗುತ್ತದೆ. ಮೈನ್ಜ್‌ ಚುನಾಯಕನ ಆಸ್ಥಾನಕ್ಕೆ ಸೇರಿದ್ದ ಎಂಜಿನಿಯರ್‌, ಒಟ್ಟು ತೊಂಬತ್ತು ಫಲಕಗಳನ್ನು ಒಳಗೊಂಡಿರುವ ಹತ್ತು-ಭಾಗಗಳ ಪ್ರಕಟಣೆಯೊಂದನ್ನು 1731೧೭೩೧ ಮತ್ತು 1740ರ೧೭೪೦ರ ನಡುವೆ ರೂಪಿಸಿದ. ''ವುಂಡರ್‌ ವೂರ್ಡಿಗೆಸ್‌ ಕ್ರೀಗ್ಸ್‌- ಅಂಡ್‌ ಸೀಗ್ಸ್‌-ಲಾಗರ್‌ ಡೆಬ್‌ ಯೂನಿವರ್ಗ್ಲೆಕ್ಲಿಕೆನ್‌ ಹೆಲ್ಡನ್ಸ್‌ ಜೀಟೆನ್‌ ಯೂಜೆನಿ ಫ್ರಾನ್ಸಿಸಿ ಹೆರ್ಟೋಜೆನ್‌ ಝು ಸ್ಯಾವೋಯೆನ್‌ ಅಂಡ್‌ ಪೈಮಾಂಟ್‌'' (ಸೆವಾಯ್‌‌ ಮತ್ತು ಪೀಡ್‌ಮಾಂಡ್‌ನ ಡ್ಯೂಕ್‌ ಆಗಿರುವ ನಮ್ಮ ಯುಗದ ಪರಮೋಚ್ಚ ನಾಯಕ ಯುಜೀನ್‌ ಫ್ರಾನ್ಸಿಸ್‌ನ ಆಶ್ಚರ್ಯಕರ ಯುದ್ಧ ಮತ್ತು ವಿಜಯ ಶಿಬಿರ ಹೂಡಿಸುವಿಕೆ‌) ಎಂಬ ಶೀರ್ಷಿಕೆಯುಳ್ಳ ಈ ಕೃತಿಯು ಬೆಲ್ವೆಡೆರೆ ಸಂಕೀರ್ಣದ ಸ್ಥಿತಿಯ ಕುರಿತಾಗಿ ಕರಾರುವಾಕ್ಕಾದ ವಿವರಗಳಲ್ಲಿ ಆಧಾರಗಳನ್ನು ಒದಗಿಸಿತು.
 
== ರಾಜಕುಮಾರ ಯುಜೀನ್‌ನ ಸಾವಿನ ನಂತರದಲ್ಲಿ ಬೆಲ್ವೆಡೆರೆ ==
[[File:Prinz-von-Sachsen-Hildburghausen.jpg|thumb|250px|ಸ್ಯಾಕ್ಸೆ-ಹಿಲ್ಡ್‌ಬರ್ಘೌಸೆನ್‌ನ ರಾಜಕುಮಾರ ಜೋಸೆಫ್‌]]
1736ರ೧೭೩೬ರ ಏಪ್ರಿಲ್‌ 21ರಂದು೨೧ರಂದು, ರಾಜಕುಮಾರ ಯುಜೀನ್‌ ವಿಯೆನ್ನಾದಲ್ಲಿನ ತನ್ನ ನಗರದ ಅರಮನೆಯಲ್ಲಿ ಮರಣಿಸಿದಾಗ, ಕಾನೂನುಬದ್ಧವಾಗಿ ನಿರ್ಬಂಧಕ್ಕೊಳಪಡಿಸುವ ಒಂದು ಉಯಿಲನ್ನು ಅವನು ಬಿಟ್ಟುಹೋಗಲಿಲ್ಲ. ಪವಿತ್ರ ರೋಮನ್‌ ಸಾಮ್ರಾಟ ಚಾರ್ಲ್ಸ್‌‌ VIನಿಂದ ಸ್ಥಾಪಿಸಲ್ಪಟ್ಟ ಆಯೋಗವೊಂದು ರಾಜಕುಮಾರನ ಸೋದರ ಮಗಳು ವಿಕ್ಟೋರಿಯಾಳನ್ನು ಅವನ ಉತ್ತರಾಧಿಕಾರಿಯಾಗಿ ಹೆಸರಿಸಿತು. ವಿಕ್ಟೋರಿಯಾಳು ಅವನ ಅತಿಹಿರಿಯ ಸೋದರನಾದ ಥಾಮಸ್‌ನ ಮಗಳಾಗಿದ್ದಳು ಹಾಗೂ ಸೆವಾಯ್‌‌-ಸಾಯ್ಸನ್ಸ್ ಮನೆತನದ ಏಕೈಕ ಬದುಕುಳಿದಿರುವ ಸದಸ್ಯೆಯಾಗಿದ್ದಳು. ಆ ಘಟ್ಟದಲ್ಲಿ ಗಾರ್ಟೆನ್‌ಪಲಾಯಿಸ್ ಎಂದು ಪರಿಚಿತವಾಗಿದ್ದ ಬೆಲ್ವೆಡೆರೆಯೊಳಗೆ 1736ರ೧೭೩೬ರ ಜುಲೈ 6ರಂದು೬ರಂದು ರಾಜಕುಮಾರಿ ವಿಕ್ಟೋರಿಯಾ ಸೇರಿಕೊಂಡಳಾದರೂ, ತನಗೆ ಬಂದಿರುವ ಉತ್ತರಾಧಿಕಾರದಲ್ಲಿ ತಾನು ಆಸಕ್ತಿ ಹೊಂದಿಲ್ಲ ಎಂಬುದನ್ನು ಅವಳು ತತ್‌ಕ್ಷಣದಲ್ಲಿ ಸ್ಪಷ್ಟಪಡಿಸಿದಳು ಹಾಗೂ ಸಾಧ್ಯವಾದಷ್ಟು ಬೇಗ ಅರಮನೆ ಸಂಕೀರ್ಣವನ್ನು ಹರಾಜುಹಾಕುವೆಡೆಗೆ ತನಗೆ ಗುರಿಯಿರುವುದನ್ನು ತೋರಿಸಿಕೊಂಡಳು. 1738ರ೧೭೩೮ರ ಏಪ್ರಿಲ್‌ 15ರಂದು೧೫ರಂದು, ಸ್ಯಾಕ್ಸೆ-ಹಿಲ್ಡ್‌ಬರ್ಘೌಸೆನ್‌ನ ‌ರಾಜಕುಮಾರ ಜೋಸೆಫ್‌‌ನನ್ನು (1702–87೧೭೦೨–೮೭) ಅವಳು ಮದುವೆಯಾದಳು. ಈತ ಅವಳಿಗಿಂತ ಸಾಕಷ್ಟು ಕಿರಿಯ ವಯಸ್ಸಿನವನಾಗಿದ್ದ. ಕೆಳಭಾಗದ ಆಸ್ಟ್ರಿಯಾದ ಮಾರ್ಚ್‌ಫೆಲ್ಡ್‌ ಪ್ರದೇಶದಲ್ಲಿರುವ ಸ್ಕ್ಲೋಶಾಫ್‌ನಲ್ಲಿ ರಾಜಮನೆತನದ ಸಮ್ಮುಖದಲ್ಲಿ ಅವರ ಮದುವೆ ನಡೆಯಿತು. ಆದಾಗ್ಯೂ, ಅವಳು ಮಾಡಿದ ಗಂಡನ ಆಯ್ಕೆಯು ಒಂದು ದುರದೃಷ್ಟಕರ ಆಯ್ಕೆ ಎನಿಸಿಕೊಂಡಿತು. ಕಳಪೆಯಾಗಿ-ಹೊಂದಾಣಿಕೆ ಮಾಡಲ್ಪಟ್ಟಿದ್ದ ಈ ಜೋಡಿಯು 1744ರಲ್ಲಿ೧೭೪೪ರಲ್ಲಿ ವಿಚ್ಛೇದನಗೊಂಡಿತು. ಇಷ್ಟಾಗಿಯೂ, ವಿಯೆನ್ನಾವನ್ನು ಬಿಟ್ಟು ಇಟಲಿಯಲ್ಲಿನ ಟ್ಯೂರಿನ್‌ ಎಂಬ ತನ್ನ ತವರು ನಗರಕ್ಕೆ ಹಿಂದಿರುಗಲು ರಾಜಕುಮಾರಿ ವಿಕ್ಟೋರಿಯಾ ಅಂತಿಮವಾಗಿ ನಿರ್ಧರಿಸಿದಾಗ, ಅದಾದ ಎಂಟು ವರ್ಷಗಳ ನಂತರ VIನೇ ಚಾರ್ಲ್ಸ್‌ನ ಮಗಳಾದ ಮಾರಿಯಾ ಥೆರೇಸಾ ಎಂಬಾಕೆ ಸದರಿ ಸ್ಥಿರಾಸ್ತಿಯನ್ನು ಖರೀದಿಸುವಲ್ಲಿ ಸಮರ್ಥಳಾದಳು.
 
ಸದರಿ ಚಕ್ರಾಧಿಪತ್ಯದ ಜೋಡಿಯು ಗಾರ್ಟೆನ್‌ಪಲಾಯಿನೊಳಗೆ ಎಂದಿಗೂ ಬಂದು ಸೇರಿಕೊಳ್ಳಲಿಲ್ಲ. 1752ರ೧೭೫೨ರ ನವೆಂಬರ್‌ನಲ್ಲಿ ರೂಪುಗೊಂಡ ಅವರ ಮಾರಾಟ ಒಪ್ಪಂದದಲ್ಲಿ ಈ ಸ್ಥಳವು ಬೆಲ್ವೆಡೆರೆ ಎಂಬುದಾಗಿ ಮೊದಲು ವಿವರಿಸಲ್ಪಟ್ಟಿತ್ತು. ಚಕ್ರಾಧಿಪತ್ಯದ ಇತರ ಅರಮನೆಗಳು ಈ ಸಂಕೀರ್ಣವನ್ನು ಕೊಂಚಮಟ್ಟಿಗೆ ಕಳೆಗುಂದಿಸಿದ್ದವು ಅಥವಾ ಅತಿಶಯಿಸಿದ್ದವು, ಮತ್ತು ಮೊದಲಿಗೆ ಕಟ್ಟಡಗಳನ್ನು ಬಳಸದೆ ಹಾಗೇ ಬಿಡಲಾಗಿತ್ತು. ಕೆಳಭಾಗದ ಬೆಲ್ವೆಡೆರೆಯಲ್ಲಿ ಹ್ಯಾಬ್ಸ್‌ಬರ್ಗ್‌ ರಾಜವಂಶದ ಪೂರ್ವಜರ ಕಲಾ-ಚಿತ್ರಶಾಲೆಯೊಂದನ್ನು ಮಾರಿಯಾ ಥೆರೇಸಾ ನಂತರದಲ್ಲಿ ಸೃಷ್ಟಿಸಿದಳು. ಇದು ಚಕ್ರಾಧಿಪತ್ಯದ ಕುಟುಂಬಕ್ಕೆ ಸೇರಿರುವ ಇತರ ಎಲ್ಲಾ ಅರಮನೆಗಳಲ್ಲಿ ಕಂಡುಬರುತ್ತಿದ್ದ ಒಂದು ಪದ್ಧತಿಯಾಗಿತ್ತು. ಕಾಲಾನಂತರದಲ್ಲಿ ಲೂಯಿಸ್‌ XVI ಎಂಬುದಾಗಿ ಕರೆಸಿಕೊಂಡ, ಫ್ರೆಂಚ್‌ ಡೌಫಿನ್ ಜೊತೆಯಲ್ಲಿನ ಚಕ್ರಾಧಿಪತ್ಯದ ರಾಜಕುಮಾರಿ ಮಾರಿಯಾ ಆಂಟೋನಿಯಾಳ ಮದುವೆಯ ವಿಶೇಷ-ಸಂದರ್ಭವನ್ನು ಆಚರಿಸಲು, 1770ರ೧೭೭೦ರ ಏಪ್ರಿಲ್‌ 17ರಂದು೧೭ರಂದು ಅಲ್ಲಿ ಒಂದು ಮರಸು-ವೇಷದ ನೃತ್ಯಕೂಟವನ್ನು ಆಯೋಜಿಸಿದಾಗಷ್ಟೇ ಸದರಿ ಅರಮನೆಯು ತನ್ನ ಜಡಸ್ಥಿತಿಗಳಿಂದ ಕೇವಲ ಒಮ್ಮೆಗೆ ಎಚ್ಚರಗೊಂಡಂತಾಯಿತು. ಅರಮನೆಯ ಪಾರುಪತ್ಯಗಾರನಾಗಿದ್ದ ರಾಜಕುಮಾರ ಜೋಹಾನ್‌ ಜೋಸೆಫ್‌ ಖೆವೆನ್‌ಹಲ್ಲರ್‌-ಮೆಟ್ಷ್‌ ಮತ್ತು ಆಸ್ಥಾನ ವಾಸ್ತುಶಿಲ್ಪಿ ನಿಕೋಲಸ್‌ ಪಕಾಸಿ ಇವರುಗಳಿಗೆ ನೃತ್ಯಕೂಟಕ್ಕೆ ಸಂಬಂಧಿಸಿದ ವ್ಯಾಪಕವಾದ ಸಿದ್ಧತೆಗಳ ನಿಗಾವಣೆ ನೋಡುವ ಉಸ್ತುವಾರಿಯನ್ನು ವಹಿಸಲಾಗಿತ್ತು. ಈ ನೃತ್ಯಕೂಟಕ್ಕಾಗಿ 16೧೬,000೦೦೦ ಅತಿಥಿಗಳಿಗೆ ಆಹ್ವಾನವನ್ನು ನೀಡಲಾಗಿತ್ತು.
1776ರಲ್ಲಿ೧೭೭೬ರಲ್ಲಿ ಮಾರಿಯಾ ಥೆರೇಸಾ ಮತ್ತು ಅವಳ ಮಗನಾದ ಸಾಮ್ರಾಟ ಜೋಸೆಫ್‌ II ನಿರ್ಧಾರವೊಂದನ್ನು ಕೈಗೊಂಡು, k.k. ಜೆಮಾಲ್ಡಿಗ್ಯಾಲರಿಯನ್ನು (ಚಕ್ರಾಧಿಪತ್ಯದ ಸಚಿತ್ರ ಕಲಾ-ಚಿತ್ರಶಾಲೆ) ಚಕ್ರಾಧಿಪತ್ಯದ ಕುದುರೆಯ ಲಾಯಗಳಿಂದ ಮೇಲ್ಭಾಗದ ಬೆಲ್ವೆಡೆರೆಗೆ ವರ್ಗಾಯಿಸಲು ತೀರ್ಮಾನಿಸಿದರು; ಸದರಿ ಲಾಯಗಳು ನಗರದ ಹೋಫ್‌ಬರ್ಗ್‌ ಚಕ್ರಾಧಿಪತ್ಯದ ಅರಮನೆಯ ಒಂದು ಭಾಗವಾಗಿದ್ದವು. ಪ್ರಬುದ್ಧ ನಿರಂಕುಶತ್ವ ಸಿದ್ಧಾಂತದ ಪರಿಕಲ್ಪನೆಯಿಂದ ಪ್ರೇರೇಪಿಸಲ್ಪಟ್ಟಿದ್ದ ಈ ಕ್ರಮದ ಹಿಂದೆ ಜನಸಾಮಾನ್ಯರಿಗೆ ಚಕ್ರಾಧಿಪತ್ಯದ ಸಂಗ್ರಹವನ್ನು ಸಂಪರ್ಕಲಭ್ಯವಾಗಿಸುವ ಆಶಯವಿತ್ತು. ಐದು ವರ್ಷಗಳ ನಂತರ ಪ್ರಾರಂಭವಾದ ಕಲಾ-ಚಿತ್ರಶಾಲೆಯು, ವಿಶ್ವದಲ್ಲಿನ ಮೊದಲ ಸಾರ್ವಜನಿಕ ವಸ್ತುಸಂಗ್ರಹಾಲಯಗಳ ಪೈಕಿ ಒಂದಾಗಿ ಹೊರಹೊಮ್ಮಿತು. ಒಂದು ಸರಣಿಯುಲ್ಲಿದ್ದ ಶ್ರೇಷ್ಠ ವರ್ಣಚಿತ್ರಗಾರರು 1891ರವರೆಗೆ೧೮೯೧ರವರೆಗೆ ಮೇಲ್ಭಾಗದ ಬೆಲ್ವೆಡೆರೆಯಲ್ಲಿ ಚಕ್ರಾಧಿಪತ್ಯದ ಸಂಗ್ರಹದ ಉಸ್ತುವಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ವಿಯೆನ್ನಾದ ಭವ್ಯವಾದ ರಿಂಗ್‌ಸ್ಟ್ರಾಸ್ಸೆಯಲ್ಲಿ ಹೊಸದಾಗಿ-ನಿರ್ಮಿಸಲ್ಪಟ್ಟ ಕನ್ಸ್‌ಥಿಸ್ಟೋರಿಸ್ಕ್ಸ್‌‌ ವಸ್ತುಸಂಗ್ರಹಾಲಯಕ್ಕೆ (ಲಲಿತ ಕಲೆಗಳ ವಸ್ತುಸಂಗ್ರಹಾಲಯ) ಚಕ್ರಾಧಿಪತ್ಯದ ಸಂಗ್ರಹವು ಈ ಅವಧಿಯಲ್ಲಿ ವರ್ಗಾಯಿಸಲ್ಪಟ್ಟಿತು.
ಮೇಲ್ಭಾಗದ ಬೆಲ್ವೆಡೆರೆಯು ಹದಿನೆಂಟನೇ ಶತಮಾನದ ಅಂತ್ಯಭಾಗದಲ್ಲಿ ಒಂದು ಸಚಿತ್ರ ಕಲಾ-ಚಿತ್ರಶಾಲೆಯಾಗಿ ಮಾರ್ಪಡಿಸಲ್ಪಟ್ಟ ಸಂದರ್ಭದಲ್ಲಿಯೇ, ನೆಪೋಲಿಯನ್‌ನಿಂದ ತಲೆತಪ್ಪಿಸಿಕೊಂಡು ಹೋಗುತ್ತಿದ್ದ ಕುಟುಂಬ ಸದಸ್ಯರಿಗೆ ನೆಲೆಯನ್ನು ಒದಗಿಸುವ ಕಾರ್ಯವನ್ನು ಕೆಳಭಾಗದ ಬೆಲ್ವೆಡೆರೆಯು ಪ್ರಧಾನವಾಗಿ ನಿರ್ವಹಿಸಿತು. ಇಂಥ ನಿದರ್ಶನಗಳಲ್ಲಿ ಸೇರ್ಪಡೆಗೊಂಡಿದ್ದ ಅತ್ಯಂತ ಗಮನಾರ್ಹವಾದ ವ್ಯಕ್ತಿಗಳಲ್ಲಿ ರಾಜಕುಮಾರಿ ಮೇರೀ ಥೆರೇಸ್‌ ಚಾರ್ಲೋಟ್‌, ಮೇರೀ ಆಂಟೋಯಿನೆಟ್‌ ಮತ್ತು ಲೂಯಿಸ್‌ XVI ಇವರ ಏಕಮಾತ್ರವಾಗಿ ಬದುಕುಳಿದಿರುವ ಮಗು ಮತ್ತು ಆರ್ಚ್‌ಡ್ಯೂಕ್‌ ಫರ್ಡಿನೆಂಡ್‌ ಸೇರಿದ್ದರು. ಆಂಗೌಲೆಮ್‌‌ನ ಡ್ಯೂಕ್‌ ಆಗಿದ್ದ ಲೂಯಿಸ್‌ ಆಂಟೋಯಿನ್‌ ರಾಜಕುಮಾರನ ಜೊತೆಯಲ್ಲಿ 1799ರಲ್ಲಿ೧೭೯೯ರಲ್ಲಿ ತನ್ನ ಮದುವೆಯಾಗುವವರೆಗೆ ಮೇರೀ ಥೆರೇಸ್‌ ಚಾರ್ಲೋಟ್‌ ಅರಮನೆಯಲ್ಲಿ ಉಳಿದುಕೊಂಡಿದ್ದಳು. 1796ರವರೆಗೆ೧೭೯೬ರವರೆಗೆ ಲೊಂಬಾರ್ಡಿಯ ಕಾರ್ಯಾಧ್ಯಕ್ಷ (ಗವರ್ನರು) ಆಗಿದ್ದ ಆರ್ಚ್‌ಡ್ಯೂಕ್‌ ಫರ್ಡಿನೆಂಡ್‌ ವಾಸಿಸಲೆಂದು ಅಲ್ಲಿಗೆ ತೆರಳಿದ; 1797ರಲ್ಲಿ೧೭೯೭ರಲ್ಲಿ ಆದ ಕ್ಯಾಂಪೊ ಫಾರ್ಮಿಯೊ ಒಡಂಬಡಿಕೆಯನ್ನು ಅನುಸರಿಸಿಕೊಂಡು ಫ್ರೆಂಚರಿಗೆ ತನ್ನ ಜಮೀನನ್ನು ಆತ ಬಲವಂತವಾಗಿ ಬಿಟ್ಟುಕೊಡಬೇಕಾಗಿ ಬಂದ ನಂತರ, ಆತ ಈ ಕ್ರಮವನ್ನು ಅನುಸರಿಸಬೇಕಾಗಿ ಬಂತು ಹಾಗೂ ಇದರಿಂದಾಗಿ ಆತನಿಗೆ ಒಂದು ನಿವಾಸವಿಲ್ಲದಂತಾಗಿತ್ತು.
1805ರಲ್ಲಿ೧೮೦೫ರಲ್ಲಿ ಆದ ಪ್ರೆಸ್‌ಬರ್ಗ್ ಒಡಂಬಡಿಕೆ‌ಯ ಅನುಸಾರ ಹ್ಯಾಬ್ಸ್‌ಬರ್ಗ್‌ ರಾಜಪ್ರಭುತ್ವವು ಬವೇರಿಯಾಗೆ ಟೈರಾಲ್‌ನ್ನು ಬಿಟ್ಟುಕೊಡಬೇಕಾಗಿ ಬಂದನಂತರ, ಅಂಬ್ರಾಸ್‌ ದುರ್ಗಕ್ಕೆ ಸೇರಿದ್ದ ಚಕ್ರಾಧಿಪತ್ಯದ ಸಂಗ್ರಹಕ್ಕಾಗಿ ಇನ್ಸ್‌ಬ್ರಕ್‌ ಸಮೀಪದಲ್ಲಿ ಒಂದು ಹೊಸ ನೆಲೆಯನ್ನು ಕಂಡುಕೊಳ್ಳಬೇಕಾಗಿ ಬಂತು. ಫ್ರೆಂಚ್‌ ಪಡೆಗಳಿಂದ ಲೂಟಿಗೊಳಗಾಗದಂತೆ ಸಂರಕ್ಷಿಸಲು ಸಂಗ್ರಹವನ್ನು ಮೊದಲಿಗೆ ಪೆಟ್ರೊವರಾಡಿನ್‌ ಎಂಬಲ್ಲಿಗೆ (ಈಗ ಇದು ಸರ್ಬಿಯಾದಲ್ಲಿದೆ) ಕೊಂಡೊಯ್ಯಲಾಯಿತು. 1811ರಲ್ಲಿ೧೮೧೧ರಲ್ಲಿ Iನೇ ಫ್ರಾನ್ಸಿಸ್‌ ಸಾಮ್ರಾಟನು ಶಾಸನವೊಂದನ್ನು ಮಾಡಿ, ಕೆಳಭಾಗದ ಬೆಲ್ವೆಡೆರೆಯಲ್ಲಿಯೇ ಇದನ್ನು ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದ; ವಾಸ್ತವವಾಗಿ ಇದು ಸಂಗ್ರಹಕ್ಕೆ ಸಂಬಂಧಿಸಿದಂತೆ ತೀರಾ ಚಿಕ್ಕದಾಗಿತ್ತು. ಈ ರೀತಿಯಲ್ಲಿ, ಬೆಲ್ವೆಡೆರೆಯ ಈ ಭಾಗವು ವಸ್ತುಸಂಗ್ರಹಾಲಯವೊಂದರ ಕಾರ್ಯನಿರ್ವಹಣೆಯನ್ನೂ ವಹಿಸಿಕೊಳ್ಳಬೇಕಾಗಿ ಬಂತು ಹಾಗೂ ಅದು ವಿಯೆನ್ನಾದ ಸಮಾವೇಶದ ವೇಳೆಗೆ (1814–15೧೮೧೪–೧೫) ಜಮಾವಣೆಗೊಂಡಿದ್ದ ಪರಿಗಣನೀಯ ಸಂಖ್ಯೆಯಲ್ಲಿದ್ದ ಸಂದರ್ಶಕರನ್ನು ತನ್ನೆಡೆಗೆ ಸೆಳೆಯಲು ಅಷ್ಟುಹೊತ್ತಿಗಾಗಲೇ ಆರಂಭಿಸಿತ್ತು. ಡಯೆಟ್ರಿಕ್‌ಸ್ಟೀನ್‌-ಪ್ರೊಸ್ಕೌ-ಲೆಸ್ಲೀಯ ಕೌಂಟ್‌ಗೆ ಸೇರಿದ್ದ, ಮೋರಿಟ್ಜ್‌‌ನ ಚಕ್ರಾಧಿಪತ್ಯದ ಆಸ್ಥಾನ ಗ್ರಂಥಾಲಯದ ಇಲಾಖಾ ಮುಖ್ಯಸ್ಥನ ನಿರ್ದೇಶಕತ್ವದ ಅಡಿಯಲ್ಲಿ, ಈಜಿಪ್ಟಿನ ಪ್ರಾಚೀನಾವಶೇಷಗಳ ಸಂಗ್ರಹವನ್ನು ಮತ್ತು ಪ್ರಾಚೀನಾವಶೇಷಗಳು ಕೋಣೆಯನ್ನು 1833ರ೧೮೩೩ರ ನಂತರದಲ್ಲಿ ಕೆಳಭಾಗದ ಬೆಲ್ವೆಡೆರೆಯ ಸಂಗ್ರಹದಲ್ಲಿನ ಅಂಬ್ರಾಸ್‌ ಸಂಗ್ರಹಕ್ಕೆ ಸೇರ್ಪಡೆ ಮಾಡಲಾಯಿತು. ಆ ಘಟ್ಟದವರೆಗೆ ಥೀಸಿಯಸ್‌ ದೇವಾಲಯದ ನೆಲಮಾಳಿಗೆಗಳಲ್ಲಿ ಶೇಖರಿಸಿಡಲ್ಪಟ್ಟಿದ್ದ ರೋಮನ್‌ ಮೈಲಿಗಲ್ಲುಗಳು, ವಿವಿಕ್ತವಾಗಿರುವ ರಾಜಪ್ರಭುತ್ವದ ತೋಟದಲ್ಲಿನ ಹೊರಾಂಗಣದ ತಾಣವೊಂದಕ್ಕೆ 1844ರಲ್ಲಿ೧೮೪೪ರಲ್ಲಿ ವರ್ಗಾಯಿಸಲ್ಪಟ್ಟವು. ಒಂದು ವಸ್ತುಸಂಗ್ರಹಾಲಯವಾಗಿ ಕೆಳಭಾಗದ ಬೆಲ್ವೆಡೆರೆಯು ಸಲ್ಲಿಸಿದ ಆರಂಭಿಕ ಸೇವೆಗಳಿಗೆ, ಕಿರಿಯ ಕಾರ್ಲ್‌ ಗೋಬೆಲ್‌ನಿಂದ ಸೃಷ್ಟಿಯಾದ ಜಲವರ್ಣಚಿತ್ರಗಳು ಒಂದು ಪುರಾವೆಯಾಗಿ ನಿಲ್ಲುತ್ತವೆ; ಅಷ್ಟೇ ಅಲ್ಲ, 1846ರ೧೮೪೬ರ ಕಾಲದಿಂದ ಅಸ್ತಿತ್ವದಲ್ಲಿದ್ದ ಸಂಗ್ರಹಕ್ಕೆ ಜೋಸೆಫ್‌ ಬೆರ್ಗ್‌ಮನ್‌ನ ವಿವರಣಾತ್ಮಕ ಮಾರ್ಗದರ್ಶಿಯು ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. 1888೧೮೮೮-89ರಲ್ಲಿ೮೯ರಲ್ಲಿ, ರಿಂಗ್‌ಸ್ಟ್ರಾಸ್ಸೆಯಲ್ಲಿ ಹೊಸದಾಗಿ ನಿರ್ಮಿಸಲ್ಪಟ್ಟ ಕನ್ಸ್‌ಥಿಸ್ಟೋರಿಸ್ಕ್ಸ್‌‌ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಲ್ಪಡುವವರೆಗೂ, ಈ ಪರಿಸ್ಥಿತಿಯು ಹೆಚ್ಚೂಕಮ್ಮಿ ಬದಲಾಗದೆ ಉಳಿದುಕೊಂಡಿತು.
 
== ಫ್ರಾನ್ಜ್‌ ಫರ್ಡಿನೆಂಡ್‌ ಮತ್ತು ಬೆಲ್ವೆಡೆರೆ ==
ಚಕ್ರಾಧಿಪತ್ಯದ ಸಂಗ್ರಹಗಳ ಸ್ಥಳ ಬದಲಾವಣೆಯನ್ನು ಅನುಸರಿಸಿಕೊಂಡು, ಬೆಲ್ವೆಡೆರೆಯ ಎರಡೂ ಅರಮನೆಗಳು ಒಂದಷ್ಟು ಅವಧಿಯವರೆಗೆ ಸಾರ್ವಜನಿಕ ವಸ್ತುಸಂಗ್ರಹಾಲಯಗಳಾಗಿರುವ ತಮ್ಮ ಪಾತ್ರವನ್ನು ಸ್ಥಗಿತಗೊಳಿಸಿದ್ದವು. ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿ ಬರುವ ತನ್ನ ಸೋದರ ಸಂಬಂಧಿ ಫ್ರಾನ್ಜ್‌ ಫರ್ಡಿನೆಂಡ್‌ಗಾಗಿ ಮೀಸಲಾದ ಒಂದು ನಿವಾಸವಾಗಿ ಮೇಲ್ಭಾಗದ ಬೆಲ್ವೆಡೆರೆಯು ಸೇವೆ ಸಲ್ಲಿಸಬೇಕು ಎಂಬುದಾಗಿ, 1896ರಲ್ಲಿ೧೮೯೬ರಲ್ಲಿ Iನೇ ಫ್ರಾನ್ಸಿಸ್‌ ಜೋಸೆಫ್‌ ಸಾಮ್ರಾಟನು ನಿರ್ಧರಿಸಿದ. ಚಕ್ರಾಧಿಪತ್ಯದ ಅಧೀನ ಕಾರ್ಯದರ್ಶಿಯೂ ಆಗಿದ್ದ ವಾಸ್ತುಶಿಲ್ಪಿ ಎಮಿಲ್‌ ವಾನ್‌ ಫಾಸ್ಟರ್‌ನ ಮೇಲ್ವಿಚಾರಣೆಯ ಅಡಿಯಲ್ಲಿ ಮುಖ್ಯ-ವಾರಸುದಾರನು ಅರಮನೆಯನ್ನು ಮರುರೂಪಿಸಿದ್ದ ಮತ್ತು ಆ ಘಟ್ಟದ ನಂತರದಲ್ಲಿ ಈ ಅರಮನೆಯು ಫ್ರಾನ್ಜ್‌ ಫರ್ಡಿನೆಂಡ್‌ನ ನಿವಾಸವಾಗಿ ತನ್ನ ಸೇವೆ ಸಲ್ಲಿಸಿತು. ಇದಕ್ಕೆ ಪ್ರತಿಯಾಗಿ, ಕೆಲ ವರ್ಷಗಳ ನಂತರ 1903ರ೧೯೦೩ರ ಮೇ 2ರಂದು೨ರಂದು ಕೆಳಭಾಗದ ಬೆಲ್ವೆಡೆರೆಯಲ್ಲಿ ಮಾಡರ್ನೆ ಗ್ಯಾಲರಿಯು ಪ್ರಾರಂಭವಾಯಿತು. ಈ ವಸ್ತುಸಂಗ್ರಹಾಲಯವು ನವ್ಯಕಲೆಗೆ ಏಕಮಾತ್ರವಾಗಿ ಸಮರ್ಪಿಸಿಕೊಂಡ, ಆಸ್ಟ್ರಿಯಾದಲ್ಲಿನ ಮೊದಲ ಸಂಸ್ಥಾನದ ಸಂಗ್ರಹ ಎಂಬ ಕೀರ್ತಿಗೆ ಪಾತ್ರವಾಯಿತು ಮತ್ತು ವಿಯೆನ್ನಾ ವಿಯೋಜನೆ ಎಂದು ಹೆಸರಾಗಿದ್ದ, ಆಸ್ಟ್ರಿಯಾದ ಕಲಾವಿದರ ಒಕ್ಕೂಟದ ಪ್ರೇರೇಪಣೆಯ ಫಲವಾಗಿ ಇದು ಅಸ್ತಿತ್ವಕ್ಕೆ ಬಂದಿತು. ಅಂತರರಾಷ್ಟ್ರೀಯ ಆಧುನಿಕತಾ ಸಿದ್ಧಾಂತದೊಂದಿಗೆ ಆಸ್ಟ್ರಿಯಾದ ಕಲೆಯನ್ನು ಮಗ್ಗುಲಲ್ಲಿಡುವುದು ಇದರ ಹಿಂದಿನ ಗುರಿಯಾಗಿತ್ತು. ಪ್ರಾರಂಭದಿಂದಲೂ, ವಿನ್ಸೆಂಟ್‌ ವ್ಯಾನ್‌ ಗಾಗ್‌, ಕ್ಲೌಡೆ ಮೊನೆಟ್‌, ಮತ್ತು ಗಿಯೋವನ್ನಿ ಸೆಗ್ಯಾಂಟಿನಿ ಇವರ ಪ್ರಮುಖ ಕೃತಿಗಳನ್ನು ಮಾಡರ್ನೆ ಗ್ಯಾಲರಿಗಾಗಿ ಖರೀದಿಸಲಾಗಿತ್ತು. ಆಮೇಲೆ ಈ ವಸ್ತುಸಂಗ್ರಹಾಲಯವು k. k. ಸ್ಟಾಟ್ಸ್‌ಗ್ಯಾಲರಿ (ಚಕ್ರಾಧಿಪತ್ಯದ ಸಂಸ್ಥಾನದ ಕಲಾ-ಚಿತ್ರಶಾಲೆ) ಎಂಬುದಾಗಿ 1911ರಲ್ಲಿ೧೯೧೧ರಲ್ಲಿ ಮರುನಾಮಕರಣಗೊಂಡಿತು; ಹಿಂದಿನ ಚಾರಿತ್ರಿಕ ಯುಗಗಳಿಗೆ ಸೇರಿದ ಕೃತಿಗಳನ್ನು ಒಳಗೊಳ್ಳುವ ಉದ್ದೇಶದಿಂದ, ನವ್ಯಕಲೆಯಿಂದ ಆಚೆಗೂ ಗಮನವನ್ನು ವಿಸ್ತರಿಸಲು ನಿರ್ಧರಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು. ಮುಖ್ಯ-ವಾರಸುದಾರ ಫ್ರಾನ್ಜ್‌ ಫರ್ಡಿನೆಂಡ್‌ ಮತ್ತು ಅವನ ಪತ್ನಿಯ ಹತ್ಯೆ, Iನೇ ಜಾಗತಿಕ ಸಮರದ ಹಠಾತ್‌ ಆರಂಭ, ಹಾಗೂ ಇದರ ಪರಿಣಾಮವಾಗಿ 1918ರಲ್ಲಿ೧೯೧೮ರಲ್ಲಿ ಆದ ಹ್ಯಾಬ್ಸ್‌ಬರ್ಗ್‌ ರಾಜಪ್ರಭುತ್ವದ ಕುಸಿತ ಇವೆಲ್ಲವೂ ಬೆಲ್ವೆಡೆರೆಗೆ ಸಂಬಂಧಿಸಿದ ಹೊಸ ಯುಗವೊಂದರ ಆರಂಭವನ್ನು ಗುರುತುಮಾಡಿದವು.
 
== 1ನೇ೧ನೇ ಮತ್ತು 2ನೇ೨ನೇ ಗಣತಂತ್ರದ ಸಂದರ್ಭದಲ್ಲಿ ಬೆಲ್ವೆಡೆರೆ ==
1918ರ೧೯೧೮ರ ನವೆಂಬರ್‌ನಲ್ಲಿ ಯುದ್ಧವು ಕೊನೆಗೊಂಡ ಕೆಲವೇ ದಿನಗಳ ನಂತರ, ಕಲೆಲಾ ಇತಿಹಾಸಕಾರ ಫ್ರಾನ್ಜ್‌ ಹೇಬರ್‌ಡಿಟ್ಜ್ಲ್‌ ಎಂಬಾತ ಶಿಕ್ಷಣ ಖಾತೆಗೆ ಮನವಿಯೊಂದನ್ನು ಸಲ್ಲಿಸಿ, ಅರಮನೆಗಳನ್ನು ಸ್ಟಾಟ್ಸ್‌ಗ್ಯಾಲರಿಗಾಗಿ ಬಿಟ್ಟುಕೊಡುವಂತೆ ಕೇಳಿಕೊಂಡ. ಈ ಅರ್ಜಿಯ ಬೇಡಿಕೆಯನ್ನು ಮುಂದಿನ ವರ್ಷದಲ್ಲಿಯೇ ಈಡೇರಿಸಲಾಯಿತು. 1920೧೯೨೦-21ರ೨೧ರ ಅವಧಿಯಲ್ಲಿ ಹ್ಯಾನ್ಸ್‌ ಟೀಟ್ಜೆಯಿಂದ ರೂಪಿಸಲ್ಪಟ್ಟಿದ್ದ ಹಿಂದಿನ ಚಕ್ರಾಧಿಪತ್ಯದ ಸಂಗ್ರಹಗಳನ್ನು ಗುರುತಿಸಲು, ಬೆಲ್ವೆಡೆರೆ ಅರಮನೆ ಸಂಕೀರ್ಣದ ರಾಷ್ಟ್ರೀಕರಣವನ್ನು ಕರಡು ದಸ್ತಾವೇಜಿನಲ್ಲಿ ಪ್ರಸ್ತಾವಿಸಲಾಯಿತು. ಇಂದಿಗೂ ಅಸ್ತಿತ್ವದಲ್ಲಿರುವ ವಸ್ತುಸಂಗ್ರಹಾಲಯಗಳ ಜೊತೆಗೆ, ಒಂದು ಆಸ್ಟೆರೀಚಿಸ್ಕೆ ಗ್ಯಾಲರಿ (ಆಸ್ಟ್ರಿಯಾದ ಕಲಾ-ಚಿತ್ರಶಾಲೆ) ಮತ್ತು ಒಂದು ಮಾಡರ್ನೆ ಗ್ಯಾಲರಿಯನ್ನು ಸ್ಥಾಪಿಸುವ ಕುರಿತಾದ ಯೋಜನೆಗಳನ್ನೂ ಇದು ಒಳಗೊಂಡಿತ್ತು. 1921೧೯೨೧-23ರ೨೩ರ ಮರುಸಂಘಟನೆಯ ಸಂದರ್ಭದಲ್ಲಿ, ಕೆಳಭಾಗದ ಬೆಲ್ವೆಡೆರೆಯಲ್ಲಿನ ಬರೋಕ್‌ ಶೈಲಿಯ ವಸ್ತುಸಂಗ್ರಹಾಲಯವನ್ನು ಅಸ್ತಿತ್ವದಲ್ಲಿರುವ ವಸ್ತುಸಂಗ್ರಹಾಲಯ ಸಮಷ್ಟಿಗೆ ಸೇರ್ಪಡೆ ಮಾಡಲಾಯಿತು. 1929ರಲ್ಲಿ೧೯೨೯ರಲ್ಲಿ ಕಿತ್ತಳೆಯ ತೋಟದಲ್ಲಿ ಮಾಡರ್ನೆ ಗ್ಯಾಲರಿಯು ಪ್ರಾರಂಭವಾಯಿತು. IIನೇ ಜಾಗತಿಕ ಸಮರದ ಸಂದರ್ಭದಲ್ಲಿ ಈ ಅರಮನೆಗಳು ಪರಿಗಣನೀಯ ಹಾನಿಯನ್ನು ಅನುಭವಿಸಿದವು. ಮೇಲ್ಭಾಗದ ಬೆಲ್ವೆಡೆರೆಯಲ್ಲಿನ ಅಮೃತಶಿಲೆಯ ಭವನದ ಭಾಗಗಳು ಹಾಗೂ ಕೆಳಭಾಗದ ಬೆಲ್ವೆಡೆರೆಯಲ್ಲಿನ ವಿಕಟಶಿಲ್ಪಗಳ ಭವನ ಇವುಗಳು ಬಾಂಬುಗಳಿಂದ ನಾಶಗೊಳಿಸಲ್ಪಟ್ಟವು. ಮರುನಿರ್ಮಾಣ ಕಾರ್ಯವು ಸಂಪೂರ್ಣಗೊಂಡ ನಂತರ, 1953ರ೧೯೫೩ರ ಫೆಬ್ರುವರಿ 4ರಂದು೪ರಂದು ಆಸ್ಟೆರೀಚಿಸ್ಕೆ ಗ್ಯಾಲರಿಯು ಮೇಲ್ಭಾಗದ ಅರಮನೆಯಲ್ಲಿ ಮರುಪ್ರಾರಂಭವಾಯಿತು. ಬರೋಕ್‌ ಶೈಲಿಯ ವಸ್ತುಸಂಗ್ರಹಾಲಯವು ಕೆಳಭಾಗದ ಅರಮನೆಯಲ್ಲಿ ಪ್ರಾರಂಭವಾಯಿತು ಹಾಗೂ ಮಿಟ್ಟೆಲ್‌ಆಲ್ಟರ್ಲಿಚೆರ್‌ ಆಸ್ಟರೀಚಿಸ್ಕೆರ್‌ ಕನ್ಸ್ಟ್‌ ವಸ್ತುಸಂಗ್ರಹಾಲಯವು (ಮಧ್ಯಯುಗದ ಆಸ್ಟ್ರಿಯಾದ ಕಲೆಯ ಕುರಿತಾದ ವಸ್ತುಸಂಗ್ರಹಾಲಯ) 1953ರ೧೯೫೩ರ ಡಿಸೆಂಬರ್‌ 5ರಂದು೫ರಂದು ಕಿತ್ತಳೆಯ ತೋಟದಲ್ಲಿ ಪ್ರಾರಂಭವಾಯಿತು.
 
==ಇವನ್ನೂ ಗಮನಿಸಿ==
೪,೬೩೬

edits

"https://kn.wikipedia.org/wiki/ವಿಶೇಷ:MobileDiff/200309" ಇಂದ ಪಡೆಯಲ್ಪಟ್ಟಿದೆ