ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೧ ನೇ ಸಾಲು:
==ಪಂಡಿತ್ ಜಿಯವರ ಸ್ವಭಾವ==
ಭೀಮಸೇನರು,ಸ್ವಭಾವತಃ ಮಹಾಮೌನಿಗಳು. ಅವರಿಂದ ಯಾವ ಪ್ರಶ್ನೆಗಳಿಗೂ ಉತ್ತರಗಳನ್ನು ನಿರೀಕ್ಷಿಸುವುದು ದುಸ್ಸಾಧ್ಯವಾಗಿತ್ತು. ಆದರೆ ಅವರ ವಾಚಾಳಿತನವನ್ನು ಶ್ರೋತೃಗಳು ಅವರು ಪ್ರಸ್ತುತಪಡಿಸುತ್ತಿದ್ದ,'ಬೃಂದಾವನ ಸಾರಂಗದಲ್ಲೋ,' ಭೀಮ ಪಲಾಸಿನಲ್ಲೋ',ಅಥವಾ ಮತ್ಯಾವುದೋ ಮುದಕೊಡುವ ರಾಗಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅಸ್ಮಿತೆ ಅವರಲ್ಲಿ ನಿರಂತರವಾಗಿ ಹರಿಯುವ ತೊರೆಯಾಗಿತ್ತು. ಅವರ ಮೈಮನಗಳಲ್ಲಿ ಸಂಗೀತ ಉಕ್ಕಿಹರಿಯುತ್ತಿತ್ತು. ಯವತ್ತೂ ಅವರ ಮನೋಲೋಕದಲ್ಲೆಲ್ಲಾ ಆವರಿಸಿದ್ದು,'ಸಂಗೀತ'; 'ಕೇವಲ ಸಂಗೀತ,' ಹಾಗೂ ಅಪಾರ ಗುರುಭಕ್ತಿ,ಮಾತ್ರ.
==ನಾದಪುತ್ರ ಹುಟ್ಟಿದ==
ಭೀಮಸೇನರಬಗ್ಗೆ ಅವರ ತಂದೆ, ಗುರುರಾಜರು ಬರೆದ ಅಪರೂಪದ ಪುಸ್ತಕ, ಭೀಮಸೇನ ಜೋಷಿಯವರ ಬಾಲ್ಯದ, ಮತ್ತು ಅವರ ಸಂಗೀತದ ಹುಚ್ಚಿನ ಹತ್ತು-ಹಲವು ಮುಖಗಳನ್ನು ಪರಿಚಯಿಸುವ ಒಂದು ಸುಂದರ ಪುಸ್ತಕ. ಭೀಮಸೇನರ ಸಂಗೀತ-ಕಲೋಪಾಸನೆಗೆ ತಾವೇ ಅಡ್ಡಿಬಂದ ಸಂದರ್ಭದಲ್ಲಿ ವಿಧಿ ಹೇಗೆ ಅವರ ನಿರ್ಧಾರಗಳನ್ನು ಬದಲಾಯಿಸಿ, ಅವರ ಮಗನನ್ನು ಭಾರತದ ಮಹಾನ್ ಗಾಯಕನಾಗುವ ಅವಕಾಶವನ್ನು ತಂದೊಡ್ಡಿತು, ಎನ್ನುವ ವಿಚಾರ, ಅವರನ್ನು ದಿಗ್ಭ್ರಮೆಗೊಳಿಸುತ್ತದೆ.
 
==ಭೀಮಸೇನರ ಸಂಗೀತದ, ಧ್ವನಿಸುರಳಿಗಳು==
ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿದೆ.
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ