"ಅನಂತ ಪೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಅಮರ ಚಿತ್ರ ಕಥೆ==
೧೯೬೭ ರಲ್ಲಿ, ಮೊಟ್ಟಮೊದಲು ಅನಂತ ಪೈ ಹೊರತಂದ ಚಿತ್ರಕಥಾ ಸಂಗ್ರಹವೆಂದರೆ ಅಮರಚಿತ್ರಕಥಾ. [[ಹಿಂದಿ]], [[ಇಂಗ್ಲೀಷ್]] ಭಾಷೆಗಳಲ್ಲಿ ಬರಹವಿದ್ದ ಈ ಪ್ರತಿಗಳು ಕಾಲಾಂತರದಲ್ಲಿ [[ಭಾರತ]]ದ ಹಲವು ಭಾಷೆಗಳಲ್ಲಿ, ನಂತರ ವಿಶ್ವ ಪ್ರಮುಖ ಭಾಷೆಗಳಲ್ಲಿ ಬರಲಾರಂಭಿಸಿದವು. ತೆನಾಲಿರಾಮನ ಚಿತ್ರದ ಜೊತೆ [[ತೆನಾಲಿ ರಾಮಕೃಷ್ಣ]] ನ ಕಥೆ ಓದಿದ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಅಚ್ಚೊತ್ತಿರುವ ವ್ಯಕ್ತಿತ್ವ ಅನನ್ಯವಾದದ್ದು. ಬೇರೆ ಪಾತ್ರಗಳಾದ [[ಸಾವಿತ್ರಿ]], [[ನಳ]] [[ದಮಯಂತಿ]], [[ವಸಂತಸೇನೆ]]-ಉದಯನ, [[ರಾಮ]], [[ಪರಶುರಾಮ]], [[ಶ್ರವಣಕುಮಾರ]], [[ಶಿಶುಪಾಲ]], [[ಜರಾಸಂಧ]], [[ಶಕುಂತಲೆ]], [[ಕಿತ್ತೂರು ಚೆನ್ನಮ್ಮ]], [[ರಾಣಿ ಅಬ್ಬಕ್ಕ]], ಎಲ್ಲ ಒಂದೊಂದು ಕಲ್ಪನೆಯನ್ನು ಉಳಿಸಿಹೋಗಿದ್ದಾರೆ.
==ಮಕ್ಕಳಿಗಾಗಿ ಪುಸ್ತಕಗಳೇ ಇರದಕಾಲದಲ್ಲಿ==
 
[[ಭಾರತ]]ದಲ್ಲಿ ಟೆಲಿವಿಶನ್ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ, ಪಟ್ಟಣಗಳಲ್ಲಿ, 'ಫ್ಯಾಂಟಮ್','ಸೂಪರ್ ಮ್ಯಾನ್', 'ಆರ್ಚಿ', ಮೊದಲಾದ ಇಂಗ್ಲೀಷ್ ಚಿತ್ರಕಥೆಗಳ ಪುಸ್ತಕಗಳು ಜನಪ್ರಿಯವಾಗಿದ್ದವು. ಭಾರತೀಯ ಭಾಷೆಗಳಲ್ಲಿ ಉತ್ತಮ ಮಟ್ಟದ ಕಥಾಚಿತ್ರಪುಸ್ತಕಗಳು ಹೆಚ್ಚಿಗೆ ಬಂದಿರಲಿಲ್ಲ. ಆ ಸಮಯದಲ್ಲಿ ಪೈರವರ'ಪೈ'ರವರ ದೂರಾಲೋಚನೆ, ಸಮಯಪ್ರಜ್ಞೆಯ ಜೊತೆಗೆ, ಸ್ವಾರಸ್ಯವಾದ ನಿರೂಪಣೆ, ಮತ್ತು ತಕ್ಕ ಚಿತ್ರಗಳ ಅಳವಡಿಕೆ ಕ್ರಮಗಳಿಂದ ಭಾರತದ ಪುರಾಣಗಳು ಮತ್ತು ಇತಿಹಾಸದಿಂದ ಆಯ್ದು ಸಿದ್ಧಪಡಿಸಿದ ಸುಂದರ ಕಥಾ ಪ್ರಸಂಗಗಳು ಒಮ್ಮೆಲೇ ಮಕ್ಕಳ ಆಸಕ್ತಿಯನ್ನು ಕೆರಳಿಸಿ ಜನಪ್ರಿಯವಾದವು.
 
==ದೇಶದಾದ್ಯಂತ 'ಪೈ'ರವರ ಪುಸ್ತಕಗಳು ಲಭ್ಯವಾದವು==
೨,೩೨೬

edits

"https://kn.wikipedia.org/wiki/ವಿಶೇಷ:MobileDiff/196761" ಇಂದ ಪಡೆಯಲ್ಪಟ್ಟಿದೆ