ಜಲ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸರಿಪಡಿಸುವಿಕೆ
ಚುNo edit summary
೧ ನೇ ಸಾಲು:
[[File:Water cycle.png|thumb|320px|right|ಜಲ ಚಕ್ರ]]
'''ಜಲಶಾಸ್ತ್ರೀಯ ಚಕ್ರ''' ಅಥವಾ '''H<sub>2</sub>O ಚಕ್ರ''' ಎಂದೂ ಕರೆಯಲ್ಪಡುವ '''ಜಲಚಕ್ರಜಲಚಕ್ರವು''' ವು [[ಭೂಮಿ|ಭೂಮಿಯ]] ಹೊರಮೈ ಮೇಲೆ ಕೆಳಕ್ಕೂ ಮತ್ತು ಮೇಲಕ್ಕೂ ನಡೆಯುವ ನೀರಿನ ನಿರಂತರ ಚಲನೆಯನ್ನು ವಿವರಿಸುತ್ತದೆ. ಜಲಚಕ್ರದ ವಿವಿಧ ಹಂತಗಳಲ್ಲಿ ನೀರು [[ದ್ರವ]], ಅನಿಲ ಮತ್ತು ಹಿಮದ (ಘನ) ಸ್ಥಿತಿಗೆ ಬದಲಾವಣೆಯಾಗಬಹುದು. ಆದಾಗ್ಯೂ, ನೀರಿನ ಭೂಮಿಯಲ್ಲಿ ಸಮತೋಲನವು ಬಹುಕಾಲದಿಂದಲೂ ಉತ್ತಮವಾದ ಸ್ಥಿರತೆಯಿಂದಿದ್ದು ಪ್ರತಿಯೊಂದು ನೀರಿನ ಅಣುಗಳೂ ಸಹ ವಾತಾವರಣದ ಒಳಗೆ ಬರುತ್ತಿರುತ್ತವೆ ಮತ್ತು ಹೊರಗೆ ಹೋಗುತ್ತಿರುತ್ತವೆ. ನದಿಯಿಂದ ಸಮುದ್ರಕ್ಕೆ ಅಥವಾ ಸಮುದ್ರದಿಂದ ವಾತಾವರಣಕ್ಕೆ ಚಲಿಸುವಂತೆ, ನೀರು ಒಂದು ಜಲಾಶಯದಿಂದ ಇನ್ನೊಂದಕ್ಕೆ ಬಾಷ್ಪೀಕರಣ, ಘನೀಕರಣ, ಅವಕ್ಷೇಪನ, ಒಳಹರಡುವಿಕೆ, ಹರಿಯುವಿಕೆ ಮತ್ತು ಉಪ ಮೇಲ್ಮೈ ಹರಿಯುವಿಕೆಯೇ ಮೊದಲಾದ ಭೌತಿಕ ಪ್ರಕ್ರಿಯೆಗಳಿಂದ ಚಲಿಸುತ್ತವೆ. ಹೀಗೆ ಮಾಡುವುದರಿಂದ ನೀರು ದ್ರವ, ಘನ ಮತ್ತು ಅನಿಲ ಎಂಬ ವಿಭಿನ್ನ ಸ್ಥಿತಿಗಳ ಮೂಲಕ ಸಾಗುತ್ತದೆ.
 
ಜಲಶಾಸ್ತ್ರೀಯ ಚಕ್ರವು ವಾತಾವರಣದ ಉಷ್ಣತೆಯಲ್ಲಿ ಬದಲಾವಣೆಯನ್ನುಂಟು ಮಾಡಬಲ್ಲ ಶಾಖ ಶಕ್ತಿಯ ವಿನಿಮಯವನ್ನೂ ಕೂಡಾ ಒಳಗೊಂಡಿರುತ್ತದೆ. ಇದಕ್ಕೆ ನಿದರ್ಶನವೆಂದರೆ, ಬಾಷ್ಪೀಕರಣ ಪ್ರಕ್ರಿಯೆಯಲ್ಲಿ ನೀರು ತನ್ನ ಸುತ್ತಮುತ್ತಲ ವಾತಾವರಣದಿಂದ ಶಕ್ತಿಯನ್ನು ಪಡೆದು ಪರಿಸರವನ್ನು ತಂಪಾಗಿಸುತ್ತದೆ. ಪ್ರತಿಯಾಗಿ, ಘನೀಕರಣ ಅಥವಾ ದ್ರವೀಕರಣ ಪ್ರಕ್ರಿಯೆಯಲ್ಲಿ ನೀರು ಶಕ್ತಿಯನ್ನು ತನ್ನ ಪರಿಸರಕ್ಕೆ ಬಿಡುಗಡೆಗೊಳಿಸಿ ವಾತಾವರಣವನ್ನು ಬೆಚ್ಚಗಾಗಿಸುತ್ತದೆ.
"https://kn.wikipedia.org/wiki/ಜಲ_ಚಕ್ರ" ಇಂದ ಪಡೆಯಲ್ಪಟ್ಟಿದೆ