ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿದೆ.
==ಪುಣೆಯ ವಾಸಿ==
ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಪ್ರತಿಷ್ಠಿತ [[ಪದ್ಮವಿಭೂಷಣ]] ಪ್ರಶಸ್ತಿ ಭೀಮಸೇನ ಜೋಷಿಯವರಿಗೆ ಲಭಿಸಿದೆ. [[ಹುಬ್ಬಳ್ಳಿ|ಹುಬ್ಬಳ್ಳಿಯ]] [[ಹಾನಗಲ್ ಮ್ಯೂಸಿಕ್ ಸಂಸ್ಥೆ]], ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಲವಾರು ಗಣ್ಯರಲ್ಲಿ, ಖ್ಯಾತ ನಟ ಮತ್ತು ನಿರ್ದೇಶಕ, ಅಮೋಲ್ ಪಾಲೆಕರ್ ರೂ ಒಬ್ಬರು. ಕಾರನ್ನು ವೇಗವಾಗಿ ಓಡಿಸುವ ಖಯಾಲಿ ಇವರಿಗಿತ್ತು.
 
==ಪ್ರಮುಖ ಶಿಷ್ಯರು==
ಪಂಡಿತ್‌ಜೀಯವರ ಶಿಷ್ಯತ್ವ ಪಡೆದವರಲ್ಲಿ, ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ' ಉಪೇಂದ್ರ ಭಟ್' 'ಶ್ರೀನಿವಾಸ ಜೋಶಿ,ರಾಜೇಂದ್ರ ಕಂದಲ್ಗಾವ್ಕರ್,ಆನಂದ ಭಾಟೆ, ವಿನಾಯಕ್.ಪಿ.ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಮುಖ್ಯರು..
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ