ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೧ ನೇ ಸಾಲು:
'''ಪಂಡಿತ ಭೀಮಸೇನ ಗುರುರಾಜ ಜೋಷಿ''' [[ಹಿಂದುಸ್ತಾನಿ ಸಂಗೀತ]](ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು '''[[ಭಾರತ ರತ್ನ]]''' ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.
=='ಬಹು-ದೊಡ್ಡ ಪರಿವಾರದಲ್ಲಿ ಜನನ'==
ಭೀಮಸೇನ ಜೋಷಿಯವರು [[೧೯೨೨]] ರಲ್ಲಿ (ಹಿಂದೆ ಧಾರವಾಡ ಜಿಲ್ಲೆ) [[ಗದಗ್|ಗದಗ]] ಜಿಲ್ಲೆಯ [[ರೋಣ]] ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ [[ಗುರುರಾಜ ಜೋಶಿ]] ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ [[ರಮಾಬಾಯಿ|ರಮಾಬಾಯಿಯವರಿಗೆ]]ಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, [[ಗೋದುಬಾಯಿ|ಗೋದುಬಾಯಿಯವರಿಗೆ]]ಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ 'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು. ಹಿರಿಯಮಗ,[[ಭೀಮಸೇನ|ಭೀಮಸೇನರ]] ನಂತರ, ಜನಿಸಿದವರು, ’[[ವನಮಾಲ]]’, ’[[ನಾರಾಯಣ]]’, ’[[ವೆಂಕಣ್ಣ]]’, ’[[ಹೇಮಕ್ಕ]]’, ’[[ಮದ್ದು]]’, ’[[ಮಾಧು]]’, ’[[ದಾಮೋದರ]]’, ’[[ಪರಿಮಳ]]’, ’[[ವಿಶಾಲ]] ’[[ಪ್ರಕಾಶ]]’,[[ಜಯತೀರ್ಥ]], [[ಸುಶೀಲೇಂದ್ರ]], [[ಪ್ರಾಣೇಶ]], [[ವಾದಿರಾಜ]], ಮತ್ತು ’[[ಜ್ಯೋತಿ]].’ ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು.
 
==ಗುರುವಿಗಾಗಿ ಹುಡುಕಾಟ==
ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು [[ಮುಂಬಯಿ|ಮುಂಬಯಿಗೆ]]ಗೆ ಹೋದರು.[[ಮುಂಬಯಿ|ಮುಂಬಯಿತಲುಪಿದ]]ತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ. ಪುಟ್ಟ ಭೀಮಸೇನರು ಕೂಲಿ ನಾಲಿ ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ ಆಸೆ ಮತ್ತು ಹಠ ಅವರನ್ನು ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ [[ಗ್ವಾಲಿಯರ್]] ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ [[ಸವಾಯಿ ಗಂಧರ್ವ|ಸವಾಯಿ ಗಂಧರ್ವರಲ್ಲಿ]]ರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು [[ಧಾರವಾಡ]] ಜಿಲ್ಲೆಗೆ ಹಿಂದಿರುಗಿ [[ಕುಂದಗೋಳ|ಕುಂದಗೋಳದ]] ಪ್ರಸಿದ್ಧ ಗಾಯಕರಾದ [[ಸವಾಯಿ ಗಂಧರ್ವ|ಸವಾಯಿ ಗಂಧರ್ವರ]] ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ [[ಕಿರಾಣಾ ಘರಾನಾ|ಕಿರಾಣಾ ಘರಾನಾದಲ್ಲಿ]]ದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.
=='ಗುರುರಾಜ ಜೋಶಿ ಪರಿವಾರದ ಸದಸ್ಯರು'==
ಪಂ.'ಭೀಮ್ ಸೆನ್ ಜೋಶಿ'ಯವರ ತಮ್ಮನ ಮಕ್ಕಳಲ್ಲೊಬ್ಬರು, 'ಭಾರತೀಯ ಕ್ರಿಕೆಟ್ ತಂಡದ ಸದಸ್ಯ'ರಲ್ಲೊಬ್ಬರಾದ ’[[ಸುನಿಲ್ ಜೊಶಿ]]’, ಮತ್ತು ’[[ಅನಿರುದ್ಧ ಜೋಶಿ]], ಕಿರಿಯರ ಕ್ರಿಕೆಟ್ ತಂಡದ ಆಟಗಾರರು, ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’[[ಜಡಭರತ]]’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’[[ಮನೋಹರ ಗ್ರಂಥಮಾಲೆ]]’ಯೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಜೋಶಿಮನೆತನ ಸಂಗೀತ, ಸಾಹಿತ್ಯ, ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಅಜ್ಜ ಕೀರ್ತನಕಾರರು. ಮೊಮ್ಮಗ, 'ಭೀಮಸೇನ', ಭಜನಾಮೇಳದವರೊಡನೆ ಸೇರಿಕೊಂಡು ದಾಸರ ಪದಗಳನ್ನು ಕೇಳುತ್ತಾ, ಹಾಡುತ್ತಾ ಮೈಮರೆಯುತ್ತಿದ್ದರು. ಹೀಗೆ ಮುಂದುವರೆದು 'ದಾಸವಾಣಿ-ಶಾಸ್ತ್ರೀಯ ಸಂಗೀತವಲಯ'ದಲ್ಲಿ ಅಪ್ರತಿಮ ಸಾಧನೆಮಾಡಿದರು; ಸಂಗೀತವನ್ನೂ ಬೆಳೆಸಿದರು.
 
==ಭೀಮಸೇನ ಜೋಷಿಯವರ ಪರಿವಾರ==
ಸನ್,೧೯೪೪ ರಲ್ಲಿ, ಪಂಡಿತ್‌ಜೀಯವರ ಪ್ರಥಮ ಪತ್ನಿ, [[ಸುನಂದಾ|ಸುನಂದಾರವರ]]ರವರ ಜೊತೆ ವಿವಾಹದಿಂದ ನಾಲ್ಕು ಮಕ್ಕಳು ಜನಿಸಿದರು. ಅವರೇ, [[ರಾಘವೇಂದ್ರ]], [[ಉಷಾ]], [[ಸುಮಂಗಲ]], ಹಾಗೂ ಕಿರಿಯ ಮಗ [[ಆನಂದ]]. ಸುನಂದಾರವರ ನಿಧನಬಳಿಕ, ೨ನೇ ವಿವಾಹ,[[ವತ್ಸಲಾ]] ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು; ಅವರೇ, [[ಜಯಂತ]], [[ಶುಭದಾ]] ಹಾಗೂ [[ಶ್ರೀನಿವಾಸ]]. ತಂದೆಯ ಪರಮ ಶಿಷ್ಯನಾದ 'ಶ್ರೀನಿವಾಸ', ಈಗ ಪ್ರಬುದ್ಧ ಗಾಯಕರಾಗಿದ್ದಾರೆ.
 
==ಗದಗದೊಂದಿಗೆ ಅವಿನಾಭಾವ ಸಂಬಂಧ==
೩೮ ನೇ ಸಾಲು:
* 'ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್',
* 'ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್',
ಹಿಂದುಸ್ತಾನಿ ಸಂಗೀತದ [[ಖಯಾಲ್]] ಕೃತಿಗಳ ಹಾಡುಗಾರಿಕೆಗೆ ಜೋಷಿಯವರು ಪ್ರಸಿದ್ಧರು.[[ಕನ್ನಡ]] ಭಾಷೆಯ ದಾಸಪದವಾದ '''ಭಾಗ್ಯದ ಲಕ್ಷ್ಮಿ ಬಾರಮ್ಮ''' ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ '''ದಾಸವಾಣಿ''' ಮತ್ತು '''ಎನ್ನ ಪಾಲಿಸೊ''' ಹಾಗೆಯೇ [[ಹಿಂದಿ]] ಭಜನೆಗಳು, [[ಮರಾಠಿ]] [[ಅಭಂಗ]] ಮತ್ತು [[ನಾಟ್ಯಗೀತೆ|ನಾಟ್ಯಗೀತೆಗಳನ್ನು]]ಗಳನ್ನು ಸಹ ಬಹಳಷ್ಟು ಹಾಡಿದ್ದಾರೆ.
==ಪಂಡಿತ್ ಜಿಯವರ ಸ್ವಭಾವ==
ಭೀಮಸೇನರು,ಸ್ವಭಾವತಃ ಮಹಾಮೌನಿಗಳು. ಅವರಿಂದ ಯಾವ ಪ್ರಶ್ನೆಗಳಿಗೂ ಉತ್ತರಗಳನ್ನು ನಿರೀಕ್ಷಿಸುವುದು ದುಸ್ಸಾಧ್ಯವಾಗಿತ್ತು. ಆದರೆ ಅವರ ವಾಚಾಳಿತನವನ್ನು ಶ್ರೋತೃಗಳು ಅವರು ಪ್ರಸ್ತುತಪಡಿಸುತ್ತಿದ್ದ,'ಬೃಂದಾವನ ಸಾರಂಗದಲ್ಲೋ,' ಭೀಮ ಪಲಾಸಿನಲ್ಲೋ',ಅಥವಾ ಮತ್ಯಾವುದೋ ಮುದಕೊಡುವ ರಾಗಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅಸ್ಮಿತೆ ಅವರಲ್ಲಿ ನಿರಂತರವಾಗಿ ಹರಿಯುವ ತೊರೆಯಾಗಿತ್ತು. ಅವರ ಮೈಮನಗಳಲ್ಲಿ ಸಂಗೀತ ಉಕ್ಕಿಹರಿಯುತ್ತಿತ್ತು. ಯವತ್ತೂ ಅವರ ಮನೋಲೋಕದಲ್ಲೆಲ್ಲಾ ಆವರಿಸಿದ್ದು,'ಸಂಗೀತ'; 'ಕೇವಲ ಸಂಗೀತ,' ಹಾಗೂ ಅಪಾರ ಗುರುಭಕ್ತಿ,ಮಾತ್ರ.
೪೪ ನೇ ಸಾಲು:
ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿದೆ.
==ಪುಣೆಯ ವಾಸಿ==
ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಪ್ರತಿಷ್ಠಿತ [[ಪದ್ಮವಿಭೂಷಣ]] ಪ್ರಶಸ್ತಿ ಭೀಮಸೇನ ಜೋಷಿಯವರಿಗೆ ಲಭಿಸಿದೆ. [[ಹುಬ್ಬಳ್ಳಿ|ಹುಬ್ಬಳ್ಳಿಯ]] [[ಹಾನಗಲ್ ಮ್ಯೂಸಿಕ್ ಸಂಸ್ಥೆ]], ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಲವಾರು ಗಣ್ಯರಲ್ಲಿ, ಖ್ಯಾತ ನಟ ಮತ್ತು ನಿರ್ದೇಶಕ, ಅಮೋಲ್ ಪಾಲೆಕರ್ ರೂ ಒಬ್ಬರು. ಕಾರನ್ನು ವೇಗವಾಗಿ ಓಡಿಸುವ ಖಯಾಲಿ ಇವರಿಗಿತ್ತು.
=='ಪಂಡಿತ್ ಜಿ'ರವರ ಪ್ರಮುಖ ವಿದ್ಯಾರ್ಥಿಗಳು==
ಪಂಡಿತ್‌ಜೀಯವರ ಶಿಷ್ಯತ್ವ ಪಡೆದ ಸುದೈವಿಗಳೆಂದರೆ, 'ಮಾಧವ ಗುಡಿ', 'ಶ್ರೀಕಾಂತ್ ದೇಶ್ಪಾಂಡೆ,' 'ವಿನಾಯಕ್ ತೊರ್ವಿ','ಉಪೇಂದ್ರಭಟ್','ಶ್ರೀನಿವಾಸ ಜೋಶಿ','ರಾಜೇಂದ್ರ ಕಂದಲ್ಗಾವ್ಕರ್,'ಆನಂದ್ ಭಾಟೆ','ವಿನಾಯಕ್.ಪಿ.ಪ್ರಭು', 'ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, 'ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು.
೫೩ ನೇ ಸಾಲು:
* ೧೯೨೨, ಫೆಬ್ರವರಿ,೪-ತಾಯಿ ರಮಾಬಾಯಿ ಅಕ್ಕನ ಮನೆ ’[[ರೋಣ]]’ದಲ್ಲಿ ಜನನ.
* ೧೯೩೧-[[ಗದಗ |ಗದುಗಿನಲ್ಲಿ]] ನಡೆದ ಸಾರ್ವಜನಿಕ ಸಭೆಯಲ್ಲಿ [[ಜವಹರಲಾಲ್ ನೆಹರೂ]] ಎದುರು ’ವಂದೇ ಮಾತರಂ ಗಾಯನ’
* ೧೯೩೩-ಮನೆ ಬಿಟ್ಟು ಹೋಗಿದ್ದು, [[ಬಿಜಾಪುರ|ಬಿಜಾಪುರದಿಂದ]]ದಿಂದ ಹಿಂದಿರುಗಿ ಬಂದದ್ದು(ಎರಡೂವರೆ ತಿಂಗಳುಗಳ ನಂತರ) ಮತ್ತೆ ಮನೆ ಬಿಟ್ಟದ್ದು.
* ೧೯೩೬-' [[ಪುಣೆ]], [[ಮುಂಬಯಿ]],[[ಗ್ವಾಲಿಯರ್]], [[ಕೊಲ್ಕತ್ತಾ]], [[ಜಲಂಧರ್]], ಮುಂತಾದಕಡೆ ಸಂಗೀತಾಭ್ಯಾಸಕ್ಕಾಗಿ ಅಲೆದಾಟ.
* ೧೯೩೮ ರಿಂದ ೧೯೪೨ -[[ಕುಂದಗೋಳ|ಕುಂದಗೋಳದ]] [[ಸವಾಯಿ ಗಂಧರ್ವ|ಸವಾಯಿ ಗಂಧರ್ವರ]] ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ
* ೧೯೪೧-[[ಸವಾಯಿ ಗಂಧರ್ವ|ಸವಾಯಿ ಗಂಧರ್ವರಿಂದ]]ರಿಂದ "ಗಂಡಾಬಂಧನ".
* ೧೯೪೧-೪೨-[[ಲಖನೌ]] [[ಆಕಾಶವಾಣಿ]] ಕೇಂದ್ರ'ದಲ್ಲಿ ನೌಕರಿ.
* ೧೯೪೩-'[[ಬೊಂಬಾಯಿ]] ಮತ್ತು 'ನಿಜಾಮ ರೇಡಿಯೊ'ದೊಡನೆ ಹಾಡಿನ ಒಪ್ಪಂದ. '[[ಸುನಂದಾ ಕಟ್ಟಿ]]' ಯವರ ಜೊತೆ ಮೊದಲ ವಿವಾಹ
* ೧೯೪೬-'[[ಸವಾಯಿ ಗಂಧರ್ವ|ಸವಾಯಿ ಗಂಧರ್ವರ]] ಷಶ್ಠ್ಯಬ್ಧ ಸಮಾರಂಭದ ನಿಮಿತ್ತ [[ಪುಣೆ|ಪುಣೆಯಲ್ಲಿ]]ಯಲ್ಲಿ ಗಾಯನ. ೩ ನಿಮಿಷಗಳ ರಾಗ ಸಂಗೀತ ಕನ್ನಡ ಗೀತೆಗಳ ಧ್ವನಿಮುದ್ರಣ.
* ೧೯೪೮-[[ಮಂಗಳೂರು |ಮಂಗಳೂರಿನಲ್ಲಿ]] ಗಾಯನ. [[ಶ್ರೀಧರ ಸ್ವಾಮಿಗಳು |ಶ್ರೀಧರ ಸ್ವಾಮಿಗಳ ]]ಆಶೀರ್ವಾದ
* ೧೯೪೮-೪೯- [[ಕೊಲ್ಕತ್ತಾ|ಕೊಲ್ಕತ್ತಾದಲ್ಲಿ]]ದಲ್ಲಿ ಪ್ರಥಮಬಾರಿಗೆ ಗಾಯನ
* ೧೯೪೮-೫೦-[[ಕನ್ನಡ]] ಸಂಗೀತ ನಾಟಕಗಳಲ್ಲಿ ನಾಯಕನ ಪಾತ್ರ, ಯಶಸ್ವಿ ಪ್ರಯೋಗಗಳು
* ೧೯೫೧-'[[ವತ್ಸಲಾ ಮುಧೋಳ್ಕರ್]]'ರವರ ಜೊತೆ ಎರಡನೆಯ ಮದುವೆ
೭೧ ನೇ ಸಾಲು:
* ೧೯೭೦-’ಸ್ವರ ಭಾಸ್ಕರ ಪ್ರಶಸ್ತಿ'’
* ೧೯೭೨-'ಶ್ರೀ.ರಾಘವೇಂದ್ರ ಸ್ವಾಮಿ ಪೀಠದಿಂದ ಸಂಗೀತ ರತ್ನ ಗೌರವ', ಭಾರತ ಸರ್ಕಾರದ '[[ಪದ್ಮಶ್ರೀ]]' ಗೌರವಕ್ಕೆ ಭಾಜನ, [[ಕರ್ನಾಟಕ ಸಂಗೀತ ನಾಟಕ ಅಕಾಡೆಮಿ]] ಪ್ರಶಸ್ತಿ, ಪ್ರಥಮ '[[ಸಂತವಾಣಿ ಕಾರ್ಯಕ್ರಮ]]'
* ೧೯೭೪ '[[ಮಿಯಾತಾನ್ ಸೇನ್ ಪ್ರಶಸ್ತಿ]]', [[ಜಯಪುರ|ಜಯಪುರದ]] ಗಂಧರ್ವ ಮಹಾವಿದ್ಯಾಲಯದ ’[[ಸಂಗೀತಾಚಾರ್ಯ ಬಿರುದು]]’
* ೧೯೭೫-'ನ್ಯಾಷನಲ್ ಫಿಲಂ ಫೆಸ್ಟಿವಲ್' ನಲ್ಲಿ 'ಸರ್ವೋತ್ತಮ ಪಾರ್ಷ್ವ ಗಾಯನ', ಮಹಾರಾಷ್ಟ್ರ ವಿಧಾನ ಪರಿಷತ್ ನಿಂದ ಸನ್ಮಾನ.
* '[[ಶ್ರೀಕೋನಾ]]' ರವರಿಂದ 'ಸ್ಕೂಲ್ ಆಫ್ ಆನರ್ ಗೌರವ'
* ೧೯೭೬-ಶ್ರೀಮಾನ್ ಪ್ರಭಾಕರ್ ರಾವ್ ರವರಿಂದ ಸನ್ಮಾನ. [[ಗುಲ್ಬರ್ಗಾ]] ವಿದ್ಯಾಪೀಠದಿಂದ [[ಡಿ.ಲಿಟ್ ಪದವಿ|ಡಿ.ಲಿಟ್ ಪದವಿಪ್ರದಾನ]]ಪ್ರದಾನ.
*೧೯೭೮-ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ,[[ಕೊಲ್ಕತ್ತ|ಕೊಲ್ಕತ್ತದಿಂದ]]ದಿಂದ ದಕ್ಷಿಣ [[ಬಾರ್ತಾಸಂಸ್ಥೆಯಿಂದ ಗೌರವ]].
* ೧೯೭೯-ಭಾರತ ಸರಕಾರದ [[ಪದ್ಮವಿಭೂಷಣ]] ಗೌರವ, [[ಕಾನ್ಪುರ]] ಮಹಾನಗರ ಪಾಲಿಕೆಇಂದ ಅಭಿನಂದನಾ ಪತ್ರ.
* ೧೯೯೦-[[ಮಹಾರಾಷ್ಟ್ರ]] ಸರಕಾರದಿಂದ ಗೌರವ ಪುರಸ್ಕಾರ'
೮೧ ನೇ ಸಾಲು:
* ೧೯೯೨-'ದೀನಾನಾಥ್ ಮಂಗೆಶ್ಕರ್ ಪುರಸ್ಕಾರ'
* ೧೯೯೩-'[[ದೇಶಿಕೋತ್ತಮ ಪ್ರಶಸ್ತಿ]]'
* ೧೯೯೪-[[ಮಹಾರಾಷ್ಟ್ರ|ಮಹಾರಾಷ್ಟ್ರದ]] ತಿಲಕ್ ವಿದ್ಯಾಪೀಠದಿಂದ ಡಿ.ಲಿಟ್ ಪದವಿ.
* ೧೯೯೬-[[ಪುಣೆ]] ಮಹಾನಗರ ಪಾಲಿಕೆಯಿಂದ ಸನ್ಮಾನ, [[ಪುಣ್ಯಭೂಷಣ ಪ್ರಶಸ್ತಿ]]
* ೧೯೯೭-’ಸ್ವರಾಧಿರಾಜ ಗ್ರಂಥದ ಬಿಡುಗಡೆ'
* ೧೯೯೯- ಭಾರತ ಸರಕಾರದಿಂದ [[ಪದ್ಮ ವಿಭೂಷಣ]] ಗೌರವ
* ೨೦೦೧-[[ಪುಣೆ]] ವಿಶ್ವ ವಿದ್ಯಾಲಯದಲ್ಲಿ '[[ಭೀಮಸೇನ್ ಜೋಶಿ ಪೀಠ ಸ್ಥಾಪನೆ]]'
* ೨೦೦೨-[[ಮಹಾರಾಷ್ಟ್ರ]] ಸರಕಾರದ ಅತ್ಯುನ್ನತ ಪ್ರಶಸ್ತಿ [[ಮಹಾರಾಷ್ಟ್ರ ಭೂಷಣ]] ಗೌರವ, [[ಕೇರಳ|ಕೇರಳದ]] ಅತುನ್ನತ ಸ್ವಾತಿ ತಿರುನಾಳ ಪ್ರಶಸ್ತಿ ಪ್ರದಾನ , [[ಧಾರವಾಡ|ಧಾರವಾಡದ]] [[ಕರ್ನಾಟಕ ವಿಶ್ವವಿದ್ಯಾನಿಲಯ|ಕರ್ನಾಟಕ ವಿಶ್ವವಿದ್ಯಾನಿಲಯದಿಂದ]]ದಿಂದ ಗೌರವ ಡಿ.ಲಿಟ್ ಪ್ರಶಸ್ತಿ ಪ್ರದಾನ'. [[ಕರ್ನಾಟಕ|ಕರ್ನಾಟಕದ]] ಅತ್ಯುನ್ನತ ಪ್ರಶಸ್ತಿ,'[[ಕರ್ನಾಟಕ ರತ್ನ]] ಪ್ರದಾನ'.
* ೨೦೦೫ '[[ವತ್ಸಲಾ ಜೋಶಿಯವರ ನಿಧನ]]'.
* ೨೦೦೭-'[[ಸ್ವಾಮಿ ಹರಿವಲ್ಲಭದಾಸ್ ಪುರಸ್ಕಾರ]]'
* ೨೦೦೮-ಭಾರತದ ಅತ್ಯುನ್ನತ ಪ್ರಶಸ್ತಿ [[ಭಾರತ ರತ್ನ]] ಭಾಜನರಾದರು.
* ೨೦೧೧- [[ಪುಣೆ|ಪುಣೆಯ]] ಆಸ್ಪತ್ರೆಯಲ್ಲಿ ನಿಧನ
 
==ಉಲ್ಲೇಖಗಳು==
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ