ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
'''ಪಂಡಿತ ಭೀಮಸೇನ ಗುರುರಾಜ ಜೋಷಿ''' [[ಹಿಂದುಸ್ತಾನಿ ಸಂಗೀತ]](ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು '''[[ಭಾರತ ರತ್ನ]]''' ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.
=='ಬಹು-ದೊಡ್ಡ ಪರಿವಾರದಲ್ಲಿ ಜನನ'==
ಭೀಮಸೇನ ಜೋಷಿಯವರು [[೧೯೨೨]] ರಲ್ಲಿ (ಹಿಂದೆ ಧಾರವಾಡ ಜಿಲ್ಲೆ) [[ಗದಗ್|ಗದಗ]] ಜಿಲ್ಲೆಯ [[ರೋಣ]] ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ [[ಗುರುರಾಜ ಜೋಶಿ]] ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ [[ರಮಾಬಾಯಿ]]ಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, [[ಗೋದುಬಾಯಿ]]ಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ 'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು. ಹಿರಿಯಮಗ,ಭೀಮಸೇನರ[[ಭೀಮಸೇನ]]ರ ನಂತರ, ಜನಿಸಿದವರು, ’ವನಮಾಲ’’[[ವನಮಾಲ]]’, ’ನಾರಾಯಣ’’[[ನಾರಾಯಣ]]’, ’ವೆಂಕಣ್ಣ’’[[ವೆಂಕಣ್ಣ]]’, ’ಹೇಮಕ್ಕ’’[[ಹೇಮಕ್ಕ]]’, ’ಮದ್ದು’’[[ಮದ್ದು]]’, ’ಮಾಧು’’[[ಮಾಧು]]’, ’ದಾಮೋದರ’’[[ದಾಮೋದರ]]’, ’ಪರಿಮಳ’’[[ಪರಿಮಳ]]’, ’ವಿಶಾಲ’[[ವಿಶಾಲ ’ಪ್ರಕಾಶ’’[[ಪ್ರಕಾಶ’, [[ಜಯತೀರ್ಥ]], [[ಸುಶೀಲೇಂದ್ರ]], [[ಪ್ರಾಣೇಶ]], [[ವಾದಿರಾಜ]], ಮತ್ತು ’ಜ್ಯೋತಿ’[[ಜ್ಯೋತಿ]].’ ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು.
 
==ಗುರುವಿಗಾಗಿ ಹುಡುಕಾಟ==
ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು [[ಮುಂಬಯಿ]]ಗೆ ಹೋದರು.[[ಮುಂಬಯಿ]]ತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ. ಪುಟ್ಟ ಭೀಮಸೇನರು ಕೂಲಿ ನಾಲಿ ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ ಆಸೆ ಮತ್ತು ಹಠ ಅವರನ್ನು ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ [[ಗ್ವಾಲಿಯರ್]] ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ [[ಸವಾಯಿ ಗಂಧರ್ವ]]ರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು [[ಧಾರವಾಡ]] ಜಿಲ್ಲೆಗೆ ಹಿಂದಿರುಗಿ [[ಕುಂದಗೋಳ]]ದ ಪ್ರಸಿದ್ಧ ಗಾಯಕರಾದ [[ಸವಾಯಿ ಗಂಧರ್ವ]]ರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ [[ಕಿರಾಣಾ ಘರಾನಾ]]ದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ