ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೧ ನೇ ಸಾಲು:
'''ಪಂಡಿತ ಭೀಮಸೇನ ಗುರುರಾಜ ಜೋಷಿ''' [[ಹಿಂದುಸ್ತಾನಿ ಸಂಗೀತ]](ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು '''[[ಭಾರತ ರತ್ನ]]''' ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.
=='ಬಹು-ದೊಡ್ಡ ಪರಿವಾರದಲ್ಲಿ ಜನನ'==
ಭೀಮಸೇನ ಜೋಷಿಯವರು [[೧೯೨೨]] ರಲ್ಲಿ (ಹಿಂದೆ ಧಾರವಾಡ ಜಿಲ್ಲೆ) [[ಗದಗ್|ಗದಗ]] ಜಿಲ್ಲೆಯ [[ರೋಣ]] ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ [[ಗುರುರಾಜ ಜೋಶಿ]] ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ [[ರಮಾಬಾಯಿ]]ಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, [[ಗೋದುಬಾಯಿ]]ಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ ಗೋದುಬಾಯಿಯೆಂದೇ ಸಂಬೋಧಿಸುತ್ತಿದ್ದರು'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು.ಹಿರಿಯಮಗ,ಭೀಮಸೇನರ ನಂತರ, ಜನಿಸಿದವರು, ’ವನಮಾಲ’, ’ನಾರಾಯಣ’, ’ವೆಂಕಣ್ಣ’, ’ಹೇಮಕ್ಕ’, ’ಮದ್ದು’, ’ಮಾಧು’, ’ದಾಮೋದರ’, ’ಪರಿಮಳ’, ’ವಿಶಾಲ ’ಪ್ರಕಾಶ’, ಜಯತೀರ್ಥ, ಸುಶೀಲೇಂದ್ರ, ಪ್ರಾಣೇಶ, ವಾದಿರಾಜ, ಮತ್ತು ’ಜ್ಯೋತಿ’’ಜ್ಯೋತಿ. ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು.
==ಗುರುವಿಗಾಗಿ ಹುಡುಕಾಟ==
ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು [[ಮುಂಬಯಿ]]ಗೆ ಹೋದರು.[[ಮುಂಬಯಿ]]ತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ.[[ಕನ್ನಡ]] ಭಾಷೆ ಬಿಟ್ಟರೆ ಬೇರೆ ಭಾಷೆಯೂ ಬರುತ್ತಿರಲಿಲ್ಲ.ಪುಟ್ಟ ಭೀಮಸೇನರು ಕೂಲಿ ನಾಲಿ ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ ಆಸೆ ಮತ್ತು ಹಠ ಅವರನ್ನು ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ [[ಗ್ವಾಲಿಯರ್]] ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ [[ಸವಾಯಿ ಗಂಧರ್ವ]]ರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು [[ಧಾರವಾಡ]] ಜಿಲ್ಲೆಗೆ ಹಿಂದಿರುಗಿ [[ಕುಂದಗೋಳ]]ದ ಪ್ರಸಿದ್ಧ ಗಾಯಕರಾದ [[ಸವಾಯಿ ಗಂಧರ್ವ]]ರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ [[ಕಿರಾಣಾ ಘರಾನಾ]]ದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.
 
==ಜೋಶಿ ಪರಿವಾರದ ಸದಸ್ಯರು==
ಪಂ. 'ಭೀಮ್ ಸೆನ್ ಜೋಶಿ'ಯವರ ತಮ್ಮನ ಮಕ್ಕಳಲ್ಲೊಬ್ಬರು, 'ಭಾರತೀಯ ಕ್ರಿಕೆಟ್ ತಂಡದ ಸದಸ್ಯ'ರಲ್ಲೊಬ್ಬರಾದ ’[[ಸುನಿಲ್ ಜೊಶಿ]]’, ಮತ್ತು ’[[ಅನಿರುದ್ಧ ಜೋಶಿ]], ಕಿರಿಯರ ಕ್ರಿಕೆಟ್ ತಂಡದ ಆಟಗಾರರು, ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’[[ಜಡಭರತ]]’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’[[ಮನೋಹರ ಗ್ರಂಥಮಾಲೆ]]’ಯೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಜೋಶಿಮನೆತನ ಸಂಗೀತ, ಸಾಹಿತ್ಯ, ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಅಜ್ಜ ಕೀರ್ತನಕಾರರು. ಮೊಮ್ಮಗ, ಭೀಮಸೇನ, ಭಜನಾಮೇಳದವರೊಡನೆ ಸೇರಿಕೊಂಡು ದಾಸರ ಪದಗಳನ್ನು ಕೇಳುತ್ತಾ, ಹಾಡುತ್ತಾ ಮೈಮರೆಯುತ್ತಿದ್ದರು. ಹೀಗೆ ಮುಂದುವರೆದು ದಾಸವಾಣಿ-ಶಾಸ್ತ್ರೀಯ ಸಂಗೀತವಲಯದಲ್ಲಿ ಅಪ್ರತಿಮ ಸಾಧನೆಮಾಡಿದರು; ಸಂಗೀತವನ್ನೂ ಬೆಳೆಸಿದರು.
==ಗದಗದೊಂದಿಗೆ ಅವಿನಾಭಾವ ಸಂಬಂಧ==
ಗದುಗಿನ ’ಖಡಕ್ ರೊಟ್ಟಿ’ ಬಲುಪ್ರೀತಿ. ತಮ್ಮ ಊರಿನ ಜನತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ರಸದೌತಣನೀಡಿದ್ದರು. ೧೯೮೩ ರಲ್ಲಿ, ’ವೆಂಕಟೇಶ ಚಿತ್ರಮಂದಿರ’ದಲ್ಲಿ, ’ಹತ್ತಿಕಾಳ್ ಕೂಟ’ದಲ್ಲಿ, ೧೯೮೫-೮೬ ರಲ್ಲಿ ’ಕಾಟನ್ ಮಾರ್ಕೆಟ್’ ನಲ್ಲಿ, ೧೯೯೨ ರಲ್ಲಿ, ’ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್’ ಅವರಣದಲ್ಲಿ, ’ಕರ್ನಾಟಕ ಚಿತ್ರಮಂದಿರ’ದಲ್ಲಿ. ಅದರಲ್ಲಿ ಶೇಖರವಾದ ಹಣದಲ್ಲಿ ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಮತ್ತು ದೇವಾಲಯಕ್ಕೆ ದೇಣಿಗೆ ನೀಡಿದ್ದರು.
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ