ತುಕಾರಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[File:Tukaram.jpg|thumb|ತುಕಾರಾಮ್]]
{{ದ್ವಂದ್ವ|ಇವರ ಜೀವನಚರಿತ್ರೆಯ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿ '''[[ಸಂತ ತುಕಾರಾಮ (ಚಲನಚಿತ್ರ)]]''' ಎಂಬ ಪುಟದಲ್ಲಿ ಇದೆ.}}
'''ತುಕಾರಾಮ'''ರು [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಸಂತ ಪರಂಪರೆಯ ಶ್ರೇಷ್ಠ ಸಂತರು. ಇವರು [[ಪುಣೆ|ಪುಣೆಯ]] ಸಮೀಪದ ದೇಹು ಗ್ರಾಮದವರು. ಇವರು ಮೋರೆ ಮನೆತನದಲ್ಲಿ ಜನಿಸಿದರು. ಇವರ ತಂದೆ ಬೊಳ್ಹೋಬಾ, ತಾಯಿ ಕನಕಾಯಿ. ಇವರ ಹೆಸರಿನ ಜೊತೆಗೆ ಇವರ ಮನೆತನದ ಹೆಸರನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿಲ್ಲ, ಆದರೆ 'ಸಂತ' ಎಂಬ ಪದವನ್ನು ಉಪಯೋಗಿಸಲಾಗುತ್ತಿದ್ದು ಇವರನ್ನು ಪ್ರಸಿದ್ಧವಾಗಿ 'ಸಂತ ತುಕಾರಾಮ'ರೆಂದೇ ಕರೆಯಲಾಗುತ್ತದೆ. ಇವರು ಶಿವಾಜಿಯ ಆಧ್ಯಾತ್ಮಿಕ ಗುರುಗಳಾಗಿದ್ದರೆಂದು ಹೇಳಲಾಗುತ್ತದೆ.
 
==ಜೀವನ==
೯ ನೇ ಸಾಲು:
==ಧಾರ್ಮಿಕ ಜೀವನ, ಅಭಂಗ ಮತ್ತು ಕೀರ್ತನೆ==
ತುಕಾರಾಮರು ವಿಠ್ಠಲನ ಭಕ್ತರಾಗಿದ್ದರು. ವಿಠ್ಠಲ ಕೃಷ್ಣನ ಅವತಾರವಾಗಿದ್ದು, ಕೃಷ್ಣ ವಿಷ್ಣುವಿನ ಅವತಾರವಾಗಿದ್ದ.
ತುಕಾರಾಮರು [[ಸಂತ ನಾಮದೇವ|ಸಂತ ನಾಮದೇವರ]] ಭಾಗವತ ಹಿಂದು ಸಂಪ್ರದಾಯದ ಪರಾಕಾಷ್ಟೆಯ ಸ್ಥಿತಿಯಲ್ಲಿದ್ದ ಸಂತರಾಗಿದ್ದರು. ವಾರಕರೀ ಸಂಪ್ರದಾಯದಲ್ಲಿ [[ಸಂತ ನಾಮದೇವ|ನಾಮದೇವ]], [[ಜ್ಞಾನೇಶ್ವರ]], [[ಜನಾಬಾಯಿ]],[[ಸಂತ ಏಕನಾಥ|ಏಕನಾಥ]] ಮತ್ತು ತುಕಾರಮರನ್ನು ಪೂಜ್ಯನೀಯವಾಗಿ ಕಾಣುತ್ತಾರೆ. ಇವರು ರಾಮ, ಕೃಷ್ಣ ಮತ್ತು ಹರಿಯಿಂದ ಗುರು ಮಂತ್ರ ಉಪದೇಶವನ್ನು ಪಡೆದಿದ್ದರು. ಮಹಾರಾಷ್ಟ್ರದ ಸಂತರ ಬಗ್ಗೆ ಎಲ್ಲ ಮಾಹಿತಿಯನ್ನು [[ಮಹಿಪತಿ|ಮಹಿಪತಿಯ]] ''ಭಕ್ತಿ ವಿಜಯ'' ಮತ್ತು ''ಭಕ್ತಿ ಲೀಲಾಮೃತ'' ಪುಸ್ತಕಗಳಿಂದ ಪಡೆಯಲಾಗಿದೆ.
 
ತುಕಾರಾಮರ ಕೀರ್ತನೆಗಳು ಪದ್ಯ ರಚನೆಗಳನ್ನು ಸಹ ಹೊಂದಿರುತ್ತಿದ್ದವು.
"https://kn.wikipedia.org/wiki/ತುಕಾರಾಮ್" ಇಂದ ಪಡೆಯಲ್ಪಟ್ಟಿದೆ