ಸೊಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.
==ಇತಿಹಾಸ==
ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, [[ಪುಣೆ]] ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. [[೧೯೫೬]]ರ ರಾಜ್ಯಗಳ ಪುನರ್‍ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ [[ಮಹಾರಾಷ್ಟ್ರ]]ಕ್ಕೆ ಸೇರಿತು.
===ಸ್ವಾತಂತ್ರ ಹೋರಾಟದಲ್ಲಿ ಪಾತ್ರ===
[[ಭಾರತ]] ಸ್ವತಂತ್ರವಾಗುವ ಮೊದಲೇ ಸ್ವತಂತ್ರವಾಗಿದ್ದು ಸೊಲ್ಲಾಪುರದ ವೈಶಿಷ್ಟ್ಯ. [[೧೯೩೦]]ರ [[ಮೇ]] ೯ರಿಂದ ೧೧ರವರೆಗೆ ಇಲ್ಲಿಯ ಜನಗಳಿಗೆ ಸ್ವಾತಂತ್ರ್ಯ ಲಭಿಸಿತ್ತು. ಈ ವಿಶಿಷ್ಟ ಕಥೆ ಇಂತಿದೆ.[[ಮೇ]] [[೧೯೩೦]]ರಲ್ಲಿ [[ಮಹಾತ್ಮ ಗಾಂಧಿ | ಮಹಾತ್ಮಾ ಗಾಂಧಿ]]ಯವರ ಬಂಧನದೊಂದಿಗೆ ದೇಶಾದ್ಯಂತ ಬ್ರಿಟಿಶರ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಅದು ಸೊಲ್ಲಾಪುರಕ್ಕೂ ಹಬ್ಬಿ ಅಲ್ಲಿಯೂ ಮೆರವಣಿಗೆ, ಪ್ರತಿಭಟನೆಗಳಾದವು. ಪೋಲೀಸರ ಗುಂಡೇಟಿನಲ್ಲಿ ಅನೇಕರು ಮಡಿದರು. ಇದರಿಂದ ರೊಚ್ಚಿಗೆದ್ದ ಜನಜಂಗುಳಿ ಪೋಲೀಸ್ ಠಾಣೆಗೆ ನುಗ್ಗಿದರು. ಅಲ್ಲಿದ್ದ ಪೋಲೀಸರು ಮತ್ತಿತರ ಅಧಿಕಾರಿಗಳು ಸೊಲ್ಲಾಪುರದಿಂದ ಪಲಾಯನ ಹೂಡಿದರು. ಈ ಸನ್ನಿವೇಶದಲ್ಲಿ ಊರಿನ ಕಾನೂನು ಪಾಲನೆ , ಶಾಂತಿ ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿತ್ತು. ಅಂದಿನ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ ಜಾಜು , ಇತರೆ ಕಾಂಗ್ರೆಸ್ಸಿಗರೊಂದಿಗೆ ೯ರಿಂದ ೧೧ರವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸಿದರು.
೧೪ ನೇ ಸಾಲು:
ಅಂತೆಯೇ, ಭಾರತದ ಮುನಿಸಿಪಾಲಿಟಿಗಳಲ್ಲಿಯೇ ಮೊದಲಬಾರಿಗೆ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಿದ ಹೆಗ್ಗಳಿಕೆಯೂ (೧೯೩೦ರಲ್ಲಿ) ಈ ಊರಿನದು. ಗಾಂಧಿಯವರ ದಾಂಡಿ ಉಪ್ಪಿನ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡ ಸೊಲ್ಲಾಪುರದ ಕೆಲ ತರುಣರು ಸೊಲ್ಲಾಪುರದ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಿದರು. ಅ ಯೋಜನೆಯ ಪ್ರಕಾರ [[ಪುಣೆ]]ಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ. ಅಣ್ಣಾಸಾಹೇಬ ಭೋಪಟ್ಕರ್‍ [[೧೯೩೦]]ರ [[ಏಪ್ರಿಲ್]] ೬ನೆ ತಾರೀಖು ಮುನಿಸಿಪಾಲಿಟಿಯ ಮೇಲೆ ಧ್ವಜ ಹಾರಿಸಿದರು. ಇದರಿಂದ ತ್ರಸ್ತರಾದ ಬ್ರಿಟಿಶರು ಸೊಲ್ಲಾಫುರದಲ್ಲಿ ಮಾರ್ಶಿಯಲ್ ಲಾ ಜಾರಿ ಮಾಡಿ, ಅನೇಕ ಮುಂದಾಳುಗಳನ್ನು ಹಾಗೂ ನಾಗರೀಕರರನ್ನು ಬಂಧಿಸಿದರು. ಮಲ್ಲಪ್ಪ ಧನಶೆಟ್ಟಿ, ಕುರ್ಬಾ ನ್ ಹುಸೇನ್ , ಜಗನ್ನಾಥ ಶಿಂದೆ ಮತ್ತು ಕಿಸನ್ ಸಾರ್ದಾ ಇವರನ್ನು ಮಂಗಳವಾರ ಪೋಲೀಸ್ ಠಾಣೆಯ ಇಬ್ಬರು ಪೋಲಿಸರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಯಿತು. ಕೆಳ ನ್ಯಾಯಾಲಯದಲ್ಲಿ ಇವರಿಗೆ ವಿಧಿಸಲಾದ ಗಲ್ಲು ಶಿಕ್ಷೆ, ಮುಂದೆ ಉಚ್ಚ ನ್ಯಾಯಾಲಯದಲ್ಲಿಯೂ ಖಾಯಮ್ ಆಗಿ , ಈ ನಾಲ್ವರನ್ನು [[೧೯೩೧]]ರ [[ಜನವರಿ]] ೧೨ರಂದು ಗಲ್ಲಿಗೇರಿಸಲಾಯಿತು. ಈ ನಾಲ್ವರು ಹುತಾತ್ಮರ ಸ್ಮರಣಾರ್ಥ ನಗರಮಧ್ಯದಲ್ಲಿ ಇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿ , ಈ ಜಾಗವನ್ನು ಹುತಾತ್ಮಾ ಚೌಕ ಎಂದು ಹೆಸರಿಸಲಾಗಿದೆ.
 
ಇಲ್ಲಿಯ ಊರದೇವರು ಶ್ರೀ ಸಿದ್ಧರಾಮೇಶ್ವರ. ೧೨ನೆಯ ಶತಮಾನದ ಈ ಐತಿಹಾಸಿಕ ವ್ಯಕ್ತಿಯ ಕರ್ಮಯೋಗ ದಿಂದ ಕ್ರಮೇಣ ದೈವತ್ವದ ಸ್ಥಾನ ನೀಡಲಾಯಿತು. ಸಿದ್ಧರಾಮ ವೀರಶೈವ ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದು, ವೀರಶೈವರ ಆರು prophets ಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದ್ದಾನೆ. ಬರಗಾಲಪೀಡಿತ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಿದ್ಧರಾಮೇಶ್ವರನು ೪೦೦೦ ಶಿವಶರಣರೊಂದಿಗೆ , ಕೆರೆಯನ್ನು ತೋಡಿದನು. ಆತ ಸೊಲ್ಲಾಪುರದಲ್ಲಿಯೇ ಸಜೀವ ಸಮಾಧಿಗೇರಿದ.
 
==ಪ್ರವಾಸ==
ಸೊಲ್ಲಾಪುರ [[ಮುಂಬಯಿ]]ಯಿಂದ ೪೩೩ ಕಿ.ಮೀ, [[ಪುಣೆ]]ಯಿಂದ ೨೪೪ ಕಿ.ಮೀ ದೂರದಲ್ಲಿದೆ. ಸೊಲ್ಲಾಪುರ [[ದೆಹಲಿ]], [[ಹೈದರಾಬಾದು]], [[ಬೆಂಗಳೂರು]] ಮೊದಲಾದ ನಗರಗಳಿಗೆ ರೈಲು ಮತ್ತು ರಸ್ತೆಯ ನೇರ ಸಂಪರ್ಕ ಹೊಂದಿದೆ. ಸೊಲ್ಲಾಫುರದಿಂದ ೧೮ ಕಿ.ಮೀ ದೂರದಲ್ಲಿರುವ ನಾನಜ್ Great Indian Bustardಗೆ ನೆಲೆಯಾಗಿದೆ. (ಸ್ಥಳೀಯ ಹೆಸರು ಮಳ್ಧೋಕ್).ಈ ಕಾರಣದಿಂದ ಇದು ಒಂದು ಅಂತರರಾಷ್ಟ್ರೀಯ ಪರಿಸರ ಪ್ರವಾಸಿಗಳ ಆಕರ್ಷಣೆಯಾಗಿದೆ.
"https://kn.wikipedia.org/wiki/ಸೊಲ್ಲಾಪುರ" ಇಂದ ಪಡೆಯಲ್ಪಟ್ಟಿದೆ