"ಆಧುನಿಕ ವಿಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚಿತ್ರ Trinity_explosion.jpgರ ಬದಲು ಚಿತ್ರ Trinity_Test_Fireball_25ms.jpg ಹಾಕಲಾಗಿದೆ.
(Translated from http://en.wikipedia.org/wiki/Modern_science#Modern_science (revision: 408536542) using http://translate.google.com/toolkit with about 98% human translations.)
 
ಚು (ಚಿತ್ರ Trinity_explosion.jpgರ ಬದಲು ಚಿತ್ರ Trinity_Test_Fireball_25ms.jpg ಹಾಕಲಾಗಿದೆ.)
 
20ನೇ ಶತಮಾನದ ಆರಂಭವು ಭೌತವಿಜ್ಞಾನದಲ್ಲಿ ಒಂದು ಕ್ರಾಂತಿಯನ್ನೇ ಆರಂಭಿಸಿತು. ದೀರ್ಘಕಾಲದಿಂದ ಎತ್ತಿಹಿಡಿದಿದ್ದ ನ್ಯೂಟನ್ನನ ಸಿದ್ಧಾಂತಗಳು ಎಲ್ಲ ಸನ್ನಿವೇಶಗಳಲ್ಲಿಯೂ ಅಷ್ಟು ಸರಿಯಲ್ಲ ಎಂಬುದನ್ನು ತೋರಿಸಲಾಯಿತು. 1900ರ ಆರಂಭದಲ್ಲಿ, [[ಮ್ಯಾಕ್ಸ್ ಪ್ಲಾಂಕ್|ಮ್ಯಾಕ್ಸ್‌ ಪ್ಲಾಂಕ್]], [[ಅಲ್ಬರ್ಟ್ ಐನ್‍ಸ್ಟೈನ್|ಆಲ್ಬರ್ಟ್ ಐನ್‌ಸ್ಟೈನ್]], ನೀಲ್ಸ್‌ ಬೋರ್‌ ಮತ್ತು ಇತರರು ಅಸಂಗತ(ಸಾಮಾನ್ಯ ನಿಯಮಕ್ಕೆ ವಿರುದ್ಧವಾದ) ವಿವಿಧ ಪ್ರಾಯೋಗಿಕ ಫಲಿತಾಂಶಗಳನ್ನು ವಿವರಿಸಲು ವಿಚ್ಛಿನ್ನ ಶಕ್ತಿ ಹಂತಗಳ ಪರಿಕಲ್ಪನೆಯನ್ನು ಪರಿಚಯಿಸಿ, ಕ್ವಾಂಟಮ್‌ ಸಿದ್ಧಾಂತವನ್ನು ಮುಂದಿಟ್ಟರು. ಕ್ವಾಂಟಮ್ ಮೆಕಾನಿಕ್ಸ್ ಸಣ್ಣ ಮಟ್ಟದಲ್ಲಿ ಚಲನೆಯ ನಿಯಮಗಳು ಪಾಲನೆಯಾಗುವುದಿಲ್ಲ ಎಂಬುದನ್ನು ತೋರಿಸಿದ್ದು ಮಾತ್ರವಲ್ಲ, ಇನ್ನೂ ಹೆಚ್ಚು ಗೊಂದಲಕಾರಿ ಎಂದರೆ ಐನ್‌ಸ್ಟೈನ್‌ 1915ರಲ್ಲಿ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತದಲ್ಲಿ ತೋರಿಸಿದ್ದ, ನ್ಯೂಟನಿಯನ್ ಮೆಕಾನಿಕ್ಸ್ ಮತ್ತು ವಿಶಿಷ್ಟ ಸಾಪೇಕ್ಷತೆಯು ಅವಲಂಬಿತವಾಗಿದ್ದ ದೇಶಕಾಲದ ನಿಗದಿತ ಹಿನ್ನೆಲೆಯು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸಾಧಿಸಿತು. 1925ರಲ್ಲಿ, ವೆರ್ನರ್‌ ಹೈಸೆನ್‌ಬರ್ಗ್‌ ಮತ್ತು ಇರ್ವಿನ್‌ ಸ್ಕ್ರೋಡಿಂಜರ್ [[ಕ್ವಾಂಟಮ್ ಭೌತಶಾಸ್ತ್ರ|ಕ್ವಾಂಟಮ್ ಮೆಕಾನಿಕ್ಸ್‌]] ಅನ್ನು ಸೂತ್ರೀಕರಿಸಿದರು. ಇದು ನಂತರದ ಕ್ವಾಂಟಮ್‌ ಸಿದ್ಧಾಂತಗಳನ್ನು ವಿವರಿಸಿತು. ಎಡ್ವಿನ್ ಹಬಲ್‌‌ 1929ರಲ್ಲಿ ಗ್ಯಾಲಕ್ಷಿಗಳು ಎಷ್ಟು ವೇಗದಲ್ಲಿ ಹಿಂದೆ ಸರಿಯುತ್ತವೆಯೋ ಅದು ಧನಾತ್ಮಕವಾಗಿ ಅವುಗಳ ದೂರಕ್ಕೆ ಸಹಸಂಬಂಧ ಹೊಂದಿರುತ್ತದೆ ಎಂದು ಗಮನಿಸಿದ್ದು ಬ್ರಹ್ಮಾಂಡವು ವಿಸ್ತಾರವಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಾರಣವಾಯಿತು. ಜೊತೆಗೆ ಬಿಗ್‌ ಬ್ಯಾಂಗ್‌ ಸಿದ್ಧಾಂತವನ್ನು ಜಾರ್ಜ್‌ಸ್ ಲೆಮಿಟ್ರಿ ರೂಪಿಸಲು ಇದರಿಂದ ಸಾಧ್ಯವಾಯಿತು.
[[File:Trinity explosionTrinity_Test_Fireball_25ms.jpg|thumb|right|ಭೌತವಿಜ್ಞಾನದಲ್ಲಿ "ಮಹಾವಿಜ್ಞಾನ (ಬಿಗ್‌ ಸೈನ್ಸ್‌)"ನ ಆಗಮನವನ್ನು ಸಾರಿದ ಅಣುಬಾಂಬ್.]]
 
ಎರಡನೇ ವಿಶ್ವಸಮರದ ಸಮಯದಲ್ಲಿ ಇನ್ನಷ್ಟು ಅಭಿವೃದ್ಧಿಗಳು ನಡೆದವು. ಅದು ರೇಡಾರ್‌ನ ಪ್ರಯೋಗಿಕ ಉಪಯೋಗ ಮತ್ತು ಅಣು ಬಾಂಬ್‌ನ ಅಭಿವೃದ್ಧಿ ಹಾಗೂ ಉಪಯೋಗಕ್ಕೆ ಕಾರಣವಾಯಿತು. 1930ರಲ್ಲಿಯೇ ಎರ್ನೆಸ್ಟ್‌ ಒ. ಲಾರೆನ್ಸ್‌ ಸೈಕ್ಲೋಟ್ರಾನ್‌ ಆವಿಷ್ಕಾರ ಮಾಡುವುದರೊಂದಿಗೆ ಈ ಪ್ರಕ್ರಿಯೆ ಆರಂಭಗೊಂಡರೂ, ಯುದ್ಧಾನಂತರದ ಅವಧಿಯಲ್ಲಿ ಭೌತವಿಜ್ಞಾನವು "ಮಹಾ ವಿಜ್ಞಾನ" ಎಂದು ಇತಿಹಾಸಕಾರರು ಕರೆಯುವ ಒಂದು ಹಂತಕ್ಕೆ ತಲುಪಿತು. ಭೌತವಿಜ್ಞಾನಿಗಳು ತಮ್ಮ ಸಿದ್ಧಾಂತಗಳನ್ನು ಪರೀಕ್ಷಿಸಲು ಬೃಹತ್ ಯಂತ್ರಗಳು, ಆಯವ್ಯಯ ಮತ್ತು ಪ್ರಯೋಗಾಲಯಗಳು ಬೇಕಾದವು ಮತ್ತು ಇದು ಹೊಸ ವಲಯಕ್ಕೇ ಕಾಲಿಟ್ಟಿತು. ಸರ್ಕಾರಗಳು ಭೌತವಿಜ್ಞಾನದ ಮುಖ್ಯ ಪೋಷಕರಾದವು, "ಮೂಲ" ಸಂಶೋಧನೆಗೆ ಬೆಂಬಲ ಒದಗಿಸುವುದು ಸೇನೆ ಮತ್ತು ಕೈಗಾರಿಕಾ ಉಪಯೋಗಗಳಿಗೆ ಉಪಯುಕ್ತವಾಗಬಲ್ಲ ತಂತ್ರಜ್ಞಾನಕ್ಕೆ ದಾರಿಯಾಗುತ್ತದೆ ಎಂದು ಸರ್ಕಾರಗಳು ಕಂಡುಕೊಂಡವು. ಪ್ರಸ್ತುತ, ಸಾಮಾನ್ಯ ಸಾಪೇಕ್ಷತೆ ಮತ್ತು ಕ್ವಾಂಟಮ್‌ ಮೆಕಾನಿಕ್ಸ್‌ ಪರಸ್ಪರ ಸಾಮರಸ್ಯದಲ್ಲಿಲ್ಲ ಮತ್ತು ಎರಡನ್ನೂ ಒಗ್ಗೂಡಿಸುವ ಪ್ರಯತ್ನಗಳು ನಡೆದಿವೆ.
೫,೦೪೪

edits

"https://kn.wikipedia.org/wiki/ವಿಶೇಷ:MobileDiff/190566" ಇಂದ ಪಡೆಯಲ್ಪಟ್ಟಿದೆ