"ಮದಕರಿ ನಾಯಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

===ಚಿಕ್ಕಣ್ಣ ನಾಯಕ ===
 
ಮದಕರಿ ನಾಯಕನಿಗೆ ಮಕ್ಕಳಿಲ್ಲದ ಕಾರಣ, ಆತನ ದತ್ತುಪುತ್ರ ಓಬಣ್ಣಾ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಏರುತ್ತಾನೆ. ಓಬಣ್ಣಾ ನಾಯಕ ದಳವಾಯಿಗಳಿಂದ ಹತನಾಗುತ್ತಾನೆ. ಬಹುಶಃ ಅವರಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸದಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಚಿಕ್ಕಣ್ಣ ನಾಯಕ, ಮದಕರಿ ನಾಯಕನ ಕಿರಿಯ ಸಹೋದರ 1676ರಲ್ಲಿ ಸಿಂಹಾಸನಾರೂಢನಾಗುತ್ತಾನೆ. ಈ ಸಮಯದಲ್ಲಿ, ಹರಪನಹಳ್ಳಿಯ ನಾಯಕ ಅಣಜಿಗೆ ಮುತ್ತಿಗೆ ಹಾಕಿ ಸ್ಥಳೀಯ ಅಧಿಕಾರಿ ಭುನಪ್ಪನನ್ನು ಹತ್ಯೆ ಮಾಡುತ್ತಾನೆ. ಚಿಕ್ಕಣ್ಣ ನಾಯಕ ಅಣಜಿಗೆ ಹೋಗಿ, ಶತ್ರುಗಳು ಮುತ್ತಿಗೆ ಹಾಕುವುದನ್ನು ತಡೆಯುತ್ತಾನೆ. ಇದಾದ ಸ್ವಲ್ಪ ಸಮಯದಲ್ಲೇ, ಇವನು ಹರಿಹರಕ್ಕೆ ಹೋಗಿ ಅದು ಮೊಹಮಡನ್ ರಿಂದಮುಸಲ್ಮಾನರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ. ಮೊಹಮಡನ್ನರುಮುಸಲ್ಮಾನರು ಈ ಸ್ಥಳವನ್ನು ಶಂಷೇರ್ ಖಾನ್ ನ ಆಣತಿಯ ಮೇರೆಗೆ ಆಕ್ರಮಣ ಮಾಡಿರುತ್ತಾರೆ. ಆಗಿನ ದಾಳಿಯಿಂದ ರಕ್ಷಣೆಯು, ಈ ಕೆಳಕಂಡ ಯುದ್ಧತಂತ್ರದ ಮೂಲಕ ನಡೆಯುತ್ತಿರುತ್ತಿತ್ತು: ರಾತ್ರಿಯಾಗುತ್ತಿದ್ದಂತೆ ಹಲವಾರು ಲಾಂದ್ರಗಳನ್ನು ಹಚ್ಚಿ,ಮರದ ಕೊಂಬೆಗಳಿಗೆ ನೇತುಹಾಕಲಾಗುತ್ತಿತ್ತು. ಅಲ್ಲದೇ ಬರೆಗುಡ್ಡ ಬೆಟ್ಟದ ಮೇಲೆ ಬೀಡುಬಿಟ್ಟಿದ್ದ ಚಿಕ್ಕಣ್ಣನ ಸೈನ್ಯಕ್ಕಾಗಿ ಸಂಗೀತಗಾರರು ಎಂದಿನಂತೆ ತಮ್ಮ ವಾದ್ಯಗಳನ್ನು ನುಡಿಸುವಂತೆ ಹೇಳಲಾಗುತ್ತಿತ್ತು. ಶತ್ರುಗಳಿಗೆ ಸೈನ್ಯವು ಅಲ್ಲಿಂದ ಕಾಲ್ತೆಗೆದಿಲ್ಲವೆಂಬುದನ್ನು ತಿಳಿಯಪಡಿಸುವುದೇ ಈ ತಂತ್ರದ ಉದ್ದೇಶವಾಗಿತ್ತು. ನಾಯಕನು ತನ್ನ ಸಂಪೂರ್ಣ ಸೈನ್ಯವನ್ನು ಬಳಸು ಮಾರ್ಗಗಳ ಮೂಲಕ ಮುನ್ನಡೆಸಿ, ಕೋಟೆಯನ್ನು ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿ, ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾನೆ. ಚಿಕ್ಕಣ್ಣ, ರಾಯದುರ್ಗ ಹಾಗು ಬಸವಾಪಟ್ಟಣದ ನಾಯಕರುಗಳೊಂದಿಗೆ ವಿವಾಹದ ಮೂಲಕ ನೆಂಟಸ್ತಿಕೆ ಬೆಳಸಿಕೊಳ್ಳುತ್ತಾನೆ. ಚಿತ್ರದುರ್ಗದ ಕುಟುಂಬವು ಈ ನಾಯಕನ ಆಳ್ವಿಕೆಯಲ್ಲಿ ಎರಡು ಬಾರಿ ತಮ್ಮ ಧರ್ಮವನ್ನು ಬದಲಾವಣೆ ಮಾಡಿಕೊಂಡಿತೆಂದು ಹೇಳಲಾಗುತ್ತದೆ. ಮೊದಲಿಗೆ, ಸಂಪೂರ್ಣವಾಗಿ ಕುಟುಂಬವು ವೀರಶೈವ ಧರ್ಮವನ್ನು ಸ್ವೀಕರಿಸುತ್ತದೆ. ಅಲ್ಲದೇ ನಾಯಕರು ಕೋಟೆಯಲ್ಲಿ ಒಂದು ''ಮಠ'' ವನ್ನು ಸ್ಥಾಪಿಸುವ ಉದ್ದೇಶದ ಜೊತೆಗೆ ಉಗ್ರಚನ್ನವೀರದೇವ ಎಂಬ ವಿರಕ್ತ ಜಂಗಮರು ತಮ್ಮೆಲ್ಲರಿಗೂ ಗುರುವಾಗಬೇಕೆಂದೂ ಈ ಕುಟುಂಬ ಇಚ್ಛಿಸುತ್ತಿತ್ತೂ, ಎಂದು ಹೇಳಲಾಗುತ್ತದೆ. ನಂತರ, ಬಹುತೇಕ ಎಲ್ಲರೂ ತಮ್ಮ ಮೂಲ ಧರ್ಮಕ್ಕೇ ಹಿಂದಿರುಗಿದರೆಂದು ಹೇಳಲಾಗುತ್ತದೆ. ಈ ನಡುವೆ ಚಿಕ್ಕಣ್ಣ ನಾಯಕ 1686ರಲ್ಲಿ ವಿಧಿವಶನಾಗುತ್ತಾನೆ.
 
ಚಿಕ್ಕಣ್ಣ ನಾಯಕನ ನಂತರ ಆತನ ಹಿರಿಯ ಸಹೋದರ ಲಿಂಗಣ್ಣ ನಾಯಕ ರಾಜನಾಗುತ್ತಾನೆ. ಈತನೂ ಸಹ ಮದಕೇರಿ ನಾಯಕ III ಎಂಬ ಹೆಸರಿನಿಂದ ಪರಿಚಿತನಾಗುತ್ತಾನೆ. ಈ ಸಮಯದಲ್ಲಿ ದಳವಾಯಿಗಳ ನಡುವೆ ಸಿಂಹಾಸನಕ್ಕೆ ನ್ಯಾಯಸಮ್ಮತವಾದ ಉತ್ತರಾಧಿಕಾರಿಯನ್ನು ನೇಮಿಸುವ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ.
ಪಂಚಮಾರ ಮುದ್ದಣ್ಣ ನೇತೃತ್ವ ವಹಿಸಿದ ಒಂದು ಗುಂಪು ಲಿಂಗಣ್ಣ ನಾಯಕನನ್ನು ಬಂಧಿಸಿ ನಂತರ ಆತನನ್ನು ಹತ್ಯೆಗೈಯ್ಯುತ್ತದೆ. ಅಲ್ಲದೇ ದೊಣ್ಣೆ ರಂಗಪ್ಪ ನಾಯಕನನ್ನು ರಾಜನನ್ನಾಗಿ ಮಾಡುತ್ತದೆ. ದಳವಾಯಿ ಭರಮಪ್ಪ ನೇತೃತ್ವ ವಹಿಸಿದ ಮತ್ತೊಂದು ಒಳಗುಂಪು ಅಧಿಕಾರ ವಹಿಸಿಕೊಳ್ಳುವವರೆಗೂ, ಮುದ್ದಣ್ಣ ಚಿತ್ರದುರ್ಗದ ಅತ್ಯಂತ ಪ್ರಬಲ ನಾಯಕನಾಗಿ ಉಳಿಯುತ್ತಾನೆ. ಮುದ್ದಣ್ಣ ಹಾಗು ಆತನ ಸಹೋದರರ ಅಸ್ತಿತ್ವವನ್ನು ಶೀಘ್ರದಲ್ಲೇ ಕೊನೆಗೊಳಿಸಿ, ದೊಣ್ಣೆ ರಂಗಪ್ಪನನ್ನು ಸೆರೆಮನೆಯಲ್ಲಿಡಲಾಗುತ್ತದೆ.
 
 
===ಭರಮಪ್ಪ ನಾಯಕ ===
೧೩೩

edits

"https://kn.wikipedia.org/wiki/ವಿಶೇಷ:MobileDiff/187447" ಇಂದ ಪಡೆಯಲ್ಪಟ್ಟಿದೆ