ಸಸ್ಯ ಜೀವಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: sl:Rastlinska celica
ಚು r2.5.2) (robot Adding: lv:Augu šūna; cosmetic changes
೧ ನೇ ಸಾಲು:
{{for|the scientific journal|The Plant Cell}}
[[Fileಚಿತ್ರ:Plant cell structure svg.svg|thumb|323px|ಸಸ್ಯ ಜೀವಕೋಶದ ರಚನೆ]]
'''ಸಸ್ಯ ಜೀವಕೋಶಗಳು''' [[ಯೂಕ್ಯಾರಿಯೋಟಿಕ್‌]] (ಅಂದರೆ, ಒಂದು ಪೊರೆಯಿಂದ ಆವರಿಸಲ್ಪಟ್ಟ ಕೋಶಕೇಂದ್ರವನ್ನು ಒಳಗೊಂಡಿರುವ) ಜೀವಕೋಶಗಳಾಗಿದ್ದು, ತಾವು ಹೊಂದಿರುವ ಹಲವಾರು ಪ್ರಮುಖ ಅಂಶಗಳಿಂದಾಗಿ ಅವು ಇತರ [[ಯೂಕ್ಯಾರಿಯೋಟಿಕ್‌]] [[ಜೀವಿ]]ಗಳ [[ಜೀವಕೋಶಗಳಿಂದ]] ಪ್ರತ್ಯೇಕವಾಗಿ ನಿಲ್ಲುತ್ತವೆ. ಅವುಗಳ ಭಿನ್ನತಾ ಸೂಚಕ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ:
 
೧೮ ನೇ ಸಾಲು:
* [[ಬ್ರಯೋಫೈಟ್‌‌‌]]ಗಳ [[ಬೀಜಾಣು]]ಗಳು ಪ್ರಾಣಿಗಳಲ್ಲಿರುವ [[ಕಶಾಂಗ]]ಗಳನ್ನು ಹೋಲುವ ಕಶಾಂಗಗಳನ್ನು ಹೊಂದಿರುತ್ತವೆಯಾದರೂ,[[ಕಶಾಂಗ]]ಗಳು ಮತ್ತು [[ಪ್ರಾಣಿ ಜೀವಕೋಶ]]ಳಲ್ಲಿ ಕಂಡುಬರುವ [[ಸೆಂಟ್ರಿಯೋಲ್‌‌‌‌‌]]ಗಳು<ref name="raven">PH ರಾವೆನ್‌‌ , ಎವರ್ಟ್‌ RF, ಐಕೊರ್ಮ್‌ SE (1999) ಬಯಾಲಜಿ ಆಫ್‌ ಪ್ಲಾಂಟ್ಸ್‌‌, 6ನೇ ಆವೃತ್ತಿ. WH ಫ್ರೀಮನ್‌‌, ನ್ಯೂಯಾರ್ಕ್‌</ref> ಉನ್ನತ ಸಸ್ಯಗಳಲ್ಲಿ ([[ಅನಾವೃತ ಬೀಜಿಗಳು]] ಮತ್ತು [[ಹೂಬಿಡುವ ಸಸ್ಯ]]ಗಳನ್ನು ಒಳಗೊಂಡಂತೆ) ಇರುವುದಿಲ್ಲ.
 
== ಜೀವಕೋಶದ ಬಗೆಗಳು ==
 
* [[ಪರೆಂಕಿಮ ಜೀವಕೋಶಗಳು]]: ಇವು ಜೀವಂತ ಜೀವಕೋಶಗಳಾಗಿದ್ದು, ವೈವಿಧ್ಯಮಯವಾದ ಕಾರ್ಯಚಟುವಟಿಕೆಗಳನ್ನು ಹೊಂದಿರುತ್ತವೆ. ಸಂಗ್ರಹಣೆ ಮತ್ತು ಆಧಾರಕಾರ್ಯದಿಂದ ಮೊದಲ್ಗೊಂಡು ದ್ಯುತಿಸಂಶ್ಲೇಷಣೆ ಮತ್ತು ಆಹಾರ ಕೊಳವೆಗೆ ಪೌಷ್ಠಿಕಾಂಶಗಳನ್ನು ತುಂಬುವುದರವರೆಗೆ ([[ವರ್ಗಾವಣೆ ಜೀವಕೋಶಗಳು]]) ಅವುಗಳ ಕಾರ್ಯವ್ಯಾಪ್ತಿಯಿರುತ್ತದೆ. ಎಲೆಗಳು ತಮ್ಮ ನಾಳೀಯ ಕಂತೆಗಳಲ್ಲಿ ನೀರ್ಗೊಳವೆ ಮತ್ತು ಆಹಾರ ಕೊಳವೆಯನ್ನು ಹೊಂದಿರುವುದನ್ನು ಹೊರತುಪಡಿಸಿ, ಮುಖ್ಯವಾಗಿ ಪರೆಂಕಿಮ ಜೀವಕೋಶಗಳಿಂದ ಅವು ಮಾಡಲ್ಪಟ್ಟಿರುತ್ತವೆ. ಹೊರಪದರದಲ್ಲಿರುವ ಜೀವಕೋಶಗಳಂತೆ ಕೆಲವೊಂದು ಪರೆಂಕಿಮ ಜೀವಕೋಶಗಳು ಬೆಳಕಿನ ತೂರುವಿಕೆಗೆ ಮತ್ತು [[ಅನಿಲ ವಿನಿಮಯ]]ದ ಕಡೆಗೆ ಗಮನಹರಿಸುವ ಅಥವಾ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ವಿಶೇಷೀಕರಿಸಲ್ಪಟ್ಟಿರುತ್ತವೆ, ಆದರೆ ಇತರ ಪರೆಂಕಿಮ ಜೀವಕೋಶಗಳು ಸಸ್ಯ ಅಂಗಾಂಶದಲ್ಲಿನ ಕನಿಷ್ಟ ಮಟ್ಟದಲ್ಲಿ ವಿಶೇಷೀಕರಿಸಲ್ಪಟ್ಟ ಜೀವಕೋಶಗಳ ಪೈಕಿ ಸೇರಿವೆ, ಮತ್ತು ಅವು [[ಟೋಟಿಪೊಟೆಂಟ್‌‌]] ಎಂದು ಕರೆಯಲ್ಪಡುವ ವಿಶಿಷ್ಟ ಸ್ವರೂಪದಲ್ಲಿ ಉಳಿದುಕೊಳ್ಳಬಹುದು; ತಮ್ಮ ಜೀವಮಾನದುದ್ದಕ್ಕೂ ಪ್ರಭೇದ ಮಾಡಲ್ಪಡದ ಜೀವಕೋಶಗಳ ಹೊಸ ಸಮುದಾಯಗಳನ್ನು ಉತ್ಪಾದಿಸಲು ವಿಭಜನೆಗೊಳ್ಳುವ ಸಾಮರ್ಥ್ಯವನ್ನು ಟೋಟಿಪೊಟೆಂಟ್ ಎಂದು ಕರೆಯಲಾಗುತ್ತದೆ. ಪರೆಂಕಿಮ ಜೀವಕೋಶಗಳು ತೆಳುವಾದ, ಪ್ರವೇಶಸಾಧ್ಯ ಪ್ರಾಥಮಿಕ ಭಿತ್ತಿಗಳನ್ನು ಹೊಂದಿದ್ದು, ಇದರಿಂದಾಗಿ ಸದರಿ ಜೀವಕೋಶಗಳ ನಡುವೆ ಸಣ್ಣ ಸಣ್ಣ ಕಣಗಳು ಸಾಗಣೆಗೊಳ್ಳಲು ಸಾಧ್ಯವಾಗುತ್ತದೆ. [[ಮಕರಂದ]] [[ಸ್ರವಿಸುವಿಕೆ]]ಯಂಥ, ಅಥವಾ [[ಸಸ್ಯಾಹಾರಿತನ]]ವನ್ನು ಅನುಮೋದಿಸದಿರುವ [[ದ್ವಿತೀಯಕ ಉತ್ಪನ್ನಗಳ]] ತಯಾರಿಕೆಯಂಥ ಜೀವರಾಸಾಯನಿಕ ಕಾರ್ಯಚಟುವಟಿಕೆಗಳ ಒಂದು ವ್ಯಾಪಕ ಶ್ರೇಣಿಯನ್ನು ನಿರ್ವಹಿಸುವ ಹೊಣೆಯನ್ನು ಸದರಿ ಜೀವಕೋಶಗಳ ಕೋಶದ್ರವ್ಯವು ಹೊತ್ತಿರುತ್ತದೆ. ಅನೇಕ ಹರಿದ್ರೇಣುಗಳನ್ನು ಹೊಂದಿರುವ ಮತ್ತು ದ್ಯುತಿಸಂಶ್ಲೇಷಣೆಯೊಂದಿಗೆ ಪ್ರಮುಖವಾಗಿ ಸಂಬಂಧವನ್ನು ಹೊಂದಿರುವ ಪರೆಂಕಿಮ ಜೀವಕೋಶಗಳನ್ನು [[ಕ್ಲೋರೆಂಕಿಮ]] ಜೀವಕೋಶಗಳೆಂದು ಕರೆಯಲಾಗುತ್ತದೆ. [[ಆಲೂ]] [[ಗೆಡ್ಡೆಗಳು]] ಮತ್ತು [[ದ್ವಿದಳ ಧಾನ್ಯ ಸಸ್ಯಗಳಲ್ಲಿ]] ಇರುವ ಬಹುಪಾಲು ಪರೆಂಕಿಮ ಜೀವಕೋಶಗಳಂಥ ಇತರವು, ಒಂದು ಸಂಗ್ರಹಣಾ ಕಾರ್ಯಚಟುವಟಿಕೆಯನ್ನು ಹೊಂದಿರುತ್ತವೆ.
 
* [[ಕಲಿಂಕಿಮ ಜೀವಕೋಶಗಳು]]: ಕಲಿಂಕಿಮ ಜೀವಕೋಶಗಳು ಪ್ರೌಢಸ್ಥಿತಿಯಲ್ಲಿ ಜೀವಂತವಾಗಿರುತ್ತವೆ ಮತ್ತು ಕೇವಲ ಒಂದು ಪ್ರಾಥಮಿಕ ಭಿತ್ತಿ ಮತ್ತು ಒಂದು ದ್ವಿತೀಯಕ ಭಿತ್ತಿಯನ್ನಷ್ಟೇ ಹೊಂದಿರುತ್ತವೆ. ಆರಂಭದಲ್ಲಿ ಪರೆಂಕಿಮವನ್ನೇ ಹೋಲುವ ವರ್ಧನೋತಕ ಉತ್ಪನ್ನಗಳಿಂದ ಈ ಜೀವಕೋಶಗಳು ಪೂರ್ತಿ ಬೆಳೆಯುತ್ತವೆಯಾದರೂ, ಭಿನ್ನತೆಗಳು ಶೀಘ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಪ್ಲಾಸ್ಟಿಡ್‌‌ಗಳು ಇದರಲ್ಲಿ ಅಭಿವೃದ್ಧಿಯಾಗುವುದಿಲ್ಲ ಮತ್ತು ಹೆಚ್ಚುವರಿ ಪ್ರಾಥಮಿಕ ಭಿತ್ತಿಯನ್ನು ಸ್ರವಿಸಲು, ಸ್ರಾವಕ ಅಂಗವ್ಯೂಹವು (ER ಮತ್ತು ಗಾಲ್ಗಿ) ಹರಡಿಕೊಳ್ಳುತ್ತದೆ. ಇದರ ಭಿತ್ತಿಯು ಮೂಲೆಗಳಲ್ಲಿ ಅತಿ ಸಾಮಾನ್ಯವಾಗಿ ಅತ್ಯಂತ ದಪ್ಪವಾಗಿದ್ದು, ಅಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಜೀವಕೋಶಗಳು ಸಂಪರ್ಕದಲ್ಲಿ ಬರುತ್ತವೆ. ಕೇವಲ ಎರಡು ಜೀವಕೋಶಗಳು ಸಂಪರ್ಕದಲ್ಲಿ ಬರುವೆಡೆ ಭಿತ್ತಿಯು ಅತ್ಯಂತ ತೆಳುವಾಗಿರುತ್ತದೆಯಾದರೂ, ಭಿತ್ತಿಯ ದಪ್ಪನಾಗುವಿಕೆಯ ಇತರ ವ್ಯವಸ್ಥೆಗಳೂ ಇಲ್ಲಿ ಸಾಧ್ಯವಿವೆ<ref name="Cutter"></ref>.
 
[[ಪೆಕ್ಟಿನ್‌‌]] ಮತ್ತು [[ಹೆಮಿಸೆಲ್ಯುಲೋಸು]] ಇವು [[ದ್ವಿದಳ ಸಸ್ಯ]]ವಾದ [[ಆವೃತಬೀಜಿ]]ಗಳ (ಹೂಬಿಡುವ ಸಸ್ಯಗಳು) ಕಲಿಂಕಿಮ ಕೋಶಭಿತ್ತಿಗಳ ಪ್ರಬಲ ಘಟಕಾಂಶಗಳಾಗಿದ್ದು, ಈ ಆವೃತಬೀಜಿಗಳ ''[[ಪೆಟಾಸೈಟ್ಸ್‌‌]]'' <ref name="Roelofsen">PA ರೊಯೆಲೊಫ್ಸೆನ್‌ (1959) 'ದಿ ಪ್ಲಾಂಟ್‌ ಸೆಲ್‌ ವಾಲ್‌‌.' ''ಹ್ಯಾಂಡ್‌ಬುಕ್‌ ಫರ್‌ ಫ್ಲಾಂಜೆನಾನಾಟೊಮಿ'' . ಬ್ಯಾಂಡ್‌ III. ಜೆಬ್ರೂಡರ್‌ ಬಾರ್ನ್‌ಟ್ರೇಗರ್‌, ಬರ್ಲಿನ್‌‌</ref> ಕುಲದಲ್ಲಿನ ಸದಸ್ಯರು 20%ನಷ್ಟು ಕಡಿಮೆ ಪ್ರಮಾಣದಲ್ಲಿ ಸೆಲ್ಯುಲೋಸನ್ನು ಹೊಂದಿರಬಹುದಾಗಿರುತ್ತದೆ. ವಿಶಿಷ್ಟವೆಂಬಂತೆ, ಕಲಿಂಕಿಮ ಜೀವಕೋಶಗಳು ಸಾಕಷ್ಟು ಉದ್ದನೆಯ ರಚನೆಯನ್ನು ಹೊಂದಿರುತ್ತವೆ, ಮತ್ತು ಒಂದು ವಿಭಜಿತ ನೋಟವನ್ನು ನೀಡಲು ಅವು ಅಡ್ಡಡ್ಡವಾಗಿ ವಿಭಜಿಸಿಕೊಳ್ಳಬಹುದು. ಇನ್ನೂ ಉದ್ದವಾಗಿ ಬೆಳೆಯುತ್ತಲೇ ಅಕ್ಷಗಳಲ್ಲಿನ ಸಸ್ಯವನ್ನು ಬೆಂಬಲಿಸುವುದು, ಮತ್ತು ಅಂಗಾಂಶಗಳ ಮೇಲೆ ಬಾಗಿಸುವಿಕೆ ಮತ್ತು ಕರ್ಷಕ ಬಲವನ್ನು ನೀಡುವುದು ಈ ಬಗೆಯ ಜೀವಕೋಶದ ಪಾತ್ರವಾಗಿದೆ. ಪ್ರಾಥಮಿಕ ಭಿತ್ತಿಗೆ ಗಡಸುತನ ಮತ್ತು ಬಾಗದಿರುವಿಕೆಯ ಸ್ವಭಾವವನ್ನು ನೀಡುವ ಲಿಗ್ನಿನ್‌‌ ಸದರಿ ಪ್ರಾಥಮಿಕ ಭಿತ್ತಿಯಲ್ಲಿ ಇರುವುದಿಲ್ಲ; ಆದ್ದರಿಂದ ಈ ಬಗೆಯ ಜೀವಕೋಶವು ಸುಲಭವಾಗಿ ಮಣಿಯುವ ಆಧಾರವನ್ನು ಅಥವಾ ಬೆಂಬಲವನ್ನು ಒದಗಿಸುತ್ತದೆ ಎಂದು ಹೇಳಬಹುದು. ಈ ಆಧಾರವು ಒಂದು ಎಳೆಯ ಕಾಂಡ ಅಥವಾ ಎಲೆಯತೊಟ್ಟನ್ನು ಗಾಳಿಗೆ ಒಡ್ಡಿ ಹಿಡಿದುಕೊಳ್ಳಬಹುದಾದರೂ, ಜೀವಕೋಶಗಳಲ್ಲಿ ಅವುಗಳ ಸುತ್ತಲಿರುವ ಜೀವಕೋಶಗಳಂತೆ ಉದ್ದನೆಯದಾಗಿ ಹಿಗ್ಗಿಸಬಲ್ಲದಾಗಿದೆ. ಕಲಿಂಕಿಮ ಜೀವಕೋಶಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಲು ಹಿಗ್ಗಬಲ್ಲ ಆಧಾರವು (ಸ್ಥಿತಿಸ್ಥಾಪಕವಾದ ಪೂರ್ವಸ್ಥಿತಿಗೆ-ಮರಳುವಿಕೆಯಿಲ್ಲದೆ) ಒಂದು ಉತ್ತಮವಾದ ವಿಧಾನವಾಗಿದೆ. ತೋಟದ ಸೊಪ್ಪಿನಲ್ಲಿನ ನಾರುಗಳ ಭಾಗಗಳು ಕಲಿಂಕಿಮ ಜೀವಕೋಶಗಳಾಗಿವೆ.
೩೦ ನೇ ಸಾಲು:
ಪೆಡುಸಾದ ಜೀವಕೋಶಗಳಿಗೆ (ಎಲೆಗಳು ಅಥವಾ ಹಣ್ಣುಗಳಿಗೆ ಒಂದು ಸಣ್ಣ ಕಣಗಳಂತಿರುವ ರಚನಾ ವಿನ್ಯಾಸವನ್ನು ನೀಡುವ ಬಿರುಸು ಜೀವಕೋಶಗಳು) ಸಂಬಂಧಿಸಿದಂತಿರುವ ಕಾರ್ಯಚಟುವಟಿಕೆಗಳಲ್ಲಿ, ಸಣ್ಣ ಕೀಟದ ಮರಿಹುಳುವಿನ ಹಂತಗಳಲ್ಲಿ ಪಚನದ ಸಾಗುನಾಳಗಳನ್ನು ಹಾನಿಗೊಳಿಸುವ ಮೂಲಕ ಸಸ್ಯಾಹಾರಿತನವನ್ನು ಅಡ್ಡಿಪಡಿಸುವುದು, ಮತ್ತು ಶಾರೀರಿಕ ಸಂರಕ್ಷಣೆ (ಬಿರುಸಾಗಿರುವ ಪೆಡುಸಾದ ಜೀವಕೋಶಗಳ ಒಂದು ಘನ ಅಂಗಾಂಶವು, ಪೀಚ್‌ ಹಣ್ಣು ಮತ್ತು ಅನೇಕ ಇತರ ಹಣ್ಣುಗಳಲ್ಲಿನ ಓಟೆಯ ಭಿತ್ತಿಯನ್ನು ರೂಪಿಸುತ್ತದೆ) ಮಾಡುವುದು ಇವು ಸೇರಿವೆ. ಮೂಲಿಕೆಯಂಥ (ದಾರುವಿಲ್ಲದ) ಸಸ್ಯಗಳ ಎಲೆಗಳು ಮತ್ತು ಕಾಂಡಗಳಿಗೆ ಹೊರೆ-ಹೊರುವ ಆಧಾರ ಮತ್ತು ಕರ್ಷಕ ಬಲದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ನಾರುಗಳ ಕಾರ್ಯಚಟುವಟಿಕೆಗಳಲ್ಲಿ ಸೇರಿವೆ.<ref name="Cutter">EG ಕಟ್ಟರ್‌‌‌ (1977) ಪ್ಲಾಂಟ್‌ ಅನಾಟಮಿ ಪಾರ್ಟ್‌ 1. ಸೆಲ್ಸ್‌‌ ಅಂಡ್‌ ಟಿಶ್ಯೂಸ್‌. ಎಡ್ವರ್ಡ್‌ ಅರ್ನಾಲ್ಡ್‌‌, ಲಂಡನ್‌‌‌</ref> ನೀರು ಮತ್ತು ಪೌಷ್ಟಿಕದ್ರವ್ಯಗಳ ಪೈಕಿ ಯಾವೊಂದರ ಸಾಗಿಸುವಿಕೆಯಲ್ಲಿ ([[ನೀರ್ಗೊಳವೆ]]ಯಲ್ಲಿರುವಂತೆ) ಅಥವಾ ಇಂಗಾಲ ಸಂಯುಕ್ತಗಳ ಸಾಗಿಸುವಿಕೆಯಲ್ಲಿ ([[ಆಹಾರ ಕೊಳವೆ]]ಯಲ್ಲಿರುವಂತೆ) ಸ್ಕ್ಲಿರೆಂಕಿಮ ನಾರುಗಳು ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ; ಆದರೆ ಆರಂಭಿಕ ಭೂಸಸ್ಯಗಳಲ್ಲಿ ನೀರ್ಗೊಳವೆ ಮತ್ತು ಆಹಾರ ಕೊಳವೆಯ ಆರಂಭಿಕ ರೂಪಗಳ ರೂಪಾಂತರಗಳಾಗಿ ಅವು ವಿಕಸನಗೊಂಡಿರಬಹುದಾದ ಸಾಧ್ಯತೆಗಳಿವೆ.
 
== ಅಂಗಾಂಶದ ಬಗೆಗಳು ==
[[Fileಚಿತ್ರ:Arabidopsis-epiderm-conidiospore-hyaloperonospora-parasitica.jpg|thumb|right|ಅರಾಬಿಡೋಪ್ಸಿಸ್‌ ಎಪಿಡರ್ಮಿಸ್‌ನ ಜೀವಕೋಶಗಳು]]
[[ಬೇರು]]ಗಳು, [[ಕಾಂಡಗಳು]], [[ಎಲೆಗಳು]], [[ಹೂವು]]ಗಳು ಮತ್ತು ಸಂತಾನೋತ್ಪತ್ತಿ ಮಾಡುವ ರಚನೆಗಳನ್ನು ರೂಪಿಸುವ ಸಲುವಾಗಿ, ಪ್ರಭೇದ ಮಾಡಲ್ಪಡದ [[ವರ್ಧನೋತಕ]]ದ ಜೀವಕೋಶಗಳಿಂದ (ಪ್ರಾಣಿಗಳ ಕಾಂಡಕೋಶಗಳನ್ನು ಹೋಲುವ) ಜೀವಕೋಶಗಳ ಪ್ರಮುಖ ವರ್ಗಗಳು ಭಿನ್ನವಾಗಿರುತ್ತವೆ.
 
೪೪ ನೇ ಸಾಲು:
ಬೇರುಗಳನ್ನು ಹೊರತುಪಡಿಸಿದ, ಗಾಳಿಯಲ್ಲಿ ಬೆಳೆದ ಎಲ್ಲಾ ಅಂಗಗಳ ಹೊರಪದರವು, [[ಮೇಣದಂಥ ದ್ರವ್ಯಗಳು]] ಮತ್ತು [[ಕ್ಯೂಟಿನ್‌‌]] ಎಂಬ [[ಪಾಲಿಯೆಸ್ಟರ್‌‌‌‌‌]]ನಿಂದ ಮಾಡಲ್ಪಟ್ಟ ಒಂದು [[ಹೊರಪೊರೆ]]ಯನ್ನು ಹೊದಿಕೆಯಾಗಿ ಹೊಂದಿರುತ್ತವೆ. ಹಲವಾರು ಬಗೆಯ ಜೀವಕೋಶಗಳು ಹೊರಪದರದಲ್ಲಿ ಇರಲು ಸಾಧ್ಯವಿದೆ. ರಂಧ್ರಗಳ ರಕ್ಷಕ ಜೀವಕೋಶಗಳು, ಗ್ರಂಥಿಗಳಿರುವ ಮತ್ತು ಹೊದಿಕೆಯ ಕೂದಲುಗಳು ಅಥವಾ [[ರೋಮ]]ಗಳು, ಮತ್ತು ಪ್ರಾಥಮಿಕ ಬೇರುಗಳ [[ಬೇರು ಕೂದಲು]]ಗಳು ಇವುಗಳ ಪೈಕಿ ಗಮನಾರ್ಹವಾಗಿವೆ. ಬಹುಪಾಲು ಸಸ್ಯಗಳ ಬಳ್ಳಿಯ ಹೊರಪದರದಲ್ಲಿ, ಕೇವಲ [[ರಕ್ಷಕ ಜೀವಕೋಶಗಳು]] ಹರಿದ್ರೇಣುಗಳನ್ನು ಹೊಂದಿರುತ್ತವೆ. ಪ್ರಾಥಮಿಕ ಬಳ್ಳಿಯ ಹೊರಚರ್ಮದ ಜೀವಕೋಶಗಳು ಕ್ಯೂಟಿನ್‌ನ್ನು ಸಂಶ್ಲೇಷಿಸುವುದಕ್ಕೆ ಸಂಬಂಧಿಸಿದ ಜೀವರಾಸಾಯನಿಕ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಸಸ್ಯ ಜೀವಕೋಶಗಳು ಎಂದು ಭಾವಿಸಲಾಗಿದೆ.<ref name="Kolattukudy 1996">ಕೊಲಾಟ್ಟುಕುಡಿ, PE (1996) ಬಯೋಸಿಂಥೆಟಿಕ್‌ ಪಾತ್‌ವೇಸ್‌ ಆಫ್‌ ಕ್ಯೂಟಿನ್‌ ಅಂಡ್‌ ವ್ಯಾಕ್ಸಸ್‌‌, ಅಂಡ್‌ ದೆರ್‌ ಸೆನ್ಸಿಟಿವಿಟಿ ಟು ಎನ್ವಿರಾನ್ಮೆಂಟಲ್‌ ಸ್ಟ್ರೆಸಸ್‌‌. ಇನ್‌: ಪ್ಲಾಂಟ್‌ ಕ್ಯೂಟಿಕಲ್ಸ್‌‌. ಸಂಪಾದಕ: G. ಕರ್ಸ್ಟೀನ್ಸ್‌‌, BIOS ಸೈಂಟಿಫಿಕ್‌ ಪಬ್ಲಿಷರ್ಸ್‌ ಲಿಮಿಟೆಡ್‌., ಆಕ್ಸ್‌ಫರ್ಡ್‌, ಪುಟಗಳು 83-108</ref>
 
== ಭಾಗಗಳು ==
* [[ಜೀವಕೋಶದ ಒಳಪೊರೆ]]
* [[ಕೋಶಭಿತ್ತಿ]]
* [[ಕೊಶಕೇಂದ್ರದ ಒಳಪೊರೆ]]
* [[ಪ್ಲಾಸ್ಮಡೆಸ್ಮ]]
* [[ಕುಹರ]]
* [[ಪ್ಲಾಸ್ಟಿಡ್‌‌ಗಳು]]
* [[ಹರಿದ್ರೇಣು]]
* [[ಲ್ಯೂಕೋಪ್ಲಾಸ್ಟ್‌‌]]
* [[ವರ್ಣಕಣ]]
* [[ಗಾಲ್ಗಿ ಕಾಯಗಳು]]
* [[ರೈಬೋಸೋಮ್‌]]
* [[ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್‌]]
* [[ಮೈಟೋಕಾಂಡ್ರಿಯನ್]]
* [[ಲೈಸೊಸೋಮ್‌‌]]
* [[ಕೋಶದ್ರವ್ಯ]]
* [[ಕೋಶಕೇಂದ್ರ]]
* [[DNA]]
* [[ವರ್ಣಗ್ರಾಹಿ]]
* [[RNA]]
 
== ಪರಾಮರ್ಶನಗಳು ==
{{Reflist}}
 
== ಬಾಹ್ಯ ಕೊಂಡಿಗಳು ==
* [http://www.smartymaps.com/map.php?s=plantEukaryote ಸಸ್ಯ ಜೀವಕೋಶದ ಭಾಗಗಳು]
 
{{Botany}}
 
[[Categoryವರ್ಗ:ಸಸ್ಯ ಅಂಗರಚನೆ]]
[[Categoryವರ್ಗ:ಕೋಶ ಜೀವಶಾಸ್ತ್ರ]]
 
[[ca:Cèl·lula vegetal]]
೮೭ ನೇ ಸಾಲು:
[[it:Cellula vegetale]]
[[lt:Augalinė ląstelė]]
[[lv:Augu šūna]]
[[nl:Plantaardige cel]]
[[pl:Komórka roślinna]]
"https://kn.wikipedia.org/wiki/ಸಸ್ಯ_ಜೀವಕೋಶ" ಇಂದ ಪಡೆಯಲ್ಪಟ್ಟಿದೆ