"ಮದಕರಿ ನಾಯಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಮದಕರಿ ನಾಯಕ''' , [[ಭಾರತ|ಭಾರತ]] ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲಿ ಒಂದಾದ [[ಚಿತ್ರದುರ್ಗ ನಗರ|ಚಿತ್ರದುರ್ಗ]]ದ ಕೊನೆಯ ಆಳರಸನಾಗಿದ್ದ.<ref>https://netfiles.uiuc.edu/blewis/www/chitradurga.htm</ref> [[ಹೈದರಾಲಿ|ಹೈದರ್ ಅಲಿ]]ಯ [[ಮೈಸೂರು|ಮೈಸೂರಿನ]] ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕ ಸೋಲನ್ನಪ್ಪಿ ಚಿತ್ರದುರ್ಗ ಹೈದರ್‌ ಅಲಿಯ ಪಾಲಾಗುತ್ತದೆ. ಅಲ್ಲದೇ ನಾಯಕ ಅಲಿಯ ಪುತ್ರ [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]]ನಿಂದ ಹತನಾಗುತ್ತಾನೆ.
 
ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಕೋಟೆಯನ್ನು ಹೈದರ್‌ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ. ಹೀಗೆ ಹೈದರ್ ಅಲಿ ಚಿತ್ರದುರ್ಗದ ಕೋಟೆಯನ್ನು ಸುತ್ತುವರಿದಾಗ ಅಲ್ಲಿನ ಹೆಂಗಸೊಬ್ಬಳು ಬಂಡೆಗಳ ನಡುವಿನ ಕಿಂಡಿಯ ಮೂಲಕ ಪ್ರವೇಶಿಸಿದ್ದನ್ನು ಗುರುತಿಸಿ, ತನ್ನ ಸೈನಿಕರನ್ನು ಆ ಮಾರ್ಗದ ಮೂಲಕ ಕಳುಹಿಸಿರುತ್ತಾನೆ. ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ ಊಟಮಾಡಲು ಮನೆಗೆ ಹೋಗಿರುತ್ತಾನೆ. ಆಕೆ, ಆ ಕಿಂಡಿಯ ಮೂಲಕ ಬರುತ್ತಿದ್ದ ಸೈನಿಕರನ್ನು ಗಮನಿಸುತ್ತಾಳೆ. ಕೂಡಲೇ ಜಾಗೃತಳಾಗಿ ತನ್ನ ''ಒನಕೆ'' ಯನ್ನು(ಭತ್ತ ಕುಟ್ಟಲು ಬಳಸುವ ಒಕ್ಕುಗೋಲು) ಬಳಸಿ ಅವರನ್ನು ಕೊಲ್ಲುತ್ತಾಳೆ. ಊಟ ಮುಗಿಸಿ ಹಿಂದಿರುಗಿದ ಬಳಿಕ, ಓಬವ್ವನ ರಕ್ತಸಿಕ್ತಗೊಂಡಿದ್ದ ಒನಕೆಯನ್ನು ನೋಡಿ ಆಕೆಯ ಪತಿಗೆ ಆಘಾತವಾಗುತ್ತದೆ. ಜೊತೆಗೆ ಅವಳಿಂದ ಹತರಾದ ನೂರಾರು ಸೈನಿಕರು ಅವಳೆದುರು ಶವವಾಗಿದ್ದನ್ನು ನೋಡುತ್ತಾನೆ. ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ. ತಣ್ಣೀರು ದೋಣಿಯು ಒಂದು ಸಣ್ಣ ನೀರಿನ ಮೂಲವಾಗಿದ್ದು ವರ್ಷಪೂರ್ತಿ ಇಲ್ಲಿನ ನೀರು ತಂಪಾಗಿರುತ್ತದೆ. ಹೈದರ್ ಅಲಿ 1799ರಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ, ಕೋಟೆಯನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಈ ಸ್ಥಳವು ತನ್ನ ಸುತ್ತಲಿನ ''ಕಲ್ಲಿನ ಕೋಟೆ'' ಗೆ ಪ್ರಸಿದ್ಧವಾಗಿದೆ.("ಕಲ್ಲಿನ ಕೋಟೆ ಇರುವ ಸ್ಥಳ") ಹಾಗು ಇದು ''ಏಳು ಸುತ್ತಿನ ಕೋಟೆ'' ಇರುವ ಸ್ಥಳವಾಗಿದೆ, ಇದು ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಿತವಾಗಿದೆ.
 
==ಚಿತ್ರದುರ್ಗದ ಪಾಳೆಗಾರ ಕುಟುಂಬದ ಇತಿಹಾಸ ==
 
ಚಿತ್ರದುರ್ಗದ ಪಾಳೆಗಾರ ಕುಟುಂಬದವರು ''ಬೇಡ'' ಅಥವಾ ''ಬೋಯರ್'' ಸಮುದಾಯದ ಜಾತಿಗೆ ಸೇರಿದವರಾಗಿದ್ದರು. ಬೆಟ್ಟದ ಮೇಲೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರಾಗಿದ್ದ ಇವರು ಬೇಟೆ ಹಾಗು ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಇವರ ಮೂಲದ ಬಗೆಗಿರುವ ವಿವರಣೆಯು ಅಸ್ಪಷ್ಟವಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನಿರುತಡಿಯಲ್ಲಿ ಸುಮಾರು 1475ರಲ್ಲಿ ನೆಲೆಗೊಳ್ಳುತ್ತವೆ. ಇವರನ್ನು ಕಮಗೆಟಿ ಕುಟುಂಬ ಹಾಗು ವಾಲ್ಮೀಕಿ ''ಗೋತ್ರ'' ಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಇವರಲ್ಲಿ ಮಗ ಹಾಗು ಮೊಮ್ಮಗ, ಹಿರೇ ಹನುಮಪ್ಪ ನಾಯಕ ಹಾಗು ತಿಮ್ಮಣ್ಣ ನಾಯಕ, ದಾವಣಗೆರೆ ''ತಾಲ್ಲೂಕಿನ'' ಮಟ್ಟಿಯಲ್ಲಿ ನೆಲೆಯಾಗುತ್ತಾರೆ. ಇವರಲ್ಲಿ ಕಮಗೆಟಿ ತಿಮ್ಮಣ್ಣ ನಾಯಕನೆಂದು ಕರೆಯಲ್ಪಡುವ ಎರಡನೇಯವನನ್ನು ವಿಜಯನಗರದ ರಾಜನು ಮೊದಲು ಹೊಳಲ್ಕೆರೆಗೆ, ನಂತರ ಹಿರಿಯೂರಿಗೆ, ಹಾಗು ಅಂತಿಮವಾಗಿ ಚಿತ್ರದುರ್ಗದ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ. ಈತ ಚಿತ್ರದುರ್ಗದ ಬೆಟ್ಟವನ್ನು ಬಲಪಡಿಸಿ, ಅದನ್ನು ಯಾವ ರೀತಿ ನಿಭಾಯಿಸುತ್ತಾನೆಂದರೆ ಆತನ ವಿರುದ್ಧ ಸೆಣಸಲು ರಾಜನು ಸೈನ್ಯವನ್ನು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದು ನಂಬಿಕೆ ಪ್ರಕಾರ, ತಿಮ್ಮಣ್ಣ ನಾಯಕನು ತಿರುಪತಿ ಸಮೀಪದ'' ಬೆಟ್ಟಗಳ'' ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಇಲ್ಲಿಗೆ ಬಂದು ಬಸವಾಪಟ್ಟಣದ ಪಾಳೆಯಗಾರರಿಂದ ನೇಮಕಗೊಳ್ಳುತ್ತಾನೆ. ನಂತರದಲ್ಲಿ, ಆತ ಮತ್ತಿಯಲ್ಲಿ ಹೊಂದಿದ್ದ ಉಪಪತ್ನಿಗೆ ಸಂಬಂಧಿಸಿದ ಕೆಲ ಕಲಹಗಳು ಉಂಟಾಗುತ್ತವೆ. ಇದರಿಂದ ಆತ ಆ ಸ್ಥಳವನ್ನು ತೊರೆದು ಮಾಯಕೊಂಡದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದಲೂ ಸ್ಥಳಾಂತರಗೊಂಡು, ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅದಲ್ಲದೇ ತನ್ನದೇ ಆದ ತಂಡ ಕಟ್ಟಿಕೊಂಡ ನಂತರ, ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸಿದ. ಅಲ್ಲದೇ ಹಳೆಯೂರು ಸಮೀಪ ರಂಗಾಪಟ್ನವೆಂಬ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಈತ ಮಾಡುತ್ತಿದ್ದ ಲೂಟಿಯಿಂದ ಕೋಪಗೊಂಡ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು, ಅವನ ವಿರುದ್ಧ ಒಂದಾಗಿ, ವಿಜಯನಗರದ ಕೆಲವು ಸೈನಿಕರೊಂದಿಗೆ, ರಂಗಾಪಟ್ನದೆಡೆಗೆ ಕ್ರಮಣ ಮಾಡುತ್ತಾರೆ. ತಿಮ್ಮಣ್ಣ ನಾಯಕನ ಸೈನ್ಯವು ಬಲವಂತದಿಂದ ಚಿತ್ರದುರ್ಗಕ್ಕೆ ಹಿಂದಿರುಗಬೇಕಾಗುತ್ತದೆ, ಅಲ್ಲಿ ಈತನ ಮೇಲೆ ಆಕ್ರಮಣ ಮಾಡಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲೇ, ವಿಜಯನಗರದ ಅರಸರಅರಸರನ್ನು ಮೇಲೆಅವಲಂಬಿಸಿದ ಅವಲಂಬಿತನಾಗಿದ್ದನಾಯಕರುಗಳಲ್ಲಿ ಒಬ್ಬ ನಾಯಕನೆಂಬಎಂದು ಪರಿಗಣನೆಗೆಆತನನ್ನು ಇದು ದಾರಿ ಮಾಡಿಕೊಟ್ಟಿತುಪರಿಗಣಿಸಲಾಯಿತು. ಈ ಘಟನೆಎಲ್ಲಾ ಘಟನೆಗಳು ನಡೆದದ್ದು ಸುಮಾರು 1562 ರ ಅವಧಿಯಲ್ಲಿ ನಡೆಯುತ್ತದೆ.
 
===ತಿಮ್ಮಣ್ಣ ನಾಯಕ ===
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/184040" ಇಂದ ಪಡೆಯಲ್ಪಟ್ಟಿದೆ