ಪಿ. ಸುಶೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
ತಕ್ಕ ಮಟ್ಟಿನ ಆಸ್ತಿವಂತ ಕುಟುಂಬದವರಾದ ತಂದೆ ಮುಕುಂದರಾವ್ ಪ್ರಸಿದ್ದ ಕ್ರಿಮಿನಲ್ ಲಾಯರ್.ತಾಯಿ ಶೇಷಮ್ಮನವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿತ್ತು.ಇವರ ಭಾಗದಿಂದಲೇ ಪ್ರಸಿದ್ದ ಗಾಯಕರಾದ ಘಂಟಸಾಲ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು ಬಾಲ್ಯದ ಆದರ್ಶವಾಗಿದ್ದರು.ಬಾಲ್ಯದಿಂದಲೂ ಹೆತ್ತವರಿಗೆ ಮಗಳು ಎಂ.ಎಸ್.ಸುಬ್ಬುಲಕ್ಷ್ಮಿಯಂತೆ ಶ್ರೇಷ್ಠ ಶಾಸ್ತ್ರೀಯ ಗಾಯಕಿಯಾಗಬೇಕು ಎಂಬ ಆಸೆ.ಮ್ಯೂಸಿಕ್ ಡಿಪ್ಲೋಮಾವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಪಿ.ಸುಶೀಲ ೧೯೫೧ ರಲ್ಲಿ ಮದ್ರಾಸಿನಲ್ಲಿ ಮಾತ್ರವಿದ್ದ ಸಂಗೀತ ವಿದ್ವಾನ್ ಪರೀಕ್ಷೆಗೆ ಅಧ್ಯಯನದಲ್ಲಿರುವಾಗಲೇ ಆಗಾಗ ಆಕಾಶವಾಣಿಗೆ ಕಾರ್ಯಕ್ರಮ ನೀಡುತ್ತಿದ್ದರು.ಆಗ ಇವರ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ "ಪೆಟ್ರ ತಾಳಿ " ತಮಿಳು ಸಿನಿಮಾದಲ್ಲಿ ಹಾಡಿಸಿದರು.ಎ.ಎಂ. ರಾಜಾ ಅವರ ಜೊತೆಗಿನ ಯುಗಳಗೀತೆ.ಅಲ್ಲಿಂದ ಮುಂದೆ ಪಿ.ಸುಶೀಲ ಹಿಂತಿರುಗಿ ನೋಡಲಿಲ್ಲ ಇದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ನಲವತ್ತು ಸಾವಿರ ಹಾಡುಗಳ ಒಡತಿಯಾದರು.ಸಂಗೀತ ಪ್ರೇಮಿಯಾದ ಪತಿ ಮೋಹನರಾವ್ ಬೆಂಬಲದಿಂದಲೇ ಇಷ್ಟೊಂದು ಹಾಡುಗಳನ್ನೂ ಹಾಡಿದರು.ಇವರ ಒಬ್ಬನೆ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಹ ಹಿನ್ನೆಲೆ ಗಾಯಕಿ.ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ ೧೯೫೨ರಲ್ಲಿ ತೆರೆ ಕಂಡ "ಮಾಡಿದ್ದುಣ್ಣೋ ಮಾರಾಯ",ಇದರ ಹಾಡುಗಳು ಪ್ರಸಿದ್ದವಾಗಲಿಲ್ಲವಾದರೂ ನಂತರ ಬಂದ "ರತ್ನಗಿರಿ ರಹಸ್ಯ"ದ "ಅಮರಾ ಮಧುರಾ ಪ್ರೇಮ.." ಗೀತೆ ಸಾಕಷ್ಟು ಪ್ರಸಿದ್ದವಾಯಿತು,೬೦-೭೦ರ ದಶಕದ ಹಲವಾರು ಸುಂದರ ಸುಮಧುರ ಕನ್ನಡ ಗೀತೆಗಳನ್ನು ಹಾಡಿದ ಪಿ.ಸುಶೀಲ ಇವರಿಗೆ ಐದು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಭಾರತ ಸರಕಾರದ ಉನ್ನತ ನಾಗರೀಕ ಗೌರವ "ಪದ್ಮಭೂಷಣ" ಸಿಕ್ಕಿದೆ.ಎಂ.ಎಸ್.ವಿಶ್ವನಾಥ್ ರಿಂದ ಹಿಡಿದು ಎ.ಆರ್.ರೆಹಮಾನ್ ರವರೆಗೆ ಎಲ್ಲಾ ತಲೆಮಾರಿನ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿದ ಅನುಭವ ಈ ಮೇರು ಗಾಯಕಿಗಿದೆ.ಲತಾ ಮಂಗೇಶ್ಕರ್ ಅಭಿಮಾನಿಯಾದ ಪಿ.ಸುಶೀಲ ಮೊದಲ ಸಲ ರಾಷ್ಟ್ರ ಪ್ರಶಸ್ತಿ ಪಡೆಯಲು ದೆಹಲಿಗೆ ತೆರಳಿದಾಗ ಉಂಟಾದ ಪರಿಚಯ ಮುಂದೆ ಅವರ ಕುಟುಂಬದೊಂದಿಗೂ ಆತ್ಮೀಯತೆ ಬೆಳೆಯಿತು. ಇಂದಿಗೂ ಪಿ.ಸುಶೀಲರನ್ನು "ದೀದಿ" ಎಂದೇ ಕರೆಯುತ್ತೀದ್ದಾರೆ.
ಪಿ.ಸುಶೀಲ ಅವರಿಗೆ ದೊರೆತ ಗೌರವಗಳು
 
ಪದ್ಮಭೂಷಣ ೨೦೦೮
 
ರಾಷ್ಟ್ರ ಪ್ರಶಸ್ತಿಗಳು ಒಟ್ಟು ೫
೧೯೬೯ರಲ್ಲಿ ತಮಿಳು ಭಾಷೆಯ "ಉಯಿರೆಂತ ಮಾನಿದನ್" ಚಿತ್ರದ "ಪಾಲ್ ಪಾಲುವೆ ವಾನ್ ಮೀ೦ದಿಲೇ" ಹಾಡಿಗಾಗಿ
Line ೧೪ ⟶ ೧೬:
೧೯೮೨ರಲ್ಲಿ ತೆಲುಗು ಭಾಷೆಯ "ಮೇಘ ಸಂದೇಶಂ" ಚಿತ್ರದ "ಪ್ರಿಯೆ ಚಾರು ಸೀಲೆ ಎಂಥ ಪ್ರೀತೊಂವದೆ" ಹಾಡಿಗಾಗಿ
೧೯೮೩ರಲ್ಲಿ ತೆಲುಗು ಭಾಷೆಯ "ಎಂ.ಎಲ್.ಎ. ಏಡುಕೊಂಡಲು"ಚಿತ್ರದ "ಗೋಪಾಲುಡು ವೇಣುಗೋಪಾಲುಡು"ಹಾಡಿಗಾಗಿ
 
ರಾಜ್ಯ ಪ್ರಶಸ್ತಿಗಳು
ತಮಿಳುನಾಡು --೧೯೬೯.೧೯೭೫.೧೯೭೯.೧೯೮೯.
Line ೧೯ ⟶ ೨೨:
ಕೇರಳ ---೧೯೭೧.೧೯೭೫.೧೯೭೯.೧೯೮೫.
ಮಹಾರಾಷ್ಟ್ರ --೧೯೮೪.೧೯೮೮.
 
ಜೀವಮಾನದ ಸಾದನೆಗಾಗಿ
ತಮಿಳುನಾಡು ಸರಕಾರ -ಭಾರತಿ ದರ್ಶನ ಪ್ರಶಸ್ತಿ.(1988) ಕಲೈಮಾಣಿ(1991)
Line ೨೪ ⟶ ೨೮:
ಕೇರಳ ಸರಕಾರ --ಕಮುಕರ ಪ್ರಶಸ್ತಿ(೨೦೦೩)
ಮಹಾರಾಷ್ಟ್ರ ಸರಕಾರ --ಶಿವಾಜಿ ಪ್ರಶಸ್ತಿ (೨೦೦೩)
 
ಉಳಿದ ಗೌರವಗಳು-ಫಿಲಂಫೇರ್ ಲೈಫ್ ಟೈಮ್ ಅವಾರ್ಡ್ ೨೦೦೬,ಸಂಗೀತ ಕಲಾ ಭಾರತಿ ಲೈಫ್ ಟೈಮ್ ಅವಾರ್ಡ್ ೧೯೭೯,ಅಂತರರಾಷ್ಟ್ರೀಯ ಚಿತ್ರೋತ್ಸವ(JAAFA) ಲೈಫ್ ಟೈಮ್ ಅವಾರ್ಡ್ ೧೯೯೩,ಎ.ವಿ.ಎಂ. ಅವಾರ್ಡ್ ೧೯೯೭, ಭಾರತ್ ಕಲಾಚಾರ್ ೨೦೦೧.ಇನೂರ ಐವತ್ತಕ್ಕೂ ಮಿಕ್ಕಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.ಇಷ್ಟೆಲ್ಲಾ ಪ್ರಶಸ್ತಿ ಗಳಿಸಿದ,ಕನ್ನಡದಲ್ಲಿ ಅತಿ ಮಧುರವಾದ ಹಾಡುಗಳಿಂದ ಜನ ಮಾನಸದಲ್ಲಿ ನೆಲೆ ನಿಂತಿರುವ ಪಿ.ಸುಶೀಲಾರಿಗೆ ಕರ್ನಾಟಕ ಸರಕಾರದ ಪ್ರಶಸ್ತಿಗಳೇ ಸಲ್ಲದೆ ಇರುವುದು ದುರಾದೃಷ್ಟಕರ,ಇನ್ನಾದರೂ ಸಂಬಂದ ಪಟ್ಟವರು ಎಚ್ಹೆತ್ತುಕೊಳ್ಳುವುದು ಒಳ್ಳೆಯದು ಅನಿಸುತ್ತದೆ. ೨೦೧೦ ನವೆಂಬರ್ ೧೩ ರಂದು ತಮ್ಮ ೭೫ನೇ ಜನ್ಮ ದಿನ ಆಚರಿಸಿದ ಪಿ.ಸುಶೀಲರ ನೂರಾರು ವರುಷ ಬಾಳಲಿ ಎಂದು ಹಾರೈಸೋಣ.ನಮನ
 
"https://kn.wikipedia.org/wiki/ಪಿ._ಸುಶೀಲ" ಇಂದ ಪಡೆಯಲ್ಪಟ್ಟಿದೆ