M67: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Messier object 067.jpg|250px|thumb|ಎಂ 67{| class="wikitable"}
 
|-
! Header text
|-
| [[File:Messier object 067.jpg|250px]]
|-
| ಉದಾಹರಣೆ
|-
| ಉದಾಹರಣೆ
|-
| ಉದಾಹರಣೆ
|}
]]
{| class="wikitable"
|-
Line ೨೪ ⟶ ೧೩:
| ಉದಾಹರಣೆ
|}
 
ಕಟಕ ರಾಶಿಯಲ್ಲಿರುವ ಎಂ 67 ಎಂಬ ಹೆಸರಿನ ನಕ್ಷತ್ರಗುಚ್ಛ ದುರ್ಬೀನುಗಳಿಗೆ ನಿಲುಕವಂತಹುದು. ಕಟಕರಾಶಿ ತುಂಬಾ ಕ್ಷೀಣವಾದದ್ದು. ಅದನ್ನು ಪಕ್ಕದ ಮಿಥುನ ಮತ್ತು ಸಿಂಹ ರಾಶಿಯ ಸಹಾಯದಿಂದ ಪತ್ತೆ ಮಾಡಬಹುದು. ಇದರಲ್ಲಿರುವ ಬರಿಗಣ್ಣಿಗೇ ಕಾಣುವ ಗುಚ್ಛ ಎಂ 44 - ಪ್ರೆಸಿಪಿ. ಇದನ್ನು ಗುರುತಿಸಿದ ಮೇಲೆ ಪುಟ್ಟ ತ್ರಿಕೋಣಾಕಾರವನ್ನು ಗುರುತಿಸಿ, ಅದರ ದಕ್ಷಿಣದ ನಕ್ಷತ್ರದ ಆಸುಪಾಸಿನಲ್ಲಿ ಕಣ್ಣಾಡಿಸಿದರೆ ಎಂ 67 ಕಾಣುತ್ತದೆ. ಮುಕ್ತ ಗುಚ್ಛ ಎಂದು ಇದನ್ನು ವರ್ಗೀಕರಿಸಲಾಗಿದೆ. ನಕ್ಷತ್ರಗಳು ಗೋಳವಾಗಿ ಸೇರಿಕೊಂಡಿಲ್ಲ; ವಿರಳವಾಗಿ ಹರಡಿಕೊಂಡಿವೆ. ಛಾಯಾಚಿತ್ರಗಳಿಂದ ಅವುಗಳ ಬಣ್ಣಗಳ ವೈವಿಧ್ಯವನ್ನೂ ಕಾಣಬಹುದು. ನಕ್ಷತ್ರದ ಅಧ್ಯಯನಕ್ಕೆ ಇದೊಂದು ಪ್ರಯೋಗಶಾಲೆ ಎಂದೇ ಪರಿಗಣಿಸಬಹುದು.
ಇದು ಅತ್ಯಂತ ಹಳೆಯ ಗುಚ್ಛ - ಸುಮಾರು 4 ಶತಕೋಟಿ ವರ್ಷಗಳಷ್ಟು ಹಿಂದೆ ಸೃಷ್ಟಿಯಾಯಿತು ಎಂಬುದೊಂದು ಅಂದಾಜು. ಇಷ್ಟು (ಹಿರಿಯ) ಹಳೆಯ ಗುಚ್ಛಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಗುಚ್ಛದ ದೊಡ್ಡ ನಕ್ಷತ್ರಗಳು ಅಂದರೆ ಹೆಚ್ಚಿನ ದ್ರವ್ಯರಾಶಿಯವು ಇಷ್ಟೊಂದು ವರ್ಷಗಳು ಅಸ್ತಿತ್ವದಲ್ಲಿ ಇರಲಾರವು. ಆದ್ದರಿಂದ ಗುಚ್ಛ ತನ್ನ ಸ್ವರೂಪವನ್ನೇ ಕಳೆದುಕೊಂಡುಬಿಡುತ್ತದೆ. ಹಾಗಾದರೆ ಎಂ 67 ಹೇಗೆ ಉಳಿದುಕೊಂಡಿದೆ ಎಂಬುದೇ ಮುಖ್ಯವಾದ ಪ್ರಶ್ನೆ. ಇದಕ್ಕಿಂತ ಹೆಚ್ಚಿನ ವಯಸ್ಸಿನ ಇನ್ನೆರಡು ಗುಚ್ಚಗಳು ಮಾತ್ರ - ಎನ್ ಜಿ ಸಿ 188 (ಸುಮಾರು 5 ಶತಕೋಟಿ ವರ್ಷಗಳು) ಮತ್ತು ಎನ್ ಜಿ ಸಿ 6791 (ಸುಮಾರು 7 ಶತಕೋಟಿ ವರ್ಷಗಳು) ಎಂಬ ಸಂಖ್ಯೆಯವು - ಕಂಡುಬಂದಿವೆ.
"https://kn.wikipedia.org/wiki/M67" ಇಂದ ಪಡೆಯಲ್ಪಟ್ಟಿದೆ