ಸ್ವಾಮಿ ದಯಾನಂದ ಪ್ರಭು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
Undo revision 183114 by 117.254.165.105 (talk)
೧ ನೇ ಸಾಲು:
==ಪರಿಚಯ==
ಸ್ವಾಮಿ ಡಾ.ದಯಾನಂದ ಪ್ರಭು ಅವರು ೧೯೪೮, ನವೆಂಬರ್ ೨೩ರಲ್ಲಿ [[ಮೈಸೂರು|ಮೈಸೂರಿ]]ನಲ್ಲಿ ಜನಿಸಿದರು. ಇವರ ತಂದೆ ಮಾರ್ಟಿನ್ ಮತ್ತು ತಾಯಿ ರೋಸ್ ಮೇರಿ. ಮೈಸೂರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು [[ಹಾಸನ]]ದ ಸಂತ ಜೋಸೆಫರ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಂದುವರಿಸಿ ೧೯೬೭ರಲ್ಲಿ ಮೈಸೂರಿನ ಸಂತ ಮೇರಿ ಕಿರಿಯ ಗುರುಮಠಕ್ಕೆ ಸೇರುವ ಮೂಲಕ ಸನ್ಯಾಸ ದೀಕ್ಷೆ ಪಡೆದರು. ಅಲ್ಲಿ ಪಿಯುಸಿಯೊಂದಿಗೆ [[ಲತೀನ್]] ಭಾಷೆಯ ಅಭ್ಯಾಸ ಮಾಡಿದರು. ಗುರುಮಠದಲ್ಲಿದ್ದಾಗಲೇ ಬರೆಯುವ ಹವ್ಯಾಸ ಮೈಗೂಡಿತು. [[ದೂತ]], [[ನವಜ್ಯೋತಿ]], [[ಕರ್ನಾಟಕ ತಾರೆ]]ಗಳಿಗೆ ಇವರ ಲೇಖನಗಳು ಸಾಲುಸಾಲಾಗಿ ಹರಿದು ಬಂದವು.
 
ಮುಂದೆ ಬೆಂಗಳೂರಿನ [[ಸಂತ ರಾಯಪ್ಪರ ಗುರುಮಠ]] ಸೇರಿದರು. ಅಲ್ಲಿ ಆರು ವರ್ಷಗಳ ಕಾಲ ಅಭ್ಯಾಸ. ಈ ಅವಧಿಯಲ್ಲಿ ಇವರಿಂದ ಇಂಗ್ಲಿಷಿನ 'ಎಕ್ಸೈಲ್ಡ್' ಎಂಬ ಕಾದಂಬರಿಯ ಕನ್ನಡ ರೂಪಾಂತರ. [[ಕರ್ನಾಟಕ ತಾರೆ]]ಯಲ್ಲಿ ಅದು 'ಕ್ರೈಸ್ತ ಗುರು ಕೊಲೆಗಾರರೆ?' ಎಂಬ ಹೆಸರಿನಲ್ಲಿ ಪ್ರಕಟ. ೧೯೭೭ರಲ್ಲಿ ಅದು 'ಗಡಿಪಾರು' ಎಂಬ ಹೆಸರಿನಲ್ಲಿ ಪುಸ್ತಕವೂ ಆಯಿತು. ಕನ್ನಡದಲ್ಲಿ 'ಎಂಎ', ಇತಿಹಾಸದಲ್ಲಿ 'ಎಂಎ' ಹಾಗೂ [[ಕ್ರೈಸ್ತಧರ್ಮ]] ಎಂಬ ವಿಷಯದ ಮೇಲೂ 'ಎಂಎ' ಪದವಿಗಳನ್ನು ಇವರು ಪಡೆದಿದ್ದಾರಲ್ಲದೇ ಡಾಕ್ಟರೇಟನ್ನೂ ಗಳಿಸಿದ್ದಾರೆ.
 
==ದೂತನ ಸಂಪಾದಕರಾಗಿ...==
೧೯೭೭ರಲ್ಲಿ ಪೂಜ್ಯ ಬಿಷಪ್ ಮಥಿಯಾಸ್ ಫೆರ್ನಾಂಡಿಸ್ ರವರ ಅಮೃತ ಹಸ್ತದಿಂದ ಗುರುಪಟ್ಟಾಭಿಷೇಕ ಹೊಂದಿದರು. ಅಂದೇ ಮೈಸೂರಿನ [[ಸಂತ ಫಿಲೋಮಿನಾ ಚರ್ಚ್]] ನ ಸಹಾಯಕ ಗುರುವಾಗಿ ನೇಮಕಗೊಂಡರು. ೧೯೮೦ರಿಂದ ಸಂತ ಫಿಲೋಮಿನಾ ಬೋರ್ಡಿಂಗ್ ವಾರ್ಡನ್ ಆಗಿ ನೇಮಕ. ಇದೇ ಅವಧಿಯಲ್ಲಿ [[ದೂತ]] ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ದೂತನನ್ನು ತಮ್ಮ ಮಗುವಿನಂತೆ ಪೋಷಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಎದ್ದು ನಿಲ್ಲುವಂತೆ ಮಾಡಿದ ಶ್ರೇಯಸ್ಸು ಸ್ವಾಮಿ ದಯಾನಂದ ಪ್ರಭು ಅವರಿಗೆ ಸಲ್ಲುತ್ತದೆ. ಡಾ.ಎಚ್ಚೆಸ್ಕೆ, ಡಾ.[[ಸಿ.ಪಿ.ಕೆ]] ಮತ್ತು ಹಂಪನಾರಿಂದ 'ದೂತ'ನಿಗಾಗಿ ಲೇಖನಗಳನ್ನು ಬರೆಸಿದರು. ಇವರ ಅವಧಿಯಲ್ಲಿ 'ದೂತ' ವಜ್ರಮಹೋತ್ಸವವನ್ನು ಆಚರಿಸಿತು. ಅದರ ನೆನಪಿಗೆ ವಿಶೇಷ ಸ್ಮರಣ ಸಂಚಿಕೆಯನ್ನೂ ಇವರು ಹೊರತಂದರು.
 
==ವಿವಿಧ ಧರ್ಮಕೇಂದ್ರಗಳಲ್ಲಿ...==
೧೯೮೯ರಲ್ಲಿ [[ಕೊಡಗು|ಕೊಡಗಿ]]ನ [[ಸೋಮವಾರಪೇಟೆ]]ಯ [[ಜಯವೀರ ಮಾತೆಯ ದೇವಾಲಯ]]ದ ಗುರುವಾಗಿಯೂ, ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕರಾಗಿಯೂ ಅಧಿಕಾರ ಸ್ವೀಕಾರ. ಅಲ್ಲಿದ್ದ ಸಮಯದಲ್ಲಿ, [[ಬಾಲಯೇಸು]]ವಿಗಾಗಿ ಪುಟ್ಟ ಗುಡಿಯನ್ನೂ, ಮರಿಯಮ್ಮನವರಿಗಾಗಿ ಗ್ರೊಟ್ಟೊವನ್ನೂ ಕಟ್ಟಿಸಿದ ಹೆಗ್ಗಳಿಕೆ ಇವರದು. ಅಲ್ಲದೇ ದೇವಾಲಯವನ್ನು ಸರ್ವಾಂಗೀಣವಾಗಿ ಸುಂದರಗೊಳಿಸಿದ, ಶಾಲೆಯ ಕಚೇರಿ, ಗ್ರಂಥಾಲಯ, ಪ್ರಯೋಗಾಲಯಗಳಿಗೆ ಹೊಸ ಕಟ್ಟಡವನ್ನು ನಿರ್ಮಿಸಿ ಕೊಟ್ಟ ಕೀರ್ತಿಯೂ ಇವರಿಗೇ ಸಲ್ಲುತ್ತದೆ.
 
೧೯೯೬ರಲ್ಲಿ ಮೈಸೂರಿನ [[ದೀನರ ಮಾತೆಯ ದೇವಾಲಯ]]ಕ್ಕೆ ವರ್ಗ. ಅಲ್ಲಿ ಧರ್ಮಕೇಂದ್ರದ ಬಡ ಮಕ್ಕಳಿಗಾಗಿ ಬಡ ಮಕ್ಕಳ ಶೈಕ್ಷಣಿಕ ನಿಧಿಯ ಹಾಗೂ ಬಡ ರೋಗಿಗಳಿಗಾಗಿ ದೀನರ ಮಾತೆಯ ಆರೊಗ್ಯ ನಿಧಿಯನ್ನು ಸ್ಥಾಪಿಸಿದರು.
 
೨೦೦೫ರಿಂದ [[ತಿರುಮಕೂಡಲು ನರಸಿಪುರ]]ದ [[ಯೇಸುಬಾಲರ ದೇವಾಲಯ]]ದ ಧರ್ಮಗುರುವಾಗಿ ವರ್ಗ. ಅಲ್ಲಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಸ್ಥಾಪನೆ. ಪ್ರಭು [[ಯೇಸುಕ್ರಿಸ್ತ]]ರ ಕುರಿತಾದ ಸಮಗ್ರ ಗ್ರಂಥವಾದ 'ಭುವನಜ್ಯೋತಿ'ಯ ಪ್ರಕಟಣೆ ೨೦೦೬ರಲ್ಲಿ. ಹೀಗೆ ಹೋದ ಕಡೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಏನಾದರೊಂದು ಮಾಡುವುದು ಗುರುವರ್ಯರ ಕಾಯಕ.
 
==ಗುರುವರ್ಯರ ಕೃತಿಗಳು==
#ಗಡಿಪಾರು, ೧೯೭೭
#ಯೇಸು ಮತ್ತು ನಾನು, ೧೯೭೮
#ಕ್ರಿಸ್ತನೆಡೆಗೆ, ೧೯೭೭
#ಗೊಲ್ಗೊಥ ೧೯೮೭
#ಹದಿಹರೆಯದ ರೂಪರೇಷೆಗಳು, ೧೯೮೯
#ಮೈಸೂರು ಸಂಸ್ಥಾನದ ಕ್ರೈಸ್ತರ ಇತಿಹಾಸ, ೧೯೯೪
#ಮಾರಕ ರೋಗ ಏಡ್ಸ್
#ಧ್ಯಾನ ಸಂಗಮ, ೧೯೯೬
#ಯೇಸುಕ್ರಿಸ್ತರ ಕೊನೆಯ ೨೪ ಗಂಟೆಗಳು, ೧೯೯೭
#ಸಂಸ್ಕಾರ ವಿಧಿಗಳು ಮತ್ತು ವಿವಿಧ ಸಂದರ್ಭಗಳ ಅಶೀರ್ವಚನಗಳು
 
{{ಕರ್ನಾಟಕದ ಕ್ರೈಸ್ತ ಗುರುಗಳು}}
[[ವರ್ಗ:ಕ್ರೈಸ್ತ ಗುರುಗಳು]]