ದೇವರಾಯನ ದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
 
 
ದೇವರಾಯನ ದುರ್ಗದ ಕಾಡಿನಲ್ಲಿ [[ಚಿರತೆ]] ಇದೆ, [[ಕಾಡು ಹಂದಿ]], [[ಮುಳ್ಳು ಹಂದಿ]], [[ಜಿಂಕೆ]] ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ [[ಹುಲಿ ]]ಕೂಡ ಪತ್ತೆಯಾಗಿದೆ.
 
ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೋಲಿಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.
 
ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ [[ನಾಮದ ಚಿಲುಮೆ]]ಗೆ ಕೇವಲ ೩ ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರಕ್ಕೆ ತುಮಕೂರಿನ ಬಳಿ ಇರುವ ಟಿ.ವಿ.ಎಸ್. ಕಂಪನಿಯವರ ಪ್ರೊತ್ಸಾಹ ನಿರಂತರವಾಗಿ ದೊರಕಿದೆ.
 
{{ಚುಟುಕು}}
"https://kn.wikipedia.org/wiki/ದೇವರಾಯನ_ದುರ್ಗ" ಇಂದ ಪಡೆಯಲ್ಪಟ್ಟಿದೆ