ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:B_R_Pantulu.jpg|thumb|ಬಿ ಆರ್ ಪಂತುಲು|150px]]
 
'''ಬಿ.ಆರ್.ಬಡಗೂರು ರಾಮಕೃಷ್ಣ ಪಂತುಲು'''([[೧೯೧೧]] [[ಜುಲೈ ೨೮]] - [[೧೯೭೪]] [[ಅಕ್ಟೋಬರ್ ೮]]) - [[ಕನ್ನಡ ಚಿತ್ರರಂಗ]]ದ ಸುವರ್ಣಯುಗದ ಹರಿಕಾರ,ಬೆಳ್ಳಿತೆರೆಯ ಗಾರುಡಿಗರೆಂದೇ ಪ್ರಸಿದ್ಧಿ.
 
==ಜೀವನ==
ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು [[೧೯೧೧]] [[ಜುಲೈ ೨೮]]ರಂದು [[ಕರ್ನಾಟಕ]]-[[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ.ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು,ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು.ಬಾಲ್ಯದಿಂದಲೀ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು.ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು,ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು.ಪಂತುಲು ಅವರ ತಂದೆ ಸಂಗೀತ,ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು.ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು.ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು.ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು.ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿಯೇ ನಡೆದರೂ ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶ ಇರದ ಕಾರಣ ತಾತನ ಮನೆಯಾದ ಕೊಲಾರದಲ್ಲಿದ್ದು ಎಸ್.ಎಸ್.ಎಲ್,.ಸಿ.ವರೆಗಿನ ಶಿಕ್ಷಣ ಪಡೆದರು.ಶಾಲಾ ಜೀವನದಲ್ಲಿಯೂ ಅವರು ನಾಟಕದ ಅಭಿನಯದಲ್ಲಿ ಪ್ರಸಿದ್ದಿ ಪಡೆದಿದ್ದರು.ಪಂತುಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು.ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೆ ಹೆಚ್ಹು.ಒಂದುದಿನ ಮಕ್ಕಳಿಗೆ ನಾಟಕ ಕಲಿಸುತ್ತುರುವಾಗ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಬಂದು ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತುಲು ಅವರನ್ನು ಕಂಡು ಕೆಂಡಾಮಂಡಲವಾದರು.ಇದು ಸರಿಯಲ್ಲವೆಂದೂ ಇನ್ನೊಮ್ಮೆ ಹೀಗಾದರೆ ವಜಾಮಾಡುವೆನೆಂದು ನೋಟೀಸ್ ಜಾರಿ ಮಾಡಿದರು.ಇದರಿಂದ ನೊಂದ ಪಂತುಲು ಶಿಕ್ಷಕ ವ್ರತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲಿಯೇ ಬದುಕುಕನ್ನು ಅರಸುತ್ತ ಬೆಂಗಳೂರಿಗೆ ಬಂದು ಅವರ ಹಿರಿಯರಾದ ಪಾಪಯ್ಯನವರಿದ್ದ ಮಹಮ್ಮದ್ ಪೀರ್ ಅವರ "ಚಂದ್ರ ಕಲಾ"ನಾಟಕ ಮಂಡಳಿಗೆ ಸೇರಿದರು.ಮುಂದೆ ಇವರಿಗೆ [[ಹೆಚ್ ಎಲ್ ಎನ್ ಸಿಂಹ]] ಮತ್ತು [[ಮಹಮದ್ ಪೀರ್]] ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.ಪಂತುಲು ಅವರ ಮಗ ರವಿಶಂಕರ್ ಕೆಲ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು,ಮಗಳು ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದ್ದರು.
ಬಿ. ರಾಮಕೃಷ್ಣ ಪಂತುಲು ಅವರು ಜನಿಸಿದ್ದು [[೧೯೧೧]] [[ಜುಲೈ ೨೮]]ರಂದು [[ಕರ್ನಾಟಕ]]-[[ಆಂಧ್ರಪ್ರದೇಶ|ಆಂಧ್ರಪ್ರದೇಶದ]] ಗಡಿಯಲ್ಲಿನ ಗುಡುಗೂರಿನಲ್ಲಿ. ಉಪಾಧ್ಯಾಯ ವೃತ್ತಿಯಲ್ಲಿದ್ದ ಇವರಿಗೆ [[ಹೆಚ್ ಎಲ್ ಎನ್ ಸಿಂಹ]] ಮತ್ತು [[ಮಹಮದ್ ಪೀರ್]] ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.
 
==ಚಿತ್ರರಂಗ==
೨೩ ನೇ ಸಾಲು:
[[ಪುಟ್ಟಣ್ಣ ಕಣಗಾಲ್|ಪುಟ್ಟಣ್ಣ ಕಣಗಾಲರ]] ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ.ಆರ್. ಪಂತುಲು.
ಅವರು ಅಭಿನಯ-ನಿರ್ದೇಶನ-ನಿರ್ಮಾಣ ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದ ಕಲಾವಿದ. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು ಕನ್ನಡ ಚಿತ್ರರಂಗದತ್ತ ಭಾರತದ ಇಡೀ ಚಿತ್ರರಂಗ ತಿರುಗಿ ನೋಡು ವಂಥ ಇತಿಹಾಸವನ್ನೇ ನಿರ್ಮಿಸಿತು. ಸುಮಾರು 20 ಚಿತ್ರಗಳಲ್ಲಿನ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಾಯಕನಟ ನಾಗಿ ಅಭಿನಯಿಸಿರುವುದೊಂದು ವಿಶೇಷ.
ಜೊತೆಗೆ ಸ್ವತಃ ಬಿ.ಆರ್.ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣ ವಾಗುತ್ತಿದ್ದುದು ಆ ಚಿತ್ರಗಳ ಇನ್ನೊಂದು ಸುವಿಶೇಷ. 1955ರಲ್ಲಿ ಪದ್ಮಿನಿ ಪಿಕ್ಚರ್ಸ್‌ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರೂ ಅವರು ನಿರ್ಮಿಸಿದ ಚಿತ್ರಗಳನ್ನು "ಪಂತುಲು ಚಿತ್ರಗಳು"ಎಂದು ಕರೆಯುವುದೇ ವಾಡಿಕೆ.ಪಂತುಲುರವರನ್ನು ಬಹಳ ಮುಖ್ಯ ವಾಗಿ ನೆನೆಯಬೇಕಾದುದು ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದ ಧ್ಯಾನದ ಆರಂಭದಿಂದಲೇ ಎಂದು ನನಗನಿಸುತ್ತದೆ."ಸ್ವಾಮಿ ದೇವನೆ"ಎಂಬ ಒಂದು ಹಾಡು ಸಾಕು ಪಂತುಲುರವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು.ಪಂತುಲು ಅವರು ಅದ್ಯಾಪಕರಾಗಿದ್ದಾಗ ಬಳಸುತ್ತಿದ್ದ "ಸೋಸಲೆ ಅಯ್ಯಾಶಾಸ್ತ್ರಿ"ಗಳ ಆ ಪ್ರಾರ್ಥನಾ ಗೀತೆ ಹೀಗಿದೆ-
ಸ್ವಾಮಿ ದೇವನೆ ಲೋಕ ಪಾಲನೆ
ತೇ ನಮೋಸ್ತುತೇ
೩೬ ನೇ ಸಾಲು:
ಲಾಲಿಸೈ ಪರಿಪಾಲಿಸೈ... ॥
ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆ ಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದೆ ಬಹು ಮುಖ್ಯವಾದ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥ ನೆಯೇ ಆಗಿ ಹೋಗಿತ್ತು.
ಸ್ಕೂಲ್‌ಮಾಸ್ಟರ್’ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ವಿ.ಆರ್. ಪಂತುಲುರವರ ಮನೋಜ್ಞ ಅಭಿನಯ-ಹಾವಭಾವ, ಮೇಷ್ಟ್ರರ ಹೆಂಡತಿಯಾಗಿ (ನಿಜ ಜೀವನದಲ್ಲಿಯೂ ಹೆಂಡತಿಯಾಗಿದ್ದವರು) ಕಲಾವಿದೆ ಎಂ.ವಿ. ರಾಜಮ್ಮನವರು ಪಂತುಲುವಿಗೆ ತಕ್ಕಂತೆ ಅಭಿನಯಿಸಿದ್ದರು.ಮುಂದಿನ ೨೦೧೧ ಜುಲೈಗೆ ೨೮ಕ್ಕೆ ಕನ್ನಡ ಚಿತ್ರರಂಗ ಕಂಡ ಮರೆಯಬಾರದ ಮಹಾನ್ ನಿರ್ಮಾಪಕ- ನಿರ್ದೇಶಕರು ಹುಟ್ಟಿ ೧೦೦ ವರ್ಷಗಳು ತುಂಬುತ್ತವೆ. ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲೇಬೇಕಾದ ಕನ್ನಡ ಚಿತ್ರರಂಗ ಭೂಮಿಯ ಮುಖ್ಯ ಪರ್ವವಿದು..ಆದ್ದರಿಂದ ಈ ವರ್ಷ ಬಿ.ಆರ್. ಪಂತುಲುರವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮವಾಗಿ ಕನ್ನಡದ ಕಂದಮ್ಮಗಳು ಅವರ ಸಿನಿಮಾಗಳನ್ನು ವೀಕ್ಷಿಸಿ ಬೆಳೆಯುವಂತಹ ಸದವಕಾಶವನ್ನು ನಮ್ಮ ಫಿಲಂಚೇಂಬರ್ ಹಾಗೂ ಟಿವಿ ಚಾನೆಲ್‌ಗಳು ಕಲ್ಪಿಸಬೇಕಾಗಿದೆ. ಏಕೆಂದರೆ ಇದು ಕನ್ನಡ ಚಿತ್ರರಂಗದ ಪರಂಪರೆಗೆ ದೊರಕುವ ಜಯ ಹಾಗೂ ಪ್ರಗತಿಯ ದಾರಿ.ನಮನ
 
 
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ