ದಿ ಪ್ಯಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
'''ಚಿತ್ರದ ಸಾರಾಂಶ'''
ಆ ಮನೆಯಲ್ಲಿ ದುಃಖ ಆವರಿಸಿದೆ. ಮಡದಿ ತೀರಿಕೊಂಡಿದ್ದಾಳೆ. ಈ ನೆನಪು ಮಾಸುವ ಮುನ್ನವೇ ಅಪ್ಪ ಮತ್ತೊಬ್ಬಳನ್ನು ವರಿಸಿದ್ದು ಮಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ಮಗಳು ನಡುರಾತ್ರಿಯಲ್ಲಿ ಮನೆಯಿಂದ ಹೊರನಡೆದಿದ್ದಾಳೆ. ಅಪಾಯಗಳನ್ನು ಲೆಕ್ಕಿಸದೆ ಗುಡ್ಡಬೆಟ್ಟಗಳನ್ನೇರಿ ಅರಿಯದ ದಾರಿಯಲ್ಲಿ ಆಕೆಯ ಪ್ರಯಾಣ ಮುಂದುವರೆದಿದೆ. ಹೆಣ್ಣುಮಗಳೊಬ್ಬಳು ಒಬ್ಬಂಟಿಯಾಗಿ ದುರ್ಗಮ ಪರಿಸರದಲ್ಲಿ ಬದುಕುಳಿಯುವುದೇ ಕಷ್ಟಸಾಧ್ಯ. ಆದರೆ ಮುಂದೊಂದು ದಿನ ಗೆಳೆಯನನ್ನು ಹುಡುಕಿ ಸಂಸಾರ ಹೂಡುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ನೆಲೆ ಕಂಡುಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಿಗೆ ದುರಂತ ಮತ್ತೆ ಎದುರಾಗಿದೆ. ಪತಿ ಅಪಘಾತದಲ್ಲಿ ತೀರಿಕೊಂಡ ಸುದ್ದಿ ತಿಳಿಯುತ್ತದೆ. ರಾತ್ರಿ ಹಗಲು ದುಡಿಮೆ ಮಾಡಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೆಗಲೇರುತ್ತದೆ.
 
ಯಜಮಾನನಿಲ್ಲದ ಮನೆಗೆ ಮತ್ತೊಬ್ಬನನ್ನು ಹುಡುಕಿ ತರುತ್ತಾಳೆ. ಸಮಸ್ಯೆ ಪರಿಹಾರವಾಗುವುದಿಲ್ಲ. ಏಕೆಂದರೆ ಆತ ಸೋಮಾರಿ. ಮಹಾ ಸೋಮಾರಿ. ತಿಂದು ಮಲಗುವುದಷ್ಟೇ ಆತನ ಕೆಲಸ. ಐದು ತಿಂಗಳ ಅವಧಿಯಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಕಾಡಿನಲ್ಲಿ ಅಲೆಯುತ್ತಿದ್ದ ಸೋಮಾರಿ ಗಂಡ ಹುಲಿ ಬಾಯಿಗೆ ತುತ್ತಾಗುತ್ತಾನೆ.
-ಹೀಗೆ, ಶೇಕ್ಸ್‌ಪಿಯರ್‌ನ ನಾಟಕದಂತೆ ಮಹಾದುರಂತಗಳ ಸರಣಿ, ನಾಟಕೀಯ ತಿರುವುಗಳನ್ನು ಕಂಡ ಕಥಾನಾಯಕಿ ಅಂತಿಮವಾಗಿ ಸಾಮ್ರಾಜ್ಯದ ಮಹಾರಾಣಿಯಾಗಿ, ವೀರ ವನಿತೆಯಾಗಿ ಹೊರಹೊಮ್ಮುತ್ತಾಳೆ.
 
‘ದಿ ಪ್ಯಾಕ್’ ಚಿತ್ರದ ಕಥಾಹಂದರವಿದು.
"https://kn.wikipedia.org/wiki/ದಿ_ಪ್ಯಾಕ್" ಇಂದ ಪಡೆಯಲ್ಪಟ್ಟಿದೆ