"ಬಿ.ಎಸ್.ರಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

'ಯಶಸ್ವಿ ಛಾಯಾಗ್ರಾಹಕ ವೃತ್ತಿ'ಯ ನಂತರ '''ವಿಕ್ರಂ ಪ್ರೊಡಕ್ಷನ್ ಸಂಸ್ಥೆ''' ಸ್ಥಾಪಿಸಿದರು. [[೧೯೫೦]]ರಲ್ಲಿ ಅದರ ವಿಸ್ತರಣವಾಗಿ '[[`ವಿಕ್ರಂ ಸ್ಟುಡಿಯೊಸ್ ಅಂಡ್ ಲ್ಯಾಬ್ ಸಂಸ್ಥೆ]]' ಸ್ಥಾಪನೆಯಾಯಿತು. [[೧೯೫೫]]ರಲ್ಲಿ [[ಚೆನ್ನೈ|ಮದ್ರಾಸಿನಲ್ಲಿ]] 'ಸುಸಜ್ಜಿತ ಸ್ಟುಡಿಯೊ' ಸ್ಥಾಪಿಸಿದರು. '[[ಬೆಂಗಳೂರಿನ ಹಿರಿಯ ನಿವೃತ್ತ ಪೋಲೀಸ್ ಆಫೀಸರ್]]', '[[ಶ್ರೀ. ಬಿ. ಎಸ್. ಗರುಡಾಚಾರ್]]', 'ಬಿ.ಎಸ್. ರಂಗಾ'ರವರ ಕಿರಿಯ ಸೋದರರು.
==ರಂಗಾರವರ ಪ್ರಥಮ ಚಲನ ಚಿತ್ರ==
'ರಂಗಾ' ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ [[ಭಕ್ತ ಮಾರ್ಕಂಡೇಯ]]. ನಂತರ [[ಮಹಿಷಾಸುರಮರ್ಧಿನಿ|ಮಹಿಷಾಸುರ ಮರ್ಧಿನಿ]] ಹಾಗು [[ಅಮರಶಿಲ್ಪಿ ಜಕಣಾಚಾರಿ]] ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. [[ಅಮರಶಿಲ್ಪಿ ಜಕಣಾಚಾರಿ]] ಚಿತ್ರವು 'ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣ'ಗೊಂಡಿತು. 'ಗೀತೆಗಳು ಅತ್ಯಂತ ಯಶಸ್ವಿ'ಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ 'ದಾಖಲೆ'ಯನ್ನು ನಿರ್ಮಿಸಿತು. ಅವರು ನಿರ್ದೇಶಿಸಿದ, '[[ಚಂದ್ರಹಾಸ]]', '[[ಬಾಲನಾಗಮ್ಮ]]' ಚಿತ್ರಗಳು ಜನಪ್ರಿಯವಾದವು.
 
=='ಹಾಸ್ಯರತ್ನ ತೆನ್ನಾಲಿ ರಾಮಕೃಷ್ಣ' ಎಂಬ ತೆಲುಗು ಚಿತ್ರ ತಯಾರಿಸಿ ಪ್ರಸಿದ್ಧರಾದರು==
ನಂತರ [[ಮಹಾಸತಿ ಅನುಸೂಯ]], [[ಪಾರ್ವತಿ ಕಲ್ಯಾಣ]], [[ಮಿಸ್ಟರ್ ರಾಜ್‍ಕುಮಾರ್]] ಮುಂತಾದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. [[ಸುಳಿ]] ಚಿತ್ರದ ನಂತರ ಅಲ್ಪಕಾಲ ದೂರ ಉಳಿದಿದ್ದ 'ರಂಗಾ', ನಂತರ [[೧೯೮೨]]ರಲ್ಲಿ [[ಹಾಸ್ಯರತ್ನ ರಾಮಕೃಷ್ಣ]] ಎಂಬ ಹಾಸ್ಯಪ್ರಧಾನ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರದಲ್ಲಿ ಹಲವಾರು ನಟರ ಜೊತೆಗೆ, ಆಗಿನ ಕಾಲದ ಅತ್ಯಂತ ಬೇಡಿಕೆಯ ಸುಪ್ರಸಿದ್ಧ ನಟರಾಗಿದ್ದ, '[[ಎನ್.ಟಿ.ರಾಮರಾವ್]]', ಹಾಗೂ '[[ಅಕ್ಕಿನೇನಿ ನಾಗೇಶ್ವರರಾವ್]]' ಸಹಿತ ನಟಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ, ಸುಮಾರು ೪೫ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ-ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/180961" ಇಂದ ಪಡೆಯಲ್ಪಟ್ಟಿದೆ