"ಬಿ.ಎಸ್.ರಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
[[Image:B_S_Rangaa.jpg|thumb|ಬಿ.ಎಸ್.ರಂಗಾ|150px]]
'[[ಬಿಂದಿಂಗನ್ ವಿಲೆ ಶ್ರೀನಿವಾಸ ಅಯ್ಯಂಗಾರ್]]', '''ಬಿ.ಎಸ್.ರಂಗಾ''' - [[ಕನ್ನಡ ಚಿತ್ರರಂಗ]] ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು. ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು. 'ಚಲನಚಿತ್ರವೆಂಬ ಕಲ್ಪನೆ' ಇನ್ನೂ ರೂಪುಗೊಳ್ಳುತ್ತಿದ್ದ ಕಾಲದಲ್ಲಿ 'ಪೌರಾಣಿಕ ಚಿತ್ರಗಳನ್ನುಚಿತ್ರ'ಗಳನ್ನು ನಿರ್ಮಿಸಿ, 'ಸ್ಟುಡಿಯೊ ಸ್ಥಾಪಿಸಿ', 'ಚಿತ್ರೋದ್ಯಮದ ಆತ್ಮವಿಶ್ವಾಸ ಹೆಚ್ಚಿಸಿದರು'.
==ಜನನ ಮತ್ತು ಬಾಲ್ಯ ಜೀವನ==
'[[ಬಿ. ಎಸ್. ರಂಗಾ]]' ರವರು, ಸನ್, ೧೯೧೭ ರ, ನವೆಂಬರ್, ೧೧ ರಂದು, ಬೆಂಗಳೂರಿಗೆ ಸಮೀಪದಲ್ಲಿರುವ '[[ಮಾಗಡಿ]]'ಯಲ್ಲಿ ಜನಿಸಿದರು. ತಮ್ಮ ೧೭ ನೇ ವಯಸ್ಸಿನ ಪ್ರಾಯದಲ್ಲೇ ಫೋಟೋಗ್ರಫಿ ಯಲ್ಲಿ ಆಕರ್ಷಿತರಾದರು. ಆ ವಲಯದಲ್ಲಿ ಅತ್ಯಂತ ಮಹತ್ವದ ಕೊಡುಗೆಗಳನ್ನು ಕೊಟ್ಟಬಳಿಕ, 'ಲಂಡನ್ ನ, ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಆನರ್ ಫೆಲೋ ಆಗಿ ಆಯ್ಕೆಯಾದರು. [[೧೯೩೭]]ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್ ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು. ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು [[ಮುಂಬಯಿ|ಮುಂಬಯಿಗೆ]] ತೆರಳಿ, '[[ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ]]' ಸ್ಥಾಪಕರಾದ '[[ಕೃಷ್ಣಗೋಪಾಲ್]]' ರವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು. ಹಲವು ಚಿತ್ರಗಳಿಗೆ 'ಸಹಾಯಕ ಛಾಯಾಗ್ರಹಕ' ರಾಗಿ ದುಡಿಯುವ ಅವಕಾಶವೂ ದೊರೆಯಿತು. 'ರಂಗಾ' ಅವರು 'ಸ್ವತಂತ್ರ ಛಾಯಾಗ್ರಹಕ'ರಾಗಿ ದುಡಿದದ್ದು '''ಭಕ್ತ ನಾರದರ್''' ಎಂಬ [[ತಮಿಳು]] ಚಲನಚಿತ್ರ. ೧೯೪೭-೪೯ ರ ಅವಧಿಯಲ್ಲಿ, '[[ಮಾಗೋಪಿ]]' ಯೆಂಬ ತೆಲುಗು ಚಿತ್ರವನ್ನು ಸ್ವತಂತ್ಯವಾಗಿ ಚಿತ್ರೀಕರಿಸಿ, ನಿರ್ದೇಶಿಸಿದರು ಸಹಿತ.
==ಮದ್ರಾಸ್ ನಲ್ಲಿ, '[[ವಿಕ್ರಂ ಪ್ರೊಡಕ್ಷನ್ ಕಂಪೆನಿ]]'ಯ ಸ್ಥಾಪನೆ==
ಯಶಸ್ವಿ ಛಾಯಾಗ್ರಾಹಕ ವೃತ್ತಿಯ ನಂತರ '''ವಿಕ್ರಂ ಪ್ರೊಡಕ್ಷನ್ ಸಂಸ್ಥೆ''' ಸ್ಥಾಪಿಸಿದರು. [[೧೯೫೦]]ರಲ್ಲಿ ಅದರ ವಿಸ್ತರಣವಾಗಿ '[[`ವಿಕ್ರಂ ಸ್ಟುಡಿಯೊಸ್ ಅಂಡ್ ಲ್ಯಾಬ್ ಸಂಸ್ಥೆ]]' ಸ್ಥಾಪನೆಯಾಯಿತು. [[೧೯೫೫]]ರಲ್ಲಿ [[ಚೆನ್ನೈ|ಮದ್ರಾಸಿನಲ್ಲಿ]] ಸುಸಜ್ಜಿತ ಸ್ಟುಡಿಯೊ ಸ್ಥಾಪಿಸಿದರು.
ರಂಗಾ ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ [[ಭಕ್ತ ಮಾರ್ಕಂಡೇಯ]]. ನಂತರ [[ಮಹಿಷಾಸುರಮರ್ಧಿನಿ|ಮಹಿಷಾಸುರ ಮರ್ಧಿನಿ]] ಹಾಗು [[ಅಮರಶಿಲ್ಪಿ ಜಕಣಾಚಾರಿ]] ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. [[ಅಮರಶಿಲ್ಪಿ ಜಕಣಾಚಾರಿ]] ಚಿತ್ರವು 'ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣ'ಗೊಂಡಿತು. 'ಗೀತೆಗಳು ಅತ್ಯಂತ ಯಶಸ್ವಿ'ಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ 'ದಾಖಲೆ'ಯನ್ನು ನಿರ್ಮಿಸಿತು.
=='ಹಾಸ್ಯರತ್ನ ತೆನ್ನಾಲಿ ರಾಮಕೃಷ್ಣ' ಎಂಬ ತೆಲುಗು ಚಿತ್ರ ತಯಾರಿಸಿ ಪ್ರಸಿದ್ಧರಾದರು==
ನಂತರ [[ಮಹಾಸತಿ ಅನುಸೂಯ]], [[ಪಾರ್ವತಿ ಕಲ್ಯಾಣ]], [[ಮಿಸ್ಟರ್ ರಾಜ್‍ಕುಮಾರ್]] ಮುಂತಾದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. [[ಸುಳಿ]] ಚಿತ್ರದ ನಂತರ ಅಲ್ಪಕಾಲ ದೂರ ಉಳಿದಿದ್ದ 'ರಂಗಾ', ನಂತರ [[೧೯೮೨]]ರಲ್ಲಿ [[ಹಾಸ್ಯರತ್ನ ರಾಮಕೃಷ್ಣ]] ಎಂಬ ಹಾಸ್ಯಪ್ರಧಾನ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರದಲ್ಲಿ ಹಲವಾರು ನಟರ ಜೊತೆಗೆ, ಆಗಿನ ಕಾಲದ ಅತ್ಯಂತ ಬೇಡಿಕೆಯ ಸುಪ್ರಸಿದ್ಧ ನಟರಾಗಿದ್ದ, '[[ಎನ್. ಟಿ.ರಾಮರಾವ್]]', ಹಾಗೂ '[[ಅಕ್ಕಿನೇನಿ ನಾಗೇಶ್ವರರಾವ್]]' ಸಹಿತ ನಟಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ, ಸುಮಾರು ೪೫ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ-ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
=='[[ಪ್ಯಾರ್ ಕಿಯಾ ತೊ ಡರ್ನಾ ಕ್ಯಾ]]' ಯೆಂಬ ಹಿಂದಿ ಚಿತ್ರವೂ ಸೇರಿದೆ==
ಈ ಹಿಂದಿ ಚಲನ ಚಿತ್ರದಲ್ಲಿ, ಕಲಾಕಾರರ ಸಮ್ಮಿಲನದ ಜೊತೆ, '[[ಶಮ್ಮಿಕಪೂರ್]]' ನಾಯಕನಾಗಿ ನಟಿಸಿದ್ದಾರೆ. ಅವರ ವಿರುದ್ಧ, ನಾಯಕಿಯಾಗಿ, ಕನ್ನಡದ ಬಹುಭಾಷಾತಾರೆ, '[[ಬಿ.ಸರೋಜಾದೇವಿ]]' ಅಭಿನಯಿಸಿದ್ದಾರೆ.
==ಕಿರುತೆರೆಯಲ್ಲಿಯೂ ಕೊಡುಗೆಯನ್ನು ಕೊಟ್ಟಿರುತ್ತಾರೆ==
ರಂಗಾ ಅವರು ಕೆಲಕಾಲ 'ಕನ್ನಡ ಕಿರುತೆರೆ'ಯಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ರಂಗಾ ಅವರ ಸೇವೆಯನ್ನು ಪರಿಗಣಿಸಿದ '[[ಕರ್ನಾಟಕ ರಾಜ್ಯ ಸರ್ಕಾರ]]' ೧೯೮೮-೮೯ನೇ ಸಾಲಿನ * [[ಪುಟ್ಟಣ್ಣ ಕಣಗಾಲ್]] ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
=='ಬಿ.ಎಸ್.ರಂಗಾ' ನಿರ್ದೇಶನದ ಚಲನಚಿತ್ರಗಳು==
{|class="wikitable" border="1"
!ವರ್ಷ
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/179359" ಇಂದ ಪಡೆಯಲ್ಪಟ್ಟಿದೆ