ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
==ಸಂಗೀತದಲ್ಲಿ ಪ್ರಯೋಗಶೀಲತೆ, ಅವರ ಪ್ರಮುಖ-ಹವ್ಯಾಸಗಳಲ್ಲೊಂದು==
ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, [[ಕರ್ನಾಟಕ ಸಂಗೀತ ]]ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. [[ಭಾರತ]]ದೇಶ ಕಂಡ [[ಮಹಾನ್ ವಾಗ್ಗೇಯಕಾರ]]. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. [[ತೆಲುಗು]], [[ಕನ್ನಡ]], [[ತಮಿಳು]], [[ಮಲೆಯಾಳಂ]] ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ. ಕನ್ನಡ ಚಿತ್ರಗಳಾದ, [[ಸಂಧ್ಯಾರಾಗ]], [[ಹಂಸಗೀತೆ]], [[ಸುಬ್ಬಾಶಾಸ್ತ್ರಿ]], [[ಗಾನಯೋಗಿ ರಾಮಣ್ಣ]], [[ಶ್ರೀ ಪುರಂದರದಾಸರು]], ಅಮ್ಮ, [[ಚಿನ್ನಾರಿ ಮುತ್ತಣ್ಣ]], [[ಮುತ್ತಿನಹಾರ]] -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು ೧೯೩೮ ರಲ್ಲಿ ನಡೆದ, "[[ಸದ್ಗುರು ಆರಾಧನಾ ಮಹೋತ್ಸವ]]," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.
==ಬಾಲಮುರಳಿಕೃಷ್ಣ ರವರಬಾಲಮುರಳಿಕೃಷ್ಣರವರ, ಹವ್ಯಾಸಗಳು==
ಹಾಡುಗಾರಿಕೆಯಲ್ಲದೆ, [[ಪಿಟೀಲು]] ನುಡಿಸುವ ಖಯಾಲಿದೆ. [[ಖಂಜಿರ]], [[ಮೃದಂಗ]], [[ಕೊಳಲು]] ಬಾರಿಸುವುದು ಇಷ್ಟ. ವಿಜಯವಾಡ ದಲ್ಲಿ, Government Music College ನ, ಪ್ರಥಮ ಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. , ವಿಜಯವಾಡ , [[ಹೈದರಾಬಾದು]] ಮತ್ತು ಮದರಾಸು [[ಆಕಾಶವಾಣಿ ]]ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿಸೇವೆ ಸಲ್ಲಿಸಿದ್ದಾರೆ. ಅಭಿನಯ ಅವರಿಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು, ಆದರೆ ಅವರೊಬ್ಬ ವಾಗ್ಗೇಯಕಾರರು, ಕವಿ, ಹೊಸತನ್ನೇ ಅರಸುತ್ತಾ ಸಂಶೋಧನೆಮಾಡುವ ಆಸೆ. '[[ಸ್ವಿಟ್ ಝರ್ ಲ್ಯಾಂಡ್]]' ನಲ್ಲಿ, '[[Academy of Performing arts & Research]]', ಸಂಸ್ಥೆ ಸ್ಥಾಪಿಸಿದ್ದಾರೆ. ಕಲೆ ಸಂಸ್ಕೃತಿಯ ಅಬಿವೃದ್ಧಿಗಾಗಿ ಮದರಾಸಿನಲ್ಲಿ "MBK" ಟ್ರಸ್ಟ್ ನ, ನೃತ್ಯ ಮತ್ತು ಸಂಗೀತಶಾಲೆ "ವಿಪಂಚಿ" ಆರಂಭಿಸಿದರು. 'ಸಂಧ್ಯಾ ಕೆಂದಿನ ಸಿಂಧೂರಂ,' [[ಮಲೆಯಾಳಂ]] ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
==ಸಂಗೀತದ ಜೊತೆಜೊತೆಗೆ, ಪ್ರಿಯವಾದದ್ದು :==
ಅವರು "[[ಸಾಪಾಟು ಪ್ರಿಯರು]]' (ಭೋಜನ ಪ್ರಿಯರು). ಅನ್ನ, ರಸಂ ಊಟ, ಹೆಚ್ಚು ಪ್ರಿಯ. ಕರಿದ ಬಜ್ಜಿ, ಐಸ್ಕ್ರೀಂ, ನಿಧಾನವಾಗಿ ಗಂಟೆ ಕಾಲ, ಆರಾಮವಾಗಿ ಊಟಮಾಡುವುದು ಬಹಳ ಇಷ್ಟ.
"https://kn.wikipedia.org/wiki/ಎಂ._ಬಾಲಮುರಳಿ_ಕೃಷ್ಣ" ಇಂದ ಪಡೆಯಲ್ಪಟ್ಟಿದೆ