ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
==ಬಾಲ್ಯ; ಸಂಗೀತದಲ್ಲಿ ಸಾಧನೆಮಾಡಿದ್ದ, ತಂದೆತಾಯಿಗಳ ಜೊತೆ ಒಡನಾಟ==
[[ಚಿತ್ರ:Dr.BM3.jpg|thumb|right|350px|'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ']]
'[[ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ]]', ಅವರುರವರು ಜನಿಸಿದ್ದು, ೬, [[ಜುಲೈ]], ೧೯೩೦ ರಲ್ಲಿ. "ಸಂಕರ ಗುಪ್ತನ್," ಎಂಬ ಗ್ರಾಮದಲ್ಲಿ. ಇದು [[ಆಂಧ್ರ ಪ್ರದೇಶ]]ದ ಪೂರ್ವ ಗೋದಾವರಿ ಜಿಲ್ಲೆಯ, 'ರೋಜುಲು,' ತಾಲ್ಲೂಕಿನಲ್ಲಿದೆ. ತಂದೆ-ತಾಯಿಯರು, ಅವರಿಗೆ ಪ್ರೀತಿಯಿಂದ ಇಟ್ಟ ಹೆಸರು, ''[[ಮುರಳಿ ಕೃಷ್ಣ]]'. ಆದರೆ, ಆ ಊರಿನ ಪ್ರಸಿದ್ಧ '[[ಹರಿಕಥಾ ವಿದ್ವಾನ್ ಶ್ರೀ. ಸತ್ಯನಾರಾಯಣರು]]', ಅವನ ಹೆಸರಿನ ಮೊದಲಿಗೆ "'[[ಬಾಲ]]"' ಎಂಬ ಪದವನ್ನು ಸೇರಿಸಿದರು. ಮನೆಯಲ್ಲಿ ಸಂಗೀತಮಯ ವಾತಾವರಣ. ತಂದೆ, '[[ಪಟ್ಟಾಭಿರಾಮಯ್ಯ]]', ಕೊಳಲು, ವೀಣೆ ಪಿಟೀಲು ವಾದಕ. ತಾಯಿ, '[[ಸೂರ್ಯಕಾಂತಮ್ಮ]]' ನವರು, ಶ್ರೇಷ್ಠ ವೀಣಾವಾದಕಿ. ತಮ್ಮ ೧೫ ನೆಯ ವಯಸ್ಸಿನಲ್ಲಿಯೇ, ಬಾಲಮುರಳಿಯವರ ತಾಯಿಯವರು ಮೃತಪಟ್ಟರು. ಬಾಲಮುರಳಿಯವರ ಸೋದರತ್ತೆಯವರು ಅವರನ್ನು [[ವಿಜಯವಾಡ]]ಕ್ಕೆ ಕರೆದುಕೊಂಡು ಹೋಗಿ, ತಮ್ಮ ಮನೆಯಲ್ಲಿ ಸಾಕಿ-ಸಲಹಿದರು. ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು '[[ಸುಸರ್ಲ ದಕ್ಷಿಣಾಮೂರ್ತಿ]]' ಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು ೭೨ ಬಗೆಯ ರಾಗಗಳನ್ನು ಹೆಣೆದರು. ೧೯೬೦ ರಲ್ಲೇ, [[ವಿಜಯವಾಡ ]]ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ "'[[ಭಕ್ತಿರಂಜಿನಿ]],"' ಎಂಬ ಗೀತಮಾಲೆಯನ್ನು'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.
[[ಚಿತ್ರ:Dr.BM2.jpg|thumb|right|350px|'ಸರ್ವಶ್ರೀ ಆಲ್ಬಮ್']]
 
==ಸಂಗೀತದಲ್ಲಿ ಪ್ರಯೋಗಶೀಲತೆ, ಅವರ ಪ್ರಮುಖ-ಹವ್ಯಾಸಗಳಲ್ಲೊಂದು==
ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, [[ಕರ್ನಾಟಕ ಸಂಗೀತ ]]ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. [[ಭಾರತ]]ದೇಶ ಕಂಡ [[ಮಹಾನ್ ವಾಗ್ಗೇಯಕಾರ]]. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. [[ತೆಲುಗು]], [[ಕನ್ನಡ]], [[ತಮಿಳು]], [[ಮಲೆಯಾಳಂ]] ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ. ಕನ್ನಡ ಚಿತ್ರಗಳಾದ, [[ಸಂಧ್ಯಾರಾಗ]], [[ಹಂಸಗೀತೆ]], [[ಸುಬ್ಬಾಶಾಸ್ತ್ರಿ]], [[ಗಾನಯೋಗಿ ರಾಮಣ್ಣ]], [[ಶ್ರೀ ಪುರಂದರದಾಸರು]], ಅಮ್ಮ, [[ಚಿನ್ನಾರಿ ಮುತ್ತಣ್ಣ]], [[ಮುತ್ತಿನಹಾರ]] -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು ೧೯೩೮ ರಲ್ಲಿ ನಡೆದ, "[[ಸದ್ಗುರು ಆರಾಧನಾ ಮಹೋತ್ಸವ]]," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.
"https://kn.wikipedia.org/wiki/ಎಂ._ಬಾಲಮುರಳಿ_ಕೃಷ್ಣ" ಇಂದ ಪಡೆಯಲ್ಪಟ್ಟಿದೆ