ಜಿ.ಪಿ.ರಾಜರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
==ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು==
* ವಿದ್ಯಾರ್ಥಿಗಳ ಲೇಖನಗಳ ಸಂಕಲನ [[ವಿದ್ಯಾರ್ಥಿ ವಿಚಾರ ವಿಲಾಸ]] ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು.
 
* ಪ್ರೊ| [[ಎ.ಆರ್.ಕೃಷ್ಣಶಾಸ್ತ್ರಿ]] ಸ್ಥಾಪಿಸಿದ್ದ [[ಸೆಂಟ್ರಲ್ ಕಾಲೇಜು | ಸೆಂಟ್ರಲ್ ಕಾಲೇಜಿನ]] ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.
 
* ಜಿ.ಪಿ.ರಾಜರತ್ನಂ, [[೧೯೭೬]]ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ [[ಶಿವಮೊಗ್ಗ]] ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
 
* [[೧೯೬೯]]ರಲ್ಲೇ [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ಪಡೆದಿದ್ದರು.
 
* [[೧೯೭೭]]ರಲ್ಲಿ [[ಮೈಸೂರು ವಿಶ್ವವಿದ್ಯಾಲಯ | ಮೈಸೂರು ವಿಶ್ವವಿದ್ಯಾಲಯದ]] [[ಡಾಕ್ಟರೇಟ್]] ಪದವಿ ಲಭಿಸಿತು.
 
* [[೧೯೭೮]]ರಲ್ಲಿ '[[ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ]]',
 
* [[೧೯೭೯]]ರಲ್ಲಿ [[ಧರ್ಮಸ್ಥಳ]] ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
 
* ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ.
 
==ಕೃತಿಗಳು==
"ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. 'ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ [[ಕನ್ನಡ]] ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. [[ಟಿ. ಪಿ.ಕೈಲಾಸಂ]] ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.
"https://kn.wikipedia.org/wiki/ಜಿ.ಪಿ.ರಾಜರತ್ನಂ" ಇಂದ ಪಡೆಯಲ್ಪಟ್ಟಿದೆ