ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
'[[ಫೆರೊಮೇನ್]],' ಎಂಬ 'ಸುಗಂಧ ದ್ರವ'ವನ್ನು ಗಂಡು ಪತಂಗ ಹುಡುಕಿಕೊಂಡು ಸಾಗುತ್ತಾ, ಹೆಣ್ಣುಪತಂಗದ ಸಮಾಗಮದಿಂದಾಗಿ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಇಂತಹ ಮೊಟ್ಟಗಳಿಗೆ ಅಪಾರ ಬೇಡಿಕೆಯಿದೆ. ಅವನ್ನು ಕೇಂದ್ರ 'ರೇಷ್ಮೆ' ಮಂಡಳಿ ಹಾಗೂ ಖಾಸಗಿ ವ್ಯಾಪಾರಸಂಸ್ಥೆಗಳಿದ ಖರೀದಿಸಬಹುದು. ೧೪ ದಿನಗಳ ಬಳಿಕ ಮೊಟ್ಟೆಗಳು ಒಡೆದು ಲಾರ್ವಾ ಅಥವಾ ಕಂಬಳಿಹುಳು ಹೊರಗೆ ಬರುತ್ತದೆ. ಸ್ಥಳೀಯ ಕೃಷಿಕರು ಅದಕ್ಕೆ '[[ಚಾಕಿ ಕಟ್ಟುವುದು]]' ಎಂದು ಹೇಳುತ್ತಾರೆ. ಬೆಚ್ಚನೆಯ ವಾತಾವರಣ ಇದಕ್ಕೆ ಅತಿ ಮುಖ್ಯ, ಈಹುಳುಗಳು ತಿನ್ನುವ ಪ್ರಕ್ರಿಯಯನ್ನು ಗಮನಿಸಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಎಲೆಗಳನ್ನು ನುಣ್ಣಗೆ ಹದವಾಗಿ ಕೊಚ್ಚಿ ಹಾಕಿದಷ್ಟೂ ಅವು ಗಬಗಬನೆ ತಿನ್ನುತ್ತಲೇ ಸಾಗುತ್ತವೆ.ಇಡೀದಿನ ಸೊಪ್ಪನ್ನು ತಿನ್ನುವುದೇ ಅವುಗಳ ಪ್ರಮುಖ ಕೆಲಸವಾಗಿರುತ್ತದೆ. ಹುಳುಗಳು ಸೊಪ್ಪಿನಲ್ಲಿರುವ '[[ಸಿಎಸ್-ಜಾಸ್ಮೋನ್]] ಎಂಬ ಸುವಾಸನಾ ದ್ರವ್ಯದಿಂದ ಸಂಮೋಹಿತವಾಗಿರುತ್ತವೆ. ಹುಳುವಿನ ತಲೆ ಕಪ್ಪುಬಣ್ಣಕ್ಕೆ ತಿರುಗುವುದನ್ನೇ ಗಮನಿಸುತ್ತಿರಬೇಕು. ಆಗ ಹುಳುಗಳು '[[ಜ್ವರಕ್ಕೆ ಕೂತಿವೆ]]' ಎಂದು ತಿಳಿಯಬೇಕು. ಈ ಸಮಯದಲ್ಲಿ ಹುಳು ಆಹಾರಸೇವನೆಯನ್ನು ಪೂರ್ಣವಾಗಿ ನಿಲ್ಲಿಸುತ್ತವೆ.ದೇಹದ ಚರ್ಮದಲ್ಲಿ ಪೊರೆ ಕಾಣಿಸಿಕೊಂಡು ಅದು ಹೊರಕ್ಕೆ ಬರುತ್ತದೆ. ೪ ಹಂತಗಳಲ್ಲಿ ಜ್ವರಕಾಣಿಸಿಕೊಳ್ಳುತ್ತದೆ.ವಿಶ್ವದ 'ರೇಷ್ಮೆ' ಹುಳಗಳು ಎಂಬ ಎರಡು ಇವೆ. ಅದರಲ್ಲಿ ಭಾರತದ ಹುಳಗಳ ವರ್ಗ, '[[ಬೈವೋಲ್ಟೇನ್]]' ಎಂಬ ವಿಭಾಗಕ್ಕೆ ಸೇರಿದೆ. ಇವು ಬಿಳಿಬಣ್ಣದವು. ಬೆನ್ನಿನಮೇಲೆ ಪುಟ್ಟ ಮುಳ್ಳಿನಾಕಾರದ ರಚನೆಯನ್ನು ಕಾಣಬಹುದು. ಪ್ರತಿಹಂತದ ಜ್ವರಮುಗಿದಮೇಲೂ ಕೊಡುವ ಸೊಪ್ಪಿನೂಟದ ರೀತಿಬೇರೆಯದೇ ಅಗಿರಬೇಕು. ಅಂದರೆ ಬೆಳೆದ ಸೊಪ್ಪನ್ನು ಕೊಡಬೇಕಾಗುತ್ತದೆ.
ಹುಳುಗಳು ಬಿದುರಿನ ವೃತ್ತಾಕಾರದ ಭಾರಿ ತಟ್ಟೆಯಲ್ಲಿ ಶೇಖರವಾಗಿರುತ್ತವೆ. ಪ್ರತಿದಿನ ಬಿದಿರು ತಟ್ಟಯನ್ನು ಶುಚಿಗೊಳಿಸುವುದಲ್ಲದೆ '[[ಹುಳುಗಳ ಹಿಕ್ಕೆ]]'ಯನ್ನೂ ತಟ್ಟೆಯಲ್ಲಿ ಒಂದೂ ಇಲ್ಲದಂತೆ ಜಾಗೃತಿವಹಿಸಬೇಕು. ತಟ್ಟೆಗಳನ್ನು ಸುಲಭವವಾಗಿ ಬದಲಾಯಿಸಬಹುದು. ಶುಚಿಯಾಗಿಡದಿದ್ದಲ್ಲಿ ತೇವಾಂಶದಿಂದ ' [[ಫಂಗಸ್ ಜಾಡ್ಯ ಉಂಟಾಗಿ]]' ರೋಗ ಪಸರಿಸುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ, '[[ಊಜಿನೊಣ]]ಗಳು ದಾಣಿಯಿಡುತ್ತವೆ.
==' ಹುಳು ಹಣ್ಣಾಗುವ ಹಂತ'==
=='ಪತಂಗ'ದಿಂದ 'ರೇಷ್ಮೆ'ಯ ತನಕ==
'೪ ನೆಯ ಜ್ವರ'ದ ನಂತರ, ಅಂದರೆ ಮೊಟ್ಟೆಯೊಡೆದು 'ಲಾರ್ವ' ಹೊರಬಂದ ೨೮-೩೦ ದಿನಗಳಲ್ಲಿ ರೇಷ್ಮೆ ಸ್ವಲ್ಪ 'ಹಳದಿಬಣ್ಣ'ಕ್ಕೆ ತಿರುಗಿ ದೇಹ ಸ್ವಲ್ಪಮಟ್ಟಿಗೆ ಪಾರದರ್ಶಕವಾಗುತ್ತದೆ. ಹುಳುಗಳ ಬಾಯಿನಿಂದ ಸೂಕ್ಷ್ಮ ವಾದ ರೇಷ್ಮೆ ಎಳೆಗಳು ಬರಲು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯನ್ನು ಸ್ಥಳೀಯ 'ರೇಷ್ಮೆ ಕೃಷಿಕರು, ’ಹುಳು ಹಣ್ಣಾಗುವುದು’ ಎನ್ನುತ್ತಾರೆ. ಆ ಸಮಯದಲ್ಲಿ ಹುಳುಗಳನ್ನು '[[ಬಿದಿರಿನ ಚಂದ್ರಿಕೆ]]'ಗೆ ವರ್ಗಾಯಿಸಬೇಕು. ಅಂದರೆ ಅದಕ್ಕೆ '[[ಗೂಡು ನಿರ್ಮಿಸಲು ಆಧಾರ]]' ಒದಗಿಸಬೇಕು. ಸುಮಾರು ೨೪-೩೬ ಗಂಟೇಗಳಲ್ಲಿ ೫೦೦-೯೦೦ ಮೀಟರ್ ಉದ್ದವಿರುವ ಎಳೆಯಿಂದ ಈಗೂಡು ಸಿದ್ಧವಾಗಿ ಒಳಗಡೆ [[ಪ್ಯೂಪಾ ಅವಸ್ಥೆ]]ಯಲ್ಲಿರುವ ಹುಳು ಇರುತ್ತದೆ. ೧ ಪೌಂಡ್ ರೇಷ್ಮೆ ನೂಲು ತೆಗೆಯಲು ೨,೦೦೦-೩,೦೦೦ ಗೂಡುಗಳ ಅವಶ್ಯಕತೆಯಿದೆ. ಹೀಗೆ, 'ಪತಂಗ'ದಿಂದ 'ರೇಷ್ಮೆ'ಯ ತನಕದ ದೀರ್ಘ ಪಯಣ, ಅತಿ ರೋಚಕವಾದದ್ದು.
 
==ಗೂಡುಗಳನ್ನು (Cacoons) ಬಿಸಿನೀರಿನಲ್ಲಿ ಬೇಯಿಸುವ ಕೊನೆಯ ಹಂತ==
ಗೂಡುಗಳನ್ನು ಬಿಸಿನೀರಿನಲ್ಲಿ ಬೇಯಿಸಿ, ಒಳಗಿರುವ ಪ್ಯೂಪಾವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ