ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
'೪ ನೆಯ ಜ್ವರ'ದ ನಂತರ, ಅಂದರೆ ಮೊಟ್ಟೆಯೊಡೆದು 'ಲಾರ್ವ' ಹೊರಬಂದ ೨೮-೩೦ ದಿನಗಳಲ್ಲಿ ರೇಷ್ಮೆ ಸ್ವಲ್ಪ 'ಹಳದಿಬಣ್ಣ'ಕ್ಕೆ ತಿರುಗಿ ದೇಹ ಸ್ವಲ್ಪಮಟ್ಟಿಗೆ ಪಾರದರ್ಶಕವಾಗುತ್ತದೆ. ಹುಳುಗಳ ಬಾಯಿನಿಂದ ಸೂಕ್ಷ್ಮ ವಾದ ರೇಷ್ಮೆ ಎಳೆಗಳು ಬರಲು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯನ್ನು ಸ್ಥಳೀಯ 'ರೇಷ್ಮೆ ಕೃಷಿಕರು, ’ಹುಳು ಹಣ್ಣಾಗುವುದು’ ಎನ್ನುತ್ತಾರೆ. ಆ ಸಮಯದಲ್ಲಿ ಹುಳುಗಳನ್ನು '[[ಬಿದಿರಿನ ಚಂದ್ರಿಕೆ]]'ಗೆ ವರ್ಗಾಯಿಸಬೇಕು. ಅಂದರೆ ಅದಕ್ಕೆ '[[ಗೂಡು ನಿರ್ಮಿಸಲು ಆಧಾರ]]' ಒದಗಿಸಬೇಕು. ಸುಮಾರು ೨೪-೩೬ ಗಂಟೇಗಳಲ್ಲಿ ೫೦೦-೯೦೦ ಮೀಟರ್ ಉದ್ದವಿರುವ ಎಳೆಯಿಂದ ಈಗೂಡು ಸಿದ್ಧವಾಗಿ ಒಳಗಡೆ [[ಪ್ಯೂಪಾ ಅವಸ್ಥೆ]]ಯಲ್ಲಿರುವ ಹುಳು ಇರುತ್ತದೆ. ೧ ಪೌಂಡ್ ರೇಷ್ಮೆ ನೂಲು ತೆಗೆಯಲು ೨,೦೦೦-೩,೦೦೦ ಗೂಡುಗಳ ಅವಶ್ಯಕತೆಯಿದೆ.
 
==ಗೂಡುಗಳನ್ನು (Cacoons) ಬಿಸಿನೀರಿನಲ್ಲಿ ಬೇಯಿಸುವ ಕೊನೆಯ ಹಂತ==
ಗೂಡುಗಳನ್ನು ಬಿಸಿನೀರಿನಲ್ಲಿ ಬೇಯಿಸಿ, ಒಳಗಿರುವ ಪ್ಯೂಪಾವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
 
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ