ರೈಬೋಸೋಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ht:Ribozòm
ಚು robot Modifying: fa:رناتن; cosmetic changes
೧ ನೇ ಸಾಲು:
{{pp-move-indef}}
[[Fileಚಿತ್ರ:Peptide syn.png|thumb|350px|ಸಂದೇಶವಾಹಕ RNAಗಳ ಸರಣಿಯನ್ನು ರೈಬೋಸೋಮ್‌‌ಗಳು ಓದುತ್ತವೆ ಮತ್ತು ವರ್ಗಾವಣೆ RNAಗಳಿಗೆ ಬಂಧಿಸಲ್ಪಟ್ಟಿರುವ ಅಮೈನೋ ಆಮ್ಲಗಳಿಂದ ಪ್ರೋಟೀನುಗಳನ್ನು ಜೋಡಣೆ ಮಾಡುತ್ತವೆ.]]
 
'''ರೈಬೋಸೋಮ್‌‌ಗಳು''' ಜೀವಕೋಶಗಳ ಅಂಗಭಾಗಗಳಾಗಿದ್ದು, ಅಮೈನೋ ಆಮ್ಲಗಳಿಂದ ಪ್ರೋಟೀನುಗಳನ್ನು ಅವು ತಯಾರಿಸುತ್ತವೆ. "ಪ್ರಧಾನ ತತ್ತ್ವ" ಎಂಬುದಾಗಿ ಅನೇಕವೇಳೆ ಉಲ್ಲೇಖಿಸಲ್ಪಡುವ ಜೀವಶಾಸ್ತ್ರದ ಪ್ರಧಾನ ಸೂತ್ರಗಳಲ್ಲಿ ಒಂದೆಂದರೆ, RNAಯನ್ನು ರೂಪಿಸಲು DNAಯು ಬಳಸಲ್ಪಡುತ್ತದೆ, ಮತ್ತು ಸದರಿ RNAಯು ಪ್ರೋಟೀನನ್ನು ರೂಪಿಸಲು ಅನುಕ್ರಮವಾಗಿ ಬಳಸಲ್ಪಡುತ್ತದೆ. ಜೀನ್‌‌‌‌ಗಳಲ್ಲಿನ DNA ಸರಣಿಯನ್ನು ಒಂದು ಸಂದೇಶವಾಹಕ RNAಯೊಳಗೆ (mRNA) ನಕಲು ಮಾಡಲಾಗುತ್ತದೆ. ರೈಬೋಸೋಮ್‌‌ಗಳು ನಂತರ ಈ RNAಯಲ್ಲಿರುವ ಮಾಹಿತಿಯನ್ನು ಓದುತ್ತವೆ ಮತ್ತು ಪ್ರೋಟೀನುಗಳನ್ನು ಸೃಷ್ಟಿಸಲು ಅದನ್ನು ಬಳಸಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ರೂಪಾಂತರ (ತಳಿಶಾಸ್ತ್ರ) ಎಂದು ಕರೆಯಲಾಗುತ್ತದೆ, ಅಂದರೆ, RNAಯಿಂದ ಪಡೆದ ತಳೀಯ ಮಾಹಿತಿಯನ್ನು ಪ್ರೋಟೀನುಗಳಾಗಿ ರೈಬೋಸೋಮ್‌‌ "ರೂಪಾಂತರಿಸುತ್ತದೆ". ರೈಬೋಸೋಮ್‌‌ಗಳು ತಾವು ಒಂದು mRNAಗೆ ಬಂಧಿಸಲ್ಪಡುವ ಮೂಲಕ ಮತ್ತು ಒಂದು ನಿರ್ದಿಷ್ಟ ಪ್ರೋಟೀನಿನಲ್ಲಿನ ಅಮೈನೋ ಆಮ್ಲಗಳ ಸರಿಯಾದ ಸರಣಿಗೆ ಸಂಬಂಧಿಸಿದ ಒಂದು ಪಡಿಯಚ್ಚಾಗಿ ಇದನ್ನು ಬಳಸುವ ಮೂಲಕ ಈ ಕಾರ್ಯವನ್ನು ನೆರವೇರಿಸುತ್ತವೆ. ವರ್ಗಾವಣೆ RNA (tRNA) ಕಣಗಳಿಗೆ ಅಮೈನೋ ಆಮ್ಲಗಳು ಜೋಡಿಸಲ್ಪಡುತ್ತವೆ, ಮತ್ತು ಈ ಕಣಗಳು ರೈಬೋಸೋಮ್‌‌ನ ಒಂದು ಭಾಗವನ್ನು ಪ್ರವೇಶಿಸಿ, ಸಂದೇಶವಾಹಕ RNA ಸರಣಿಗೆ ಬಂಧಿಸಲ್ಪಡುತ್ತವೆ. ಜೋಡಿಸಲ್ಪಟ್ಟ ಅಮೈನೋ ಆಮ್ಲಗಳ ಜೊತೆಗೆ ನಂತರ ರೈಬೋಸೋಮ್‌ನ ಮತ್ತೊಂದು ಭಾಗವು ಸೇರಿಕೊಳ್ಳುತ್ತದೆ. ರೈಬೋಸೋಮ್‌ mRNAಯ ಉದ್ದಕ್ಕೂ ಚಲಿಸುತ್ತಾ ಅದರ ಸರಣಿಯನ್ನು "ಓದುತ್ತದೆ" ಮತ್ತು ಅಮೈನೋ ಆಮ್ಲಗಳ ಒಂದು ಸರಪಳಿಯನ್ನು ರೂಪಿಸುತ್ತದೆ.
೮ ನೇ ಸಾಲು:
ಬ್ಯಾಕ್ಟೀರಿಯಾ, ಆರ್ಕಿಯಾ ಮತ್ತು ಯೂಕ್ಯಾರಿಯೋಟ್‌‌‌ಗಳಿಗೆ (ಭೂಮಿಯ ಮೇಲಿನ ಜೀವರಾಶಿಯ ಮೂರು ತಾಣಗಳು) ಸೇರಿರುವ ರೈಬೋಸೋಮ್‌‌ಗಳು ಗಮನಾರ್ಹವಾಗಿ ವಿಭಿನ್ನವಾಗಿರುವ ರಚನೆ ಮತ್ತು RNA ಸರಣಿಗಳನ್ನು ಹೊಂದಿರುತ್ತವೆ. ಬ್ಯಾಕ್ಟೀರಿಯಾಗಳ ರೈಬೋಸೋಮ್‌‌ಗಳನ್ನು ಪ್ರತಿಬಂಧಿಸುವ ಮೂಲಕ ಕೆಲವು ಬ್ಯಾಕ್ಟೀರಿಯಾಗಳನ್ನು ಪ್ರತಿಜೀವಕಗಳು ಸಾಯಿಸಲು ರಚನೆಯಲ್ಲಿನ ಈ ಭಿನ್ನತೆಗಳು ಅವಕಾಶ ಮಾಡಿಕೊಟ್ಟರೆ, ಮಾನವ ರೈಬೋಸೋಮ್‌‌ಗಳು ಪ್ರಭಾವಕ್ಕೊಳಪಡದೆ ಉಳಿಯುತ್ತವೆ. ಯೂಕ್ಯಾರಿಯೋಟಿಕ್‌‌ ಜೀವಕೋಶಗಳ ಮೈಟೋಕಾಂಡ್ರಿಯಾದಲ್ಲಿನ ರೈಬೋಸೋಮ್‌‌ಗಳು ಬ್ಯಾಕ್ಟೀರಿಯಾದಲ್ಲಿನ ರೈಬೋಸೋಮ್‌‌ಗಳನ್ನು ಹೋಲುತ್ತವೆ; ಇದು ಈ ಅಂಗಕದ ವಿಕಾಸಾತ್ಮಕ ಹುಟ್ಟನ್ನು ಪ್ರತಿಬಿಂಬಿಸುತ್ತದೆ.<ref>{{cite journal |author=Benne R, Sloof P |title=Evolution of the mitochondrial protein synthetic machinery |journal=BioSystems |volume=21 |issue=1 |pages=51–68 |year=1987 |pmid=2446672 |doi=10.1016/0303-2647(87)90006-2}}</ref> ''ರೈಬೋ'' ನ್ಯೂಕ್ಲಿಯಿಕ್‌‌ ಆಮ್ಲ ಮತ್ತು ಗ್ರೀಕ್ ಭಾಷೆಯ ''ಸೋಮಾ'' (ಕಾಯ ಎಂದು ಅರ್ಥ) ಎಂಬ ಶಬ್ದದಿಂದ ರೈಬೋಸೋಮ್‌‌ ಎಂಬ ಪದವು ಬಂದಿದೆ.
 
== ವಿವರಣೆ ==
'''ರೈಬೋಸೋಮ್‌‌ಗಳು''' ಸುಮಾರು 20 nmನಷ್ಟು (200 ಆಂಗ್‌ಸ್ಟ್ರಮ್‌‌‌‌‌‌‌ಗಳು) ವ್ಯಾಸವನ್ನು ಹೊಂದಿರುತ್ತವೆ ಮತ್ತು 65%ನಷ್ಟು ರೈಬೋಸೋಮ್‌ನ RNA ಮತ್ತು 35%ನಷ್ಟು ರೈಬೋಸೋಮ್‌ನ ಪ್ರೋಟೀನುಗಳಿಂದ (ಒಂದು ರೈಬೋನ್ಯೂಕ್ಲಿಯೋಪ್ರೋಟೀನು ಅಥವಾ RNP ಎಂದು ಇವನ್ನು ಕರೆಯಲಾಗುತ್ತದೆ) ಮಾಡಲ್ಪಟ್ಟಿರುತ್ತವೆ. ಆರ್ಕಿಯಾದ, ಯೂಬ್ಯಾಕ್ಟೀರಿಯಾದ ಮತ್ತು ಯೂಕ್ಯಾರಿಯೋಟಿಕ್‌‌ ರೈಬೋಸೋಮ್‌‌ಗಳು RNAಗಿರುವ ಪ್ರೋಟೀನಿನ ಅನುಪಾತದಲ್ಲಿ ಭಿನ್ನವಾಗಿರುತ್ತವೆ. ರೈಬೋಸೋಮ್‌ಗಳು ಸಂದೇಶವಾಹಕ RNA (mRNA)ಯನ್ನು ರೂಪಾಂತರಿಸುತ್ತವೆ ಮತ್ತು ವರ್ಗಾವಣೆ RNA (tRNA)ಯಿಂದ ವಿತರಿಸಲ್ಪಟ್ಟ ಅಮೈನೋ ಆಮ್ಲಗಳನ್ನು ಬಳಸಿಕೊಂಡು ಪಾಲಿಪೆಪ್ಟೈಡ್‌‌ ಸರಪಳಿಗಳನ್ನು (ಉದಾಹರಣೆಗೆ ಪ್ರೋಟೀನುಗಳು) ನಿರ್ಮಿಸುತ್ತವೆ. ಅವುಗಳ ಸಕ್ರಿಯ ತಾಣಗಳು RNAಯಿಂದ ಮಾಡಲ್ಪಟ್ಟಿರುತ್ತವೆಯಾದ್ದರಿಂದ, ರೈಬೋಸೋಮ್‌‌ಗಳನ್ನು ಈಗ "ರೈಬೋಸೈಮ್‌ಗಳು" ಎಂಬುದಾಗಿ ವರ್ಗೀಕರಿಸಲಾಗಿದೆ.<ref>{{cite journal |author=Rodnina MV, Beringer M, Wintermeyer W |title=How ribosomes make peptide bonds |journal=Trends Biochem. Sci. |volume=32 |issue=1 |pages=20–6 |year=2007 |pmid=17157507 |doi=10.1016/j.tibs.2006.11.007}}</ref>
 
೨೪ ನೇ ಸಾಲು:
ರೈಬೋಸೋಮ್‌‌ಗಳು ಮತ್ತು ಸಂಬಂಧಿತ ಕಣಗಳ ರಚನೆ ಮತ್ತು ಕಾರ್ಯಚಟುವಟಿಕೆಯು ''ರೂಪಾಂತರದ ಸಾಧನ'' ಎಂದು ಕರೆಯಲ್ಪಟ್ಟಿದ್ದು, ಇದು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದಲೂ ಸಂಶೋಧನಾ ಆಸಕ್ತಿಯ ವಿಷಯವಾಗಿದೆ ಮತ್ತು ಇಂದು ಅಧ್ಯಯನದ ಒಂದು ಅತ್ಯಂತ ಸಕ್ರಿಯ ಕ್ಷೇತ್ರವಾಗಿದೆ.
 
[[Fileಚಿತ್ರ:ribosome shape.png|thumb|ಚಿತ್ರ 2 : ದೊಡ್ಡ (ಕೆಂಪು) ಮತ್ತು ಸಣ್ಣ (ನೀಲಿ) ಉಪಘಟಕಗಳು ಒಟ್ಟಿಗೆ ಹೊಂದಿಕೊಳ್ಳುತ್ತವೆ.]]
ರೈಬೋಸೋಮ್‌‌ಗಳು ಎರಡು ಉಪಘಟಕಗಳನ್ನು (ಚಿತ್ರ 1) ಹೊಂದಿದ್ದು, ಅವು ಒಟ್ಟಿಗೆ ಹೊಂದಿಕೊಳ್ಳುತ್ತವೆ (ಚಿತ್ರ 2), ಮತ್ತು ಪ್ರೋಟೀನಿನ ಸಂಶ್ಲೇಷಣೆಯ ಅವಧಿಯಲ್ಲಿ mRNAಯನ್ನು ಒಂದು ಪಾಲಿಪೆಪ್ಟೈಡ್‌‌ ಸರಪಳಿಯಾಗಿ ರೂಪಾಂತರಿಸುವ ಸಲುವಾಗಿ ಈ ಉಪಘಟಕಗಳು ಒಂದಾಗಿ ಕೆಲಸಮಾಡುತ್ತವೆ (ಚಿತ್ರ 3). ಅತ್ಯಂತ ದೊಡ್ಡ RNA ಕಣಗಳು (ರೈಬೋಸೋಮ್‌ನ RNA ಅಥವಾ rRNA ಎಂದು ಇವಕ್ಕೆ ಹೆಸರು) ಮತ್ತು ಬಹು ಸಣ್ಣದಾಗಿರುವ ಪ್ರೋಟೀನು ಕಣಗಳ ಪೈಕಿ, ಬ್ಯಾಕ್ಟೀರಿಯಾದ ಉಪಘಟಕಗಳು ಒಂದು ಅಥವಾ ಎರಡನ್ನು ಹೊಂದಿದ್ದರೆ, ಯೂಕ್ಯಾರಿಯೋಟಿಕ್‌ಗಳು ಒಂದು ಅಥವಾ ಮೂರನ್ನು ಹೊಂದಿರುತ್ತವೆ. ಸ್ಫಟಿಕಶಾಸ್ತ್ರೀಯ ಕೆಲಸವು ತೋರಿಸಿರುವ ಪ್ರಕಾರ, ಪಾಲಿಪೆಪ್ಟೈಡ್‌‌ ಸಂಶ್ಲೇಷಣೆಗೆ ಸಂಬಂಧಿಸಿರುವ ರಾಸಾಯನಿಕ ಕ್ರಿಯೆಯ ತಾಣಕ್ಕೆ ರೈಬೋಸೋಮ್‌ನ ಯಾವುದೇ ಪ್ರೋಟೀನುಗಳೂ ನಿಕಟವಾಗಿಲ್ಲ. ಇದು ಸೂಚಿಸುವ ಪ್ರಕಾರ, ರೈಬೋಸೋಮ್‌‌ಗಳ ಪ್ರೋಟೀನು ಅಂಗಭಾಗಗಳು ಒಂದು ಅಟ್ಟಣಿಗೆಯಂತೆ ಕಾರ್ಯನಿರ್ವಹಿಸುತ್ತವೆ ಮತ್ತು ವೇಗವರ್ಧನೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದಕ್ಕೆ ಬದಲಾಗಿ, ಪ್ರೋಟೀನನ್ನು ಸಂಶ್ಲೇಷಿಸುವುದಕ್ಕಾಗಿರುವ rRNAಯ ಸಾಮರ್ಥ್ಯವು ವರ್ಧಿಸುವಲ್ಲಿ ಇದು ಕಾರಣವಾಗಬಹುದಾಗಿರುತ್ತದೆ (ನೋಡಿ: ರೈಬೋಸೈಮ್‌).
 
== ಜೈವಿಕ ಉತ್ಪತ್ತಿ ==
{{Main|Ribosome biogenesis}}
 
ಬ್ಯಾಕ್ಟೀರಿಯಾದ ಜೀವಕೋಶಗಳಲ್ಲಿ, ಬಹು ರೈಬೋಸೋಮ್‌‌ ಜೀನ್‌ಗಳಾದ ಒಪೆರಾನ್‌‌‌ಗಳ ಪ್ರತಿಲಿಪಿ ಕಾರ್ಯದ ಮೂಲಕ ಕೋಶದ್ರವ್ಯದಲ್ಲಿ ರೈಬೋಸೋಮ್‌‌ಗಳು ಸಂಶ್ಲೇಷಿಸಲ್ಪಡುತ್ತವೆ. ಯೂಕ್ಯಾರಿಯೋಟ್‌‌ಗಳಲ್ಲಿ ಈ ಪ್ರಕ್ರಿಯೆಯು, ಜೀವಕೋಶದ ಕೋಶದ್ರವ್ಯದಲ್ಲಿ ಹಾಗೂ ಜೀವಕೋಶದ ಕೋಶಕೇಂದ್ರದೊಳಗಿನ ಒಂದು ಪ್ರದೇಶವಾದ ನ್ಯೂಕ್ಲಿಯೋಲಸ್‌ನಲ್ಲಿ, ಹೀಗೆ ಎರಡೂ ಕಡೆಗಳಲ್ಲಿ ನಡೆಯುತ್ತದೆ. ಸಂಶ್ಲೇಷಣೆಯಲ್ಲಿರುವ 200ಕ್ಕೂ ಹೆಚ್ಚಿನ ಪ್ರೋಟೀನುಗಳ ಸುಸಂಘಟಿತವಾದ ಕಾರ್ಯಚಟುವಟಿಕೆ ಮತ್ತು ನಾಲ್ಕು rRNAಗಳ ಸಂಸ್ಕರಣೆಯನ್ನು ಜೋಡಣೆಯ ಪ್ರಕ್ರಿಯೆಯು ಒಳಗೊಳ್ಳುತ್ತದೆ; ಅಷ್ಟೇ ಅಲ್ಲ, ಆ rRNAಗಳನ್ನು ರೈಬೋಸೋಮ್‌ನ ಪ್ರೋಟೀನುಗಳೊಂದಿಗೆ ಜೋಡಿಸುವ ಕೆಲಸವೂ ಆ ಪ್ರಕ್ರಿಯೆಯಲ್ಲಿ ಸೇರಿರುತ್ತದೆ.
 
== ರೈಬೋಸೋಮ್‌‌ ತಾಣಗಳು ==
ರೈಬೋಸೋಮ್‌‌ಗಳು "ಮುಕ್ತ"ವಾಗಿರುವ ಅಥವಾ "ಒಳಪೊರೆಗೆ-ಅಂಟಿಕೊಂಡಿರುವ" ಸ್ವರೂಪಗಳಲ್ಲಿ ವರ್ಗೀಕರಿಸಲ್ಪಟ್ಟಿವೆ.
 
ಮುಕ್ತ ಮತ್ತು ಒಳಪೊರೆಗೆ-ಅಂಟಿಕೊಂಡಿರುವ ರೈಬೋಸೋಮ್‌‌ಗಳು ಕೇವಲ ತಮ್ಮ ಪ್ರದೇಶದ ಹರಡಿಕೆಯಲ್ಲಿ ಭಿನ್ನವಾಗಿದ್ದು, ರಚನೆಯಲ್ಲಿ ತದ್ರೂಪವನ್ನು ಹೊಂದಿರುತ್ತವೆ. ರೈಬೋಸೋಮ್‌ ಒಂದು ಮುಕ್ತ ಸ್ವರೂಪದಲ್ಲಿದೆಯೇ ಅಥವಾ ಒಳಪೊರೆಗೆ-ಅಂಟಿಕೊಂಡಿರುವ ಸ್ಥಿತಿಯಲ್ಲಿದೆಯೇ ಎಂಬ ಅಂಶವು, ಸಂಶ್ಲೇಷಿಸಲ್ಪಡುತ್ತಿರುವ ಪ್ರೋಟೀನಿನ ಮೇಲಿರುವ ER-ಉದ್ದೇಶಿಸಿರುವ ಸಂಕೇತ ಸರಣಿಯೊಂದರ ಹಾಜರಿಯನ್ನು ಅವಲಂಬಿಸಿದೆ; ಆದ್ದರಿಂದ ಒಂದು ಪ್ರತ್ಯೇಕ ರೈಬೋಸೋಮ್‌‌ ಒಂದು ಪ್ರೋಟೀನನ್ನು ರೂಪಿಸುತ್ತಿರುವಾಗ ಒಳಪೊರೆಗೆ-ಅಂಟಿಕೊಂಡಿರುವ ಸ್ಥಿತಿಯಲ್ಲಿರಬಹುದಾಗಿದೆ, ಆದರೆ ಮತ್ತೊಂದು ಪ್ರೋಟೀನನ್ನು ರೂಪಿಸುವಾಗ ಅದು ಸೈಟೋಸಾಲ್‌ನಲ್ಲಿ ಮುಕ್ತವಾಗಿರುತ್ತದೆ.
 
[[Fileಚಿತ್ರ:translation.gif|thumb|left|300px|ಎಂಡೋಪ್ಲಾಸ್ಮಿಕ್‌ ರೆಟಿಕ್ಯುಲಮ್‌ನೊಳಗೆ ಸ್ರವಿಸಲ್ಪಟ್ಟಿರುವ ಪ್ರೋಟೀನೊಂದನ್ನು ರೂಪಾಂತರಿಸುತ್ತಿರುವ ಒಂದು ರೈಬೋಸೋಮ್‌.]]
 
=== ಮುಕ್ತ ರೈಬೋಸೋಮ್‌‌ಗಳು ===
ಮುಕ್ತ ರೈಬೋಸೋಮ್‌ಗಳು ಸೈಟೋಸಾಲ್‌‌‌ನಲ್ಲಿ ಎಲ್ಲೆಂದರಲ್ಲಿ ಚಲಿಸಬಲ್ಲವಾಗಿರುತ್ತವೆಯಾದರೂ, ಜೀವಕೋಶದ ಕೋಶಕೇಂದ್ರ ಮತ್ತು ಇತರ ಅಂಗಕಗಳಿಂದ ಅವು ಹೊರಗಿಡಲ್ಪಟ್ಟಿರುತ್ತವೆ. ಮುಕ್ತ ರೈಬೋಸೋಮ್‌‌ಗಳಿಂದ ರೂಪುಗೊಂಡ ಪ್ರೋಟೀನುಗಳು ಸೈಟೋಸಾಲ್‌‌ನೊಳಗೆ ಬಿಡುಗಡೆಯಾಗುತ್ತವೆ ಮತ್ತು ಜೀವಕೋಶದೊಳಗೆ ಬಳಸಲ್ಪಡುತ್ತವೆ. ಗ್ಲೂಟಥಿಯೋನ್‌‌ನ ಉನ್ನತ ಸಾರೀಕರಣಗಳನ್ನು ಸೈಟೋಸಾಲ್‌ ಹೊಂದಿರುತ್ತದೆಯಾದ್ದರಿಂದ ಮತ್ತು ಅದರಿಂದಾಗಿ ಅದು ಒಂದು ಅಪಕರ್ಷಕ ವಾತಾವರಣವಾಗಿರುತ್ತದೆಯಾದ್ದರಿಂದ, ಉತ್ಕರ್ಷಿಸಲ್ಪಟ್ಟ ಸಿಸ್ಟೀನ್‌‌ ಉಳಿಕೆಗಳಿಂದ ರೂಪುಗೊಂಡ ಡೈಸಲ್ಫೈಡ್‌ ಬಂಧಗಳನ್ನು ಹೊಂದಿರುವ ಪ್ರೋಟೀನುಗಳನ್ನು ಈ ವಿಭಾಗದಲ್ಲಿ ಉತ್ಪಾದಿಸಲಾಗುವುದಿಲ್ಲ.
 
=== ಒಳಪೊರೆಗೆ-ಅಂಟಿಕೊಂಡಿರುವ ರೈಬೋಸೋಮ್‌‌ಗಳು ===
ಕೆಲವೊಂದು ಅಂಗಕಗಳಲ್ಲಿ ಅಗತ್ಯವಾಗಿರುವ ಪ್ರೋಟೀನುಗಳನ್ನು ಒಂದು ರೈಬೋಸೋಮ್‌‌ ಸಂಶ್ಲೇಷಿಸಲು ಪ್ರಾರಂಭಿಸಿದಾಗ, ಈ ಪ್ರೋಟೀನನ್ನು ರೂಪಿಸುತ್ತಿರುವ ರೈಬೋಸೋಮ್‌, "ಒಳಪೊರೆಗೆ-ಅಂಟಿಕೊಂಡಿರುವ" ಸ್ಥಿತಿಗೆ ತಲುಪಬಹುದು. ಯೂಕ್ಯಾರಿಯೋಟಿಕ್‌‌ ಜೀವಕೋಶಗಳಲ್ಲಿ, "ಒರಟು ER" ಎಂದು ಕರೆಯಲ್ಪಡುವ ಎಂಡೋಪ್ಲಾಸ್ಮಿಕ್‌ ರೆಟಿಕ್ಯುಲಮ್‌‌ನ (ER) ಒಂದು ಪ್ರದೇಶದಲ್ಲಿ ಇದು ಜರುಗುತ್ತದೆ. ಹೊಸದಾಗಿ ತಯಾರಾದ ಪಾಲಿಪೆಪ್ಟೈಡ್‌‌ ಸರಪಳಿಗಳು ERನೊಳಗೆ ನೇರವಾಗಿ ರೈಬೋಸೋಮ್‌‌ನಿಂದ ತೂರಿಸಲ್ಪಡುತ್ತವೆ ಮತ್ತು ಸ್ರಾವಕ ಪ್ರತಿಕ್ರಿಯಾ ಸರಣಿಯ ಮೂಲಕ ತಮ್ಮ ಗಮ್ಯತಾಣಗಳಿಗೆ ನಂತರ ಸಾಗಣೆಮಾಡಲ್ಪಡುತ್ತವೆ. ಕೋಶಪೊರೆಯೊಳಗಡೆ ಉಪಯೋಗಿಸಲ್ಪಡುವ ಅಥವಾ ''ಎಕ್ಸೋಸೈಟೋಸಿಸ್‌'' ಎಂಬ ಕ್ರಿಯೆಯ ಮೂಲಕ ಜೀವಕೋಶದಿಂದ ಹೊರದೂಡುವ ಪ್ರೋಟೀನುಗಳನ್ನು, ಅಂಟಿಕೊಂಡಿರುವ ರೈಬೋಸೋಮ್‌‌ಗಳು ಸಾಮಾನ್ಯವಾಗಿ ತಯಾರಿಸುತ್ತವೆ.
 
== ರಚನೆ ==
[[Fileಚಿತ್ರ:10 small subunit.gif|thumb|350px|right|ಥರ್ಮಸ್‌ ಥರ್ಮೋಫಿಲಸ್‌ಗೆ ಸೇರಿದ 30S ಉಪಘಟಕದ ಪರಮಾಣು ರಚನೆ.ಪ್ರೋಟೀನುಗಳನ್ನು ನೀಲಿ ಬಣ್ಣದಲ್ಲಿ ಮತ್ತು ಏಕ RNA ಎಳೆಯನ್ನು ಕಿತ್ತಳೆ ಬಣ್ಣದಲ್ಲಿ ತೋರಿಸಲಾಗಿದೆ.<ref name=Schluenzen>[10]</ref>]]
ಪ್ರೋಕ್ಯಾರಿಯೋಟ್‌‌‌‌‌ಗಳು ಮತ್ತು ಯೂಕ್ಯಾರಿಯೋಟ್‌‌ಗಳ ರೈಬೋಸೋಮ್‌ನ ಉಪಘಟಕಗಳು ಬಹಳಷ್ಟು ಹೋಲುವಂತಿರುತ್ತವೆ.<ref name="alberts"> ದಿ ಮಾಲ್‌ಕ್ಯುಲರ್‌ ಬಯಾಲಜಿ ಆಫ್‌ ದಿ ಸೆಲ್‌‌, ನಾಲ್ಕನೇ ಆವೃತ್ತಿ. ಬ್ರೂಸ್‌ ಆಲ್ಬರ್ಟ್ಸ್‌, ಮತ್ತು ಇತರರು ಗಾರ್ಲೆಂಡ್‌ ಸೈನ್ಸ್‌‌ (2002) ಪುಟ 342 ISBN 0-8153-3218-1</ref>
 
ಸ್ವೆಡ್‌ಬರ್ಗ್‌ ಏಕಮಾನವು ಅಳೆಯುವಿಕೆಯ ಏಕಮಾನವಾಗಿದ್ದು, ಇದು ಗಾತ್ರಕ್ಕಿಂತ ಹೆಚ್ಚಾಗಿ ಅಪಕೇಂದ್ರ ಯಂತ್ರದಿಂದ ಬೇರ್ಪಡಿಸುವಿಕೆಯಲ್ಲಿನ ಗಸಿ ಶೇಖರಣೆಯ ಪ್ರಮಾಣದ ಒಂದು ಅಳತೆಯಾಗಿರುತ್ತದೆ ಮತ್ತು ತುಣುಕಿನ ಹೆಸರುಗಳು ಏಕೆ ಸೇರ್ಪಡೆಗೊಳ್ಳುವುದಿಲ್ಲ (50S ಮತ್ತು 30Sನಿಂದ 70S ಮಾಡಲ್ಪಟ್ಟಿದೆ) ಎಂಬುದಕ್ಕೆ ಸಂಬಂಧಿಸಿದಂತೆ ಇದು ವಿವರಣೆಯನ್ನು ನೀಡುತ್ತದೆ.
 
ಪ್ರೋಕ್ಯಾರಿಯೋಟ್‌‌ಗಳು 70S ರೈಬೋಸೋಮ್‌‌ಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದೂ ಒಂದು ಸಣ್ಣ (30S) ಮತ್ತು ಒಂದು ದೊಡ್ಡ (50S) ಉಪಘಟಕದಿಂದ ಕೂಡಿರುತ್ತವೆ. ಒಂದು 5S RNA ಉಪಘಟಕ (120 ನ್ಯೂಕ್ಲಿಯೋಟೈಡ್‌ಗಳನ್ನು ಹೊಂದಿರುವಂಥದು), ಒಂದು 23S RNA ಉಪಘಟಕ (2900 ನ್ಯೂಕ್ಲಿಯೋಟೈಡ್‌ಗಳು) ಮತ್ತು 34 ಪ್ರೋಟೀನುಗಳಿಂದ ಅವುಗಳ ದೊಡ್ಡ ಉಪಘಟಕವು ಮಾಡಲ್ಪಟ್ಟಿರುತ್ತದೆ. 21 ಪ್ರೋಟೀನುಗಳಿಗೆ ಅಂಟಿಕೊಂಡಿರುವ ಒಂದು 1540 ನ್ಯೂಕ್ಲಿಯೋಟೈಡ್‌ RNA ಉಪಘಟಕವನ್ನು (16S) 30S ಉಪಘಟಕವು ಹೊಂದಿರುತ್ತದೆ.<ref name="alberts"></ref>
 
ಯೂಕ್ಯಾರಿಯೋಟ್‌‌ಗಳು 80S ರೈಬೋಸೋಮ್‌‌ಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದೂ ಒಂದು ಸಣ್ಣ (40S) ಮತ್ತು ದೊಡ್ಡ (60S) ಉಪಘಟಕವನ್ನು ಒಳಗೊಂಡಿರುತ್ತವೆ. ಒಂದು 5S RNA (120 ನ್ಯೂಕ್ಲಿಯೋಟೈಡ್‌ಗಳು), ಒಂದು 28S RNA (4700 ನ್ಯೂಕ್ಲಿಯೋಟೈಡ್‌ಗಳು), ಒಂದು 5.8S ಉಪಘಟಕ (160 ನ್ಯೂಕ್ಲಿಯೋಟೈಡ್‌ಗಳು) ಮತ್ತು ~49 ಪ್ರೋಟೀನುಗಳಿಂದ ಅವುಗಳ ದೊಡ್ಡ ಉಪಘಟಕವು ಮಾಡಲ್ಪಟ್ಟಿರುತ್ತದೆ. ಒಂದು 1900 ನ್ಯೂಕ್ಲಿಯೋಟೈಡ್‌ (18S) RNA ಮತ್ತು ~33 ಪ್ರೋಟೀನುಗಳನ್ನು 40S ಉಪಘಟಕವು ಹೊಂದಿರುತ್ತದೆ.<ref name="alberts"></ref>
 
ಯೂಕ್ಯಾರಿಯೋಟ್‌ಗಳ ಹರಿದ್ರೇಣುಗಳಲ್ಲಿ ಮತ್ತು ಮೈಟೋಕಾಂಡ್ರಿಯಾದಲ್ಲಿ ಕಂಡುಬರುವ ರೈಬೋಸೋಮ್‌ಗಳೂ ಸಹ, ಒಂದು 70S ಕಣದೊಳಗೆ ಪ್ರೋಟೀನುಗಳೊಂದಿಗೆ ಒಟ್ಟಾಗಿ ಅಂಟಿಕೊಂಡಿರುವ ದೊಡ್ಡ ಮತ್ತು ಸಣ್ಣ ಉಪಘಟಕಗಳನ್ನು ಹೊಂದಿರುತ್ತವೆ.<ref name="alberts"></ref> ಈ ಅಂಗಕಗಳು ಬ್ಯಾಕ್ಟೀರಿಯಾದ ಸಂತತಿಗಳಾಗಿರಬಹುದೆಂದು ಭಾವಿಸಲಾಗಿದೆ (ನೋಡಿ: ಆಂತರಿಕ ಸಹಜೀವನದ ಸಿದ್ಧಾಂತ) ಮತ್ತು ಅದಕ್ಕೆ ತಕ್ಕಂತೆ ಅವುಗಳ ರೈಬೋಸೋಮ್‌ಗಳು ಬ್ಯಾಕ್ಟೀರಿಯಾದ ರೈಬೋಸೋಮ್‌ಗಳನ್ನು ಹೋಲುವಂತಿರುತ್ತವೆ.<ref> ದಿ ಮಾಲ್‌ಕ್ಯುಲರ್‌ ಬಯಾಲಜಿ ಆಫ್‌ ದಿ ಸೆಲ್‌‌, ನಾಲ್ಕನೇ ಆವೃತ್ತಿ. ಬ್ರೂಸ್‌ ಆಲ್ಬರ್ಟ್ಸ್‌, ಮತ್ತು ಇತರರು ಗಾರ್ಲೆಂಡ್‌ ಸೈನ್ಸ್‌‌ (2002) ಪುಟ 808 ISBN 0-8153-3218-1</ref>
 
ಬಗೆಬಗೆಯ ರೈಬೋಸೋಮ್‌ಗಳು ಒಂದು ಪ್ರಮುಖ ರಚನೆಯನ್ನು ಹಂಚಿಕೊಳ್ಳುತ್ತವೆ, ಇದು ಗಾತ್ರದಲ್ಲಿನ ದೊಡ್ಡ ಭಿನ್ನತೆಗಳ ಹೊರತಾಗಿಯೂ ಸಾಕಷ್ಟು ಹೋಲುವಂತಿರುತ್ತದೆ. RNAಯ ಬಹುಪಾಲು ಭಾಗವು ಬಗೆಬಗೆಯ ತೃತೀಯಕ ರಾಚನಿಕ ವಿಶಿಷ್ಟ ಲಕ್ಷಣಗಳಾಗಿ ಅತೀವವಾಗಿ ಸಂಘಟಿಸಲ್ಪಟ್ಟಿರುತ್ತದೆ; ಏಕಾಕ್ಷದ ಪೇರಿಸುವಿಕೆಯನ್ನು ಪ್ರದರ್ಶಿಸುವ ಮಿಥ್ಯಾಗಂಟುಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ದೊಡ್ಡದಾದ ರೈಬೋಸೋಮ್‌ಗಳಲ್ಲಿರುವ ಹೆಚ್ಚುವರಿ RNAಯು ಹಲವಾರು ಉದ್ದದ ನಿರಂತರ ಸೇರ್ಪಡೆಗಳಲ್ಲಿದ್ದು, ಪ್ರಮುಖ ರಚನೆಗೆ ಅಡ್ಡಿಪಡಿಸದಂತೆ ಅಥವಾ ಬದಲಾಯಿಸದಂತೆ ಸದರಿ ರಚನೆಯಿಂದ ಹೊರಗಡೆಗೆ ಅವು ಕುಣಿಕೆಗಳನ್ನು ರೂಪಿಸುತ್ತವೆ.<ref name="alberts"> ದಿ ಮಾಲ್‌ಕ್ಯುಲರ್‌ ಬಯಾಲಜಿ ಆಫ್‌ ದಿ ಸೆಲ್‌‌, ನಾಲ್ಕನೇ ಆವೃತ್ತಿ. ಬ್ರೂಸ್‌ ಆಲ್ಬರ್ಟ್ಸ್‌, ಮತ್ತು ಇತರರು ಗಾರ್ಲೆಂಡ್‌ ಸೈನ್ಸ್‌‌ (2002) ಪುಟ 342 ISBN 0-8153-3218-1</ref> ರೈಬೋಸೋಮ್‌‌ನ ಎಲ್ಲಾ ಪರಿವರ್ತನಕಾರಿ ಚಟಿವಟಿಕೆಯೂ RNAಯಿಂದ ನೆರವೇರಿಸಲ್ಪಡುತ್ತದೆ; ಪ್ರೋಟೀನುಗಳು ಮೇಲ್ಮೈ ಮೇಲೆ ಉಳಿದುಕೊಂಡು ರಚನೆಯನ್ನು ಸ್ಥಿರೀಕರಿಸುವಂತೆ ತೋರುತ್ತವೆ.<ref name="alberts"></ref>
 
ಬ್ಯಾಕ್ಟೀರಿಯಾದ ರೈಬೋಸೋಮ್‌ಗಳು ಮತ್ತು ಯೂಕ್ಯಾರಿಯೋಟಿಕ್‌‌ ರೈಬೋಸೋಮ್‌‌ಗಳ ನಡುವಿನ ಭಿನ್ನತೆಗಳನ್ನು ಔಷಧಶಾಸ್ತ್ರದ ರಸಾಯನ ಶಾಸ್ತ್ರಜ್ಞರು ಬಳಸಿಕೊಳ್ಳುತ್ತಾರೆ, ಮತ್ತು ಸೋಂಕಿಗೊಳಗಾದ ವ್ಯಕ್ತಿಯ ಜೀವಕೋಶಗಳಿಗೆ ಹಾನಿಯುಂಟುಮಾಡದೆಯೇ ಒಂದು ಬ್ಯಾಕ್ಟೀರಿಯಾದ ಸೋಂಕನ್ನು ನಾಶಪಡಿಸಬಲ್ಲ ಪ್ರತಿಜೀವಕಗಳನ್ನು ಅವರು ಸೃಷ್ಟಿಸುತ್ತಾರೆ. ಬ್ಯಾಕ್ಟೀರಿಯಾದ 70S ರೈಬೋಸೋಮ್‌ಗಳು ತಮ್ಮ ರಚನೆಗಳಲ್ಲಿನ ಭಿನ್ನತೆಗಳ ಕಾರಣದಿಂದಾಗಿ ಈ ಪ್ರತಿಜೀವಕಗಳಿಂದ ಘಾಸಿಗೊಳ್ಳಬಲ್ಲವಾಗಿದ್ದರೆ, ಯೂಕ್ಯಾರಿಯೋಟಿಕ್‌‌ 80S ರೈಬೋಸೋಮ್‌‌ಗಳು ಘಾಸಿಗೆ ಈಡಾಗದ ಸ್ವಭಾವವನ್ನು ಹೊರಹೊಮ್ಮಿಸುತ್ತವೆ.<ref name="Recht">{{cite journal |author=Recht MI, Douthwaite S, Puglisi JD |title=Basis for bacterial specificity of action of aminoglycoside antibiotics |journal=EMBO J |volume=18 |issue=11 |pages=3133–8 |year=1999 |pmid=10357824 | doi = 10.1093/emboj/18.11.3133 |pmc=1171394}}</ref> ಬ್ಯಾಕ್ಟೀರಿಯಾದ ರೈಬೋಸೋಮ್‌ಗಳನ್ನು ಹೋಲುವಂತಿರುವ ರೈಬೋಸೋಮ್‌‌ಗಳನ್ನು ಮೈಟೋಕಾಂಡ್ರಿಯಾ ಹೊಂದಿರುತ್ತವೆಯಾದರೂ, ಈ ಪ್ರತಿಜೀವಕಗಳಿಂದ ಮೈಟೋಕಾಂಡ್ರಿಯಾ ಪ್ರಭಾವಕ್ಕೊಳಗಾಗುವುದಿಲ್ಲ ಅಥವಾ ಘಾಸಿಗೊಳ್ಳುವುದಿಲ್ಲ; ಏಕೆಂದರೆ, ಅವು ಒಂದು ಜೋಡಿ ಒಳಪೊರೆಯಿಂದ ಸುತ್ತುವರಿಯಲ್ಪಟ್ಟಿರುತ್ತವೆ ಮತ್ತು ಈ ಪೊರೆಯು ಸದರಿ ಅಂಗಕದೊಳಗೆ ಈ ಪ್ರತಿಜೀವಕಗಳು ಪ್ರವೇಶಗೊಳ್ಳಲು ಸುಲಭವಾಗಿ ಅವಕಾಶ ನೀಡುವುದಿಲ್ಲ.<ref> ಓ'ಬ್ರಿಯೆನ್‌‌, T.W., ದಿ ಜನರಲ್‌ ಅಕ್ಕರೆನ್ಸ್‌ ಆಫ್‌ 55S ರೈಬೋಸೋಮ್ಸ್‌ ಇನ್‌ ಮೆಮ್ಮೇಲಿಯನ್‌ ಲಿವರ್‌ ಮೈಟೋಕಾಂಡ್ರಿಯಾ. J. ಬಯೋಲ್‌‌. ಕೆಮ್‌‌., 245:3409 (1971).</ref>
 
=== ಉನ್ನತ-ವಿಶ್ಲೇಷಣೆಯ ರಚನೆ ===
[[Fileಚಿತ್ರ:10 large subunit.gif|thumb|350px|right|ಹಾಲೋಆರ್ಕ್ಯಲಾ ಮೆರಿಸ್ಮಾರ್ಟುಯಿಗೆ ಸೇರಿದ 50S ಉಪಘಟಕದ ಪರಮಾಣು ರಚನೆ.ಪ್ರೋಟೀನುಗಳನ್ನು ನೀಲಿ ಬಣ್ಣದಲ್ಲಿ ಮತ್ತು ಎರಡು RNA ಎಳೆಗಳನ್ನು ಕಿತ್ತಳೆ ಹಾಗೂ ಹಳದಿ ಬಣ್ಣಗಳಲ್ಲಿ ತೋರಿಸಲಾಗಿದೆ.<ref name=Ban>[21]</ref> ಉಪಘಟಕದ ಕೇಂದ್ರಭಾಗದಲ್ಲಿನ ಹಸಿರು ಬಣ್ಣದ ಸಣ್ಣ ಪಟ್ಟಿಯು ಸಕ್ರಿಯ ತಾಣವಾಗಿದೆ.]]
1970ರ ದಶಕದ ಆರಂಭದಿಂದಲೂ, ರೈಬೋಸೋಮ್‌‌ನ ಸಾಮಾನ್ಯ ಆಣ್ವಿಕ ರಚನೆಯು ಚಿರಪರಿಚಿತವಾಗಿದೆ. 2000ದ ದಶಕದ ಆರಂಭದಲ್ಲಿ, ಉನ್ನತ ವಿಶ್ಲೇಷಣೆಗಳಲ್ಲಿ, ಕೆಲವೇ ಆಂಗ್‌ಸ್ಟ್ರಮ್‌ಗಳ ಮಟ್ಟದಲ್ಲಿ ಇವುಗಳ ರಚನೆಯನ್ನು ಸಾಧಿಸಲಾಗಿದೆ.
 
ಪರಮಾಣು ವಿಶ್ಲೇಷಣೆಯಲ್ಲಿನ ರೈಬೋಸೋಮ್‌ನ ರಚನೆಯ ಕುರಿತಾದ ವಿವರಗಳನ್ನು ನೀಡುವ ಮೊದಲ ಸಂಶೋಧನಾ ಲೇಖನಗಳು, 2000ರ ಅಂತ್ಯದಲ್ಲಿ ಕ್ಷಿಪ್ರ ಅನುಕ್ರಮದಲ್ಲಿ ಪ್ರಕಟಿಸಲ್ಪಟ್ಟವು. ಮೊದಲು, ಆರ್ಕಿಯಾನ್‌‌ ''ಹಾಲೋಆರ್ಕ್ಯಲಾ ಮೆರಿಸ್ಮಾರ್ಟುಯಿ'' ಗೆ ಸೇರಿದ 50S (ದೊಡ್ಡ ಪ್ರೋಕ್ಯಾರಿಯೋಟಿಕ್‌‌) ಉಪಘಟಕವು ಪ್ರಕಟಿಸಲ್ಪಟ್ಟಿತು.<ref name="Ban"></ref> ಇದಾದ ಕೆಲವೇ ದಿನಗಳಲ್ಲಿ, ''ಥರ್ಮಸ್‌ ಥರ್ಮೋಫಿಲಸ್‌‌‌'' ಗೆ ಸೇರಿದ 30S ಉಪಘಟಕದ ರಚನೆಯು ಪ್ರಕಟಿಸಲ್ಪಟ್ಟಿತು.<ref name="Schluenzen"></ref> ಅದಾದ ಕೆಲವೇ ದಿನಗಳಲ್ಲಿ, ಒಂದು ಹೆಚ್ಚು ವಿವರವನ್ನು ಒಳಗೊಂಡ ರಚನೆಯು ಪ್ರಕಟಿಸಲ್ಪಟ್ಟಿತು.<ref>ವಿಂಬರ್ಲಿ BT, ಬ್ರಾಡರ್‌ಸೆನ್‌‌ DE, ಕ್ಲೆಮಾನ್ಸ್‌‌ WM ಜೂನಿಯರ್‌‌, ಮೋರ್ಗಾನ್‌-ವಾರೆನ್‌‌ RJ, ಕಾರ್ಟರ್‌‌ AP, ವೋನ್‌ರೀನ್‌‌ C, ಹಾರ್ಟ್‌ಸ್ಕ್‌ T, ರಾಮಕೃಷ್ಣನ್‌‌ V.; ಸ್ಟ್ರಕ್ಚರ್‌ ಆಫ್‌ ದಿ 30S ರೈಬೋಸೋಮಲ್‌ ಸಬ್‌ಯುನಿಟ್‌. ''ನೇಚರ್‌‌'' 2000 ಸೆಪ್ಟೆಂಬರ್‌‌ 21;407(6802):327-39. PMID 11014182</ref> ಈ ರಾಚನಿಕ ಅಧ್ಯಯನಗಳಿಗೆ 2009ರಲ್ಲಿ ರಸಾಯನ ಶಾಸ್ತ್ರದಲ್ಲಿನ ನೊಬೆಲ್‌ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ಮುಂದಿನ ವರ್ಷದ (ಮೇ 2001) ಆರಂಭದಲ್ಲಿ ಈ ಸಮಾನಸ್ಥಾನಿಗಳನ್ನು ಬಳಸಿಕೊಂಡು, 5.5 ಆಂಗ್‌ಸ್ಟ್ರಮ್‌‌‌ ವಿಶ್ಲೇಷಣೆಯಲ್ಲಿ ಸಮಗ್ರ ''T. ಥರ್ಮೋಫಿಲಸ್‌'' 70S ಕಣವನ್ನು ಮರುನಿರ್ಮಿಸಲಾಯಿತು.<ref>ಯುಸುಪೊವ್‌‌‌ MM, ಯುಸುಪೊವಾ GZ, ಬೌಕಾಮ್‌‌ A, ಲೈಬರ್‌‌ಮನ್‌‌ K, ಅರ್ನೆಸ್ಟ್‌‌ TN, ಕೇಟ್‌‌ JH, ನೊಲ್ಲರ್‌‌ HF. ಕ್ರಿಸ್ಟಲ್‌ ಸ್ಟ್ರಕ್ಚರ್‌ ಆಫ್‌ ದಿ ರೈಬೋಸೋಮ್‌ ಅಟ್‌ 5.5 ಆಂಗ್‌ಸ್ಟ್ರೋಮ್‌ ರೆಸಲ್ಯೂಷನ್‌‌. ''ಸೈನ್ಸ್‌.'' 2001 ಮೇ 4;292(5518):883-96. E-ಪ್ರಕಟಣೆ 2001 ಮಾರ್ಚ್‌ 29. PMID 11283358</ref>
 
''[[ಎಸ್ಚರೀಶಿಯ ಕೋಲಿ|ಎಸ್ಕೇರಿಚಿಯಾ ಕೊಲಿ]]'' 70S ರೈಬೋಸೋಮ್‌‌ನ ರಚನೆಗಳೊಂದಿಗೆ, 2005ರ ನವೆಂಬರ್‌ನಲ್ಲಿ ಎರಡು ಸಂಶೋಧನಾ ಲೇಖನಗಳು ಪ್ರಕಟಿಸಲ್ಪಟ್ಟವು. ಕ್ಷ-ಕಿರಣ ಸ್ಫಟಿಕಶಾಸ್ತ್ರವನ್ನು ಬಳಸಿಕೊಂಡು 3.5-ಆಂಗ್‌ಸ್ಟ್ರಮ್‌‌‌ ವಿಶ್ಲೇಷಣೆಯಲ್ಲಿ ಒಂದು ಖಾಲಿ ರೈಬೋಸೋಮ್‌ನ ರಚನೆಗಳು ನಿರ್ಣಯಿಸಲ್ಪಟ್ಟವು.<ref>ಸ್ಕೂವರ್ತ್‌ BS, ಬೋರೋವಿನ್‌ಸ್ಕಾಯ MA, ಹೌ CW, ಝಾಂಗ್‌‌ W, ವಿಲಾ-ಸಂಜುರ್ಜೊ A, ಹೋಲ್ಟನ್‌‌ JM, ಕೇಟ್‌‌ JH. ಸ್ಟ್ರಕ್ಚರ್ಸ್‌‌ ಆಫ್‌ ದಿ ಬ್ಯಾಕ್ಟೀರಿಯಲ್‌ ರೈಬೋಸೋಮ್‌ ಅಟ್‌ 3.5 ಆಂಗ್‌ಸ್ಟ್ರೋಮ್‌ ರೆಸಲ್ಯೂಷನ್‌‌. ''ಸೈನ್ಸ್‌.'' 2005 ನವೆಂಬರ್‌‌ 4;310(5749):827-34. PMID 16272117</ref> ನಂತರ, ಎರಡು ವಾರಗಳಾದ ಮೇಲೆ, ಕ್ರಯೋ-ಇಲೆಕ್ಟ್ರಾನ್‌‌ ಸೂಕ್ಷ್ಮದರ್ಶಕದ ಬಳಕೆಯನ್ನು ಆಧರಿಸಿದ ರಚನೆಯೊಂದು ಪ್ರಕಟಿಸಲ್ಪಟ್ಟಿತು<ref>ಮಿತ್ರ K, ಸ್ಕಾಪಿಟ್ಜೆಲ್‌‌ C, ಶೇಖ್‌‌ T, ತಾಮಾ F, ಜೆನ್ನಿ S, ಬ್ರೂಕ್ಸ್‌‌ CL 3ನೆಯ, ಬಾನ್‌ N, ಫ್ರಾಂಕ್‌‌ J. ಸ್ಟ್ರಕ್ಚರ್‌ ಆಫ್‌ ದಿ ''E. ಕೊಲಿ'' ಪ್ರೋಟೀನ್‌-ಕಂಡಕ್ಟಿಂಗ್‌ ಚಾನೆಲ್‌ ಬೌಂಡ್‌ ಟು ಎ ಟ್ರಾನ್ಸ್‌ಲೇಟಿಂಗ್‌ ರೈಬೋಸೋಮ್. ''ನೇಚರ್‌‌.'' 2005 ನವೆಂಬರ್‌‌ 17;438(7066):318-24. PMID 16292303</ref>; ಒಂದು ಹೊಸದಾಗಿ ಸಂಶ್ಲೇಷಿಸಲ್ಪಟ್ಟ ಪ್ರೋಟೀನಿನ ಎಳೆಯನ್ನು ಪ್ರೋಟೀನು-ಸಾಗಿಸುವ ವಾಹಿನಿಯೊಳಗೆ ಸಾಗಿಸುವ ಕ್ರಮದಲ್ಲಿನ, 11-15 ಆಂಗ್‌ಸ್ಟ್ರಮ್‌‌‌ ವಿಶ್ಲೇಷಣೆಯಲ್ಲಿರುವ ರೈಬೋಸೋಮ್‌ನ್ನು ಇದು ಚಿತ್ರಿಸುತ್ತದೆ.
೭೧ ನೇ ಸಾಲು:
tRNA ಮತ್ತು mRNA ಕಣಗಳೊಂದಿಗೆ ಸಂಕೀರ್ಣಗೊಂಡ ರೈಬೋಸೋಮ್‌ನ ಮೊದಲ ಪರಮಾಣು ರಚನೆಗಳನ್ನು, 2.8 ಆಂಗ್‌ಸ್ಟ್ರಮ್‌‌‌<ref>ಸೆಲ್ಮರ್‌‌‌, M., ಡನ್‌ಹ್ಯಾಂ, C.M., ಮರ್ಫಿ, F.V IV, ವೀಕ್ಸ್‌ಲ್‌ಬೌಮರ್‌‌, A., ಪೆಟ್ರಿ S., ಕೆಲ್ಲಿ, A.C., ವೆಯಿರ್‌‌, J.R. ಮತ್ತು ರಾಮಕೃಷ್ಣನ್‌‌, V. (2006). ಸ್ಟ್ರಕ್ಚರ್‌ ಆಫ್‌ ದಿ 70S ರೈಬೋಸೋಮ್‌‌ ಕಾಂಪ್ಲೆಕ್ಸ್‌ಡ್‌ ವಿತ್‌ mRNA ಅಂಡ್‌ tRNA. ಸೈನ್ಸ್‌ , 313, 1935-1942. PMID 16959973</ref> ಮತ್ತು at 3.7 ಆಂಗ್‌ಸ್ಟ್ರಮ್‌‌‌ಗಳಲ್ಲಿ, ಸ್ವತಂತ್ರವಾಗಿ ಎರಡು ಗುಂಪುಗಳಿಂದ ಕೈಗೊಂಡ ಕ್ಷ-ಕಿರಣ ಸ್ಫಟಿಕಶಾಸ್ತ್ರವನ್ನು ಬಳಸಿಕೊಳ್ಳುವ ಮೂಲಕ ಪರಿಹರಿಸಲಾಯಿತು.<ref> ಕೊರೊಸ್ಟೆಲೆವ್‌‌ A, ಟ್ರಾಖಾನೊವ್‌ S, ಲೌರ್‌ಬರ್ಗ್‌ M, ನೊಲ್ಲರ್‌‌ HF. ಕ್ರಿಸ್ಟಲ್‌ ಸ್ಟ್ರಕ್ಚರ್‌ ಆಫ್‌ ಎ 70S ರೈಬೋಸೋಮ್‌‌-tRNA ಕಾಂಪ್ಲೆಕ್ಸ್‌ ರಿವೀಲ್ಸ್‌ ಫಂಕ್ಷನಲ್‌ ಇಂಟರಾಕ್ಷನ್ಸ್‌ ಅಂಡ್‌ ರೀಅರೇಂಜ್‌ಮೆಂಟ್ಸ್‌. ಸೆಲ್. 2006 ಸೆಪ್ಟೆಂಬರ್‌‌ 22;126(6):1065-77</ref> ಶಿಷ್ಟ ರೈಬೋಸೋಮ್‌ನ ತಾಣಗಳಲ್ಲಿ ಅಂಟಿಕೊಂಡಿರುವ tRNAಗಳು ಮತ್ತು mRNAಯೊಂದಿಗಿನ ''ಥರ್ಮಸ್‌ ಥರ್ಮೋಫಿಲಸ್‌'' ರೈಬೋಸೋಮ್‌‌ನ ಪಾರಸ್ಪರಿಕ ಕ್ರಿಯೆಗಳ ವಿವರಗಳನ್ನು ಓರ್ವರು ನೋಡಲು ಈ ರಚನೆಗಳು ಅವಕಾಶ ಕಲ್ಪಿಸುತ್ತವೆ. ಶೈನ್‌-ಡಲ್ಗಾರ್ನೋ ಸರಣಿಗಳನ್ನು ಹೊಂದಿರುವ ಉದ್ದದ mRNAಗಳೊಂದಿಗಿನ ರೈಬೋಸೋಮ್‌‌ನ ಪಾರಸ್ಪರಿಕ ಕ್ರಿಯೆಗಳು ಕೆಲವೇ ದಿನಗಳಲ್ಲಿ, 4.5- to 5.5-ಆಂಗ್‌ಸ್ಟ್ರಮ್‌‌‌ ವಿಶ್ಲೇಷಣೆಯಲ್ಲಿ ಗೋಚರವಾಗಿಸಲ್ಪಟ್ಟವು.<ref>ಯುಸುಪೊವಾ G, ಜೆನ್ನರ್‌‌‌ L, ರೀಸ್‌‌ B, ಮೊರಾಸ್‌ D, ಯುಸುಪೊವ್‌‌‌ M. ಸ್ಟ್ರಕ್ಚರಲ್‌ ಬೇಸಿಸ್‌ ಫಾರ್‌ ಮೆಸೆಂಜರ್‌ RNA ಮೂವ್‌ಮೆಂಟ್‌ ಆನ್‌ ದಿ ರೈಬೋಸೋಮ್‌‌. ನೇಚರ್‌. 2006 ನವೆಂಬರ್‌‌ 16;444(7117):391-4</ref>
 
== ಕಾರ್ಯವಿಧಾನ ==
{{Main|Translation (genetics)}}
 
mRNAನ್ನು ಪ್ರೋಟೀನಿಗೆ ರೂಪಾಂತರಿಸುವ ಪ್ರಕ್ರಿಯೆಯಾದ ಪ್ರೋಟೀನಿನ ಜೈವಿಕ ಉತ್ಪತ್ತಿಗೆ ಸಂಬಂಧಿಸಿದಂತೆ ರೈಬೋಸೋಮ್‌‌ಗಳು ದುಡಿಯುವ ಕುದುರೆಗಳಾಗಿವೆ. mRNAಯು ಕೋಡಾನುಗಳ ಒಂದು ಸರಣಿಯನ್ನು ಹೊಂದಿದ್ದು, ಪ್ರೋಟೀನನ್ನು ರೂಪಿಸಲು ಅಗತ್ಯವಿರುವ ಅಮೈನೋ ಆಮ್ಲಗಳ ಸರಣಿಗೆ ರೈಬೋಸೋಮ್‌ನ್ನು ಅವು ನಿರ್ದೇಶಿಸುತ್ತವೆ. mRNAಯನ್ನು ಒಂದು ಪಡಿಯಚ್ಚಿನಂತೆ ಬಳಸಿಕೊಂಡು, mRNAಯ ಪ್ರತಿಯೊಂದು ಕೋಡಾನಿನ (3 ನ್ಯೂಕ್ಲಿಯೋಟೈಡ್‌ಗಳು) ಮೂಲಕವೂ ರೈಬೋಸೋಮ್‌‌ ಹಾದುಹೋಗುತ್ತಾ, ಒಂದು tRNAಯಿಂದ ಒದಗಿಸಲ್ಪಟ್ಟ ಸೂಕ್ತವಾದ ಅಮೈನೋ ಆಮ್ಲದೊಂದಿಗೆ ಅದನ್ನು ಜೋಡಿಯಾಗಿಸುತ್ತದೆ. ವರ್ಗಾವಣೆ RNAಯ (tRNA) ಕಣಗಳು ಒಂದು ತುದಿಯಲ್ಲಿ ಒಂದು ಪೂರಕವಾಗಿರುವ ಪ್ರತಿ-ಕೋಡಾನನ್ನು ಹೊಂದಿದ್ದರೆ, ಮತ್ತೊಂದು ತುದಿಯಲ್ಲಿ ಸೂಕ್ತವಾದ ಅಮೈನೋ ಆಮ್ಲವನ್ನು ಹೊಂದಿರುತ್ತವೆ. ಮೆಥಿಯೋನೈನ್‌‌‌ ಎಂಬ ಅಮೈನೋ ಆಮ್ಲವನ್ನು ಹೊಂದಿರುವ ಒಂದು tRNAಗೆ ವಿಶಿಷ್ಟವಾಗಿ ಅಂಟಿಕೊಂಡಿರುವ ಸಣ್ಣ ರೈಬೋಸೋಮ್‌ನ ಉಪಘಟಕವು, mRNA ಮೇಲಿನ ಒಂದು AUG ಕೋಡಾನಿಗೆ ಬಂಧಿಸಲ್ಪಡುತ್ತದೆ ಮತ್ತು ದೊಡ್ಡ ರೈಬೋಸೋಮ್‌ನ ಉಪಘಟಕವನ್ನು ಅದು ತೊಡಗಿಸುತ್ತದೆ. A, P ಮತ್ತು E ಎಂಬುದಾಗಿ ಹೆಸರಿಸಲ್ಪಟ್ಟ, RNAಯನ್ನು ಬಂಧಿಸುವ ಮೂರು ತಾಣಗಳನ್ನು ರೈಬೋಸೋಮ್‌ ಆಗ ಹೊಂದಿರುತ್ತದೆ. A ತಾಣವು ಒಂದು ಅಮೈನೋಅಸೈಲ್‌-tRNAಯನ್ನು (ಒಂದು ಅಮೈನೋ ಆಮ್ಲಕ್ಕೆ ಬಂಧಿಸಲ್ಪಟ್ಟ tRNA) ಬಂಧಿಸುತ್ತದೆ; P ತಾಣವು ಒಂದು ಪೆಪ್ಟಿಡೈಲ್‌‌-tRNAಯನ್ನು (ಸಂಶ್ಲೇಷಿಸಲ್ಪಡುತ್ತಿರುವ ಪೆಪ್ಟೈಡ್‌ಗೆ ಬಂಧಿಸಲ್ಪಟ್ಟ ಒಂದು tRNA) ಬಂಧಿಸುತ್ತದೆ; ಮತ್ತು E ತಾಣವು ಒಂದು ಮುಕ್ತ tRNAಯನ್ನು ಅದು ರೈಬೋಸೋಮ್‌‌ನಿಂದ ನಿರ್ಗಮಿಸುವುದಕ್ಕೆ ಮುಂಚೆಯೇ ಬಂಧಿಸುತ್ತದೆ. mRNAಯ 5' ತುದಿಗೆ ಸಮೀಪದಲ್ಲಿರುವ ಒಂದು ಆರಂಭದ ಕೋಡಾನು ಆಗಿರುವ AUGಯಲ್ಲಿ ಪ್ರೋಟೀನು ಸಂಶ್ಲೇಷಣೆಯು ಪ್ರಾರಂಭವಾಗುತ್ತದೆ. ರೈಬೋಸೋಮ್‌ನ P ತಾಣಕ್ಕೆ mRNAಯು ಮೊದಲು ಅಂಟಿಕೊಳ್ಳುತ್ತದೆ. ಪ್ರೋಕ್ಯಾರಿಯೋಟ್‌ಗಳಲ್ಲಿನ mRNAಯ ಶೈನ್‌-ಡಲ್ಗಾರ್ನೋ ಸರಣಿ ಹಾಗೂ ಯೂಕ್ಯಾರಿಯೋಟ್‌‌ಗಳಲ್ಲಿನ ಕೊಜಾಕ್‌ ಪೆಟ್ಟಿಗೆಯನ್ನು ಬಳಸುವುದರ ಮೂಲಕ, ರೈಬೋಸೋಮ್‌‌ ಆರಂಭದ ಕೋಡಾನನ್ನು ಗುರುತಿಸಬಲ್ಲಷ್ಟು ಸಮರ್ಥವಾಗಿರುತ್ತದೆ.
 
[[Fileಚಿತ್ರ:Ribosomer i arbete.png|frame|none|ಚಿತ್ರ 3 : ಒಂದು ರೈಬೋಸೋಮ್‌ನಿಂದ (2) (ಸಣ್ಣ ಮತ್ತು ದೊಡ್ಡ ಉಪಘಟಕಗಳಾಗಿ ತೋರಿಸಲ್ಪಟ್ಟಿವೆ) mRNAಯು (1) ಒಂದು ಪಾಲಿಪೆಪ್ಟೈಡ್‌‌ ಸರಪಳಿಯಾಗಿ (3) ರೂಪಾಂತರಗೊಂಡಿರುವುದು.mRNAಯ (AUG) ಆರಂಭದ ಕೋಡಾನಿನಲ್ಲಿ ರೈಬೋಸೋಮ್‌ ಪ್ರಾರಂಭಗೊಳ್ಳುತ್ತದೆ ಮತ್ತು ನಿಲುಗಡೆಯ ಕೋಡಾನಿನಲ್ಲಿ (UAG) ಕೊನೆಗೊಳ್ಳುತ್ತದೆ.]]
 
ಚಿತ್ರ 3ರಲ್ಲಿ, ರೈಬೋಸೋಮ್‌ನ ಎರಡೂ ಉಪಘಟಕಗಳು (<font color="#0000aa">ಸಣ್ಣದು</font> ಮತ್ತು <font color="#aa0000">ದೊಡ್ಡದು</font>) ಆರಂಭದ ಕೋಡಾನಿನಲ್ಲಿ ಜೋಡಣೆಗೊಳ್ಳುತ್ತವೆ (mRNAಯ 5' ತುದಿಯ ಕಡೆಗೆ). ಪಾಲಿಪೆಪ್ಟೈಡ್‌‌ ಸರಪಳಿಗೆ ಒಂದು ಅಮೈನೋ ಆಮ್ಲವನ್ನು ಲಗತ್ತಿಸುವ ಸಲುವಾಗಿ mRNAಯ ಮೇಲಿನ ಪ್ರಸಕ್ತ ಕೋಡಾನನ್ನು (ಮುಕ್ಕೂಟ) ಹೊಂದಿಸುವ tRNAಯನ್ನು ರೈಬೋಸೋಮ್‌ ಬಳಸುತ್ತದೆ. mRNAಯ ಮೇಲಿನ ಪ್ರತಿಯೊಂದು ಮುಕ್ಕೂಟಕ್ಕೂ ಹೀಗೆಯೇ ಮಾಡಲಾಗುತ್ತದೆ, ಅದೇ ವೇಳೆಗೆ mRNAಯ 3' ತುದಿಯ ಕಡೆಗೆ ರೈಬೋಸೋಮ್‌‌ ಚಲಿಸುತ್ತದೆ. ಬ್ಯಾಕ್ಟೀರಿಯಾದ ಜೀವಕೋಶಗಳಲ್ಲಿ ಸಾಮಾನ್ಯವಾಗಿ, ಒಂದು ಏಕ mRNAಯ ಮೇಲೆ ಹಲವಾರು ರೈಬೋಸೋಮ್‌‌ಗಳು ಸಮಾನಾಂತರವಾಗಿ ಕೆಲಸಮಾಡುತ್ತಾ, ''ಪಾಲಿರೈಬೋಸೋಮ್‌‌'' ಅಥವಾ ''ಪಾಲಿಸೋಮ್‌‌‌‌'' ನ್ನು ರೂಪಿಸುತ್ತವೆ.
 
== ನೊಬೆಲ್‌ ಪಾರಿತೋಷಕ ==
ಆಲ್ಬರ್ಟ್‌ ಕ್ಲೌಡ್‌ ಮತ್ತು ಕ್ರಿಶ್ಚಿಯನ್‌ ಡೆ ದುವೆ ಎಂಬಿಬ್ಬರೊಂದಿಗೆ ಜೊತೆಯಾಗಿ, ಜಾರ್ಜ್‌ ಎಮಿಲ್‌‌ ಪೆಲೇಡ್‌‌ಗೆ ರೈಬೋಸೋಮ್‌‌ಗಳ ಆವಿಷ್ಕಾರಕ್ಕೆ ಸಂಬಂಧಿಸಿದಂತೆ, ಶರೀರ ವಿಜ್ಞಾನ ಅಥವಾ ಔಷಧ ವೈದ್ಯಶಾಸ್ತ್ರದಲ್ಲಿನ ನೊಬೆಲ್‌ ಪಾರಿತೋಷಕವನ್ನು 1974ರಲ್ಲಿ ಪ್ರದಾನಮಾಡಲಾಯಿತು.<ref>[http://www.faqs.org/health/bios/79/George‌-Palade‌.html. Palade‌.</ref>
2009ರ [[ರಸಾಯನಶಾಸ್ತ್ರ|ರಸಾಯನ ಶಾಸ್ತ್ರ]]ದಲ್ಲಿನ [[ನೊಬೆಲ್ ಪ್ರಶಸ್ತಿ|ನೊಬೆಲ್‌ ಪಾರಿತೋಷಕ]]ವನ್ನು ಡಾ.[[ವೆಂಕಟರಾಮನ್ ರಾಮಕೃಷ್ಣನ್|ವೆಂಕಟರಾಮನ್‌‌ ರಾಮಕೃಷ್ಣನ್‌‌]], ಡಾ.ಥಾಮಸ್‌ A. ಸ್ಟೀಟ್ಜ್‌‌ ಮತ್ತು ಡಾ.ಅಡಾ E. ಯೊನಾಥ್‌ ಇವರುಗಳಿಗೆ, "ರೈಬೋಸೋಮ್‌‌ನ<ref>[http://nobelprize.org/nobel_prizes/chemistry/laureates/2009/ 2009 ನೊಬೆಲ್‌ ಪ್ರೈಜ್‌ ಇನ್‌ ಕೆಮಿಸ್ಟ್ರಿ], ನೊಬೆಲ್‌ ಫೌಂಡೇಷನ್‌.</ref> ರಚನೆ ಮತ್ತು ಕಾರ್ಯಚಟುವಟಿಕೆಯ ಅಧ್ಯಯನಗಳಿಗೆ ಸಂಬಂಧಿಸಿದಂತೆ" ನೀಡಲಾಯಿತು.
 
== ಇವನ್ನೂ ಗಮನಿಸಿ ==
<div>
* ಅಮೈನೋಗ್ಲೈಕೋಸೈಡ್‌‌ಗಳು
* ಯೂಕ್ಯಾರಿಯೋಟಿಕ್‌‌ ರೂಪಾಂತರ
* ರೂಪಾಂತರದ ನಂತರದ ಮಾರ್ಪಾಡು
* ಪ್ರೋಕ್ಯಾರಿಯೋಟಿಕ್‌‌ ರೂಪಾಂತರ
* RNA ತೃತೀಯಕ ರಚನೆ
* ರೂಪಾಂತರ (ತಳಿಶಾಸ್ತ್ರ)
* ಅಸ್ಥಿರತೆಯ ಪ್ರತ್ಯಾಮ್ಲ ಜೋಡಿ
</div>
 
== ಆಕರಗಳು ==
{{reflist|2}}
 
== ಬಾಹ್ಯ ಕೊಂಡಿಗಳು ==
* [http://www.bio.cmu.edu/Courses/BiochemMols/ribosome/70S.htm 70S ರೈಬೋಸೋಮ್‌‌ ಆರ್ಕಿಟೆಕ್ಚರ್‌ ಅನಿಮೇಷನ್‌ ಆಫ್‌ ಎ ವರ್ಕಿಂಗ್‌ ರೈಬೋಸೋಮ್‌‌]. [http://www.mdl.com/products/framework/chime/ ಈ ತಾಣ]ದಿಂದ ಮಾಹಿತಿ ಪಡೆಯಲು ಕೈಮ್‌ ಬ್ರೌಸರ್‌‌ ಪ್ಲಗ್‌ಇನ್‌ನ ಅಗತ್ಯವಿದೆ (ಈ ತಾಣದಲ್ಲಿ ನೋಂದಣಿ ಅಗತ್ಯ).
* [http://news.com.com/Lab+computer+simulates+ribosome+in+motion/2100-11395_3-5907401.html ಪ್ರಯೋಗಾಲಯದ ಕಂಪ್ಯೂಟರ್‌‌ ಚಲನೆಯಲ್ಲಿರುವ ರೈಬೋಸೋಮ್‌ನ್ನು ಅನುಕರಿಸುತ್ತದೆ]
೧೧೧ ನೇ ಸಾಲು:
{{Ribosome subunits}}
{{NCBI-scienceprimer}}
 
[[Categoryವರ್ಗ:ರೈಬೋಸೈಮ್‌ಗಳು]]
[[Categoryವರ್ಗ:ಪ್ರೋಟೀನಿನ ಜೈವಿಕ ಉತ್ಪತ್ತಿ]]
[[Categoryವರ್ಗ:ಅಂಗಕಗಳು]]
 
[[ar:ريبوسوم]]
Line ೧೩೦ ⟶ ೧೩೧:
[[es:Ribosoma]]
[[eu:Erribosoma]]
[[fa:ریبوزومرناتن]]
[[fi:Ribosomi]]
[[fo:Ribosom]]
"https://kn.wikipedia.org/wiki/ರೈಬೋಸೋಮ್‌" ಇಂದ ಪಡೆಯಲ್ಪಟ್ಟಿದೆ