ಎಸಿನೀಲ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/ACNielsen (revision: 369086171) using http://translate.google.com/toolkit with about 100% human translations.
( ಯಾವುದೇ ವ್ಯತ್ಯಾಸವಿಲ್ಲ )

೧೩:೫೦, ೮ ನವೆಂಬರ್ ೨೦೧೦ ನಂತೆ ಪರಿಷ್ಕರಣೆ

ಎಸಿನೀಲ್ಸನ್ ಪ್ರಪಂಚದಾದ್ಯಂತ ವ್ಯಾಪಿಸಿರುವ ಜಾಗತಿಕ ವ್ಯಾಪಾರೋದ್ಯಮ ಸಂಶೋಧನಾ ಸಂಸ್ಥೆಯಾಗಿದ್ದು, ಇದರ ಮುಖ್ಯ ಕಛೇರಿ ನ್ಯೂಯಾರ್ಕ್ ನಗರದಲ್ಲಿದೆ. ಉತ್ತರ ಅಮೆರಿಕಾ ಪ್ರಾಂತೀಯ ಮುಖ್ಯ ಕಛೇರಿಯು ಶಾನ್‌ಬರ್ಗ್, ಐಎಲ್ನಲ್ಲಿದೆ.[೧] 2010 ಮೇನಿಂದ, ಇದು ನೀಲ್ಸನ್ ಕಂಪನಿಯ ಭಾಗವಾಗಿದೆ.

ಇತಿಹಾಸ

ಮಾರುಕಟ್ಟೆದಾರರಿಗೆ ಮಾರುಕಟ್ಟೆಯ ಮೇಲೆ ಮತ್ತು ಮಾರಾಟದ ಮೇಲೆ ಮಹತ್ತರ ಪರಿಣಾಮ ಬೀರುವಂತಹ ಯೋಜನೆಗಳಿಗೆ ವಿಶ್ವಸನೀಯ ಮತ್ತು ವಸ್ತುನಿಷ್ಠ ಮಾಹಿತಿ ಒದಗಿಸಲು 1923ರಲ್ಲಿ ಆರ್ಥರ್. ನೀಲ್ಸನ್,(ಹಿರಿಯ)ರಿಂದ, ಚಿಕಾಗೋ, ಇಲಿನಾಯ್ಸ್‌ನಲ್ಲಿ ಸ್ಥಾಪನೆಯಾಯಿತು. ಎಸಿನೀಲ್ಸನ್ 1939ರಲ್ಲಿ ಅಂತರಾಷ್ಟ್ರೀಯವಾಗಿ ತನ್ನ ಯೋಜನೆಯನ್ನು ವಿಸ್ತರಿಸಲು ಪ್ರಾರಂಭಿಸಿತು, ಈಗ ಸುಮಾರು 100ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಚಟುವಟಿಕೆಗಳು

ಎಸಿನೀಲ್ಸನ್'ರ ಒಂದು ಉತ್ತಮ ಸೃಷ್ಟಿ ಎಂದರೆ ನೀಲ್ಸನ್ ರೇಟಿಂಗ್ಸ್ , ತಮ್ಮ ಮಾದ್ಯಮ ಮಾರುಕಟ್ಟೆ ಮೂಲಕ ಟಿವಿ, ರೇಡಿಯೋ, ಮತ್ತು ಸುದ್ದಿಪತ್ರಿಕೆಯ ಪ್ರೇಕ್ಷಕರನ್ನು ಮಾಪನ ಮಾಡಲಾಗುತ್ತದೆ. 1950ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅಂಕಿಅಂಶಗಳಿಗಾಗಿ ಸುಮಾರು 1200 ಟಿವಿಗಳಿಗೆ ಧ್ವನಿಮುದ್ರಿಕ ಸಾಧವನ್ನು ಹೊಂದಿಸಿ ಇದನ್ನು ಆರಂಭಿಸಲಾಯಿತು.[೧] ಇನ್ ಮೇಲ್ ಕ್ಯಾಟ್ರಿಡ್ಜಸ್‌(ರೆಕಾರ್ಡ್ ಪ್ಲೇಯರ್‌ನೊಳಗಿನ ಗ್ರಾಹಕ ತುದಿಯಿರುವ ಸಣ್ಣ ಕರಡಿಗೆ)ನೊಳಗಡೆ ಚಿತ್ರೀಕರಣ ಪದರ ಬಳಸಿಕೊಂಡು ಗ್ರಾಹಕರು ಯಾವ ಟಿವಿ ನೋಡುತ್ತಿದ್ದಾರೆ ಎಂಬುದನ್ನು ಮುದ್ರಿಸಿಕೊಂಡು ಇದರ ಆಧಾರದ ಮೇಲೆ ವೀಕ್ಷಕರ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ನಂತರದ ದಿನಗಳಲ್ಲಿ ಮಾಹಿತಿ ಸಂಗ್ರಹಣೆಗಾಗಿ ಮತ್ತು ಪ್ರಸಾರಣೆಗಾಗಿ ವಿದ್ಯುನ್ಮಾನ ವಿಧಾನ ಅಭಿವೃದ್ಧಿ ಪಡಿಸಿದರು. 1996ರಲ್ಲಿ, ಎಸಿನೀಲ್ಸನ್ ಈ ವಿಭಾಗವನ್ನು ಬೇರ್ಪಡಿಸಿ ಬೇರೆ ಕಂಪನಿಯಾಗಿ ಮಾಡಲಾಯಿತು ಇದನ್ನು ನೀಲ್ಸನ್ ಮೀಡಿಯಾ ರಿಸರ್ಚ್ (ಎನ್‌ಎಂಆರ್) ಎಂದು ಕರೆಯಲಾಯಿತು. 1999ರಲ್ಲಿ ಡಚ್ ಕಂಪನಿ ಕಂಗ್ಲೊಮೆರೆಟ್ ವಿಎನ್‌ಯು ಇದನ್ನು ವಶಕ್ಕೆ ತೆಗೆದುಕೊಳ್ಳುವವರೆಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು.

ಮಾರುಕಟ್ಟೆ ಸಂಶೋಧನೆಗಾಗಿ ಹೋಮ್‌ಸ್ಕ್ಯಾನ್ ಎಂಬ ಇನ್ನೊಂದು ಸಾಧನವನ್ನು ಕೆಲವು ಗ್ರಾಹಕರು ಮುದ್ರಿಸಿಕೊಂಡು ಖರೀದಿ ಮಾಡಿದ ಎಲ್ಲಾ ವಿಧವಾದ ಕಿರಾಣಿ ಸಾಮಾನುಗಳು ಮತ್ತು ಚಿಲ್ಲರೆ ಖರೀದಿಯನ್ನು ವರದಿಮಾಡುತ್ತಾರೆ ಈ ಮೂಲಕ ಯಾವ ಪ್ರದೇಶದ ಜನರು ಯಾವ ರೀತಿಯ ಸರಕುಗಳನ್ನು ಖರೀದಿ ಮಾಡುತ್ತಾರೆ ಎಂಬುದನ್ನು ತಿಳಿಯುತ್ತಾರೆ. ಆಸ್ಟ್ರೇಲಿಯಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್,ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಂತಹ ಹಲವಾರು ದೇಶಗಳಲ್ಲಿ ಹೋಮ್‌ಸ್ಕ್ಯಾನ್ ಬಳಸಲಾಗುತ್ತಿದೆ. 2004ರಲ್ಲಿ, ಎಸಿನೀಲ್ಸನ್ ಹೋಮ್‌ಸ್ಕ್ಯಾನ್ ಯೋಜನೆಗಾಗಿ ಏಷ್ಯಾದಾದ್ಯಂತ ಮಾಹಿತಿ ಸಂಗ್ರಹಣೆಗಾಗಿ ಚಿಪರ್‌ಲ್ಯಾಬ್ ಸಿಪಿಟಿ-8001 ಆಯ್ದುಕೊಂಡಿತು.[೨]

ಅಂತರ್‌ರಾಷ್ಟ್ರೀಯ

ಜರ್ಮನಿಯಲ್ಲಿ, ಎಸಿನೀಲ್ಸನ್, ನೀಲ್ಸನ್ ಏರಿಯಾಗಳಲ್ಲಿ (ಅಥವಾ ನೀಲ್ಸನ್‌ಗಿಬೈಟ್ , ಜರ್ಮನಿ) ತಮ್ಮ ಸೇವೆಯನ್ನು ಪರಿಚಯಿಸಿದ ಕಾರಣದಿಂದಾಗಿ ಪ್ರಖ್ಯಾತಿಯನ್ನು ಪಡೆದಿದೆ. ಇದರಲ್ಲಿ ಪ್ರತಿಯೊಂದು ಜರ್ಮನ್‌ನ ಗಣರಾಜ್ಯಗಳಾಗಿದ್ದು ಇವು ಒಂದೇ ರೀತಿಯ ಆರ್ಥಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಗ್ರಾಹಕ ನಡವಳಿಕೆಯನ್ನು ಹೊಂದಿದೆ. ವೈವಿಧ್ಯತೆಯುಳ್ಳ ಜರ್ಮನಿಯಲ್ಲಿ ಮಾರುಕಟ್ಟೆ ತಂತ್ರಗಳು ಗಣನೀಯವಾಗಿ ನೀಲ್ಸನ್‌‍ಗಿಬೈಟ್ ಮೇಲೆ ಆಧಾರವಾಗಿವೆ. ಇದು ಎಲ್ಲಿಯವರೆಗೆ ಇದೆ ಎಂದರೆ ನೀಲ್ಸನ್‌ಗಿಬೈಟ್ ಪ್ರದೇಶಗಳಲ್ಲಿ ಮಾತ್ರ ಕೆಲವು ಟ್ರೇಡ್‌ಮಾರ್ಕ್ ಅಥವಾ ಮಾರ್ಕೆಟಿಂಗ್ ಕ್ಯಾಂಪೇನ್‌ಗಳು ಪರಿಚಯಿಸುವಂತಾಗಿದೆ. ಇದಲ್ಲದೆ, ರಾಷ್ಟ್ರಾದ್ಯಂತ ಪ್ರಸಾರ ಇರುವಂತಹ ಹಲವಾರು ಸುದ್ಧಿ ಪತ್ರಿಕೆಗಳು ಮತ್ತು ಮಾಗಜೀನ್‌ಗಳು, ಕೇವಲ ನೀಲ್ಸನ್‌ಗಿಬೈಟ್‌‍ ಪ್ರದೇಶಗಳಲ್ಲಿ ಮಾತ್ರ ಅಥವಾ ಕೇವಲ ಒಮ್ಮೆ ಮಾತ್ರ ಜಾಹೀರಾತುಗಳನ್ನು ನೀಡುವಂತಾಗಿದೆ; ಪತ್ರಿಕೆಗಳ ಪ್ರಸಾರದ ಅಂಕಿಅಂಶ ಕೂಡ ನೀಲ್ಸನ್‌ಗಿಬೈಟ್ ಹೇಳಿದಂತೆ ಕೆಲವೊಮ್ಮೆ ನಂಬಲಾಗುತ್ತದೆ.

ಇತರೆ ಕಂಪೆನಿಗಳ ಖರೀದಿ ಮತ್ತು ಹೊಂದಾಣಿಕೆ (ಎಂ & ಎ)

2001ರಲ್ಲಿ, ವಿಎನ್‌ಯು ಮಾರುಕಟ್ಟೆ ಮಾಹಿತಿ ಗೂಪ್‌ನ ಒಂದು ಭಾಗವಾಗಿ,ವಿಎನ್‌ಯು ಎಸಿನೀಲ್ಸನ್ ಕಂಪನಿಯನ್ನು ವಶಪಡಿಸಿಕೊಂಡಿತು, ಮೊದಲು ಎನ್‌ಎಂಆರ್ ಎಂಬ ಹೆಸರಿನಲ್ಲಿತ್ತು ಈಗಲೂ ಅದೇ ಹೆಸರಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಎಸಿನೀಲ್ಸನ್ ಮುಖ್ಯಕಛೇರಿಯು ಇಲ್ಲಿನಾಯ್ಸ್‌ನ ಶಾನ್ಬರ್ಗ್‌ನಲ್ಲಿದ್ದಾಗ ನೀಲ್ಸನ್ ಮಾದ್ಯಮ ಸಂಶೋಧನೆ ನ್ಯೂಯಾರ್ಕ್ ನಗರದಲ್ಲಿತ್ತು.

ಎಸಿನೀಲ್ಸನ್ ನೀಲ್ಸನ್//ನೆಟ್‌ರೇಟಿಂಗ್ಸ್ ಎನ್ನುವ ಸಹ ಸಂಸ್ಥೆಯನ್ನು ಹೊಂದಿದೆ, ಇದು ಇಂಟರ್ನೆಟ್ ಮತ್ತು ಡಿಜಿಟಲ್ ಮೀಡಿಯಾ ಬಳಕೆದಾರರನ್ನು ಮಾಪನ ಮಾಡುತ್ತದೆ, ಮತ್ತು ನೀಲ್ಸನ್ ಬುಜ್‌ಮೆಟ್ರಿಕ್ಸ್ ಬಳಕೆದಾರ-ಹುಟ್ಟುಹಾಕಿದ ಮೀಡಿಯಾವನ್ನು ಮಾಪನ ಮಾಡುತ್ತದೆ.

ಭಾರತದಲ್ಲಿನ ಆರೋಗ್ಯ ಸುರಕ್ಷಾ ಮಾಹಿತಿ ಉದ್ಯಮ ನಡೆಸಲು ಜನವರಿ 1 2004ರಿಂದ ಐಎಂಎಸ್ ಹೆಲ್ತ್ ಮತ್ತು ಎಸಿನೀಲ್ಸನ್ ಒಆರ್‌ಜಿ-ಎಂಎಆರ‍್ಜಿ ಜಂಟಿಯಾಗಿ ಒಪ್ಪಂದ ಮಾಡಿಕೊಂಡವು,ಈವೆರಡು ಸಂಸ್ಥೆಗಳ ಜಾಗತಿಕ ಪರಿಣಿತಿ ಮತ್ತು ಬಲವಾದ ಸ್ಥಳೀಯ ಜನರ ಮೂಲಕ ಔಷಧ ವಸ್ತುಗಳ ಮಾರಾಟದ ಮಾರುಕಟ್ಟೆಗೆ ಸಂಬಂಧಿಸಿ ತಾಂತ್ರಿಕವಾದ ಪರಿಹಾರವನ್ನು ಕಾರ್ಯಗತ ಮಾಡಿದವು.

2005ರಲ್ಲಿ, ಎಸಿನೀಲ್ಸನ್ ಎಂವಿಪಿ (ಮೀಡಿಯಾ ವೈಸ್ ಪ್ಯಾನಲ್) ಎಂಬ ಯೋಜನೆಯನ್ನು ಪ್ರಾರಂಭ ಮಾಡಿತು. ಪ್ಯಾನೆಲ್ ಸದಸ್ಯರು ವಿದ್ಯುನ್ಮಾನ ಮಾನಿಟರ್ ಒಯ್ಯುತ್ತಾರೆ ಇದು ಟಿವಿ ಮತ್ತು ರೆಡಿಯೋ ಪ್ರಸಾರ ಮಾಡುವ ಡಿಜಿಟಲ್ ಸ್ಟೇಷನ್ ಮತ್ತು ಕಾರ್ಯಕ್ರಮ ಗುರುತಿಸುವ ಸಂಕೇತಗಳನ್ನು ಪತ್ತೆ ಹಚ್ಚಿ ಮಾಹಿತಿಯನ್ನು ಬಹಿರಂಗಪಡಿಸುತ್ತವೆ. ಸದಸ್ಯರು ರಾತ್ರಿ ವೇಳೆಯಲ್ಲಿ ಮಾನಿಟರ್‌ನ್ನು ಒಂದು ಅಟ್ಟಣಿಗೆಗೆ ತೂಗುಹಾಕುತ್ತಾರೆ ಇದು ದೂರವಾಣಿಯಿಂದ ಸಂಗ್ರಹಿತವಾದ ಮಾಹಿತಿಯನ್ನು ಪಡೆದು ಮನೆಯ ವಿದ್ಯುತ್ ವಾಯರಿನ ಮೂಲಕ ರಿಲೆ ಉಪಕರಣಕ್ಕೆ ತಲುಪಿಸುತ್ತವೆ, ಹೋಮ್ ನೆಟ್‌ವರ್ಕ್ ಆಗಿ ವಿದ್ಯುತ್ ವಾಯರನ್ನು ಪ್ರಾಯೋಗಿಕವಾಗಿ ಬಳಸಿರುವುದು ಇದೇ ಮೊದಲು. ಸದಸ್ಯರಿಗೆ ಅಂದಾಜು ಒಂದು ವಾರಗಳ ಕಾಲ ಗಮನಿಸಲು ಹೇಳಿದ್ದರು, ಎಂವಿಪಿ ಪ್ರೋಗ್ರಾಮ್ 17, 2008ರಂದು ಕೊನೆಯಾಯಿತು.

2007ರಲ್ಲಿ, ವಿಎನ್‌ಯು ಮಾಲೀಕನು ಇದರ ಹೆಸರನ್ನು "ದ ನೀಲ್ಸನ್ ಕಂಪನಿ" ಎಂದು ಬದಲಾಯಿಸಿದನು.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

  1. ನೀಲ್ಸನ್ - ಕಾಂಟ್ಯಾಕ್ಟ್
  2. "ಸಿಪಿಟಿ-8001 ಫ್ರಿಫರ್ಡ್ ಟರ್ಮಿನಲ್ ಫಾರ್ ಎಸಿ ನೀಲ್ಸನ್ (ಏಷಿಯಾ ಸ್ಪೆಸಿಫಿಕ್)" ಐಟಿ ರಿಸೆಲ್ಲರ್ ಆನ್‌ಲೈನ್, 2004-10-28

Examples for marketing based on ನೀಲ್ಸನ್ areas: [೨] [೩] [೪]