ಟಾಟಾ ಸಫಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ
( ಯಾವುದೇ ವ್ಯತ್ಯಾಸವಿಲ್ಲ )

೧೫:೫೧, ೨೧ ಏಪ್ರಿಲ್ ೨೦೦೬ ನಂತೆ ಪರಿಷ್ಕರಣೆ

ಟಾಟಾ ಸಫಾರಿ ಟಾಟಾ ಮೋಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯು‌ವಿ)ವರ್ಗದ ನಾಲ್ಕು ಚಕ್ರದ ವಾಹನ. ಟಾಟಾ ಸಫಾರಿ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಎಸ್‌ಯುವಿ. ಈ ವಾಹನವನ್ನು ಪ್ರಥಮವಾಗಿ ೧೯೯೮ರಲ್ಲಿ ಟಾಟಾ ಮೋಟರ್ಸ್ ಸಂಸ್ಥೆ ಬಿಡುಗಡೆ ಮಾಡಿತು. ಟಾಟಾ ಮೋಟರ್ಸ್ ತದನಂತರ ೨೦೦೧ರಲ್ಲಿ ಟಾಟಾ ಸಫಾರಿ ಇಎಕ್ಸ್, ೨೦೦೩ರಲ್ಲಿ ಟಾಟಾ ಸಫಾರಿ ಲಿಮಿಟೆಡ್ ವರ್ಶನ್, ೨೦೦೩ರಲ್ಲಿಯೆ ಟಾಟಾ ಸಫಾರಿ ಇಎಕ್ಸ್ಐ ಪೆಟ್ರೋಲ್ ಮತ್ತು ೨೦೦೫ರಲ್ಲಿ ಟಾಟಾ ಸಫಾರಿ ಡೈಕೊರ್ ಮಾದರಿಗಳನ್ನು ಬಿಡುಗಡೆ ಮಾಡಿತು. ಟಾಟಾ ಸಫಾರಿ ಮಧ್ಯ ಮತ್ತು ಪೂರ್ವ ಏಶಿಯಾ, ಯುರೋಪ್, ಆಫ್ರಿಕಾ, ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾದ ಹಲವು ದೇಶಗಳಿಗೆ ರಫ್ತಾಗುತ್ತಿದೆ. ೧೯೯೮ರಲ್ಲಿ ಬಿಡುಗಡೆಯಾಗಿದ್ದಾಗ ಟಾಟಾ ಸಫಾರಿ ೧.೯ ಲೀಟರ್ ಡೀಸೆಲ್ ಇಂಜಿನ್ ಹೊಂದಿತ್ತು. ೨೦೦೩ರಲ್ಲಿ ೨ ಲೀಟರ್ ಪೆಟ್ರೋಲ್ ಇಂಜಿನ್‌ನಲ್ಲಿ ಕೂಡ ಲಭ್ಯವಾದ ಸಫಾರಿ, ೨೦೦೫ರಲ್ಲಿ ಸಿಆರ್‌ಡಿಐ ತಂತ್ರಜ್ಞಾನ ಹೊಂದಿರುವ ೩ ಲೀಟರ್ ಡೀಸೆಲ್ ಇಂಜಿನ್ನೊಂದಿಗೆ ಲಭ್ಯವಾಯಿತು. ಭಾರತದಲ್ಲಿ ಹಲವು ವಿದೇಶಿ ಎಸ್‌ಯುವಿಗಳ ಪ್ರವಾಹವಾದರೂ ಕೂಡ ಇಂದಿಗೂ ಟಾಟಾ ಸಫಾರಿ ಬಹು ಜನಪ್ರಿಯವಾಗಿದೆ.

ಚಿತ್ರ:Tata safari dicor.jpg
ಟಾಟಾ ಸಫಾರಿ ಡೈಕೊರ್

ಬಾಹ್ಯ ಸಂಪರ್ಕ ಕೊಂಡಿಗಳು