ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: hi
೫ ನೇ ಸಾಲು:
 
ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ [[ಭಾರತ ರತ್ನ]] ಪ್ರಶಸ್ತಿಯನ್ನು ಕೊಡಲಾಯಿತು.
 
 
==ಬಾಲ್ಯ==
 
ವಲ್ಲಭಭಾಯ್ ಝವೇರಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ 31 ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ನರಸೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು.
 
ಪಟೇಲರು ಶಾಲೆ ಸೇರಿದ್ದು ತಡವಾಗಿ. ಇವರ ಕುಟುಂಬದವರು ಅವರ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನಾಗಲೀ, ಅದಕ್ಕೆ ಬೆಂಬಲವನ್ನಾಗಲೀ ಕೊಟ್ಟಂತೆ ಕಾಣುವುದಿಲ್ಲ. ನಡಿಯಾದಿನಿಂದ, ಪೇಟ್ಲಾಡ್, ಹಾಗೂ ಮುಂದೆ ಬೋರ್ಸಾಡ್ ಎಂಬಲ್ಲಿ ಅವರ ವಿದ್ಯಾಭ್ಯಾಸ ಮುಂದುವರಿಯಿತು. ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ ! ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಸ್ವತಃ ಪಟೇಲರಿಗೆ ಪ್ಲೀಡರ್ ಪರೀಕ್ಷೆ ಪಾಸು ಮಾಡಿ ವಕೀಲರಾಗಬೇಕೆಂದು ಅಪೇಕ್ಷೆಯಿತ್ತು. ಅದಕ್ಕಾಗಿ ಹಣ ಒಟ್ಟುಮಾಡಿ , ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.
 
ನಂತರ ಪಟೇಲರು, ಹೇಂಡತಿ ಝವೇರಬಾರೊಂದಿಗೆ, ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು, ಸಂಸಾರ ಹೂಡಿದರು.ಅವರಿಗೆ ಇಬ್ಬರು ಮಕ್ಕಳದರು. 1904ರಲ್ಲಿ ಮಣಿ ಎಂಬ ಮಗಳು ಮತ್ತು 1906ರಲ್ಲಿ ದಹ್ಯಾ ಎಂಬ ಮಗ. ಬ್ಯುಬೋನಿಕ್ ಪ್ಲೇಗಿನಿಂದ ನರಳುತ್ತಿದ್ದ ಗೆಳೆಯನೊಬ್ಬನ ಆರೈಕೆ ಮಾಡುತ್ತ, ಪಟೇಲರು ಸ್ವತಃ ಆ ರೋಗಕ್ಕೆ ತುತ್ತಾದಾಗ, ತಮ್ಮ ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ, ತಮ್ಮ ಮನೆಯನ್ನು ತ್ಯಜಿಸಿ , ನಡಿಯಾದಿನ ಮನೆಯೊಂದರಲ್ಲಿ ( ಪಾಳುಬಿದ್ದ ದೇವಸ್ಥಾನ ಎಂದೂ ಕೆಲವರು ಹೇಳುತ್ತಾರೆ) ಚೇತರಿಕೊಳ್ಳುವವರೆಗೆ ನೆಲೆಸಿದರು. 1909ರಲ್ಲಿ ಅವರ ಪತ್ನಿ ತೀರಿಕೊಂಡರು. ಪಟೇಲರ ಅಂತರ್ಮುಖಿ ಸ್ವಭಾವ ಅವರ ಹೆಂಡತಿಯ ಬಗ್ಯೆ ಸಾರ್ವಜನಿಕರಿಗೆ ತಿಳಿದಿರುವುದು ಅತ್ಯಲ್ಪ. ಪಟೇಲರು ಮರುಮದುವೆ ಮಾಡಿಕೊಳ್ಳಲಿಲ್ಲ.
 
ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಲೇ , ಪಟೇಲರು ಇಂಗ್ಲೆಂಡ್ ಪ್ರಯಾಣಕ್ಕೆ ಹಣ ಶೇಖರಿಸತೊಡಗಿದರು. ಮುಂದೆ ಇಂಗ್ಲೆಂಡ್ ಪ್ರಯಾಣದ ಅವಕಾಶ ಸಿಕ್ಕಿದಾಗ ಆ ಅವಕಾಶವನ್ನು ತಮ್ಮ ಅಣ್ಣ, ವಿಠ್ಠಲಭಾಯಿ ,ಗೆ ಬಿಟ್ಟುಕೊಟ್ಟದ್ದಷ್ಟೇ ಅಲ್ಲ, ಅದಕ್ಕೆ ತಾವು ಕೂಡಿಟ್ಟಿದ್ದ ಹಣವನ್ನೂ ನೀಡಿದರು. ಅದು ಆದದ್ದು ಹೀಗೆ: ಪರದೇಶ ಪ್ರಯಾಣದ ತಿಕೀಟುಗಳು ಮತ್ತು ಪಾಸು “ವಿ.ಜೆ.ಪಟೇಲ್” ( ಅಣ್ಣ , ತಮ್ಮ ಇಬ್ಬರ ಇನಿಷಿಯಲ್ಲುಗಳು ವಿ.ಜೆ. ಎಂದೇ ಇತ್ತು) ಎಂಬ ಹೆಸರಿಗೆ ಅವರ ಅಣ್ಣನ ಮನೆಯ ವಿಳಾಸಕ್ಕೆ ತಲುಪಿತು. ಅಣ್ಣನಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಹಿಂದೆಗೆಯದ ವಲ್ಲಭಭಾಯ್ ಅಣ್ಣನ ಪ್ರವಾಸದ ಖರ್ಚನ್ನೂ ನಿಭಾಯಿಸಿದರು.
 
ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡ್ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಲಂಡನ್ನಿನ ಮಿಡ್ಲ್ ಟೆಂಪಲ್ ಇನ್ನ್ ನಲ್ಲಿ ಪ್ರವೇಶ ಪಡೆದುಕೊಂಡರು. ಮೂವತ್ತಾರು ತಿಂಗಳುಗಳ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿ, ಕಾಲೇಜು ವಿದ್ಯಾಭ್ಯಾಸದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ತರಗತಿಗೆ ಪ್ರಥಮರಾಗಿ ಉತ್ತೀರ್ಣರಾದರು. ಅಲ್ಲಿಂದ ಹಿಂತಿರುಗಿ ಅಹಮದಾಬಾದಿನಲ್ಲಿ ನೆಲೆನಿಂತು, ಅಲ್ಲಿ ಅಗ್ರಮಾನ್ಯ ಬ್ಯಾರಿಸ್ಟರುಗಳಲ್ಲಿ ಒಬ್ಬರೆಂದು ಹೆಸರಾದರು
 
==ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ==
 
1918ರಲ್ಲಿ ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ,ಗೌರವ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧಿಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, ಅನ್ನಿ ಬೆಸಂಟರ ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧಿ ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು. ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು. ಪಟೇಲರು ಕಾಂಗ್ರೆಸ್ ಪಕ್ಷ ಸೇರಿದ್ದು 1918ರ ನಂತರ. ಅವರು ಕಾರ್ಯದರ್ಶಿಯಾಗಿದ್ದ ಗುಜರಾತ್ ಸಭಾ 1920ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು 1947ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
 
==ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳು==
 
ಖೇಡಾ ಹೋರಾಟದೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿ ಈ ಹೋರಾಟಕ್ಕೆ ಒಪ್ಪಿದ್ದರೂ ಸ್ವತಃ ಚಂಪಾರಣ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಕಾರಣ, ಈ ಹೋರಾಟದ ಮುಖಂಡತ್ವವನ್ನು ವಹಿಸಲು ಅಸಾಧ್ಯವಾಗಿತ್ತು. ಖೇಡಾ ವಿಷಯಕ್ಕಾಗಿ ಪೂರ್ಣಾವಧಿ ಸಮಯವನ್ನು ಮೀಸಲಿಡುವ ಸ್ವಯಂಸೇವಕನಿಗಾಗಿ ಗಾಂಧಿ ಕೇಳಿದಾಗ ಪಟೇಲರು ಕೈಯೆತ್ತಿ , ಎದ್ದು ನಿಂತರು. ಹಿಂದೆ ವಕೀಲರೂ, ಗಾಂಧಿಯವರ ಅನುಯಾಯಿಗಳೂ ಆಗಿದ್ದ ನರಹರಿ ಪಾರೀಖ್ ಮತ್ತು ಮೋಹನಲಾಲ್ ಪಂಡ್ಯರೊಂದಿಗೆ ಪಟೇಲರು ಹಳ್ಳಿಹಳ್ಳಿ ಪ್ರವಾಸ ಕೈಗೊಂಡು, ಗ್ರಾಮಸ್ಥರ ತೊಂದರೆಗಳನ್ನು ಪರಿಶೀಲಿಸಿ, ರಾಜ್ಯವ್ಯಾಪಿ ಆಂದೋಳನದಲ್ಲಿ ಅವರೆಲ್ಲರ ಬೆಂಬಲವನ್ನು ಬೇಡಿದರು. ರಾಜ್ಯದ ಎಲ್ಲೆಡೆಗಳಲ್ಲಿ ಹಿಂದೂ, ಮುಸ್ಲಿಂ ಎನ್ನದೆ, ಬಹುತೇಕ ಪ್ರತಿಯೊಬ್ಬರೂ ಪಟೇಲರ ಪರಿಶ್ರಮ ಮತ್ತು ನಾಯಕತ್ವವನ್ನು ಒಪ್ಪಿಕೊಂಡರು. ಪಟೇಲರು ಈ ಹೋರಾಟವು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಹಳ್ಳಿಗರು ಒಗ್ಗಟ್ಟನ್ನು ಮುರಿಯಬಾರದೆಂದು ಸಾರಿಹೇಳಿದರು. ಪಟೇಲರ ಈ ಕಾರ್ಯದಲ್ಲಿ ರಾಷ್ಟ್ರೀಯವಾದಿಗಳಾದ ಅಬ್ಬಾಸ್ ತ್ಯಾಬ್ಜೀ ಮತ್ತು ಅಹಮದಾಬಾದಿನ ಸಾರಾಭಾಯ್ ಕೈಗೂಡಿಸಿದರು.
ಹಳ್ಳಿಗರ ಕರನಿರಾಕರಣೆಯ ಸತ್ಯಾಗ್ರಹವನ್ನು ಮುರಿಯಲು ಸರಕಾರ ಪೋಲಿಸ್ ಪಡೆಗಳನ್ನು ಕಳುಹಿಸಿ, ಜಮೀನು, ಸಾಕುಪ್ರಾಣಿಗಳನ್ನೊಳಗೊಂಡು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ಬಂಧಿತರಾದರೂ ಹಳ್ಳಿಗರ ಕಡೆಯಿಂದ ಹಿಂಸಾತ್ಮಕ ಪ್ರತಿಕ್ರಿಯೆ ಇಲ್ಲವೇಇಲ್ಲವೆನ್ನುವಷ್ಟು ಅಪರೂಪವಾಗಿತ್ತು. ಸತ್ಯಾಗ್ರಹಿಗಳಿಗೆ ರಾಜ್ಯಾದ್ಯಂತ ಜನಸಾಮಾನ್ಯರು, ಆಹಾರ, ಬಟ್ಟೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಿ, ಬೆಂಬಲ ಸೂಚಿಸಿದರು
 
 
{{ಸ್ವಾತಂತ್ರ್ಯ ಹೋರಾಟಗಾರರು}}