ಬೈಕಲ್ ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: eu:Baikal
ಚು robot Adding: mrj:Байкал Removing: mzn:بایکال; cosmetic changes
೧ ನೇ ಸಾಲು:
[[Imageಚಿತ್ರ:Olchon1.jpg|thumb|right|300px|ಬೈಕಲ್ ಸರೋವರ ಮತ್ತು ಒಖ್ಲೋನ್ ದ್ವೀಪ]]
[[Imageಚಿತ್ರ:Karte baikal2.png|thumb|right|೨೪೦px|ಸರೋವರದ ನಕಾಶೆ]]
ಬೈಕಲ್ ಸರೋವರವು [[ರಷ್ಯನ್ ಒಕ್ಕೂಟ]]ದ [[ಸೈಬೀರಿಯಾ]]ದ ದಕ್ಷಿಣ ಭಾಗದಲ್ಲಿ ಇರ್ಕುಟ್ಸ್ಕ್ ನಗರದ ಬಳಿ ಇದೆ. [[ಮಂಗೋಲಿಯನ್]] ಭಾಷೆಯಲ್ಲಿ ಪ್ರಕೃತಿ ಎಂಬರ್ಥ ಕೊಡುವ ಬೈಗಾಲ್ ಎಂಬ ಪದದಿಂದ ಬೈಕಲ್ ಹೆಸರು ವ್ಯುತ್ಪತ್ತಿಯಾಗಿದೆ. ಇದಕ್ಕೆ "ಸೈಬೀರಿಯಾದ ನೀಲಾಕ್ಷಿ" ಎಂಬ ಇನ್ನೊಂದು ಹೆಸರೂ ಇದೆ.
 
೧೬೩೭ ಮೀ. ( ೫೩೭೧ ಅಡಿ) ಗಳವರೆಗೆ ಆಳವಿರುವ ಬೈಕಲ್ ಸರೋವರ ಜಗತ್ತಿನ ಅತ್ಯಂತ ಆಳದ [[ಸರೋವರ]]ವಾಗಿದೆ. ಅಲ್ಲದೆ ಬೈಕಲ್ ಸರೋವರವು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಸಿಹಿನೀರನ್ನು ಹೊಂದಿರುವ ಸರೋವರವೂ ಕೂಡ. ಇದರಲ್ಲಿರುವ ನೀರಿನ ಒಟ್ಟು ಪ್ರಮಾಣ ಸುಮಾರು ೨೩೦೦೦ ಘನ ಕಿ.ಮೀ.ಗಳಷ್ಟು. ಜಗತ್ತಿನ ಭೂಪ್ರದೇಶದಲ್ಲಿರುವ ಒಟ್ಟು ಸಿಹಿನೀರಿನಲ್ಲಿ ಸುಮಾರು ೨೦% ದಷ್ಟು ಭಾಗ ಬೈಕಲ್ ಸರೋವರದಲ್ಲಿಯೇ ಇರುವುದು. [[ಟಾಂಗನ್ಯೀಕ ಸರೋವರ]]ದಂತೆ ಬೈಕಲ್ ಸರೋವರ ಕೂಡ ಪ್ರಾಚೀನ [[ಬಿರುಕು ಕಣಿವೆ]]ಯಲ್ಲಿ ರೂಪುಗೊಂಡಿದೆ. ಬೈಕಲ್ ಸರೋವರದ ಉದ್ದ ಸುಮಾರು ೬೩೬ ಕಿ.ಮೀ. ಮತ್ತು ಅಗಲ ೮೦ ಕಿ.ಮೀ. ಇದ್ದು ವಿಸ್ತೀರ್ಣ ಸುಮಾರು ೩೧೫೦೦ ಚ.ಕಿ.ಮೀ ಗಳಷ್ಟಾಗುವುದು.
 
ಬೈಕಲ್ ಸರೋವರವು ೧೫೦೦ಕ್ಕೂ ಹೆಚ್ಚಿನ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ಜಗತ್ತಿನ ಏಕೈಕ ಸಿಹಿನೀರಿನ [[ಸೀಲ್]] ಇಲ್ಲಿ ಮಾತ್ರ ಕಂಡು ಬರುವುದು. ಬೈಕಲ್ ಸರೋವರವನ್ನು ೧೯೯೬ರಲ್ಲಿ [[ಯುನೆಸ್ಕೋ]] [[ವಿಶ್ವ ಪರಂಪರೆಯ ತಾಣ]]ವೆಂದು ಘೋಷಿಸಿತು.
೧೦ ನೇ ಸಾಲು:
 
 
== ಸರೋವರದ ಇತಿಹಾಸ ಮತ್ತು ರೂಪುರೇಷೆಗಳು ==
 
[[ಟ್ರಾನ್ಸ್-ಸೈಬೀರಿಯನ್ ರೈಲುಮಾರ್ಗ]]ದ ನಿರ್ಮಾಣವಾಗುವವರೆಗೆ ಬೈಕಲ್ ಸರೋವರದ ಬಗ್ಗೆ ಜಗತ್ತಿಗೆ ತಿಳಿದಿದ್ದು ಬಹಳ ಕಡಿಮೆ. ಈ ಮಾರ್ಗದ ಒಂದು ಅಂಗವಾಗಿ ಬೈಕಲ್ ಸರೋವರದ ಸುತ್ತ ಒಂದು ಹೆಚ್ಚುವರಿ ರೈಲುದಾರಿಯನ್ನು ಕಲ್ಪಿಸಲಾಯಿತು. ಈ ರೈಲುದಾರಿಯಲ್ಲಿ ೨೦೦ ಸೇತುವೆಗಳು ಮತ್ತು ೩೩ [[ಸುರಂಗ]]ಗಳಿವೆ. ಈ [[ರೈಲುಮಾರ್ಗ]]ದ ನಿರ್ಮಾಣದ ಸಮಯದಲ್ಲಿ ಎಫ್.ಕೆ.ಡ್ರಿಝೆಂಕೊ ನೇತೃತ್ವದಲ್ಲಿ ಜಲತಜ್ಞರ ತಂಡವೊಂದು ಬೈಕಲ್ ಸರೋವರದ ವಿವರವಾದ [[ಕಾಂಟೂರ್ ನಕ್ಷೆ]]ಯನ್ನು ತಯಾರಿಸಿತು. ಆಗಷ್ಟೆ ಜಗತ್ತಿಗೆ ಈ ಬೈಕಲ್ ಸರೋವರದ ಅಗಾಧತೆಯ ಅರಿವಾಯಿತು. ಬೈಕಲ್ ಸರೋವರದಲ್ಲಿರುವ ನೀರಿನ ಪ್ರಮಾಣವು ಉತ್ತರ ಅಮೆರಿಕದ [[ಪಂಚ ಮಹಾಸರೋವರ]]ಗಳ ಓಟ್ಟು ನೀರಿಗೆ ಸಮನಾಗಿದೆ. ಅತಿ ಪ್ರಾಚೀನವಾದ ಬೈಕಲ್ ಸರೋವರವು ವಿರಳ ಜನವಸತಿಯಿರುವ ಪ್ರಾಂತ್ಯದಲ್ಲಿರುವುದರಿಂದ ಮಾನವನು ಪ್ರಕೃತಿಯ ಮೇಲೆ ಎಸಗುವ ದುರಾಚಾರಗಳಿಂದ ದೂರವುಳಿದಿದೆ. ಈ ಕಾರಣದಿಂದಾಗಿ ಬೈಕಲ್ ಸರೋವರವು ಹಲವು ಬಗೆಯ ಅತಿ ವಿಶಿಷ್ಟ [[ಸಿಹಿನೀರಿನ ಜೀವಜಂತು]]ಗಳಿಗೆ ಇನ್ನೂ ಆಶ್ರಯತಾಣವಾಗಿದ್ದು [[ಜೀವವಿಕಾಸ ವಿಜ್ಞಾನ]]ಕ್ಕೆ ಅಮೂಲ್ಯ ಕೊಡುಗೆಯಿತ್ತಿದೆ.
೧೮ ನೇ ಸಾಲು:
ಬೈಕಲ್ ಸರೋವರವನ್ನು ಸುಮಾರು ೩೦೦ [[ನದಿ]]ಗಳ ನೀರು ಬಂದು ಸೇರುತ್ತದೆ. ಇವುಗಳಲ್ಲಿ ಮುಖ್ಯವಾದ ಆರು ಇವು: [[ಸೆಲೆಂಗಾ]], [[ಚಿಕೋಯ್]], [[ಉಡಾ]], [[ಬರ್ಗುಝಿನ್]], [[ಅಂಗಾರಾ]] ಮತ್ತು [[ಮೇಲಿನ ಅಂಗಾರಾ]] ನದಿಗಳು. ಅತಿ ಆಳದ ಹೊರತಾಗಿಯೂ ಬೈಕಲ್ ಸರೋವರದ ನೀರು ಎಲ್ಲ ಕಡೆ ಉತ್ತಮಮಟ್ಟದಲ್ಲಿ [[ಆಮ್ಲಜನಕ]]ವನ್ನು ಹೊಂದಿದ್ದು ಜಲಜಂತುಗಳಿಗೆ ಅನುಕೂಲಕರವಾಗಿದೆ.
 
== ಬಾಹ್ಯ ಸಂಪರ್ಕಗಳು ==
* [http://www.eawag.ch/organisation/abteilungen/wut/schwerpunkte/umweltisotope/projekte/baikal Eawag aquatic research: Lake Baikal Homepage]
* [http://marine.usgs.gov/fact-sheets/baikal/ USGS survey fact sheet on Lake Baikal]
* [http://www.ilec.or.jp/database/asi/asi-27.html World lakes database entry] for Lake Baikal
* [http://bogard.isu.ru/plants/album/album.htm Plants of the Lake Baikal West Coast] in English and Russian (download a pdf-photoalbum and descriptions)
* [http://www.savebaikal.org/index.php?lang=1 Save Baikal Greenpeace site]
* [http://www.tahoebaikal.org/ Tahoe-Baikal Institute- environmental exchange non-profit site]
* [http://bogard.isu.ru/expeditions/lake_baikal.htm Expeditions "Lake Baikal & the Great Siberian Taiga"]
* [http://www.baikal.ru/old.baikal.ru/baikal/maps/rezko.jpg Huge map of Lake Baikal region]
* [http://www.wellesley.edu/Russian/Baikal/baikal.html Wellesley College's Lake Baikal homepage]
* [http://buryat-mongolia.info/ The most popular blog about Mongolia and Buryatia]
* '''[http://baikalclub.blogspot.com Baikal Club incorporated (international blog)]'''
 
[[ವರ್ಗ:ಜಲಸಮೂಹಗಳು]]
೮೫ ನೇ ಸಾಲು:
[[mn:Байгал нуур]]
[[mr:बैकाल सरोवर]]
[[mrj:Байкал]]
[[mwl:Lago Baikal]]
[[mzn:بایکال]]
[[new:बैकाल पुखु]]
[[nl:Baikalmeer]]
"https://kn.wikipedia.org/wiki/ಬೈಕಲ್_ಸರೋವರ" ಇಂದ ಪಡೆಯಲ್ಪಟ್ಟಿದೆ