ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
==ಜನನ ಹಾಗೂ ಬಾಲ್ಯ==
'[[ಲ್ಯೂ ಜಿಯಾಒಬೊ]]' ರವರು 'ಚಾಂಗ್ ಚುನ್,' ನ '[[ಜಿಲಿನ್]]', ನಗರದಲ್ಲಿ, ೧೯೫೫ ರಲ್ಲಿ ಜನಿಸಿದರು. ಮನೆಯ ವಾತಾವರಣ ಬಹಳ ಪ್ರಶಸ್ತವಾಗಿಯೂ ಸಂಘರ್ಷಮಯವಾಗಿಯೂ ಇತ್ತು. ೧೯೬೩-೧೯೭೩ ರ ವರೆಗೆ, 'ಲ್ಯೂ ಜಿಯಾಒಬೊ' ರವರ ತಂದೆಯವರ ಜೊತೆ, ಮಂಗೋಲಿಯ ಪ್ರಾಂತ್ಯದ '[[Horqin Right Front Banner of Inner Mongolia]]' ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಅಲ್ಲಿನ ಗ್ರಾಮೀಣವಲಯದ ಸಮಸ್ಯೆಗಳನ್ನು ಕುರಿತ ಆಂದೋಳನವಾಗಿತ್ತು. ತಮ್ಮ ೧೯ ನೆಯ ವಯಸ್ಸಿನಲ್ಲಿ, ಜಿಲಿನ್ ಪ್ರಾಂತ್ಯದ ಹಳ್ಳಿಯಲ್ಲಿ ಕೆಲಸ ಆರಂಭಿಸಿದರು. ಮುಂದೆ ಅವರು ಕಟ್ಟಡ ನಿರ್ಮಾಣದ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದರು. ಒಟ್ಟಿನಲ್ಲಿ ಹೋರಾಟ, ಅನ್ಯಾಯದ ವಿರುದ್ಧ 'ಬಂಡಾಯ' ಅವರ ರಕ್ತದಲ್ಲಿ ಸೇರಿಹೋಗಿತ್ತು.
==ವಿದ್ಯಾಭ್ಯಾಸ==
'ಲ್ಯೂ ಜಿಯಾಒಬೊ,' ರವರು, ೧೯೭೬ ರಲ್ಲಿ 'ಬೀಜಿಂಗ್ ನ ನಾರ್ಮಲ್ (ಜಿಲಿನ್) ವಿಶ್ವವಿದ್ಯಾಲಯ' ಸೇರಿ, ೧೯೮೨ ರಲ್ಲಿ, ಬಿ.ಎ. (ಸಾಹಿತ್ಯದಲ್ಲಿ) ಪದವಿಗಳಿಸಿದರು. ಪದವಿಯ ಬಳಿಕ ಅಲ್ಲಿಯೇ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ೧೯೮೮ ರಲ್ಲಿ 'ಲ್ಯೂ ಜಿಯಾಒಬೊ' ರವರು, '[[ಪಿ.ಎಚ್.ಡಿ]]' ಯನ್ನು ಗಳಿಸಿದರು. ೧೯೮೦ ರಲ್ಲಿ ಬರೆದೋದಿದ ಅವರ 'ಪ್ರಬಂಧೋಪನ್ಯಾಸ' ,Critique on Choices - Dialogue with Le Zehou and Aesthetics and Human Freedom' ಅವರಿಗೆ ಹೆಚ್ಚು ಮಾನ-ಸನ್ಮಾನಗಳನ್ನು ಅವರ ಕಾಲೇಜಿನ ಪರಿಸರದಲ್ಲಿ ತಂದುಕೊಟ್ಟಿತು. ಅದರಲ್ಲಿ ನಮೂದಿಸಿದ ಲೇಖನದಲ್ಲಿ ಚೈನಾದೇಶದ ಪ್ರಖ್ಯಾತ ಚಿಂತಕ, '[[ಲಿ ಝೆಒ]]' ರವರ ತತ್ವಗಳನ್ನು ಗಂಭೀರವಾಗಿ ಚರ್ಚೆಗೆ ತೆರೆದಿಟ್ಟಿತು. ೧೯೮೮-೮೯ ರವ ವರೆಗೆ ಒಂದು ವರ್ಷ 'ಲ್ಯೂ ಜಿಯಾಒಬೊ' ರವರು, ಚೈನಾದೇಶದ ಹೊರಗೂ ಹೋಗಿ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಿದ್ದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, [[ಕೊಲಂಬಿಯಾ ವಿಶ್ವವಿದ್ಯಾಲಯ]], [[ಓಸ್ಲೊ ವಿಶ್ವವಿದ್ಯಾಲಯ]], ಮತ್ತು [[ಯೂನಿವರ್ಸಿಟಿ ಆಫ್ ಹವಾಯ್]] ಸೇರಿವೆ.
 
=='ಲ್ಯೂ ಜಿಯಾಒಬೊ' ರವರ ಹೋರಾಟದ ಪರಿಚಯ==
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ