ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
’ಚಾರ್ಟರ್ ೮೦ ಎಂಬ ವಿಧೇಯಕದಲ್ಲಿ ದಾಖಲಾಗಿರುವ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಭುತ್ವ ಕೊನೆಗೊಳ್ಳಲು ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕರೆಕೊಟ್ಟಿದ್ದಾರೆ. ವಿಶ್ವದ ಪ್ರಬಲ ಕಮ್ಮ್ಯುನಿಸ್ಟ್ ರಾಷ್ಟ್ರಗಳೆಲ್ಲಾ ಒಂದೊಂದಾಗಿ ಬದಲಾವಣೆಗೆ ಒತ್ತುಕೊಟ್ಟು ಪ್ರಯತ್ನಿಸುತ್ತಿರುವಾಗ ಚೀನಾ ಇನ್ನೂ ಹಳೆಯ ಜಾಡನ್ನು ಬದಲಾಯಿಸಲು ಇಚ್ಛಿಸುತ್ತಿಲ್ಲ. ದೀರ್ಘಕಾಲದಿಂದ ಬಾಕಿಯಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕರೆಗೆ ಸಾವಿರಾರು ಚೈನಿಯರು ಸಹಿಹಾಕಿ ತಮ್ಮ ಸಮ್ಮತಿಯನ್ನು ಕೊಟ್ಟಿದ್ದಾರೆ. ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರಕ್ಕೆ ಒಂದು ಸವಾಲಾಗಿದೆ. ೨೦೦೮ ರಲ್ಲಿ ಡಿಸೆಂಬರ್ ನಲ್ಲಿ ದಾಖಲೆ ಬಿಡುಗಡೆ ಗೊಳ್ಳುವ ಮೊದಲೆ ಪೋಲೀಸರು ಅವರನ್ನು ಬಂಧಿಸಿ ೨೦೦೯ ರ ಡಿಸೆಂಬರ್, ೨೫ ರಂದು, (ಕ್ರಿಸ್ಮಸ್ ದಿನದಂದು) ೧೧ ವರ್ಷಗಳ ಕಾರಾಗೃಹ ವಾಸದ ಸಜೆಯನ್ನು ವಿಧಿಸಿತ್ತು.
==ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿಗೆ ಬಂದ ಅರ್ಜಿಗಳ ಮೊತ್ತ==
ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ: ‘ಲಿಯು ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್ ಅಭಿಪ್ರಾಯಪಟ್ಟಿದ್ದಾರೆ. ’ಟಿನ್ನಮೆನ್ ಸ್ಕೇರ್’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ ಟಿಬೆಟ್ಟಿನ ಧಾರ್ಮಿಕ ಗುರು, ದಲೈ ಲಾಮಾ ಮತ್ತಿತರು, ಧಾರ್ಮಿಕ ಶ್ರಾದ್ದ್ಃಆಳುಗಗಳು ಸೇರಿದ್ದಾರೆ. ಬಹುಸಂಖ್ಯಾತ, ಹ್ಯಾನ್ ಸಮುದಾಯದ ಪ್ರತಿನಿಧಿ, ಚೀನದ ಅಂತಾರಾಷ್ಟ್ರೀಯ ರಭಾವದಮೇಲೆ ಪರಿಣಾಮಬೀರುತ್ತದೆ. ಅಮೆರಿಕದ ಅಧ್ಯಕ್ಷ ಒಬಾಮರವರೇ ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ಕೊಡಲ್ಪಟ್ಟಿದೆ. ಈಗಿನ್ ಚೈನ ಸರಕಾರದ ನಾಯಕರಿಗೆ ಒಂದು ಭಾರಿ ತಲೆನೋವಿನ ಸವಾಲಾಗಿ ಪರಿಣಮಿಸಿದೆ.
=='ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ("ವೆಲ್ವೆಟ್ ಕ್ರಾಂತಿ",ಪ್ರಸಿದ್ಧ ಚಾರ್ಟರ್-೭೭ ರ ಮಾದರಿಯ ಸಂಘರ್ಷ==
ತಮಗೆ ಸಂಪೂರ್ಣ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮಾನವ ಅಧಿಕಾರದ ಸುಧಾರಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಾಬಲ್ಯ ಕೊನೆಗಾಣಿಸುವ ಕರೆಯೊಂದಿಗೆ ಸನ್, ೨೦೦೮ ರಲ್ಲಿ ಲಿಯು ಅವರು ಚಾರ್ಟರ್-೦೮ ಹೆಸರಿನ ಸಹಿ ಸಂಗ್ರಹ ಆಂದೋಲನ ನಡೆಸಿದ್ದರು. ೧೯೮೯ ರಲ್ಲಿ ಜೆಕೋಸ್ಲೊವೇಕಿಯಾದಲ್ಲಿ ಮಾನವ ಹಕ್ಕುಗಳ ಕರೆಯೊಂದಿಗೆ ನಡೆದ "ವೆಲ್ವೆಟ್ ಕ್ರಾಂತಿ", ಆ ಮೂಲಕ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದ ಪ್ರಸಿದ್ಧ ಚಾರ್ಟರ್- ೭೭ ಆಂದೋಲನದ ಮಾದರಿಯಲ್ಲೇ ಸಾಗಿತ್ತು.
ಮೂರು ದಶಕಗಳ ಹಿಂದೆ ಚಸಿನಾ ದೇಶದ ಕಮ್ಯುನಿಸ್ಟ್ ನಾಯಕತ್ವವು ಆರ್ಥಿಕ ಸುಧಾರಣೆಗಳನ್ನಷ್ಟೇ ಜಾರಿಗೊಳಿಸಿ ರಾಜಕೀಯ ಸುಧಾರಣೆಗಳಿಗೆ ವಿಮುಖವಾದ ಸಂದರ್ಭದಲ್ಲಿ, 'ಲ್ಯೂ ಜಿಯಾಒಬೊ' ನೇತೃತ್ವದ ಭಿನ್ನಮತೀಯ ಸಮುದಾಯ ಜಾಗೃತಗೊಂಡಿತ್ತು. ಇದೀಗ ಈ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
==ಆರ್ಥಿಕವಾಗಿ ಚೈನಾ ಮುಂದುವರೆದಿದೆ==
ಚೀನವು ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಭಾವಿ ರಾಷ್ಟ್ರ. ಇಂಥ ಪ್ರಭಾವಿ ರಾಷ್ಟ್ರಗಳು ಪ್ರಶಸ್ತಿ ವಿಜೇತರ ಬಗ್ಗೆ ಟೀಕಿಸುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಮೂರು ದಶಕಗಳ ಹಿಂದೆ ಬಂಡಾಯ ಸಮೂಹವನ್ನು ಚೀನ ಸರಕಾರ ಹತ್ತಿಕ್ಕಿದ್ದರೂ ೫೪ ರ ಹರೆಯದ ಲಿಯು ಅವರು ಶಾಂತಿ, ಸರಕಾರದ ವಿರುದ್ಧ ಯಾವುದೇ ಸಂಘರ್ಷವಿಲ್ಲದೇ ಬೃಹತ್‌ ರಾಜಕೀಯ ಬದಲಾವಣೆ ತರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಚೀನಾದಲ್ಲಿ ಅಹಿಂಸಾ ಮಾರ್ಗದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿರುವ 'ಲ್ಯೂ ಜಿಯಾಒಬೊ'ರವರನ್ನು ನಾರ್ವಿಯನ್ ನೊಬಲ್ ಸಮಿತಿಯು ಪ್ರಶಂಸಿಸಿದೆ. ಜಾಗತಿಕ ವೇದಿಕೆಯಲ್ಲಿ ಚೀನಾವು ಪ್ರಮುಖ ಪಾತ್ರವನ್ನು ಬಯಸುತ್ತಿರುವ ಹೊತ್ತಿನಲ್ಲೇ ಮಾನವ ಹಕ್ಕುಗಳ ವಿಚಾರವು ನೊಬೆಲ್ ಪ್ರಶಸ್ತಿಯೊಂದಿಗೆ ಎಲ್ಲರ ಗಮನವನ್ನು ಸೆಳೆದಿದೆ.
 
ಅದಕ್ಕೂ ಮೊದಲು ಹಲವಾರು ಪ್ರಗತಿ ಪರ ಹೋರಾಟಗಳಲ್ಲಿ ಕಾಣಿಸಿಕೊಂಡು 'ಚೀನಾ ಕಮ್ಯೂನಿಸ್ಟ್ ಸರ್ವಾಡಳಿತ ಸರಕಾರ'ದ ಕೆಂಗಣ್ಣಿಗೆ 'ಲ್ಯೂ ಜಿಯಾಒಬೊ' ಗುರಿಯಾಗಿದ್ದರು. ಹತ್ತಾರು ಬಾರಿ ಜೈಲು ಸೇರಿದ್ದರು. 'ಕಾರ್ಮಿಕರ ಪರ,' ಮತ್ತು 'ಮಾನವ ಹಕ್ಕುಗಳ ಪರ,' ಅವರ ಹೋರಾಟ ಜಗತ್ತಿನ ಗಮನ ಸೆಳೆದಿತ್ತು
==೭ ಪ್ರಮುಖ ವಾಕ್ಯಗಳಲ್ಲಿ 'ಲ್ಯೂ ಜಿಯಾಒಬೊ' ತಮ್ಮ ಹೋರಾಟದ-ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ==
ಪ್ರಜಾತಂತ್ರದ ಸ್ಥಾಪನೆ ಹಾಗೂ ಕಮ್ಯುನಿಸ್ಟ್ ಸರಕಾರದ ಅಥವಾ ಯಾವುದೇ ಏಕಪಕ್ಷೀಯ ಪಕ್ಷ ರಾಜ್ಯವಾಳುವ ಬಗ್ಗೆ ತಮ್ಮ ವಿರೋಧವನ್ನು ಅವರು ಅತ್ಯಂತ ಗಂಭೀರವಾಗಿ ಚಿಂತಿಸಿ, ಶೀರ್ಷಿಕೆಗಳಲ್ಲಿ ಒಡಮೂಡಿಸಿರುವ ೭ ಪ್ರಮುಖ ವಾಕ್ಯಗಳಲ್ಲಿ ತಮ್ಮ ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ.
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ