ಕಿಶೋರ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:KK-1.jpg|thumb|right|250px|'ಕಿಶೋರ್ ಕುಮಾರ್']]
'''ಕಿಶೋರ್ ಕುಮಾರ್''' ([[ಹಿಂದಿ]]: किशोर कुमार) ([[ಆಗಸ್ಟ್ ೪]], [[೧೯೨೯]] – [[ಅಕ್ಟೋಬರ್ ೧೩]], [[೧೯೮೭]]) ಒಬ್ಬ [[ಭಾರತ|ಭಾರತದ]] ಚಲನಚಿತ್ರ [[ಹಿನ್ನೆಲೆ ಗಾಯಕ]] ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹವಾದ ಯಶಸ್ಸು ಸಾಧಿಸಿದರು.
==ನಟನೆಯನ್ನೂ ಅಭ್ಯಾಸಮಾಡಿದ್ದರು ; ಆದರೆ ಅವರಿಗೆ ಯಶಸ್ಸು ದೊರೆತದ್ದು ಹಿಂಬದಿಗಾಯಕರಾಗಿ==
 
ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಗಾಯಕರಾಗಿದ್ದರು ಮತ್ತು [[ಹಿಂದಿ ಭಾಷೆ|ಹಿಂದಿ]], [[ಬಂಗಾಳಿ ಭಾಷೆ|ಬಂಗಾಳಿ]], [[ಮರಾಠಿ ಭಾಷೆ|ಮರಾಠಿ]], [[ಅಸ್ಸಾಮೀ ಭಾಷೆ|ಅಸ್ಸಾಮೀ]], [[ಗುಜರಾತಿ ಭಾಷೆ|ಗುಜರಾತಿ]], [[ಕನ್ನಡ]], [[ಭೋಜ್‌ಪುರಿ]], [[ಮಳಯಾಳಮ್]] ಮತ್ತು [[ಒರಿಯಾ ಭಾಷೆ|ಒರಿಯಾ]] ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. [[ಮೊಹಮ್ಮದ್ ರಫೀ]], ಮತ್ತು [[ಮುಕೇಶ್|ಮುಕೇಶ್‌ರೊಂದಿಗೆ]], ಅವರು ೧೯೫೦ರ ದಶಕದಿಂದ ೧೯೮೦ರ ದಶಕದ ಮಧ್ಯದವರೆಗೆ [[ಬಾಲಿವುಡ್|ಬಾಲಿವುಡ್‌ನ]] ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.
==ಮದುವೆ ಅವರಿಗೆ ಆಟವಾಗಿತ್ತು==
 
ಅವರು ನಾಲ್ಕು ಬಾರಿ ಮದುವೆಯಾಗಿದ್ದರು ಮತ್ತು ಇಬ್ಬರು ಪುತ್ರರನ್ನು ಅಗಲಿದರು ([[ಅಮಿತ್ ಕುಮಾರ್]], ಇವರು ಕೂಡ [[ಬಾಲಿವುಡ್]] ಮತ್ತು ಬಂಗಾಳಿ ಚಲನಚಿತ್ರಗಳ ಹಿನ್ನೆಲೆ ಗಾಯನದಲ್ಲಿ ವೃತಿನಿರತರಾದರು, ಮತ್ತು [[ಸುಮಿತ್ ಕುಮಾರ್]]).
==ಬಾಲ್ಯ==
ಕಿಶೋರ್ ಕುಮಾರ್ (ಮೊದಲಿನ ಹೆಸರು ಆಭಾಸ್ ಕುಮಾರ್ ಗಾಂಗೂಲಿ) ([[ಬಂಗಾಳಿ]] :আভাষ কুমার গাঙ্গুলি) [[ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್]], [[ಬ್ರಿಟಿಷರ ಆಳ್ವಿಕೆಯ ಭಾರತ|ಬ್ರಿಟಿಷರ ಆಳ್ವಿಕೆಯ ಭಾರತದ]] (ಈಗಿನ [[ಮಧ್ಯ ಪ್ರದೇಶ]] ರಾಜ್ಯದಲ್ಲಿ) [[ಖಾಂಡ್ವಾ]] ಪಟ್ಟಣದ ಒಂದು [[ಬಂಗಾಳಿ ಜನ|ಬಂಗಾಳಿ]] ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕುಂಜಲಾಲ್ ಗಾಂಗೂಲಿ ವಕೀಲರಾಗಿದ್ದರು, ಮತ್ತು ಅವರ ತಾಯಿ ಗೌರಿ ದೇವಿ ಒಂದು ಶ್ರೀಮಂತ ಮನೆತನದಿಂದ ಬಂದವರು. ಆಭಾಸ್ ಕುಮಾರ್ ನಾಲ್ಕು ಮಕ್ಕಳ ಪೈಕಿ ಮೂರನೇಯವರು ([[ಅಶೋಕ್ ಕುಮಾರ್]] (ಹಿರಿಯ ಪುತ್ರ), ಸತೀ ದೇವಿ, ಮತ್ತು [[ಅನೂಪ್ ಕುಮಾರ್]] ಇತರ ಮೂರು ಮಕ್ಕಳು).
==ಮನೆಯ ವಾತಾವರಣ ನಟನ-ಕಲೆಗೆ ಸಹಕಾರಿಯಾಗಿತ್ತು==
 
ಆಭಾಸ್ ಗಾಂಗೂಲಿ ಇನ್ನೂ ಮಗುವಾಗಿದ್ದಾಗ, ಅಶೋಕ್ ಕುಮಾರ್ ಒಬ್ಬ ಜನಪ್ರಿಯ [[ಬಾಲಿವುಡ್]] ನಟರಾದರು. ನಂತರ, ಅನೂಪ್ ಕುಮಾರ್ ಕೂಡ ಅಶೋಕ್ ಕುಮಾರ್ ಸಹಾಯದಿಂದ ಚಲನಚಿತ್ರದಲ್ಲಿ ಪ್ರವೇಶಿಸಿದರು. ತನ್ನ ಸಹೋದರರೊಂದಿಗೆ ಸಮಯ ಕಳೆಯುತ್ತ, ಆಭಾಸ್ ಕುಮಾರ್ ಕೂಡ ಚಲನಚಿತ್ರ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ ವಹಿಸಲು ಆರಂಭಿಸಿದನು. ಅವನು ಗಾಯಕ-ನಟ [[ಕುಂದನ್ ಲಾಲ್ ಸೈಗಲ್|ಕುಂದನ್ ಲಾಲ್ ಸೈಗಲ್‌ರ]] ಅಭಿಮಾನಿಯಾದನು (ಸೈಗಲ್‌ರನ್ನು ತನ್ನ [[ಗುರು|ಗುರುವೆಂದು]] ಭಾವಿಸಿದ್ದನು).
==ಹಿಂದಿ ಚಲನಚಿತ್ರದಲ್ಲಿ ಆರಂಭದ ದಿನಗಳು==
"https://kn.wikipedia.org/wiki/ಕಿಶೋರ್_ಕುಮಾರ್" ಇಂದ ಪಡೆಯಲ್ಪಟ್ಟಿದೆ