ಕಿಶೋರ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಗಾಯಕರಾಗಿದ್ದರು ಮತ್ತು [[ಹಿಂದಿ ಭಾಷೆ|ಹಿಂದಿ]], [[ಬಂಗಾಳಿ ಭಾಷೆ|ಬಂಗಾಳಿ]], [[ಮರಾಠಿ ಭಾಷೆ|ಮರಾಠಿ]], [[ಅಸ್ಸಾಮೀ ಭಾಷೆ|ಅಸ್ಸಾಮೀ]], [[ಗುಜರಾತಿ ಭಾಷೆ|ಗುಜರಾತಿ]], [[ಕನ್ನಡ]], [[ಭೋಜ್‌ಪುರಿ]], [[ಮಳಯಾಳಮ್]] ಮತ್ತು [[ಒರಿಯಾ ಭಾಷೆ|ಒರಿಯಾ]] ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. [[ಮೊಹಮ್ಮದ್ ರಫೀ]], ಮತ್ತು [[ಮುಕೇಶ್|ಮುಕೇಶ್‌ರೊಂದಿಗೆ]], ಅವರು ೧೯೫೦ರ ದಶಕದಿಂದ ೧೯೮೦ರ ದಶಕದ ಮಧ್ಯದವರೆಗೆ [[ಬಾಲಿವುಡ್|ಬಾಲಿವುಡ್‌ನ]] ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.
 
ಇವರು ಅಕ್ಟೋಬರ್ ೧೯೮೭ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ನಾಲ್ಕು ಬಾರಿ ಮದುವೆಯಾಗಿದ್ದರು ಮತ್ತು ಇಬ್ಬರು ಪುತ್ರರನ್ನು ಅಗಲಿದರು ([[ಅಮಿತ್ ಕುಮಾರ್]], ಇವರು ಕೂಡ [[ಬಾಲಿವುಡ್]] ಮತ್ತು ಬಂಗಾಳಿ ಚಲನಚಿತ್ರಗಳ ಹಿನ್ನೆಲೆ ಗಾಯನದಲ್ಲಿ ವೃತಿನಿರತರಾದರು, ಮತ್ತು [[ಸುಮಿತ್ ಕುಮಾರ್]]).
 
==ಬಾಲ್ಯ==
ಕಿಶೋರ್ ಕುಮಾರ್ (ಮೊದಲಿನ ಹೆಸರು ಆಭಾಸ್ ಕುಮಾರ್ ಗಾಂಗೂಲಿ) ([[ಬಂಗಾಳಿ]] :আভাষ কুমার গাঙ্গুলি) [[ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್]], [[ಬ್ರಿಟಿಷರ ಆಳ್ವಿಕೆಯ ಭಾರತ|ಬ್ರಿಟಿಷರ ಆಳ್ವಿಕೆಯ ಭಾರತದ]] (ಈಗಿನ [[ಮಧ್ಯ ಪ್ರದೇಶ]] ರಾಜ್ಯದಲ್ಲಿ) [[ಖಾಂಡ್ವಾ]] ಪಟ್ಟಣದ ಒಂದು [[ಬಂಗಾಳಿ ಜನ|ಬಂಗಾಳಿ]] ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕುಂಜಲಾಲ್ ಗಾಂಗೂಲಿ ವಕೀಲರಾಗಿದ್ದರು, ಮತ್ತು ಅವರ ತಾಯಿ ಗೌರಿ ದೇವಿ ಒಂದು ಶ್ರೀಮಂತ ಮನೆತನದಿಂದ ಬಂದವರು. ಆಭಾಸ್ ಕುಮಾರ್ ನಾಲ್ಕು ಮಕ್ಕಳ ಪೈಕಿ ಮೂರನೇಯವರು ([[ಅಶೋಕ್ ಕುಮಾರ್]] (ಹಿರಿಯ ಪುತ್ರ), ಸತೀ ದೇವಿ, ಮತ್ತು [[ಅನೂಪ್ ಕುಮಾರ್]] ಇತರ ಮೂರು ಮಕ್ಕಳು).
 
ಆಭಾಸ್ ಗಾಂಗೂಲಿ ಇನ್ನೂ ಮಗುವಾಗಿದ್ದಾಗ, ಅಶೋಕ್ ಕುಮಾರ್ ಒಬ್ಬ ಜನಪ್ರಿಯ [[ಬಾಲಿವುಡ್]] ನಟರಾದರು. ನಂತರ, ಅನೂಪ್ ಕುಮಾರ್ ಕೂಡ ಅಶೋಕ್ ಕುಮಾರ್ ಸಹಾಯದಿಂದ ಚಲನಚಿತ್ರದಲ್ಲಿ ಪ್ರವೇಶಿಸಿದರು. ತನ್ನ ಸಹೋದರರೊಂದಿಗೆ ಸಮಯ ಕಳೆಯುತ್ತ, ಆಭಾಸ್ ಕುಮಾರ್ ಕೂಡ ಚಲನಚಿತ್ರ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ ವಹಿಸಲು ಆರಂಭಿಸಿದನು. ಅವನು ಗಾಯಕ-ನಟ [[ಕುಂದನ್ ಲಾಲ್ ಸೈಗಲ್|ಕುಂದನ್ ಲಾಲ್ ಸೈಗಲ್‌ರ]] ಅಭಿಮಾನಿಯಾದನು (ಸೈಗಲ್‌ರನ್ನು ತನ್ನ [[ಗುರು|ಗುರುವೆಂದು]] ಭಾವಿಸಿದ್ದನು).
 
==ಹಿಂದಿ ಚಲನಚಿತ್ರದಲ್ಲಿ ಆರಂಭದ ದಿನಗಳು==
[[ಅಶೋಕ್ ಕುಮಾರ್]] ಒಬ್ಬ ಬಾಲಿವುಡ್ ಮುಖ್ಯನಟನಾದ ಬಳಿಕ, ಗಾಂಗೂಲಿ ಕುಟುಂಬ [[ಮುಂಬೈ|ಮುಂಬೈಗೆ]] ನಿಯಮಿತವಾಗಿ ಭೇಟಿ ನೀಡತೊಡಗಿತು. ಆಭಾಸ್ ಕುಮಾರ್ ತನ್ನ ಹೆಸರನ್ನು ಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡನು ಮತ್ತು ಅವನ ಸಹೋದರ ಕೆಲಸ ಮಾಡುತ್ತಿದ್ದ [[ಬಾಂಬೆ ಟಾಕೀಸ್|ಬಾಂಬೆ ಟಾಕೀಸ್‌ನಲ್ಲಿ]] ವೃಂದಗಾಯಕನಾಗಿ ತನ್ನ ಚಲನಚಿತ್ರ ವೃತ್ತಿಯನ್ನು ಆರಂಭಿಸಿದನು. ನಟನಾಗಿ ಅವರ ಮೊದಲ ಚಿತ್ರ, ಅಶೋಕ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ, ''ಶಿಕಾರಿ'' (೧೯೪೬). ಸಂಗೀತ ನಿರ್ದೇಶಕ ಖೇಮ್‌ಚಂದ್ ಪ್ರಕಾಶ್ ಇವರಿಗೆ ಚಿತ್ರ ''[[ಜಿದ್ದಿ (೧೯೪೮ರ ಚಿತ್ರ)|ಜಿದ್ದಿಯಲ್ಲಿ]]'' (೧೯೪೮) ''ಮರ್‌ನೇ ಕಿ ದುಆಯೇಂ ಕ್ಯೂ ಮಾಂಗು'' ಹಾಡು ಹಾಡಲು ಅವಕಾಶ ಕೊಟ್ಟರು. ಇದರ ನಂತರ, ಕಿಶೋರ್ ಕುಮಾರ್‌ರಿಗೆ ಹಲವು ಕೆಲಸಗಳು ದೊರೆತವು, ಆದರೆ ಅವರು ಚಲನಚಿತ್ರ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿರಲಿಲ್ಲ. ೧೯೪೯ರಲ್ಲಿ, ಅವರು ಮುಂಬೈಯಲ್ಲಿ ನೆಲೆಸಲು ನಿರ್ಧರಿಸಿದರು.
==ನಿಧನ==
ಕಿಶೋರ್ ಕುಮಾರ್, ಅಕ್ಟೋಬರ್ ೧೯೮೭ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು.
 
 
[[Category:ಭಾರತೀಯ ಗಾಯಕರು]]
"https://kn.wikipedia.org/wiki/ಕಿಶೋರ್_ಕುಮಾರ್" ಇಂದ ಪಡೆಯಲ್ಪಟ್ಟಿದೆ