ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೭ ನೇ ಸಾಲು:
[[1959]]ರ ಜನವರಿ 26ರಂದು `[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ [[ಸುರೇಂದ್ರ ದಾನಿ]] ಬೆಂಗಳೂರಿಗೆ ವರ್ಗಾವಣೆಗೊಂಡರು. [[ನರಸಿಂಹ ಜೋಶಿ]] ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.
 
===ಹೊಸ ಪ್ರಯೋಗ===
ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. [[ಎಸ್.ಎಸ್.ಎಲ್.ಸಿ.]] ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ [[ಕಬ್ಬನ್ ಪಾರ್ಕ್]]ನ ವಿಕ್ಟರಿ ಹಾಲ್‍ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು. [[ಪಿ.ರಾಮಣ್ಣ]], [[ವಿ.ಆರ್.ಶ್ಯಾಮ್]] ([[ಇಂದಿರಾತನಯ]]), [[ಜಿ.ಎಸ್.ಸದಾಶಿವ]], [[ಜಿ.ಎನ್.ರಂಗನಾಥರಾವ್]], [[ಖಾದ್ರಿ ಎಸ್.ಅಚ್ಯುತನ್]], [[ಕೆ.ಎಸ್.ನಾಗಭೂಷಣಂ]], [[ಸೂ.ರಮಾಕಾಂತ]], [[ಜಯರಾಮ ಅಡಿಗ]]ರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, [[ಪ್ರಹ್ಲಾದ ಕುಳಲಿ]], [[ಕೆ.ರಾಜಾರಾವ್]], [[ಎನ್.ಅರ್ಜುನದೇವ]], [[ಸಿ.ಟಿ.ಜೋಶಿ]], [[ಕೆ.ಜಯತೀರ್ಥರಾವ್]], [[ಶೇಷಚಂದ್ರಿಕ]]ರಂಥ ವರದಿಗಾರರು `ಸಂಕ'ದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು [[ಎಸ್.ದೇವನಾಥ್]], [[ಪಿ.ಸಿ.ಅಪ್ಪಾಜಿ]], [[ಎಂ.ಎ.ಪೊನ್ನಪ್ಪ]] ಜತೆಗೂಡಿದರು. [[ಶ್ಯಾಮಸುಂದರ ಕುಲಕರ್ಣಿ]] ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು.
 
ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. [[ಎಸ್.ಎಸ್.ಎಲ್.ಸಿ.]] ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ [[ಕಬ್ಬನ್ ಪಾರ್ಕ್]]ನ ವಿಕ್ಟರಿ ಹಾಲ್‍ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು. [[ಪಿ.ರಾಮಣ್ಣ]], [[ವಿ.ಆರ್.ಶ್ಯಾಮ್]] ([[ಇಂದಿರಾತನಯ]]), [[ಜಿ.ಎಸ್.ಸದಾಶಿವ]], [[ಜಿ.ಎನ್.ರಂಗನಾಥರಾವ್]], [[ಖಾದ್ರಿ ಎಸ್.ಅಚ್ಯುತನ್]], [[ಕೆ.ಎಸ್.ನಾಗಭೂಷಣಂ]], [[ಸೂ.ರಮಾಕಾಂತ]], [[ಜಯರಾಮ ಅಡಿಗ]]ರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, [[ಪ್ರಹ್ಲಾದ ಕುಳಲಿ]], [[ಕೆ.ರಾಜಾರಾವ್]], [[ಎನ್.ಅರ್ಜುನದೇವ]], [[ಸಿ.ಟಿ.ಜೋಶಿ]], [[ಕೆ.ಜಯತೀರ್ಥರಾವ್]], [[ಶೇಷಚಂದ್ರಿಕ]]ರಂಥ ವರದಿಗಾರರು `ಸಂಕ'ದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು [[ಎಸ್.ದೇವನಾಥ್]], [[ಪಿ.ಸಿ.ಅಪ್ಪಾಜಿ]], [[ಎಂ.ಎ.ಪೊನ್ನಪ್ಪ]] ಜತೆಗೂಡಿದರು. [[ಶ್ಯಾಮಸುಂದರ ಕುಲಕರ್ಣಿ]] ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು. ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು.
ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ [[ಲೋಕ ಶಿಕ್ಷಣ ಟ್ರಸ್ಟ್]]ನ ಧರ್ಮದರ್ಶಿಯಾಗಿದ್ದ [[ರಂಗನಾಥ ದಿವಾಕರ]] ಅವರು ತಮ್ಮ ಮಗ [[ಅನಂತ ದಿವಾಕರ]] ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. [[ಇಂಡಿಯನ್ ಎಕ್ಸ್‍ಪ್ರೆಸ್]] ಸಮೂಹದ [[ಕನ್ನಡಪ್ರಭ]] ದಿನಪತ್ರಿಕೆಯೂ [[ಪ್ರಜಾವಾಣಿ]]ಯೊಂದಿಗೆ [[ಸಂಯುಕ್ತ ಕರ್ನಾಟಕ]]ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. [[ರಂಗನಾಥ ದಿವಾಕರ]] ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ [[1974]]ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ [[ಡಿ.ದೇವರಾಜ ಅರಸು]] ಅವರ ಆಪ್ತರಾಗಿದ್ದ ಸಚಿವ [[ಎಂ.ವೈ.ಘೋರ್ಪಡೆ]] ಅವರ [[ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್]] ಸಂಸ್ಥೆಗೆ ಮಾರಾಟ ಮಾಡಿದರು. [[ಪ್ರಜಾವಾಣಿ]]ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ [[ಪ್ರಜಾವಾಣಿ]]ಯ ಪ್ರಧಾನ ವರದಿಗಾರರಾಗಿದ್ದ [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ ಸೇರ್ಪಡೆಯಾದರು. [[ಪ್ರಜಾವಾಣಿ]]ಯ ಹಿರಿಯ ವರದಿಗಾರರಾಗಿದ್ದ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ [[ಕೆ.ಶಾಮರಾವ್]] ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ [[ಸುರೇಂದ್ರ ದಾನಿ]] ಹುಬ್ಬಳ್ಳಿಗೆ ಮರಳಿದರು. [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.
 
==ಲೋಕ ಶಿಕ್ಷಣ ಟ್ರಸ್ಟ್ ಮಾರಾಟ==
 
===ಬದಲಾದ ಸಂಪಾದಕೀಯ ಮಂಡಳಿ===
 
ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ [[ಲೋಕ ಶಿಕ್ಷಣ ಟ್ರಸ್ಟ್]]ನ ಧರ್ಮದರ್ಶಿಯಾಗಿದ್ದ [[ರಂಗನಾಥ ದಿವಾಕರ]] ಅವರು ತಮ್ಮ ಮಗ [[ಅನಂತ ದಿವಾಕರ]] ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. [[ಇಂಡಿಯನ್ ಎಕ್ಸ್‍ಪ್ರೆಸ್]] ಸಮೂಹದ [[ಕನ್ನಡಪ್ರಭ]] ದಿನಪತ್ರಿಕೆಯೂ [[ಪ್ರಜಾವಾಣಿ]]ಯೊಂದಿಗೆ [[ಸಂಯುಕ್ತ ಕರ್ನಾಟಕ]]ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. [[ರಂಗನಾಥ ದಿವಾಕರ]] ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ [[1974]]ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ [[ಡಿ.ದೇವರಾಜ ಅರಸು]] ಅವರ ಆಪ್ತರಾಗಿದ್ದ ಸಚಿವ [[ಎಂ.ವೈ.ಘೋರ್ಪಡೆ]] ಅವರ [[ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್]] ಸಂಸ್ಥೆಗೆ ಮಾರಾಟ ಮಾಡಿದರು. [[ಪ್ರಜಾವಾಣಿ]]ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ [[ಪ್ರಜಾವಾಣಿ]]ಯ ಪ್ರಧಾನ ವರದಿಗಾರರಾಗಿದ್ದ [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ ಸೇರ್ಪಡೆಯಾದರು. [[ಪ್ರಜಾವಾಣಿ]]ಯ ಹಿರಿಯ ವರದಿಗಾರರಾಗಿದ್ದ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ [[ಕೆ.ಶಾಮರಾವ್]] ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ [[ಸುರೇಂದ್ರ ದಾನಿ]] ಹುಬ್ಬಳ್ಳಿಗೆ ಮರಳಿದರು. [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.
 
ಟ್ರಸ್ಟ್‌ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು [[ಕೆ.ಶಾಮರಾವ್]] ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು.
 
[[ಕರ್ಮವೀರ]]ಕ್ಕೆ ಹೊಸರೂಪವನ್ನು ಕೊಡಲಾಯಿತು. [[ಜಿ.ಪಿ.ಬಸವರಾಜು]], [[ಗೋಪಾಲ ವಾಜಪೇಯಿ]], [[ಗಂಗಾಧರ ಮೊದಲಿಯಾರ್]], [[ಆರ್.ನರಸಿಂಹ]], [[ಸರಜೂ ಕಾಟ್ಕರ]], [[ಎನ್.ಗಾಯತ್ರಿದೇವಿ]] ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಕಾಗಿರಲಿಲ್ಲ.

===ಮರು ಮಾರಾಟ===

ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ನಿಧನದಿಂದ ತೆರವಾದ [[ಕನ್ನಡಪ್ರಭ]] ಸಂಪಾದಕರ ಸ್ಥಾನಕ್ಕೆ [[ಖಾದ್ರಿ ಶಾಮಣ್ಣ]] ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ [[ಪ್ರಜಾಪ್ರಭುತ್ವ]]ವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ [[ಪ.ಸು.ಭಟ್ಟ]] `ಸಂಕ' ಸಮೂಹದ ಸಂಪಾದಕರಾದರು. [[ಚಿತ್ರದೀಪ]]ವೆಂಬ ಸಿನಿಮಾ ಪತ್ರಿಕೆಯನ್ನೂ [[ಆರ್.ನರಸಿಂಹ]] ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.
 
==ಮುಚ್ಚಿದ ಬೆಂಗಳೂರು ಮುದ್ರಣ==
 
ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ‘ರಾವಬಹಾದ್ದೂರ’ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ `ಸಂಕ'ದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31-01-1980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ‘ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್)’ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ [[ಮತ್ತೀಹಳ್ಳಿ ನಾಗರಾಜರಾವ್]] ಅವರದಾಯಿತು.
 
===ನೌಕರರ ಹೋರಾಟಕ್ಕೆ ಸಿಕ್ಕ ಜಯ===
 
===ಸರ್ಕಾರದ ಆಡಳಿತದಲ್ಲಿ ಪತ್ರಿಕೆ===
 
ಬಹು ಹಿಂದೆ ಆರಂಭಗೊಂಡಿದ್ದ [[ಸಂಯುಕ್ತ ಕರ್ನಾಟಕ ನೌಕರರ ಸಂಘ]] ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, [[ಕೋಡಿಹೊಸಳ್ಳಿ ರಾಮಣ್ಣ]] ನೇತೃತ್ವದಲ್ಲಿ [[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ]]ವೂ ಹಕ್ಕೊತ್ತಾಯದ ಹೋರಾಟ ನಡೆಸಿತು. [[ಆರ್.ಗುಂಡೂರಾವ್]] ಮುಖ್ಯಮಂತ್ರಿಯಾಗಿದ್ದರು. [[ವೀರಪ್ಪ ಮೊಯ್ಲಿ]] ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶವನ್ನು ಸೆಪ್ಟೆಂಬರ್ 1980ರಲ್ಲಿ ಹೊರಡಿಸಿತು. ಚಾರಿಟಿ ಕಮೀಷನರ್ ಆಗಿದ್ದ ವಾಮದೇವ ಅವರು ಲೋಕ ಶಿಕ್ಷಣ ಟ್ರಸ್ಟ್ ನ ರಿಸೀವರ್ ಆಗಿ ಆಡಳಿತ ವಹಿಸಿಕೊಳ್ಳುವುದರ ಜತೆಗೆ ‘ಸಂಕ’ದ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿಯೂ ಘೋಷಿಸಿಕೊಂಡರು. ನ್ಯಾಯಾಲಯವು ಮತ್ತೊಂದು ಆದೇಶದ ಮೂಲಕ ಬಿ.ವಿ.ಜಿಗಜಿನ್ನಿಯವರನ್ನು ರಿಸೀವರ್ ಆಗಿ ನೇಮಕ ಮಾಡಿದಂತೆ, ಅವರೂ ಸಹಾ ಸಂಪಾದಕರೆಂದು ಘೋಷಿಸಿಕೊಂಡರು. ಏತನ್ಮಧ್ಯೆ ‘ಸಂಕ’ದ ಬೆಂಗಳೂರು ಆವೃತ್ತಿ 20-12-1980ರಂದು ಪುನಾರಂಭಗೊಂಡಿತು. ಹನ್ನೊಂದು ತಿಂಗಳ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿತು. ಬೆಂಗಳೂರು ಆವೃತ್ತಿಗೆ ಕೊಡಗಿನ [[ಶಕ್ತಿ]] ದಿನಪತ್ರಿಕೆಯ ಸಂಪಾದಕರು ಹಾಗೂ ಮುಖ್ಯಮಂತ್ರಿ [[ಆರ್.ಗುಂಡೂರಾವ್]] ಅವರ ಆಪ್ತರೂ ಆಗಿದ್ದ [[ಬಿ.ಎಸ್.ಗೋಪಾಲಕೃಷ್ಣ]] ಅವರ ನೇಮಕವಾಯಿತು. [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ, [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರಾಗಿ ಮುಂದುವರಿದರು. ಜುಲೈ 1980ರಲ್ಲಿ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಸಂಪಾದಕರಾಗಿ ಗೋಪಾಲಕೃಷ್ಣ ಅಧಿಕಾರ ವಹಿಸಿಕೊಂಡರು.
 
ಸೆಪ್ಟಂಬರ್ 1, 1981ರಂದು ವಿಶೇಷ ಆಜ್ಞೆಯೊಂದಿಗೆ ಆಡಳಿತಾಧಿಕಾರಿಯೊಬ್ಬರ ಮೂಲಕ ಲೋಕ ಶಿಕ್ಷಣ ಟ್ರಸ್ಟ್ ನ ಆಡಳಿತವನ್ನು ರಾಜ್ಯ ಸರ್ಕಾರವು ವಹಿಸಿಕೊಂಡಿತು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳಾದವು. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಮೊಕ್ಕದ್ದಮೆಗಳು ಮುಂದುವರಿದವು. ಗುಂಡೂರಾವ್ ಅಧಿಕಾರ ಕಳೆದುಕೊಂಡರು. ಗೋಪಾಲಕೃಷ್ಣ ನಿರ್ಗಮಿಸಿದರು. [[ಟೈಮ್ಸ್ ಆಫ್ ಡೆಕ್ಕನ್]] ಸಮೂಹದ ಕನ್ನಡ ಪತ್ರಿಕೆ [[ಮುಂಜಾನೆ]]ಯ ಸಂಪಾದಕರಾಗಲು ಜಯಶೀಲರಾವ್ ‘ಸಂಕ’ ತೊರೆದರು. ಹುಬ್ಬಳ್ಳಿ ಆವೃತ್ತಿಯಲ್ಲಿ ಮತ್ತೀಹಳ್ಳಿ ನಾಗರಾಜರಾವ್ ಅವರ ನಿವೃತ್ತಿಯ ನಂತರ [[ಸುರೇಂದ್ರ ದಾನಿ]] ಸಹಾಯಕ ಸಂಪಾದಕರಾಗಿದ್ದರು. ಸೆಪ್ಟಂಬರ್ 1, 1983ರಂದು ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕರಾಗಿ [[ಹೆಚ್.ಆರ್.ನಾಗೇಶರಾವ್]] ಅವರ ನೇಮಕವಾಯಿತು. ಸುರೇಂದ್ರ ದಾನಿ ಅವರನ್ನು ಎರಡೂ ಆವೃತ್ತಿಗಳ ಸಂಪಾದಕರನ್ನಾಗಿ ನೇಮಕ ಮಾಡಲಾಯಿತು. ಅವರ ನಿವೃತ್ತಿಯ ನಂತರ [[ಆರ್.ಎ.ಉಪಾಧ್ಯ]] ಎರಡೂ ಆವೃತ್ತಿಗಳ ಸಂಪಾದಕತ್ವ ವಹಿಸಿಕೊಂಡರು. 1984ರಲ್ಲಿ [[ಹೆಚ್.ಆರ್.ನಾಗೇಶರಾವ್]] ಅವರಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ದೊರೆಯಿತು. 31-10-1985ರಲ್ಲಿ ನಾಗೇಶರಾವ್ ನಿವೃತ್ತಿಯ ನಂತರ ಧ್ರುವರಾಜ ಮುತಾಲಿಕ ದೇಸಾಯಿ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು.
 
==ಮತ್ತೆ ಲೋಕ ಶಿಕ್ಷಣ ಟ್ರಸ್ಟ್ ಆಡಳಿತ==
 
ನ್ಯಾಯಾಲಯದ ಮೊಕ್ಕದ್ದಮೆಗಳು ಇತ್ಯರ್ಥವಾಗಿ ಲೋಕ ಶಿಕ್ಷಣ ಟ್ರಸ್ಟ್ ಗೆ ಆಡಳಿತ ಹಿಂದಿರುಗಿತು. ಮಾಜಿ ಮುಖ್ಯ ಮಂತ್ರಿ [[ಬಿ.ಡಿ.ಜತ್ತಿ]]ಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಪುನಾರಚನೆಗೊಂಡಿತು. ನ್ಯಾಯಮೂರ್ತಿ [[ನಿಟ್ಟೂರು ಶ್ರೀನಿವಾಸರಾವ್]] ಸದಸ್ಯರಾಗಿ ಸೇರ್ಪಡೆಗೊಂಡರು. [[ಕೆ.ಶಾಮರಾವ್]] ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಪತ್ರಿಕಾ ಸಮೂಹದ ವ್ಯವಸ್ಥಾಪಕ ಸಂಪಾದಕರಾಗಿ ನೇಮಕಗೊಂಡರು. ಉಪಾಧ್ಯ, ಮುತಾಲಿಕ ದೇಸಾಯಿ ಅವರ ನಿವೃತ್ತಿಯ ನಂತರ [[ನರಸಿಂಹ ಜೋಶಿ]] ಸಂಪಾದಕರಾದರು. ಆಡಳಿತ ವರ್ಗದೊಂದಿಗೆ ಭಿನ್ನಾಭಿಪ್ರಾಯದಿಂದ [[ವೆಂಕಟನಾರಾಯಣ]] ನಿರ್ಗಮಿಸಿದರು. ಜೋಶಿ ನಿವೃತ್ತರಾದರು. [[ಕೆ.ಶ್ರೀಧರ ಆಚಾರ್]] ಸಲಹೆಗಾರರಾಗಿ ಸೇರ್ಪಡೆಯಾದರು. ಸ್ಥಾನಿಕ ಸಂಪಾದಕರಾಗಿದ್ದ [[ಎ.ಗುಂಡಾಭಟ್]] ನಿವೃತ್ತರಾದರು. ಶಾಮರಾವ್ ನಿರ್ಗಮಿಸಿದರು. [[ಹಾರನಹಳ್ಳಿ ರಾಮಸ್ವಾಮಿ]] ಟ್ರಸ್ಟ್ ನ ಅಧ್ಯಕ್ಷರಾದರು. ಹಿರಿಯ ಪತ್ರಕರ್ತ [[ವಿ.ಎನ್.ಸುಬ್ಬರಾವ್]] ‘ಸಂಕ’ದ ಸಂಪಾದಕರಾದರು. ಅವರ ಅಧಿಕಾರಾವಧಿಯ ನಂತರ, ಪ್ರಧಾನಿ [[ಹೆಚ್.ಡಿ.ದೇವೇಗೌಡ]]ರಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ದೆಹಲಿಗೆ ಹೋಗಿದ್ದ [[ಎಸ್.ವಿ.ಜಯಶೀಲರಾವ್]] ‘ಸಂಕ’ಕ್ಕೆ ಸಂಪಾದಕರಾದರು. [[ಕನ್ನಡಪ್ರಭ]]ದಿಂದ ನಿವೃತ್ತರಾಗಿ [[ಪತ್ರಿಕಾ ಅಕ್ಯಾಡೆಮಿ]] ಅಧ್ಯಕ್ಷಗಿರಿಯಿಂದಲೂ ನಿವೃತ್ತರಾಗಿದ್ದ [[ಗರುಡನಗಿರಿ ನಾಗರಾಜ]] [[ಕರ್ಮವೀರ]] ಪತ್ರಿಕೆಯ ಸಂಪಾದಕರಾದರು. ಜಯಶೀಲರಾವ್ ಅವರ ನಿರ್ಗಮನದ ನಂತರ ‘ಸಂಕ’ದ ಸಂಪಾದಕರಾಗಿ [[ಮನೋಜ್ ಗೌಡ ಪಾಟೀಲ]] ನೇಮಕಗೊಂಡರು. ಹಾರನಹಳ್ಳಿಯವರ ನಿಧನದ ನಂತರ ಟ್ರಸ್ಟ್ ಪುನಾರಚನೆಗೊಂಡಿತು. ಪಾಟೀಲ ನಿವೃತ್ತರಾದರು. ಇದೀಗ ಪ್ರಧಾನ ವರದಿಗಾರರಾಗಿದ್ದ [[ಹುಣಸವಾಡಿ ರಾಜನ್]] ‘ಸಂಕ’ದ ಸಂಪಾದಕರಾಗಿದ್ದಾರೆ.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ