ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
[[ಕರ್ಮವೀರ]]ಕ್ಕೆ ಹೊಸರೂಪವನ್ನು ಕೊಡಲಾಯಿತು. [[ಜಿ.ಪಿ.ಬಸವರಾಜು]], [[ಗೋಪಾಲ ವಾಜಪೇಯಿ]], [[ಗಂಗಾಧರ ಮೊದಲಿಯಾರ್]], [[ಆರ್.ನರಸಿಂಹ]], [[ಸರಜೂ ಕಾಟ್ಕರ]], [[ಎನ್.ಗಾಯತ್ರಿದೇವಿ]] ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಕಾಗಿರಲಿಲ್ಲ. ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ನಿಧನದಿಂದ ತೆರವಾದ [[ಕನ್ನಡಪ್ರಭ]] ಸಂಪಾದಕರ ಸ್ಥಾನಕ್ಕೆ [[ಖಾದ್ರಿ ಶಾಮಣ್ಣ]] ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ [[ಪ್ರಜಾಪ್ರಭುತ್ವ]]ವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ [[ಪ.ಸು.ಭಟ್ಟ]] `ಸಂಕ' ಸಮೂಹದ ಸಂಪಾದಕರಾದರು. [[ಚಿತ್ರದೀಪ]]ವೆಂಬ ಸಿನಿಮಾ ಪತ್ರಿಕೆಯನ್ನೂ [[ಆರ್.ನರಸಿಂಹ]] ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.
 
ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ‘ರಾವಬಹಾದ್ದೂರ’ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ `ಸಂಕ'ದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31-01-1980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ‘ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್)’ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ [[ಮತ್ತೀಹಳ್ಳಿ ನಾಗರಾಜರಾವ್]] ಅವರದಾಯಿತು.
 
ಬಹು ಹಿಂದೆ ಆರಂಭಗೊಂಡಿದ್ದ [[ಸಂಯುಕ್ತ ಕರ್ನಾಟಕ ನೌಕರರ ಸಂಘ]] ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, [[ಕೋಡಿಹೊಸಳ್ಳಿ ರಾಮಣ್ಣ]] ನೇತೃತ್ವದಲ್ಲಿ [[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ]]ವೂ ಹಕ್ಕೊತ್ತಾಯದ ಹೋರಾಟ ನಡೆಸಿತು. [[ಆರ್.ಗುಂಡೂರಾವ್]] ಮುಖ್ಯಮಂತ್ರಿಯಾಗಿದ್ದರು. [[ವೀರಪ್ಪ ಮೊಯ್ಲಿ]] ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶ ಹೊರಡಿಸಿತು.
 
[[ಚಿತ್ರ:News_Clip_02.jpg|thumb|1983ರಲ್ಲಿ ಸಂಯುಕ್ತ ಕರ್ನಾಟಕ|ಪತ್ರಿಕೆಯ ಕೆ.ಶಾಮರಾವ್ ಹಾಗೂ ಸುರೇಂದ್ರ ದಾನಿಯವರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವಧನದ ಸುದ್ದಿಯಿದೆ|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದಿಂದ]]
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ