ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
`ಸಂಯುಕ್ತ ಕರ್ನಾಟಕ' ಪತ್ರಿಕೆಯ ಧ್ಯೇಯೋದ್ದೇಶಗಳು - ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. 1956ರ ಹೊತ್ತಿಗೆ ಇವೆರಡೂ ಉದ್ದಿಶ್ಯಗಳು ಸಂಪೂರ್ಣವಾಗಿ ಈಡೇರಿದ್ದವು. ರಂಗನಾಥ ದಿವಾಕರ ಬಿಹಾರದ ರಾಜ್ಯಪಾಲರಾಗಿದ್ದರು. ಈ ಸಮಯದಲ್ಲಿ ಅವರಿಗೊಂದು ಕನಸು ಹುಟ್ಟಿತು. ಕೇವಲ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪತ್ರಿಕೆ ಇಡೀ ಮೈಸೂರು ರಾಜ್ಯವನ್ನು ತಲುಪುತ್ತಿಲ್ಲ. ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕೆಂದರೆ ರಾಜಧಾನಿಯಾದ ಬೆಂಗಳೂರಿನಿಂದಲೂ ಒಂದು ಆವೃತ್ತಿಯನ್ನು ತರಬೇಕು. ಈ ಕೆಲಸಕ್ಕೆ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದ [[ಎಂ.ಎಚ್.ಕೌಜಲಗಿ]] ಅವರನ್ನು ದಿವಾಕರ ಅವರು ನಿಯೋಜಿಸಿದರು. ದ್ವಿತೀಯ ಮಹಾಯುದ್ಧ ಸಮಯದಲ್ಲಿ [[ಸಂಜಯ]] ಎನ್ನುವ ಸ್ವಂತ ವಾರಪತ್ರಿಕೆಯನ್ನು ಪ್ರಕಟಿಸಲೆಂದು ‘ಸಂಕ’ದ ಹುಬ್ಬಳ್ಳಿ ಕಚೇರಿಯನ್ನು ತೊರೆದಿದ್ದ [[ಕೆ.ಶಾಮರಾವ್]] ಅವರನ್ನು ಬೆಂಗಳೂರು ಮುದ್ರಣದ ಕೆಲಸಕ್ಕೆಂದು ಮತ್ತೆ ಕರೆಯಲಾಯಿತು. ಎರಡು ಕೇಂದ್ರಗಳಲ್ಲಿ ಒಂದೇ ಪತ್ರಿಕೆಯ ಆವೃತ್ತಿಗಳನ್ನು ಹೊರತರುವ ಪ್ರಯೋಗ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತಾಗಿತ್ತು.
 
ಸ್ವಂತ ಕಚೇರಿಯೊಂದು ಬೆಂಗಳೂರಿನಲ್ಲಿರದ ಕಾರಣ, ಶಾಮರಾವ್ ಅವರ ಮನೆಯಲ್ಲಿಯೇ ಟೆಲಿಪ್ರಿಂಟರ್ ಯಂತ್ರವನ್ನು ಜೋಡಿಸಲಾಯಿತು. ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಪದಗಳನ್ನು ಟೈಪ್ ಮಾಡಿ ಹುಬ್ಬಳ್ಳಿಗೆ ವರದಿಗಳನ್ನು ಕಳುಹಿಸುವ ಕೆಲಸ ಆರಂಭವಾಯಿತು. ಬಹು-ಮುದ್ರಣ ಆವೃತ್ತಿಗಳಿದ್ದ [[ಹಿಂದೂ]] ಮತ್ತು [[ಇಂಡಿಯನ್ ಎಕ್ಸ್‍ಪ್ರೆಸ್]] ಪತ್ರಿಕೆಗಳ ಮದ್ರಾಸ್ ಕಚೇರಿಗಳಲ್ಲಿ ಕೌಜಲಗಿ ಹಾಗೂ ಶಾಮರಾವ್ ಟೆಲಿಪ್ರಿಂಟರ್ ವ್ಯವಸ್ಥೆಯ ಬಳಕೆಯ ಬಗ್ಗೆ ತರಬೇತಿ ಪಡೆದರು. ‘ಸಂಕ’ದ ಬೆಂಗಳೂರು ಆವೃತ್ತಿಯ ಬುನಾದಿ ಹಾಕುವ ಸಮಯದಲ್ಲಿಯೇ [[ತಾಯಿನಾಡು]] ಪತ್ರಿಕೆಯ ಮಾಲಿಕತ್ವ ಸ್ವಾತಂತ್ರ್ಯ ಹೋರಾಟಗಾರ [[ಪಿ.ಆರ್.ರಾಮಯ್ಯ]]ನವರಿಂದ ಎಂಜಿನಿಯರಿಂಗ್ ಕಂಟ್ರ್ಯಾಕ್ಟರ್ [[ಎಂ.ಎಸ್.ರಾಮಯ್ಯ]]ನವರಿಗೆ ಹಸ್ತಾತಂತರವಾಯಿತು (1958). ಪತ್ರಿಕೋದ್ಯೋಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ [[ಪಿ.ಆರ್.ರಾಮಯ್ಯ]]ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದವರು ‘ಸಂಕ’ದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವರೆಂಬ ನಂಬಿಕೆ ಸಂಪಾದಕ [[ಮೊಹರೆ ಹಣಮಂತರಾಯ]] ಅವರದಾಗಿತ್ತು. [[ತಾಯಿನಾಡು]] ಪತ್ರಿಕೆಯ ಅನುಭವಿ ಪತ್ರಕರ್ತರನ್ನು ‘ಸಂಕ’ದ ಬೆಂಗಳೂರು ಆವೃತ್ತಿಗೆ ನೇಮಕ ಮಾಡಿಕೊಳ್ಳುವ ನಿರ್ಧಾರವಾಯಿತು. ಜತೆಗೆ ಸಂಪೂರ್ಣ ಹುಬ್ಬಳ್ಳಿಯದಾಗಿದ್ದ ‘ಸಂಕ”ವನ್ನು ಹಳೆಯ ಮೈಸೂರು ಜನರಿಗೆ ಪರಿಚಯಿಸುವ ಕಾರ್ಯಕ್ಕೆ [[ತಾಯಿನಾಡು]] ಪತ್ರಕರ್ತರು ಸೂಕ್ತ ಎಂಬ ಚಿಂತನೆಯೂ ಇತ್ತು. ಕಾದಂಬರಿಕಾರ, [[ಗ್ರಾಮಾಯಣ]] ಖ್ಯಾತಿಯ [[ರಾವಬಹಾದ್ದೂರ]] ([[ಆರ್.ಬಿ.ಕುಲಕರ್ಣಿ]]) ಅವರನ್ನು ಬೆಂಗಳೂರು ಆವೃತ್ತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. [[ತಾಯಿನಾಡು]] ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಸಂಪಾದಕೀಯ ಬರಹಗಾರ ಹಾಗೂ ಸಂಪಾದಕರ ನಂತರದ ಸ್ಥಾನದಲ್ಲಿದ್ದ [[ಹೆಚ್.ಆರ್.ನಾಗೇಶರಾವ್]] 1958ರ ಆಗಸ್ಟ್ ತಿಂಗಳಿನಲ್ಲಿ ‘ಸಂಕ’ವನ್ನು ಸೇರಿದರು. ನಂತರ [[ತಾಯಿನಾಡು]] ಪತ್ರಿಕೆಯ ಹಿರಿಯ ಹುದ್ದೆಗಳಲ್ಲಿದ್ದ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]] ‘ಸಂಕ’ ಸೇರಿದರು. ಇವರೆಲ್ಲರಿಗೂ ಮುಂಚೆ [[ತಾಯಿನಾಡು]]ವಿನಲ್ಲಿ ವ್ಯವಸ್ಥಾಪಕರಾಗಿದ್ದ [[ಕೆ.ಆರ್.ವೆಂಕಟಾಚಲಪತಿ]]ಯವರು [[ಎಂ.ಎಚ್.ಕೌಜಲಗಿ]]ಯವರ ಜತೆಗೂಡಿದ್ದರು. [[ವಿಶ್ವ ಕರ್ನಾಟಕ]]ದಿಂದ ಕವಿ [[ಅರ್ಚಕ ವೆಂಕಟೇಶ]], ಕತೆಗಾರ [[ಭಾರತೀಪ್ರಿಯ]] ([[ಎಸ್.ವೆಂಕಟರಾವ್]]), [[ಶ್ರೀನಿವಾಸ ತುಪ್ಪ]] ಸಂಪಾದಕ ಮಂಡಲಿ ಸೇರಿದರು. ನಂತರ ಯುವ ಬರಹಗಾರರಾಗಿದ್ದ [[ಮತ್ತೂರು ಕೃಷ್ಣಮೂರ್ತಿ]] ಅವರ ನೇಮಕವಾಯಿತು. [[ಪ್ರಜಾವಾಣಿ]] ಬಿಟ್ಟು [[ಎಂ.ಎಸ್.ರಾಮಯ್ಯ]]ನವರ [[ತಾಯಿನಾಡು]] ಸಮೂಹದ [[ಗೋಕುಲ]] ವಾರಪತ್ರಿಕೆಯ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ಹಾಗೂ ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]] ‘ಸಂಕ’ಕ್ಕೆ ಬಂದರು. ಕಲೆ-ಸಾಹಿತ್ಯ-ಸಂಸ್ಕೃತಿ ಪುಟ/ಪುರವಣಿಗಳನ್ನು ನೋಡಿಕೊಳ್ಳಲು [[ಮಾ.ನಾ.ಚೌಡಪ್ಪ]]ನವರ ನೇಮಕವಾಯಿತು.
 
[[1959]]ರ ಜನವರಿ 26ರಂದು `[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ [[ಸುರೇಂದ್ರ ದಾನಿ]] ಬೆಂಗಳೂರಿಗೆ ವರ್ಗಾವಣೆಗೊಂಡರು. [[ನರಸಿಂಹ ಜೋಶಿ]] ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ