ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ [[ಲೋಕ ಶಿಕ್ಷಣ ಟ್ರಸ್ಟ್]]ನ ಧರ್ಮದರ್ಶಿಯಾಗಿದ್ದ [[ರಂಗನಾಥ ದಿವಾಕರ]] ಅವರು ತಮ್ಮ ಮಗ [[ಅನಂತ ದಿವಾಕರ]] ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. [[ಇಂಡಿಯನ್ ಎಕ್ಸ್‍ಪ್ರೆಸ್]] ಸಮೂಹದ [[ಕನ್ನಡಪ್ರಭ]] ದಿನಪತ್ರಿಕೆಯೂ [[ಪ್ರಜಾವಾಣಿ]]ಯೊಂದಿಗೆ [[ಸಂಯುಕ್ತ ಕರ್ನಾಟಕ]]ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. [[ರಂಗನಾಥ ದಿವಾಕರ]] ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ [[1974]]ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ [[ಡಿ.ದೇವರಾಜ ಅರಸು]] ಅವರ ಆಪ್ತರಾಗಿದ್ದ ಸಚಿವ [[ಎಂ.ವೈ.ಘೋರ್ಪಡೆ]] ಅವರ [[ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್]] ಸಂಸ್ಥೆಗೆ ಮಾರಾಟ ಮಾಡಿದರು. [[ಪ್ರಜಾವಾಣಿ]]ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ [[ಪ್ರಜಾವಾಣಿ]]ಯ ಪ್ರಧಾನ ವರದಿಗಾರರಾಗಿದ್ದ [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ ಸೇರ್ಪಡೆಯಾದರು. [[ಪ್ರಜಾವಾಣಿ]]ಯ ಹಿರಿಯ ವರದಿಗಾರರಾಗಿದ್ದ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ [[ಕೆ.ಶಾಮರಾವ್]] ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ [[ಸುರೇಂದ್ರ ದಾನಿ]] ಹುಬ್ಬಳ್ಳಿಗೆ ಮರಳಿದರು. [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.
 
ಟ್ರಸ್ಟ್‌ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು [[ಕೆ.ಶಾಮರಾವ್]] ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು.
ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಅರ್ಥ ಸಚಿವ ಹಾಗೂ ಉದ್ಯಮಿಯಾಗಿದ್ದ ಎಂ.ವೈ.ಘೋರ್ಪಡೆಯವರಿಗೆ ಪತ್ರಿಕೆಗಳನ್ನು ನಡೆಸುವ ಆಸಕ್ತಿ ಕುಂದಿತು. ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು.
 
[[ಕರ್ಮವೀರ]]ಕ್ಕೆ ಹೊಸರೂಪವನ್ನು ಕೊಡಲಾಯಿತು. [[ಜಿ.ಪಿ.ಬಸವರಾಜು]], [[ಗೋಪಾಲ ವಾಜಪೇಯಿ]], [[ಗಂಗಾಧರ ಮೊದಲಿಯಾರ್]], [[ಆರ್.ನರಸಿಂಹ]], [[ಸರಜೂ ಕಾಟ್ಕರ]], [[ಎನ್.ಗಾಯತ್ರಿದೇವಿ]] ಮೊದಲಾದ ಹೊಸ ಪೀಳಿಗೆಯ
,ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಅರ್ಥ ಸಚಿವ ಹಾಗೂ ಉದ್ಯಮಿಯಾಗಿದ್ದ ಎಂ.ವೈ.ಘೋರ್ಪಡೆಯವರಿಗೆ ಪತ್ರಿಕೆಗಳನ್ನು ನಡೆಸುವ ಆಸಕ್ತಿ ಕುಂದಿತು. ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ನಿಧನದಿಂದ ತೆರವಾದ [[ಕನ್ನಡಪ್ರಭ]] ಸಂಪಾದಕರ ಸ್ಥಾನಕ್ಕೆ [[ಖಾದ್ರಿ ಶಾಮಣ್ಣ]] ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ [[ಪ್ರಜಾಪ್ರಭುತ್ವ]]ವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ [[ಪ.ಸು.ಭಟ್ಟ]] `ಸಂಕ' ಸಮೂಹದ ಸಂಪಾದಕರಾದರು. [[ಚಿತ್ರದೀಪ]]ವೆಂಬ ಸಿನಿಮಾ ಪತ್ರಿಕೆಯನ್ನೂ [[ಆರ್.ನರಸಿಂಹ]] ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.
 
[[ಚಿತ್ರ:News_Clip_02.jpg|thumb|1983ರಲ್ಲಿ ಸಂಯುಕ್ತ ಕರ್ನಾಟಕ|ಪತ್ರಿಕೆಯ ಕೆ.ಶಾಮರಾವ್ ಹಾಗೂ ಸುರೇಂದ್ರ ದಾನಿಯವರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವಧನದ ಸುದ್ದಿಯಿದೆ|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದಿಂದ]]
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ