ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
[[1959]]ರ ಜನವರಿ 26ರಂದು `[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ [[ಸುರೇಂದ್ರ ದಾನಿ]] ಬೆಂಗಳೂರಿಗೆ ವರ್ಗಾವಣೆಗೊಂಡರು. [[ನರಸಿಂಹ ಜೋಶಿ]] ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.
 
ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. [[ಎಸ್.ಎಸ್.ಎಲ್.ಸಿ.]] ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ [[ಕಬ್ಬನ್ ಪಾರ್ಕ್]]ನ ವಿಕ್ಟರಿ ಹಾಲ್‍ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು.
 
ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ [[ಲೋಕ ಶಿಕ್ಷಣ ಟ್ರಸ್ಟ್]]ನ ಧರ್ಮದರ್ಶಿಯಾಗಿದ್ದ [[ರಂಗನಾಥ ದಿವಾಕರ]] ಅವರು ತಮ್ಮ ಮಗ [[ಅನಂತ ದಿವಾಕರ]] ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. [[ಇಂಡಿಯನ್ ಎಕ್ಸ್‍ಪ್ರೆಸ್]] ಸಮೂಹದ [[ಕನ್ನಡಪ್ರಭ]] ದಿನಪತ್ರಿಕೆಯೂ [[ಪ್ರಜಾವಾಣಿ]]ಯೊಂದಿಗೆ [[ಸಂಯುಕ್ತ ಕರ್ನಾಟಕ]]ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. [[ರಂಗನಾಥ ದಿವಾಕರ]] ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ [[1974]]ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ [[ಡಿ.ದೇವರಾಜ ಅರಸು]] ಅವರ ಆಪ್ತರಾಗಿದ್ದ ಸಚಿವ [[ಎಂ.ವೈ.ಘೋರ್ಪಡೆ]] ಅವರ [[ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್]] ಸಂಸ್ಥೆಗೆ ಮಾರಾಟ ಮಾಡಿದರು. [[ಪ್ರಜಾವಾಣಿ]]ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ [[ಖಾದ್ರಿ ಶಾಮಣ್ಣ]] ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ [[ಪ್ರಜಾವಾಣಿ]]ಯ ಪ್ರಧಾನ ವರದಿಗಾರರಾಗಿದ್ದ [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ ಸೇರ್ಪಡೆಯಾದರು. [[ಪ್ರಜಾವಾಣಿ]]ಯ ಹಿರಿಯ ವರದಿಗಾರರಾಗಿದ್ದ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು.
 
[[ಚಿತ್ರ:News_Clip_02.jpg|thumb|1983ರಲ್ಲಿ ಸಂಯುಕ್ತ ಕರ್ನಾಟಕ|ಪತ್ರಿಕೆಯ ಕೆ.ಶಾಮರಾವ್ ಹಾಗೂ ಸುರೇಂದ್ರ ದಾನಿಯವರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವಧನದ ಸುದ್ದಿಯಿದೆ|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದಿಂದ]]
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ