ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
[[Image:sk_logo.jpg|thumb|೧೯೭೪ರಲ್ಲಿ ಸಂಯುಕ್ತ ಕರ್ನಾಟಕ]]
 
'''ಸಂಯುಕ್ತ ಕರ್ನಾಟಕ''' [[ಹುಬ್ಬಳ್ಳಿ]] ಮತ್ತು ಬೆಂಗಳೂರಿನಿಂದ[[ಬೆಂಗಳೂರು]] ಎರಡೂ ಕೇಂದ್ರದಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ.
 
[[ಕರ್ಮವೀರ]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. [[ದತ್ತೋಪಂತ ಬೆಳವಿ]],[[ನಾರಾಯಣರಾವ್ ಜೋಷಿ]],[[ದಾತಾರ ಬಳವಂತರಾವ್]],[[ಗೋಖಲೆ ಕೇಶವರಾವ್]] ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ [[ಬಾಗಲಕೋಟೆ]]ಯ [[ಕನ್ನಡಿಗ]], [[ಬೆಳಗಾವಿ]]ಯ [[ಅರುಣೋದಯ]] ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ [[ಹುಬ್ಬಳ್ಳಿ]]ಯಿಂದ [[ವಿ.ಬಿ.ಪುರಾಣಿಕ]]ರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ [[ಲೋಕಮತ]]. [[ನಾರಾಯಣರಾವ್ ಕಲ್ಲೆ]], ಮಾಜಿ ಮಂತ್ರಿ [[ಕಲ್ಲನಗೌಡ ಪಾಟೀಲ]]ರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಇದನ್ನು ಕಂಡು [[ಬೆಳಗಾವಿ]]ಯಿಂದ ಪ್ರಕಟವಾಗುತ್ತಿದ್ದ [[ಸಂಯುಕ್ತ ಕರ್ನಾಟಕ]]ವು ಹುಬ್ಬಳ್ಳಿಗೆ ಬಂತು. [[ರಂಗನಾಥ ದಿವಾಕರ]] ಧರ್ಮದರ್ಶಿತ್ವದಲ್ಲಿ, [[ಮೊಹರೆ ಹಣಮಂತರಾಯ]]ರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು "[[ಲೋಕ ಶಿಕ್ಷಣ ಟ್ರಸ್ಟ್]]" ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಬಾಗಲಕೋಟೆಯ ಪುರೋಹಿತ ಬಂಧುಗಳು ರಂಗನಾಥ ದಿವಾಕರರಿಗೆ ಬೆಂಬಲವಾಗಿ ನಿಂತರು. ಹಿರಿಯರಾದ ತಮ್ಮಣ್ಣಾಚಾರ್ಯ ಪುರೋಹಿತರು ಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ [[ಹ.ರಾ.ಪುರೋಹಿತ]]ರು ಸಂಪಾದಕೀಯ ಮಂಡಲಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. [[ನಾರಾಯಣರಾವ್ ಕಲ್ಲೆ]] ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು.
 
`ಸಂಯುಕ್ತ ಕರ್ನಾಟಕ' ಪತ್ರಿಕೆಯ ಧ್ಯೇಯೋದ್ದೇಶಗಳು - ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. ಇವೆರಡೂ ಉದ್ದಿಶ್ಯಗಳು ಈಡೇರಿದ ಮೇಲೆ ಬಿಹಾರದ ರಾಜ್ಯಪಾಲರ ಹೊಣೆ ಹೊತ್ತಿದ್ದ ರಂಗನಾಥ ದಿವಾಕರ ಅವರಿಗೆ ಮತ್ತೊಂದು ಕನಸು ಹುಟ್ಟಿತು. ಇಡೀ ಕರ್ನಾಟಕದಲ್ಲಿ ಪತ್ರಿಕೆಯನ್ನು ಪ್ರಸರಿಸುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂಬ ಹಂಬಲದಿಂದ ರಾಜಧಾನಿಯಾದ ಬೆಂಗಳೂರಿನಲ್ಲಿ ಮುದ್ರಣವಾಗುವ ಪತ್ರಿಕೆಯ ಆವೃತ್ತಿಯನ್ನು ಹೊರತರುವ ನಿರ್ಧಾರ ಮಾಡಿದರು.
 
`[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ೧೯೫೯ರ ಜನವರಿ ೨೬ರಂದು [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಆವೃತ್ತಿಯ ಆರಂಭಕ್ಕೂ ಮುನ್ನ ೧೯೫೮ರ ಸೆಪ್ಟಂಬರ್ ೧ರಿಂದಲೇ ನೇಮಕಗೊಂಡ ಹಿರಿಯ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ ಹುಬ್ಬಳ್ಳಿ ಕಚೇರಿಯಿಂದ ವರ್ಗವಾದ [[ಕೆ.ಶಾಮರಾವ್]] ಹಾಗೂ [[ಸುರೇಂದ್ರ ಬಿ.ದಾನಿ]] ಮತ್ತು ‘[[ತಾಯಿನಾಡು]]’ ಪತ್ರಿಕೆಯಿಂದ ಬಂದ [[ಹೆಚ್.ಆರ್.ನಾಗೇಶರಾವ್]]. ಆವೃತ್ತಿಯ ಮುಖ್ಯಸ್ಥರಾಗಿ ಸಹಾಯಕ ಸಂಪಾದಕರ ಸ್ಥಾನದಲ್ಲಿದ್ದವರು ‘ಗ್ರಾಮಾಯಣ’ ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] (ಆರ್.ಬಿ.ಕುಲಕರ್ಣಿ). ‘[[ಪ್ರಜಾವಾಣಿ]]’ಯಿಂದ ಬಂದಿದ್ದ [[ಖಾದ್ರಿ ಶಾಮಣ್ಣ]] ಕೆಲಕಾಲ ಸುದ್ದಿ ಸಂಪಾದಕರಾಗಿದ್ದರು. ಇದೇ ಸಮಯದಲ್ಲಿ ‘ತಾಯಿನಾಡು’ ಪತ್ರಿಕೆಯ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]], ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]], ಕಥೆಗಾರ ‘[[ಭಾರತೀಪ್ರಿಯ]]’ (ಎಸ್.ವೆಂಕಟರಾವ್), ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]], ಅದೇ ತಾನೆ ವೃತ್ತಿಜೀವನ ಆರಂಭಿಸಿದ್ದ [[ನರಸಿಂಹ ಜೋಶಿ]] ಮತ್ತಿತರರು ‘[[ಸಂಯುಕ್ತ ಕರ್ನಾಟಕ]]’ದ ಬೆಂಗಳೂರು ಆವೃತ್ತಿಗೆ ಸೇರ್ಪಡೆಯಾಗಿ ಪತ್ರಿಕೆಯನ್ನು ಬೆಳೆಸಿದರು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ