ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
`[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ೧೯೫೯ರ ಜನವರಿ ೨೬ರಂದು [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಆವೃತ್ತಿಯ ಆರಂಭಕ್ಕೂ ಮುನ್ನ ೧೯೫೮ರ ಸೆಪ್ಟಂಬರ್ ೧ರಿಂದಲೇ ನೇಮಕಗೊಂಡ ಹಿರಿಯ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ ಹುಬ್ಬಳ್ಳಿ ಕಚೇರಿಯಿಂದ ವರ್ಗವಾದ [[ಕೆ.ಶಾಮರಾವ್]] ಹಾಗೂ [[ಸುರೇಂದ್ರ ಬಿ.ದಾನಿ]] ಮತ್ತು ‘[[ತಾಯಿನಾಡು]]’ ಪತ್ರಿಕೆಯಿಂದ ಬಂದ [[ಹೆಚ್.ಆರ್.ನಾಗೇಶರಾವ್]]. ಆವೃತ್ತಿಯ ಮುಖ್ಯಸ್ಥರಾಗಿ ಸಹಾಯಕ ಸಂಪಾದಕರ ಸ್ಥಾನದಲ್ಲಿದ್ದವರು ‘ಗ್ರಾಮಾಯಣ’ ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] (ಆರ್.ಬಿ.ಕುಲಕರ್ಣಿ). ‘[[ಪ್ರಜಾವಾಣಿ]]’ಯಿಂದ ಬಂದಿದ್ದ [[ಖಾದ್ರಿ ಶಾಮಣ್ಣ]] ಕೆಲಕಾಲ ಸುದ್ದಿ ಸಂಪಾದಕರಾಗಿದ್ದರು. ಇದೇ ಸಮಯದಲ್ಲಿ ‘ತಾಯಿನಾಡು’ ಪತ್ರಿಕೆಯ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]], ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]], ಕಥೆಗಾರ ‘[[ಭಾರತೀಪ್ರಿಯ]]’ (ಎಸ್.ವೆಂಕಟರಾವ್), ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]], ಅದೇ ತಾನೆ ವೃತ್ತಿಜೀವನ ಆರಂಭಿಸಿದ್ದ [[ನರಸಿಂಹ ಜೋಶಿ]] ಮತ್ತಿತರರು ‘[[ಸಂಯುಕ್ತ ಕರ್ನಾಟಕ]]’ದ ಬೆಂಗಳೂರು ಆವೃತ್ತಿಗೆ ಸೇರ್ಪಡೆಯಾಗಿ ಪತ್ರಿಕೆಯನ್ನು ಬೆಳೆಸಿದರು.
 
[[ಚಿತ್ರ:News_Clip_02.jpg|1983ರಲ್ಲಿ ಸಂಯುಕ್ತ ಕರ್ನಾಟಕ|ಪತ್ರಿಕೆಯ ಕೆ.ಶಾಮರಾವ್ ಹಾಗೂ ಸುರೇಂದ್ರ ದಾನಿಯವರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಗೌರವಧನದ ಸುದ್ದಿಯಿದೆ]]ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ತರಬೇತಿ ಪಡೆದು ಮುಂದೆ ವಿವಿಧ ಪತ್ರಿಕೆಗಳಲ್ಲಿ ಉನ್ನತ ಸ್ಥಾನ ಪಡೆದವರ ಪಟ್ಟಿ ಇಂತಿದೆ.
 
೧. [[ಪಿ.ರಾಮಣ್ಣ]] - [[ಕಿಡಿ]] [[ಪಿ.ಶೇಷಪ್ಪ]]ನವರ ತಮ್ಮ, [[ಪ್ರಜಾವಾಣಿ]] ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ