ಬಿ.ಆರ್.ಪಂತುಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೨ ನೇ ಸಾಲು:
 
[[ಪುಟ್ಟಣ್ಣ ಕಣಗಾಲ್|ಪುಟ್ಟಣ್ಣ ಕಣಗಾಲರ]] ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ.ಆರ್. ಪಂತುಲು.
 
.
 
ಅವರು ಅಭಿನಯ-ನಿರ್ದೇಶನ-ನಿರ್ಮಾಣ ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದ ಕಲಾವಿದ. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು ಕನ್ನಡ ಚಿತ್ರರಂಗದತ್ತ ಭಾರತದ ಇಡೀ ಚಿತ್ರರಂಗ ತಿರುಗಿ ನೋಡು ವಂಥ ಇತಿಹಾಸವನ್ನೇ ನಿರ್ಮಿಸಿತು. ಸುಮಾರು 20 ಚಿತ್ರಗಳಲ್ಲಿನ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಾಯಕನಟ ನಾಗಿ ಅಭಿನಯಿಸಿರುವುದೊಂದು ವಿಶೇಷ.
ಜೊತೆಗೆ ಸ್ವತಃ ಬಿ.ಆರ್.ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣ ವಾಗುತ್ತಿದ್ದುದು ಆ ಚಿತ್ರಗಳ ಇನ್ನೊಂದು ಸುವಿಶೇಷ. 1955ರಲ್ಲಿ ಪದ್ಮಿನಿ ಪಿಕ್ಚರ್ಸ್‌ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರೂ ಅವರು ನಿರ್ಮಿಸಿದ ಚಿತ್ರಗಳನ್ನು ‘ಪಂತುಲು ಚಿತ್ರಗಳು’ ಎಂದು ಕರೆಯುವುದೇ ವಾಡಿಕೆ.ಪಂತುಲುರವರನ್ನು ಬಹಳ ಮುಖ್ಯ ವಾಗಿ ನೆನೆಯಬೇಕಾದುದು ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದ ಧ್ಯಾನದ ಆರಂಭದಿಂದಲೇ ಎಂದು ನನಗನಿಸುತ್ತದೆ. ‘ಸ್ವಾಮಿ ದೇವನೆ...’ ಎಂಬ ಒಂದು ಹಾಡು ಸಾಕು ಪಂತುಲುರವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು. ಆ ಪ್ರಾರ್ಥನಾ ಗೀತೆ ಹೀಗಿದೆ-
ಸ್ವಾಮಿ ದೇವನೆ ಲೋಕ ಪಾಲನೆ
ತೇ ನಮೋಸ್ತುತೇ
ಪ್ರೇಮದಿಂದದಿ ನೋಡು ನಮ್ಮನು
ತೇ ನಮೋಸ್ತುತೇ॥
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ
ಹೋಗಲಾಡಿಸು ಬೇಗನೇ...॥
ವಿಜಯ ವಿದ್ಯಾರಣ್ಯ ಕಟ್ಟಿದ
ಚಾಮುಂಡಾಂಬೆಯ ನಾಡಿನಾ
ಮನೆಯ ಮಕ್ಕಳ ಐಕ್ಯಗಾನವ
ಲಾಲಿಸೈ ಪರಿಪಾಲಿಸೈ... ॥
 
ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆ ಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದೆ ಬಹು ಮುಖ್ಯವಾದ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥ ನೆಯೇ ಆಗಿ ಹೋಗಿತ್ತು.
ಸ್ಕೂಲ್‌ಮಾಸ್ಟರ್’ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ವಿ.ಆರ್. ಪಂತುಲುರವರ ಮನೋಜ್ಞ ಅಭಿನಯ-ಹಾವಭಾವ, ಮೇಷ್ಟ್ರರ ಹೆಂಡತಿಯಾಗಿ (ನಿಜ ಜೀವನದಲ್ಲಿಯೂ ಹೆಂಡತಿಯಾಗಿದ್ದವರು) ಕಲಾವಿದೆ ಎಂ.ವಿ. ರಾಜಮ್ಮನವರು ಪಂತುಲುವಿಗೆ ತಕ್ಕಂತೆ ಅಭಿನಯಿಸಿದ್ದರು.
ಮುಂದಿನ ಜುಲೈಗೆ ೨೬ಕ್ಕೆ ಕನ್ನಡ ಚಿತ್ರರಂಗ ಕಂಡ ಮರೆಯಬಾರದ ಮಹಾನ್ ನಿರ್ಮಾಪಕ- ನಿರ್ದೇಶಕರು ಹುಟ್ಟಿ ೧೦೦ ವರ್ಷಗಳು ತುಂಬುತ್ತವೆ. ಅವರ ಶತಮಾನೋತ್ಸವವನ್ನು ಆಚರಿಸಲೇಬೇಕಾದ ಕನ್ನಡ ಚಿತ್ರರಂಗ ಭೂಮಿಯ ಮುಖ್ಯ ಪರ್ವವಿದು. ಅಕ್ಟೋಬರ ೮ ೧೯೭೪ರಂದು ಇಹಲೋಕ ತ್ಯಜಿಸಿದ್ದ ಬಿ.ಆರ್. ಪಂತುಲು.ಆದ್ದರಿಂದ ಈ ವರ್ಷ ಬಿ.ಆರ್. ಪಂತುಲುರವರ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮವಾಗಿ ಕನ್ನಡದ ಕಂದಮ್ಮಗಳು ಅವರ ಸಿನಿಮಾಗಳನ್ನು ವೀಕ್ಷಿಸಿ ಬೆಳೆಯುವಂತಹ ಸದವಕಾಶವನ್ನು ನಮ್ಮ ಫಿಲಂಚೇಂಬರ್ ಹಾಗೂ ಟಿವಿ ಚಾನೆಲ್‌ಗಳು ಕಲ್ಪಿಸಬೇಕಾಗಿದೆ. ಏಕೆಂದರೆ ಇದು ಕನ್ನಡ ಚಿತ್ರರಂಗದ ಪರಂಪರೆಗೆ ದೊರಕುವ ಜಯ ಹಾಗೂ ಪ್ರಗತಿಯ ದಾರಿ. ‘ಮನೆಯ ಮಕ್ಕಳ ಐಕ್ಯಗಾನ’ಕ್ಕಾಗಿ ಪ್ರಾರ್ಥಿಸುವ ದಾರಿ-‘ಸ್ವಾಮಿ ದೇವನೆ ಲೋಕ ಪಾಲನೆ ತೇನ ಮೋಸ್ತುತೆ... (ಜ್ಯೋತಿ ಗುರುಪ್ರಸಾದ್‌ ಅಂಕಣದಿಂದ ಕದ್ದ ಸರಕು!)
 
== ಬಿ.ಆರ್. ಪಂತುಲು ನಿರ್ದೇಶನದ ಚಿತ್ರಗಳು ==
"https://kn.wikipedia.org/wiki/ಬಿ.ಆರ್.ಪಂತುಲು" ಇಂದ ಪಡೆಯಲ್ಪಟ್ಟಿದೆ