ಭಾರತದ ಆರ್ಥಿಕ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fi:Intian talous
ಚು robot Adding: th:เศรษฐกิจอินเดีย; cosmetic changes
೯ ನೇ ಸಾಲು:
ಭಾರತ ಎದುರಿಸುವ ಸಾಮಾಜಿಕ ಹಾಗು ಆರ್ಥಿಕ ಸಮಸ್ಯೆಗಳೆಂದರೆ ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗ ಬಡತನ, ಅಸಮಾನತೆ ಹಾಗು ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯದ ಕೊರತೆ. ಭಾರತದಲ್ಲಿ ಬಡತನವು ೧೯೮೦ ರಿಂದ, ಕೇವಲ ಶೇಕಡ ೧೦% ರಷ್ಟು ಇಳಿದಿದೆ.
 
== ಇತಿಹಾಸ ==
ಭಾರತದ ಆರ್ಥಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಮಾನದಲ್ಲಿ ವಿಂಗಡಿಸಬಹುದು.
:೧. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ (೧೭ ಶತಮಾನಕ್ಕಿಂತ ಮೊದಲಿನ ಕಾಲ)
೧೭ ನೇ ಸಾಲು:
 
 
=== ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ ===
ಕ್ರಿ.ಪೂ. 2800 ರಿಂದ 1800 ರವರೆಗೆ ಮೆರೆದ ಸಿಂಧೂ ಕಣಿವೆಯ ನಾಗರೀಕತೆಯು ಬಹುತೇಕ ಪಟ್ಟಣ ಪ್ರದೇಶಗಳ ಪಕ್ಕಾ ಒಕ್ಕಲುಗಳನ್ನು ಒಳಗೊಂಡಿತ್ತು. ಇಲ್ಲಿಯ ಜನರು ಬೇಸಾಯ ಮತ್ತು ಪಶುಪಾಲನೆಯನ್ನು ರೂಢಿಸಿಕೊಂಡಿದ್ದರು, ಏಕ ರೀತಿಯ ತೂಕ ಮತ್ತು ಅಳತೆಗಳನ್ನು ಬಳಸುತ್ತಿದ್ದರು,ಆಯುಧೋಪಕರಣಗಳನ್ನು ತಯಾರಿಸುತ್ತಿದ್ದರು ಹಾಗೂ ಇತರ ಪಟ್ಟಣಗಳೋಂದಿಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿದ್ದರು. ಸುನಿಯೋಜಿತ ಬೀದಿಗಳು,ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ,ಇವೆಲ್ಲವುಗಳ ಕುರುಹು,[[ನಗರ ಯೋಜನೆಯಲ್ಲಿ ]] ಇವರಿಗಿದ್ದ ಜ್ಞಾನವನ್ನು ತೋರಿಸುತ್ತದೆ.ಅಷ್ಟೇ ಅಲ್ಲ, ಜಗತ್ತಿನ ಮೊಟ್ಟ ಮೊದಲ ನಗರ [[ನೈರ್ಮಲ್ಯ ವ್ಯವಸ್ಥೆ]] ಹಾಗೂ [[ಸ್ಥಳೀಯ ಸರ್ಕಾರಗಳ]] ಕೀರ್ತಿಯು ಈ ನಾಗರೀಕತೆಗೆ ಸಲ್ಲುತ್ತದೆ.
 
 
೨೯ ನೇ ಸಾಲು:
 
 
[[Imageಚಿತ್ರ:Kumaragupta.jpg|thumb|right|ಗುಪ್ತ ವಂಶದ ಕುಮಾರ ಗುಪ್ತನ ಆಳ್ವಿಕೆಯ ಸಮಯದಲ್ಲಿ ಮುದ್ರಿಸಲಾದ ಬೆಳ್ಳಿ ನಾಣ್ಯ (ಕ್ರಿ.ಶ.೪೧೪–೪೫೫೪೧೪–೪೫೫)]]
 
=== ವಸಾಹತುಶಾಹಿ ಆಳ್ವಿಕೆಯ ಕಾಲ ===
 
[[Imageಚಿತ್ರ:Precolonial national income of India(1857-1900).png|thumb|280px|right|Estimates of Per capita Income of India (1857 - 1900) as per 1948-1949 prices.]]
 
ಬ್ರಿಟಿಷ್ ಆಡಳಿತ ಆಸ್ತಿ ಹಕ್ಕು, ಅನಿರ್ಬಂಧಿತ ವ್ಯಾಪಾರ, ಸ್ಥಿರ ವಿನಿಮಯ ದರ, ಏಕ ರೀತಿಯ ನಾಣ್ಯ ಪಧ್ಧತಿ ಹಾಗೂ ತೂಕ ಮತ್ತು ಅಳತೆ ಪದ್ಧತಿ, ಮುಕ್ತ ಸಟ್ಟಾ ಮಾರುಕಟ್ಟೆ ಇವೆಲ್ಲವುಗಳನ್ನೂ ಒಳಗೊಂಡ ಸಾಂಸ್ಥಿಕ ವಾತಾವರಣವನ್ನು ಸೃಷ್ಟಿಸಿತು.ಅಷ್ಟೇ ಅಲ್ಲ, ಚೆನ್ನಾಗಿ ಅಭಿವೃಧ್ಧಿಯಾದ ರೈಲು ಹಾಗೂ ಅಂಚೆ ತಂತಿ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದ ಆಡಳಿತ ವ್ಯವಸ್ಥೆ, ಆಧುನಿಕ ಕಾನೂನು ವ್ಯವಸ್ಥೆ ಇವುಗಳನ್ನೂ ಬ್ರಿಟಿಷ್ ಆಡಳಿತ ಜಾರಿಗೆ ತಂದಿತು.
೪೦ ನೇ ಸಾಲು:
ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಅಂಗಸ್ ಮ್ಯಾಡಿಸನ್ ರವರ ಅಂದಾಜಿನ ಪ್ರಕಾರ ಜಗತ್ತಿನ ಒಟ್ಟು ಉತ್ಪತ್ತಿಯಲ್ಲಿ ಭಾರತದ ಪಾಲು ೧೭೦೦ರಲ್ಲಿ ಶೇಕಡಾ ೨೨.೬(ಯುರೋಪ್ ಪಾಲು ೨೩.೩%) ಇದ್ದದ್ದು ೧೯೫೨ರಲ್ಲಿ ಕೇವಲ ಶೇಕಡಾ ೩.೮ಕ್ಕೆ ಇಳಿಯಿತು. ಈ ನಿರಾಶಾದಾಯಕ ಪರಿಸ್ಥಿತಿಗೆ, ಸ್ವಾತಂತ್ರ್ಯ ಹೋರಾಟ ಕಾಲದ ಭಾರತೀಯ ಮುಖಂಡರು ಹಾಗೂ "ಎಡ-ರಾಷ್ಟ್ರೀಯವಾದೀ" ಆರ್ಥಿಕ ಇತಿಹಾಸಕಾರರು ಬ್ರಿಟಿಷ್ ಆಳ್ವಿಕೆಯತ್ತ ಬೊಟ್ಟು ಮಾಡಿ ತೋರಿಸಿದರೂ,ವಸಾಹತುಶಾಹಿ ಆಳ್ವಿಕೆ ತಂದ ಬದಲಾವಣೆಗಳು ಹಾಗೂ ಕೈಗಾರಿಕೀಕರಣ ಮತ್ತು ಆರ್ಥಿಕ ಏಕೀಕರಣದತ್ತ ಸಾಗುತ್ತಿದ್ದ ಜಗತ್ತು , ಇವುಗಳ ಒಟ್ಟು ಪರಿಣಾಮದಿಂದ, ಭಾರತದ ಅರ್ಥ ವ್ಯವಸ್ಥೆಯ ಕೆಲವು ಅಂಗಗಳು ಬೆಳೆದಿರುವುದೂ, ಇನ್ನೂ ಕೆಲವು ಅಂಗಗಳು ಕುಂಠಿತವಾಗಿರುವುದೂ,ಆ ಕಾಲದ ಭಾರತೀಯ ಅರ್ಥ ವ್ಯವಸ್ಥೆಯ ಪಕ್ಷಿನೋಟದಲ್ಲಿ ಕಾಣಬರುತ್ತದೆ.
 
=== ಸ್ವಾತಂತ್ರ್ಯಾನಂತರ ಕಾಲ ===
[[Imageಚಿತ್ರ:Indias growth rate of real GDP per capita(1950-2004).png|thumb|280px|Growth rate of India's real GDP per capita (Constant Prices: Chain series) (1950-2000). Data Source: Penn World tables.]]
 
ಸ್ವಾತಂತ್ರ್ಯಾನಂತರ , ವಸಾಹತುಶಾಹಿ ಅನುಭವ ( ಭಾರತೀಯ ಮುಖಂಡರು ಇದನ್ನು ಶೋಷಣಾತ್ಮಕವಾಗಿ ಕಂಡಿದ್ದರು),ಫೇಬಿಯನ್ ಸಮಾಜವಾದದ ಪರಿಚಯ ಇವುಗಳ ಪ್ರಭಾವದಿಂದ ಭಾರತದ ಆರ್ಥಿಕ ಧೋರಣೆಯು (policy) ರಕ್ಷಣಾತ್ಮಕವಾಯಿತು (protectionist).ಆಮದು ವಸ್ತುಗಳ ಸ್ಡದೇಶೀಕರಣ,ಕೈಗಾರಿಕೀಕರಣ,ಶ್ರಮ (labour)ಹಾಗೂ ಹಣಕಾಸು ರಂಗಗಳಲ್ಲಿ ಸರಕಾರೀ ನಿಯಂತ್ರಣ , ಬೃಹತ್ ಸರಕಾರೀ ಉದ್ಯಮ ರಂಗ, ಖಾಸಗೀ ಉದ್ಯಮಕ್ಕೆ ಕಟ್ಟುಪಾಡುಗಳು , ಕೇಂದ್ರೀಕೃತ ಯೋಜನೆ ಇವೆಲ್ಲವೂ ಈ ಧೋರಣೆಯಲ್ಲಿ ಅಡಕವಾಗಿದ್ದವು.ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ , ಅಂಕಿಅಂಶಜ್ಞ ಪ್ರಶಾಂತ ಚಂದ್ರ ಮಹಲನೋಬಿಸ್‌ರೊಂದಿಗೆ ಈ ಸ್ವತಂತ್ರ ಭಾರತದ ಆರ್ಥಿಕ ಧೋರಣೆಯನ್ನು ಹುಟ್ಟುಹಾಕಿ, ಅದನ್ನು ಜಾರಿಗೆ ತರುವಲ್ಲಿ ಮೇಲ್ವಿಚಾರಣೆ ಮಾಡಿದರು. ಇದರಲ್ಲಿ ಸೋವಿಯತ್ ರಶಿಯಾದ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯಂತಲ್ಲದೆ, ಸರಕಾರೀ ಹಾಗೂ ಖಾಸಗೀ ರಂಗಗಳೆರಡಕ್ಕೂ ಅವಕಾಶಗಳಿತ್ತು; ಪ್ರತ್ಯಕ್ಷ ಹಾಗೂ ಪರೋಕ್ಷ ಸರಕಾರೀ ನಿಯಂತ್ರಣಗಳಿದ್ದವು. ಈ ಕಾರಣಗಳಿಂದಾಗಿ, ತಮ್ಮ ಈ ಧೋರಣೆಗೆ ಅವರು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಿದ್ದರು. ಬಂಡವಾಳ ಹಾಗೂ ತಾಂತ್ರಿಕತೆಯನ್ನು ಬೇಡುವ ಭಾರೀ ಕೈಗಾರಿಕೆಗಳೊಂದಿಗೆ , ಹೆಚ್ಚು ನಿಪುಣತೆಯ ಅಗತ್ಯವಿಲ್ಲದ , ಕೈಯಿಂದಲೇ ಮಾಡಬಹುದಾದ ಗುಡಿ ಕೈಗಾರಿಕೆಗಳ ಸರಕಾರೀ ಸಹಾಯಧನಕ್ಕೂ ಒತ್ತು ಕೊಟ್ಟ ಈ ಧೋರಣೆಯನ್ನು ಅರ್ಥ ಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ನರು ಟೀಕಿಸಿ , ಈ ಧೊರಣೆಯಿಂದ ಬಂಡವಾಳ ಹಾಗೂ ಪರಿಶ್ರಮಗಳು ಪೋಲಾಗುವುದಷ್ಟೇ ಅಲ್ಲದೆ, ಸಣ್ಣ ಉದ್ಯಮಗಳ ಬೆಳವಣಿಗೆಯೂ ಕುಂಠಿತವಾಗಬಹುದೆಂದು ಅಭಿಪ್ರಾಯಪಟ್ಟರು.
[[Imageಚಿತ್ರ:Per capita GDP of South Asian economies & SKorea (1950-1995).png|thumb|280px|right|Per capita GDP (at PPP) of [[South Asian]] economies and [[South Korea]] as a percentage of US]]
 
ಎಂಬತ್ತರ ದಶಕದಲ್ಲಿ ಭಾರತದ ಆರ್ಥಿಕ ಅಭಿವೃಧ್ಧಿಯ ಸರಾಸರಿ ವೇಗವು, ಏಶಿಯಾದ ಕೆಲವು ಇತರ ದೇಶಗಳ( ಮುಖ್ಯವಾಗಿ ಪೂರ್ವ ಏಶಿಯಾದ ದೇಶಗಳ) ತೀವ್ರ ಗತಿಗೆ ವ್ಯತಿರಿಕ್ತವಾಗಿ, ಕಡಿಮೆಯಿದ್ದು,ಇದನ್ನು "ಹಿಂದೂ ಅಭಿವೃಧ್ಧಿಯ ವೇಗ" ಎಂದು ಕುಹಕವಾಡಲಾಗುತ್ತಿತ್ತು. ಎಂಭತ್ತರ ನಂತರ ದಾಪುಗಾಲು ಹಾಕತೊಡಗಿದ ಆರ್ಥಿಕ ಬೆಳವಣಿಗೆಗೆ ಎರಡು ಹಂತದ ಸುಧಾರಣೆಗಳು ಕಾರಣವಾದವು. ಒಂದು: ಇಂದಿರಾ ಗಾಂಧಿಯವರು ಶುರುಮಾಡಿ, ರಾಜೀವ ಗಾಂಧಿಯವರು ಮುಂದುವರಿಸಿದ ಖಾಸಗೀ ಉದ್ಯಮ ಪರವಾದ ಸುಧಾರಣೆಗಳು. ಈಗಾಗಲೇ ಕಾರ್ಯನಿರತವಾಗಿರುವ ಉದ್ಯಮಗಳ ಉತ್ಪತ್ತಿಯನ್ನು ವಿಸ್ತರಿಸಲು ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಬೆಲೆ ನಿಯಂತ್ರಣಗಳನ್ನು ತೆಗೆದುಹಾಕಲಾಯಿತು ಹಾಗೂ ಉದ್ಯಮ ರಂಗದ ಮೇಲೆ ವಿಧಿಸಲಾಗಿದ್ದ ಕರವನ್ನು ಕಡಿಮೆ ಮಾಡಲಾಯಿತು. ಎರಡು: ೧೯೯೧ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಅವರ ಹಣಕಾಸು ಮಂತ್ರಿ ಮನಮೋಹನ ಸಿಂಗ್, ಭಾರತ ಎದುರಿಸುತ್ತಿದ್ದ ತೀವ್ರ ಆರ್ಥಿಕ ಸಂಕಟಕ್ಕೆ ಪ್ರತಿಕ್ರಿಯೆಯಾಗಿ, ಪ್ರಾರಂಭಿಸಿದ ಆರ್ಥಿಕ ಉದಾರೀಕರಣ(liberalisation). ಹಣ ಹೂಡಿಕೆ, ಕೈಗಾರಿಕಾ ಹಾಗೂ ಆಮದು ಕ್ಷೇತ್ರಗಳಲ್ಲಿ ಲೈಸೆನ್ಸ್ ರಾಜ್ಯವನ್ನು ತೆಗೆದುಹಾಕಲಾಯಿತು. ಅನೇಕ ರಂಗಳಲ್ಲಿದ್ದ ಸರಕಾರೀ ಏಕಸ್ವಾಮ್ಯವನ್ನು ನಿರ್ಮೂಲಿಸಿ, ಪರದೇಶೀ ಹಣ ಹೂಡಿಕೆಗೆ ಬಹಳಷ್ಟು ಕ್ಷೇತ್ರಗಳಲ್ಲಿ ಪರವಾನಗಿಯನ್ನು ಸ್ವಯಂಚಾಲಿತವಾಗಿಸಲಾಯಿತು (automatic approval ). ಅಂದಿನಿಂದ ಇಲ್ಲಿಯವರೆಗೆ, ಕಾರ್ಮಿಕ ಸಂಘಟನೆಗಳು,ರೈತರು ಇತ್ಯಾದಿ ಪಟ್ಟಭದ್ರ ಶಕ್ತಿಗಳನ್ನೇ ಆಗಲೀ, ಅಥವಾ ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳು, ಕೃಷಿಕರ ಸಹಾಯಧನದಲ್ಲಿ ಕಡಿತ ಇತ್ಯಾದಿ ಸಮಸ್ಯಾತ್ಮಕ ಪ್ರಶ್ನೆಗಳನ್ನೇ ಆಗಲೀ, ಎದುರಿಸುವ ಪ್ರಯತ್ನವನ್ನು ಯಾವ ಪಕ್ಷವೂ ಮಾಡಿಲ್ಲದಿದ್ದರೂ ಕೂಡಾ, ಅಧಿಕಾರದಲ್ಲಿದ್ದದ್ದು ಯಾವುದೇ ಪಕ್ಷವಾಗಿರಲಿ, ಉದಾರೀಕರಣ ಸರಿಸುಮಾರಾಗಿ ಅದೇ ದಿಕ್ಕಿನಲ್ಲಿ ಮುಂದೆ ಸಾಗಿದೆ.
<br clear=both>
 
[[Categoryವರ್ಗ:ಭಾರತ]]
[[Categoryವರ್ಗ:ಭಾರತದ ಅರ್ಥ ವ್ಯವಸ್ಥೆ]]
 
{{Link FA|en}}
೭೯ ನೇ ಸಾಲು:
[[ta:இந்தியாவின் பொருளாதாரம்]]
[[te:భారత ఆర్ధిక వ్యవస్థ]]
[[th:เศรษฐกิจอินเดีย]]
[[uk:Економіка Індії]]
[[vi:Kinh tế Ấn Độ]]