ಗಿಂಕ್ಗೊ ಬಿಲೋಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Ginkgo_biloba (revision: 366734209) using http://translate.google.com/toolkit with about 99% human translations.
 
ಚು robot Adding: hi:जिन्को बाइलोबा; cosmetic changes
೩೫ ನೇ ಸಾಲು:
__TOC__
 
== ವಿವರಣೆ ==
[[Fileಚಿತ್ರ:Radziejowice ginkgo biloba01.jpg|left|thumb|ಶರತ್ಕಾಲದಲ್ಲಿ ಗಿಂಕ್ಗೊ ಮರ]]
 
ಗಿಂಕ್ಗೊಗಳು ತುಂಬಾ ದೊಡ್ಡ ಮರಗಳಾಗಿದ್ದು, ಸಾಮಾನ್ಯವಾಗಿ 20–35 ಮೀ (66–115 ಅಡಿ)ನಷ್ಟು ಎತ್ತರವಿರುತ್ತವೆ. ಚೀನಾದಲ್ಲಿ ಕೆಲವು ಮಾದರಿಗಳು ಸುಮಾರು 50 ಮೀ (164 ಅಡಿ)ನಷ್ಟು ಉದ್ದಕ್ಕೂ ಬೆಳೆಯುತ್ತವೆ. ಈ ಮರವು ಒರಟಾದ ಕ್ರೌನ್(ಭೂಮಿಯಿಂದ ತುಸು ಮೇಲೆ ಮತ್ತು ಕೆಳಗೆ ಇರುವ ಭಾಗ)ಅನ್ನು ಹಾಗೂ ಉದ್ದನೆಯ, ಸ್ವಲ್ಪ ಮನಸೋಇಚ್ಛೆ ಬೆಳೆಯುವ ಕೊಂಬೆಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಆಳವಾಗಿ ಬೇರನ್ನು ಬಿಡುತ್ತವೆ ಹಾಗೂ ಗಾಳಿ ಮತ್ತು ಮಂಜಿನಿಂದ ಉಂಟಾಗಬಹುದಾದ ಹಾನಿಗೆ ಪ್ರತಿರೋಧವನ್ನು ಹೊಂದಿರುತ್ತದೆ. ಎಳೆಯ ಮರಗಳು ಹೆಚ್ಚಾಗಿ ಉದ್ದವಾಗಿ, ತೆಳ್ಳಗಿರುತ್ತವೆ ಮತ್ತು ಅಷ್ಟೊಂದು ಒತ್ತಾಗಿಲ್ಲದ ಕೊಂಬೆಗಳನ್ನು ಹೊಂದಿರುತ್ತವೆ; ಮರವು ಬೆಳೆದಂತೆ ಕ್ರೌನ್ ಅಗಲವಾಗುತ್ತದೆ. ಮಾಗುವ ಕಾಲದಲ್ಲಿ, ಎಲೆಗಳು ಕಡು ಹಳದಿ ಬಣ್ಣಕ್ಕೆ ತಿರುಗಿ ನಂತರ ಉದುರಿ ಹೋಗುತ್ತವೆ. ಕೆಲವೊಮ್ಮೆ ಅಲ್ವಾವಧಿಯಲ್ಲೇ (1-15 ದಿನಗಳೊಳಗಾಗಿ) ಉದುರುತ್ತವೆ. ಅತಿ ಹೆಚ್ಚಿನ ರೋಗ-ಪ್ರತಿರೋಧದ ಸಾಮಾರ್ಥ್ಯ, ಕೀಟ-ವಿರೋಧಿ ತೊಗಟೆ ಹಾಗೂ ಏರಿಯಲ್(ಗಾಳಿಯಲ್ಲಿ ಬೆಳೆದ) ಬೇರುಗಳನ್ನು ಮತ್ತು ಚಿಗುರುಗಳನ್ನು ರಚಿಸುವ ಸಾಮರ್ಥ್ಯವು ಗಿಂಕ್ಗೊಗಳಿಗೆ ದೀರ್ಘ-ಕಾಲ ಬದುಕುವಂತೆ ಮಾಡಿದೆ. ಕೆಲವು ಮಾದರಿಗಳು 2,500 ವರ್ಷಕ್ಕಿಂತಲೂ ಹೆಚ್ಚು ಕಾಲ ಜೀವಿಸಿವೆಯೆಂದು ಹೇಳಲಾಗುತ್ತದೆ.
 
ಗಿಂಕ್ಗೊ ಹೆಚ್ಚುಕಡಿಮೆ ನೆರಳು-ಸಹಿಸದ ಜಾತಿಯಾಗಿದ್ದು, ಚೆನ್ನಾಗಿ-ನೀರು ಪೂರೈಕೆಯಿರುವ ಮತ್ತು ಉತ್ತಮ-ತೇವಾಂಶವಿರುವ ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಜಾತಿಯು ಕದಡಿದ ಮಣ್ಣಿನಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ; ಟಿಯಾನ್ ಮು ಶಾನ್‌‌ನಲ್ಲಿ "ಅರೆ-ನಿಸರ್ಗ ಸಹಜವಾಗಿ" ಬೆಳೆದ ಸಸ್ಯಗಳ ಗುಂಪಿನಲ್ಲಿ, ಹೆಚ್ಚಿನ ಮಾದರಿಗಳು ಹಳ್ಳದ ತೀರಗಳಲ್ಲಿ, ಕಲ್ಲಿನ ಇಳಿಜಾರಿನಲ್ಲಿ ಮತ್ತು ಪ್ರಪಾತಗಳ ಅಂಚುಗಳಲ್ಲಿ ಕಂಡುಬರುತ್ತವೆ. ಆದುದರಿಂದ ಗಿಂಕ್ಗೊ ಸಸ್ಯಕ ಬೆಳವಣಿಗೆಗೆ ಅಸಾಧಾರಣ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತದೆ. ಇದು ಕಾಂಡದ (ಲಿಗ್ನೊಟ್ಯೂಬರ್‌ಗಳು ಅಥವಾ ಬೇಸಲ್ ಚಿ ಚಿ) ಹತ್ತಿರವಿರುವ ಚಿಗುರುಗಳಿಂದ, ಮಣ್ಣಿನ ಸವಕಳಿಯಂಥ ಕದಡುವಿಕೆಗೆ ಪ್ರತಿಯಾಗಿ ಕುಡಿಯೊಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಳೆಯ ಮರಗಳೂ ಸಹ ಕ್ರೌನ್ ಹಾನಿಯಂಥ ಅಸ್ಥಿರತೆಗೆ ಪ್ರತಿಯಾಗಿ ದೊಡ್ಡ ಕೊಂಬೆಗಳ ಕೆಳಭಾಗದಿಂದ ಏರಿಯಲ್ ಬೇರುಗಳನ್ನು (ಚಿ ಚಿ) ಉತ್ಪತ್ತಿ ಮಾಡಲು ಸಮರ್ಥವಾಗಿರುತ್ತವೆ; ಈ ಬೇರುಗಳು ಮಣ್ಣನ್ನು ಸಂಪರ್ಕಿಸುವುದರಿಂದ ಯಶಸ್ವಿ ಅಬೀಜ ಸಂತಾನೋತ್ಪತ್ತಿಯನ್ನು ಉಂಟುಮಾಡುತ್ತವೆ. ಈ ಕಾರ್ಯವಿಧಾನಗಳು ಗಿಂಕ್ಗೊದ ಸ್ಥಾಯಿತ್ವದಲ್ಲಿ ಬಹು ಮುಖ್ಯವಾಗಿವೆ; ಟಿಯಾನ್ ಮು ಶಾನ್‌‌ನಲ್ಲಿ ಉಳಿದುಕೊಂಡ "ಅರೆ-ನಿಸರ್ಗ ಸಹಜವಾಗಿ" ಬೆಳೆದ ಸಸ್ಯಗಳ ಗುಂಪಿನ ಸಮೀಕ್ಷೆಯಲ್ಲಿ, 40%ನಷ್ಟು ಗಿಂಕ್ಗೊ ಮಾದರಿಗಳು ಬಹು-ಕಾಂಡಗಳನ್ನು ಹೊಂದಿದ್ದವು ಹಾಗೂ ಕೆಲವು ಸಸಿಗಳೂ ಕಂಡುಬಂದಿದ್ದವು.<ref>ರಾಯರ್ ''ಮತ್ತು ಇತರರು'' , ಪುಟಗಳು 86-87</ref>
[[Fileಚಿತ್ರ:Ginkgo Tree Ginkgo biloba Trunk Bark 2000px.jpg|right|thumb|ಕಾಂಡದ ತೊಗಟೆ]]
 
=== ಕಾಂಡ ===
ಗಿಂಕ್ಗೊದ ಕೊಂಬೆಗಳು ಹೆಚ್ಚಿನ ಮರಗಳಲ್ಲಿ ಕಂಡುಬರುವಂತೆ ಕ್ರಮವಾಗಿ ಜೋಡಿಸಿದ ಎಲೆಗಳೊಂದಿಗೆ ಬೇರುಗಳಿಂದ ಉದ್ದಕ್ಕೆ ಬೆಳೆಯುತ್ತವೆ. ಈ ಎಲೆಗಳ [[ಕವಲು ಮೂಲೆ]]ಗಳಿಂದ, "ಕುಡಿ"ಗಳು ಎರಡನೆ-ವರ್ಷದ ಬೆಳೆವಣಿಗೆಯಲ್ಲಿ ಬೆಳೆಯುತ್ತವೆ. ಈ ಕುಡಿಗಳು ತುಂಬಾ ಸಣ್ಣ [[ಗೆಣ್ಣು ನಡುವಣ ಭಾಗ(ಇಂಟರ್ನೋಡ್)]]ಗಳನ್ನು ಹೊಂದಿರುತ್ತವೆ (ಆದ್ದರಿಂದ ಅವು ಅನೇಕ ವರ್ಷಗಳಲ್ಲಿ ಕೇವಲ ಒಂದು ಅಥವಾ ಎರಡು ಸೆಂಟಿಮೀಟರ್‌ಗಳಷ್ಟು ಮಾತ್ರ ಬೆಳೆಯುತ್ತವೆ) ಹಾಗೂ ಅವುಗಳ ಎಲೆಗಳು ಸಾಮಾನ್ಯವಾಗಿ ಹಾಲೆಗಳಿಲ್ಲದಿರುತ್ತವೆ. ಎಲೆಗಳು ಸಣ್ಣಕ್ಕಿದ್ದು, ಗಂಟುಗಳನ್ನು ಹೊಂದಿರುತ್ತವೆ ಮತ್ತು ಮೊದಲ ವರ್ಷದ ಬೆಳವಣಿಗೆಯನ್ನು ಹೊರತು, ರೆಂಬೆಗಳಲ್ಲಿ ಕ್ರಮವಾಗಿ ಜೋಡಿಸಲ್ಪಟ್ಟಿರುತ್ತವೆ. ಸಣ್ಣ ಗೆಣ್ಣು ನಡುವಣ ಭಾಗದ ಕಾರಣದಿಂದ, ಎಲೆಗಳು ಕುಡಿಗಳ ತುದಿಯಲ್ಲಿ ಗೊಂಚಲು-ಗೊಂಚಲಾಗಿರುವಂತೆ ಕಾಣುತ್ತವೆ ಹಾಗೂ ಸಂತಾನೋತ್ಪತ್ತಿ ರಚನೆಗಳು ಅವುಗಳ ಮೇಲೆ ಮಾತ್ರ ರೂಪುಗೊಳ್ಳುತ್ತವೆ (ಕೆಳಗಿನ ಚಿತ್ರಗಳನ್ನು ಗಮನಿಸಿ - ಬೀಜಗಳು ಮತ್ತು ಎಲೆಗಳು ಕುಡಿಗಳಲ್ಲಿ ಕಂಡುಬರುತ್ತವೆ). ಗಿಂಕ್ಗೊಗಳಲ್ಲಿ, ಅವು ಹೋಲುವ ಇತರ ಮರಗಳಂತೆ, ಗಿಡ್ಡ ಕುಡಿಗಳು ಕ್ರೌನ್‌ನ ಹಳೆಯ ಭಾಗಗಳಲ್ಲಿ ಹೊಸ ಎಲೆಗಳು ಹುಟ್ಟಲು ಅನುವು ಮಾಡಿಕೊಡುತ್ತವೆ. ಅನೇಕ ವರ್ಷಗಳ ನಂತರ, ಗಿಡ್ಡ ಕುಡಿಯು ಉದ್ದ (ಸಾಮಾನ್ಯ) ಕುಡಿಯಾಗಿ ಬೆಳೆಯಬಹುದು ಅಥವಾ ಅದಕ್ಕೆ ತದ್ವಿರುದ್ಧವಾಗಿ ನಡೆಯಬಹುದು.
 
=== ಎಲೆಗಳು ===
[[Fileಚಿತ್ರ:GinkgoLeaves.jpg|left|thumb|ಶರತ್ಕಾಲದಲ್ಲಿ ಗಿಂಕ್ಗೊ ಎಲೆಗಳು]]
[[ಎಲೆ]]ಗಳ ರಚನೆಯು ಬೀಜದ ಸಸ್ಯಗಳಲ್ಲಿ ಅಸಾಮಾನ್ಯವಾಗಿರುತ್ತವೆ. ಅವು ಬೀಸಣಿಗೆಯ-ಆಕಾರದಲ್ಲಿದ್ದು, ಸಿರೆಗಳು (ವೈನ್ಸ್) ಹೊರಭಾಗಕ್ಕೆ ಎಲೆಯ ಅಲುಗಿಗೆ ಹರಡಿರುತ್ತವೆ. ಈ ಎಳೆಗಳು ಕೆಲವೊಮ್ಮೆ ಕವಲಾಗುತ್ತವೆ ಆದರೆ [[ಅಡ್ಡಕೂಡುವುದಿಲ್ಲ]].<ref name="More on Morphology">[http://www.ucmp.berkeley.edu/seedplants/ginkgoales/ginkgomm.html ಗಿಂಕ್ಗೋಲ್ಸ್: ಮೋರ್ ಆನ್ ಮಾರ್ಫಾಲಜಿ]</ref> ಎರಡು ಸಿರೆಗಳು ಎಲೆಯ ಅಲುಗನ್ನು ತಳದಲ್ಲಿ ಪ್ರವೇಶಿಸಿ, ಮತ್ತೆ ಎರಡಾಗಿ ಕವಲಾಗುತ್ತವೆ; ಇದನ್ನು ದ್ವಿಭಾಜಕ ಸಿರಾವಿನ್ಯಾಸವೆಂದು ಕರೆಯುತ್ತಾರೆ. ಎಲೆಗಳು ಸಾಮಾನ್ಯವಾಗಿ 5–10&nbsp;ಸೆಂ.ಮೀ (2-4&nbsp;ಇಂಚುಗಳು)ನಷ್ಟು ಉದ್ದವಿರುತ್ತವೆ. ಕೆಲವೊಮ್ಮೆ 15&nbsp;ಸೆಂ.ಮೀ (6&nbsp;ಇಂಚುಗಳು)ನಷ್ಟೂ ಇರುತ್ತವೆ. ಎಲೆಗಳು [[ಮೈಡೆನ್ಹೇರ್ ಫರ್ನ್(ಜರೀಗಿಡ)]] ''ಆಡಿಯಾಂಟಮ್ ಕ್ಯಾಪಿಲ್ಲಸ್-ವೆನೆರಿಸ್'' ನ ಕೆಲವು ಕಿವಿಹಾಲೆಯಂಥ ರಚನೆಗಳನ್ನು ಹೋಲುವುದರಿಂದ ಹಳೆಯ ಪ್ರಸಿದ್ಧವಾದ ಹೆಸರು "ಮೈಡೆನ್ಹೇರ್ ಮರ" ಎಂಬುದು ಬಂದಿದೆ.
 
ಉದ್ದ ಕುಡಿಗಳ ಎಲೆಗಳು ಸಾಮಾನ್ಯವಾಗಿ ಒರಟಾಗಿ ಕಚ್ಚುಗಳನ್ನು ಮಾಡಿದಂತಿರುತ್ತವೆ ಅಥವಾ ಹಾಲೆಗಳಾಗಿರುತ್ತವೆ. ಆದರೆ ಕೇವಲ ಹೊರಗಿನ ಮೇಲ್ಮೆಯಲ್ಲಿ ಸಿರೆಗಳ ಮಧ್ಯೆ ಮಾತ್ರ ಹಾಗಿರುತ್ತವೆ. ಅವು ಹೆಚ್ಚು ಶೀಘ್ರವಾಗಿ ಬೆಳೆಯುವ ಕೊಂಬೆಯ ತುದಿಗಳಲ್ಲಿ ಮತ್ತು ಗಿಡ್ಡ, ಮೋಟುಮೋಟಾದ ಕುಡಿಗಳೆರಡಲ್ಲೂ ಬೆಳೆಯುತ್ತವೆ. ಕೊಂಬೆಯ ತುದಿಗಳಲ್ಲಿ, ಅವು ಪರ್ಯಾಯಾವಾಗಿ, ನಿರ್ದಿಷ್ಟ ಅಂತರಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ ಹಾಗೂ ಕುಡಿಗಳಲ್ಲಿ, ಅವು ತುದಿಗಳಲ್ಲಿ ಗೊಂಚಲುಗೊಂಚಲಾಗಿರುತ್ತವೆ.
 
=== ಸಂತಾನೋತ್ಪತ್ತಿ ===
ಗಿಂಕ್ಗೊಗಳು ಪ್ರತ್ಯೇಕ ಲಿಂಗಗಳೊಂದಿಗೆ [[ಭಿನ್ನಲಿಂಗಿ]]ಗಳಾಗಿರುತ್ತವೆ. ಕೆಲವು ಮರಗಳು [[ಹೆಣ್ಣು]] ಮತ್ತೆ ಕೆಲವು [[ಗಂಡು]]ಗಳಾಗಿರುತ್ತವೆ. ಗಂಡು ಸಸ್ಯಗಳು ಪ್ರತಿಯೊಂದು, ಕೇಂದ್ರ ಆಕ್ಸಿಸ್‌ನ ಸುತ್ತ ಸುರುಳಿಯಾಗಿ ಜೋಡಿಸಲ್ಪಟ್ಟಿರುವ ಎರಡು [[ಮೈಕ್ರೊಸ್ಪೊರಾಂಜಿಯಮ್‌]]ಗಳನ್ನು ಹೊಂದಿರುವ [[ಸ್ಪೋರೊಫಿಲ್]]ಗಳೊಂದಿಗೆ ಸಣ್ಣ [[ಪರಾಗ ಶಂಕು]]ಗಳನ್ನು ಉತ್ಪತ್ತಿ ಮಾಡುತ್ತವೆ.
 
ಹೆಣ್ಣು ಸಸ್ಯಗಳು ಶಂಕುಗಳನ್ನು ಉತ್ಪತ್ತಿ ಮಾಡುವುದಿಲ್ಲ. ಎರಡು [[ಅಂಡಾಣು(ಮೂಲಬೀಜ)]]ಗಳು ಕಾಂಡದ ಕೊನೆಯಲ್ಲಿ ರಚನೆಯಾಗುತ್ತವೆ. [[ಫಲೀಕರಣ]]ದ ನಂತರ ಒಂದು ಅಥವಾ ಎರಡೂ ಅಂಡಾಣುಗಳು ಬೀಜಗಳಾಗಿ ಬೆಳೆಯುತ್ತವೆ. ಬೀಜವು 1.5–2&nbsp;ಸೆಂ.ಮೀ ಉದ್ದವಿರುತ್ತದೆ. ಅದರ ತಿರುಳಿನ ಹೊರಗಿನ ಪದರವು ([[ಸಾರ್ಕೊಟೆಸ್ಟ]]) ತಿಳಿ ಹಳದಿ-ಕಂದು ಬಣ್ಣದಲ್ಲಿದ್ದು, ಮೃದುವಾದ [[ಹಣ್ಣಿನಂತೆ]] ಇರುತ್ತದೆ.
ಇದು ನೋಡಲು ಆಕರ್ಷಕವಾಗಿರುತ್ತದೆ. ಆದರೆ [[ಬ್ಯುಟೊನಾಯ್ಕ್ ಆಮ್ಲ]] <ref>{{cite book | last=Raven | first=Peter H. | coauthors=Ray F. Evert; Susan E. Eichhorn | year=2005 | title=Biology of Plants | edition=7th | location=New York | publisher=W. H. Freeman and Company | isbn=0716710072 | pages=429–430 }}</ref>ವನ್ನು (ಬ್ಯೂಟಿರಿಕ್ ಆಮ್ಲ ಎಂದೂ ಕರೆಯುತ್ತಾರೆ) ಹೊಂದಿರುತ್ತದೆ ಹಾಗೂ ಬಿದ್ದಾಗ ಹಳಸಿದ [[ಬೆಣ್ಣೆ]]ಯ (ಇದು ಅದೇ ರಾಸಾಯನಿಕವನ್ನು ಹೊಂದಿರುತ್ತದೆ) ಅಥವಾ ರಾಡಿ<ref>ಸೋಲೊಮನ್ ಮತ್ತು ಇತರರು. "ಬಯಾಲಜಿ" ಪುಟ 523 ISBN 05344927620-534-49276-2</ref>ಯ ವಾಸನೆಯನ್ನು ಹೊಂದಿರುತ್ತದೆ. ಕೇಂದ್ರದಲ್ಲಿ ಹೆಣ್ಣು [[ಗ್ಯಾಮಿಟೊಫೈಟ್]]ಅನ್ನು ಆವರಿಸಿರುವ [[ನ್ಯುಸೆಲ್ಲಸ್]] ಒಂದಿಗೆ, ಸಾರ್ಕೊಟೆಸ್ಟದ ಕೆಳಗೆ [[ಸ್ಕ್ಲೀರೊಟೆಸ್ಟ]] (ಇದನ್ನು ಸಾಮಾನ್ಯವಾಗಿ "ಚಿಪ್ಪು" ಎನ್ನಲಾಗುತ್ತದೆ) ಮತ್ತು ಕಾಗದದಂಥ [[ಎಂಡೊಟೆಸ್ಟ]]ವಿರುತ್ತದೆ.<ref name="Lab IX">[http://www.ucmp.berkeley.edu/IB181/VPL/CorCon/CorCon2.html ಲ್ಯಾಬೊರೇಟರಿ IX -- ''ಗಿಂಕ್ಗೊ'' , ''ಕೋರ್ಡೈಟ್ಸ್'' ಆಂಡ್ ದ ಕಾನಿಫರ್ಸ್]</ref>
 
ಗಿಂಕ್ಗೊ ಬೀಜಗಳ ಫಲೀಕರಣವು ಸೈಕಡ್, ಜರೀಗಿಡ, ಪಾಚಿ ಮತ್ತು ಆಲ್ಗೆಗಳಂತೆ ಚಲನಶೀಲ ಸ್ಪರ್ಮ್‌ನಿಂದ ನಡೆಯುತ್ತದೆ. ಸ್ಪರ್ಮ್‌ಗಳು ದೊಡ್ಡದಾಗಿರುತ್ತವೆ (ಸುಮಾರು 250-300 ಮೈಕ್ರೊಮೀಟರ್‌ಗಳು) ಮತ್ತು ಸ್ವಲ್ಪ ಹೆಚ್ಚು ದೊಡ್ಡದಾಗಿರುವ ಸೈಕಡ್‌ಗಳ ಸ್ಪರ್ಮ್‌ಗಳಂತೆಯೇ ಇರುತ್ತವೆ. ಗಿಂಕ್ಗೊ ಸ್ಪರ್ಮ್‌ಗಳನ್ನು ಮೊದಲು ಜಪಾನೀಸ್ ಸಸ್ಯವಿಜ್ಞಾನಿ [[ಸ್ಯಾಕುಗೊರೊ ಹಿರಾಸೆ]]ಯು 1896ರಲ್ಲಿ ಕಂಡುಹಿಡಿದನು.<ref>[http://www.biologie.uni-hamburg.de/b-online/fo47/ginkgo/ogura.htm ಹಿಸ್ಟರಿ ಆಫ್ ಡಿಸ್ಕವರಿ ಆಫ್ ಸ್ಪರ್ಮೆಟೊಜಾಯ್ಡ್ಸ್ ಇನ್ ಗಿಂಕ್ಗೊ ಬಿಲೋಬ ಆಂಡ್ ಸೈಕಸ್ ರಿವಲ್ಯೂಟ]</ref> ಸ್ಪರ್ಮ್‌ಗಳು ಸಂಕೀರ್ಣವಾದ ಬಹು-ಪದರಗಳ ರಚನೆಯನ್ನು ಹೊಂದಿರುತ್ತವೆ. ಇದು ನಿಜವಾಗಿ ಸಿಲಿಯಾದಂಥ(ಲೋಮಾಂಗದಂಥ) ಚಲನೆಯನ್ನು ಹೊಂದಿರುವ ಅನೇಕ ಸಾವಿರಾರು ಫ್ಲಾಗೆಲ್ಲಮ್(ಧಾವನಕಾಂಡ)ಗಳ ಆಧಾರವಾಗಿ ರೂಪವಾಗುವ ಮೂಲಭೂತ ಅಂಶಗಳ ಅಖಂಡ ಪಟ್ಟಿಯಾಗಿದೆ. ಫ್ಲಾಗೆಲ್ಲಾ/ಸಿಲಿಯಾ ರಚನೆಯು ಸ್ಪರ್ಮ್‌ಅನ್ನು ಮುಂದಕ್ಕೆ ಎಳೆಯುತ್ತದೆ. ಸ್ಪರ್ಮ್‌ಗಳು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಎರಡು ಅಥವಾ ಮೂರು ಆರ್ಕಿಗೋನಿಯಮ್‌ಗಳನ್ನು ತಲುಪಲು ಸ್ವಲ್ಪ ದೂರ ಸಾಗಿದರೆ ಸಾಕಾಗುತ್ತದೆ. ಎರಡು ಸ್ಪರ್ಮ್‌ಗಳು ಉತ್ಪತ್ತಿಯಾಗುತ್ತವೆ, ಅವುಗಳಲ್ಲಿ ಒಂದು ಯಶಸ್ವಿಯಾಗಿ ಅಂಡಾಣುವನ್ನು ಫಲೀಕರಣ ಮಾಡುತ್ತದೆ. ಗಿಂಕ್ಗೊ ಬೀಜಗಳ ಫಲೀಕರಣವು ಅವು ಆರಂಭಿಕ ಮಾಗುವಕಾಲದಲ್ಲಿ ಬೀಳುವುದಕ್ಕಿಂತ ಸ್ವಲ್ಪ ಮೊದಲು ಅಥವಾ ನಂತರ ಕಂಡುಬರುತ್ತದೆ ಎಂದು ವ್ಯಾಪಕವಾಗಿ ಹೇಳಲಾದರೂ,<ref name="More on Morphology"></ref><ref name="Lab IX"></ref> ಮೊಳಕೆಗಳು ಸಾಮಾನ್ಯವಾಗಿ ಬೀಜಗಳಲ್ಲಿ ಅವು ಮರದಿಂದ ಬಿದ್ದ ಸ್ವಲ್ಪ ಮೊದಲು ಅಥವಾ ನಂತರ ಕಂಡುಬರುತ್ತವೆ.<ref>{{cite journal |url=http://www.amjbot.org/cgi/content/abstract/84/6/870 |first1=Ben F. |last1=Holt |first2=Gar W. |last2=Rothwell |title=Is Ginkgo biloba (Ginkgoaceae) Really an Oviparous Plant? |journal=American Journal of Botany |volume=84 |issue=6 |month=June |year=1997 |pages=870–872 |doi=10.2307/2445823 |author2=Rothwell}}</ref>
 
<gallery>
೬೯ ನೇ ಸಾಲು:
</gallery>
 
== ಹರಡಿಕೆ ಮತ್ತು ಆವಾಸ ಸ್ಥಾನ ==
''ಗಿಂಕ್ಗೊ ಬಿಲೋಬ'' ಮತ್ತು ಇತರ ಜಾತಿಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡಿದ್ದರೂ, ಪ್ರಸ್ತುತ ಈ ಮರವು ನಿಸರ್ಗ ಸಹಜ ಸ್ಥಿತಿಯಲ್ಲಿ ಪೂರ್ವ [[ಚೀನಾ]]ದ [[ಜೆಜಿಯಾಂಗ್‌ ಪ್ರಾಂತ]]ದ ವಾಯುವ್ಯ ಭಾಗದ ಟಿಯಾನ್ಮು ಶಾನ್ ಪರ್ವತ ಮೀಸಲು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಆದರೆ ಅದು ನೈಸರ್ಗಿಕ ಸ್ಥಿತಿಯಲ್ಲಿದೆಯೇ ಎಂಬುದು ಮಾತ್ರ ಪ್ರಶ್ನಾರ್ಥಕವಾಗಿದೆ. ಚೀನಾದ ಇತರ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಕೃಷಿ ಮಾಡಲಾಗುತ್ತದೆ ಮತ್ತು ಇದು ರಾಷ್ಟ್ರದ ದಕ್ಷಿಣದ ಮೂರನೇ ಭಾಗದಲ್ಲಿ ಸಾಮಾನ್ಯವಾಗಿದೆ.<ref name="florachina">{{Cite book| last=Fu| first=Liguo; Li, Nan; Mill, Robert R. | contribution =Ginkgo biloba| year=1999| title=Flora of China| editor-last=Wu| editor-first=Z. Y.; Raven, P.H.; Hong, D.Y.| volume=4| pages=8| place=Beijing| publisher=Science Press; St. Louis: Missouri Botanical Garden Press| contribution-url=http://www.efloras.org/florataxon.aspx?flora_id=2&taxon_id=200005235| accessdate =31 March 2008}}</ref> ಇದನ್ನು ಉತ್ತರ ಅಮೆರಿಕದಲ್ಲಿ ಸುಮಾರು 200 ವರ್ಷಗಳ ಕಾಲ ಸಾಮಾನ್ಯವಾಗಿ ಕೃಷಿ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅದನ್ನು ಪರಿಣಾಮಕಾರಿಯಾಗಿ ರಾಷ್ಟ್ರೀಯವನ್ನಾಗಿಸಿರಲಿಲ್ಲ.<ref name="USflora">{{Cite book| last =Whetstone| first =R. David| contribution =Ginkgo biloba| year =2006| title =Flora of North America| editor-last =Flora of North America Editorial Committee, eds. 1993+| volume =2| contribution-url =http://www.efloras.org/florataxon.aspx?flora_id=1&taxon_id=200005235| place=New York & Oxford| publisher =Oxford University Press}}</ref>
 
ಈ ಮರಗಳ ನಿಸರ್ಗ ಸಹಜ ಸ್ಥಿತಿಯ ಕಂಡುಬರುವಿಕೆಯು ವಿರಳವಾಗಿ, ಎಲೆ ಉದುರುವ ಕಾಡುಗಳಲ್ಲಿ ಮತ್ತು ಕಣಿವೆಗಳಲ್ಲಿ ಉತ್ತಮ ನೀರು ಹರಿದು ಹೋಗುವ ಆಮ್ಲೀಯ [[ಹಳದಿ-ಬೂದು ಮೆಕ್ಕಲಿ]]ನಲ್ಲಿ (ಅಂದರೆ ಚೆನ್ನಾಗಿ ಒಂಡುಗಟ್ಟಿದ ಮಣ್ಣು) ಕಾಣಸಿಗುತ್ತದೆ. ಆ ಮಣ್ಣು ವೈಶಿಷ್ಟ್ಯವಾಗಿ 5ರಿಂದ 5.5ನಷ್ಟು pH ಮೌಲ್ಯವನ್ನು ಹೊಂದಿರುತ್ತದೆ.<ref name="florachina"></ref>
 
== ಜೀವವರ್ಗೀಕರಣ ಶಾಸ್ತ್ರ ಮತ್ತು ಹೆಸರಿಸುವಿಕೆ ==
ಈ ಜಾತಿಯನ್ನು ಆರಂಭಿಕವಾಗಿ ಜೀವವರ್ಗೀಕರಣ ಶಾಸ್ತ್ರದ ಪಿತಾಮಹ [[ಲಿನ್ನಾಯಸ್]] 1771ರಲ್ಲಿ ವಿವರಿಸಿದನು. ನಿರ್ದಿಷ್ಟ ವಿಶೇಷಣ ''ಬಿಲೋಬ'' ವನ್ನು [[ಲ್ಯಾಟಿನ್]] ಪದ ''ಬಿಸ್'' 'ಎರಡು' ಮತ್ತು ''ಲೋಬ'' 'ಹಾಲೆಗಳಿರುವ' ದಿಂದ ಪಡೆಯಲಾಗಿದೆ, ಇದು ಎಲೆಗಳ ಆಕಾರವನ್ನು ನಿರೂಪಿಸುತ್ತದೆ.<ref>{{cite book|author = Simpson DP| title = Cassell's Latin Dictionary | publisher = Cassell Ltd.| year = 1979|edition = 5|location = London|pages = 883| isbn=0-304-52257-0}}</ref>
 
=== ವ್ಯುತ್ಪತ್ತಿ ===
ಈ ಮರದ ಹಳೆಯ ಚೈನೀಸ್ ಹೆಸರೆಂದರೆ 銀果 ''ಯಿಂಗ್ಯೂ'' ('ಬೆಳ್ಳಿ ಹಣ್ಣು').
ಇಂದಿನ ಹೆಚ್ಚು ಸಾಮಾನ್ಯ ಹೆಸರುಗಳೆಂದರೆ - 白果 ''ಬೈ ಗ್ಯೂ'' ('ಬಿಳಿ ಹಣ್ಣು') ಮತ್ತು {{lang|zh|銀杏}} ''ಯಿಂಕ್ಸಿಂಗ್'' ('ಬೆಳ್ಳಿ [[ಆಪ್ರಿಕಾಟ್]]'). ಬೈ ಗ್ಯೂ ಹೆಸರನ್ನು ನೇರವಾಗಿ [[ವಿಯೆಟ್ನಾಂ]]ನಲ್ಲಿ (''ಬಾಚ್ ಕ್ವಾ'' ಆಗಿ) [[ತೆಗೆದುಕೊಳ್ಳಲಾಗಿದೆ]].
೮೬ ನೇ ಸಾಲು:
1690ರಲ್ಲಿ ಈ ಜಾತಿಯನ್ನು ನೋಡಿದ ಮೊದಲ [[ಪಾಶ್ಚಾತ್ಯ]] [[ಎಂಗೆಲ್ಬರ್ಟ್ ಕೇಂಫರ್]] ಅವನ ''ಅಮೋಯನಿಟೇಟ್ಸ್ ಎಕ್ಸೋಟಿಕೆ'' (1712)ಯಲ್ಲಿ ಈ ಉಚ್ಛಾರಣೆಯನ್ನು ಬರೆದಿದ್ದಾನೆ; ಅವನ ''y'' ಅನ್ನು ''g'' ಆಗಿ ತಪ್ಪು ಉಚ್ಛಾರಿಸಲಾಗಿತ್ತು ಹಾಗೂ ಆ ತಪ್ಪು ಉಚ್ಛಾರಣೆಯು ಉಳಿದುಕೊಂಡಿತು.<ref>[http://www.flc.kyushu-u.ac.jp/~michel/serv/ek/amoenitates/ginkgo/ginkgo.html ಫ್ಯಾಕಲ್ಟಿ ಆಫ್ ಲ್ಯಾಂಗ್ವೇಜಸ್ ಆಂಡ್ ಕಲ್ಚರ್ಸ್, ಕ್ಯುಶು ಯೂನಿವರ್ಸಿಟಿ]</ref>
 
== ಪ್ರಾಚೀನ ಜೀವಶಾಸ್ತ್ರ ==
ಗಿಂಕ್ಗೊ ಒಂದು [[ಉಳಿದಿರುವ ಪಳೆಯುಳಿಕೆ]]ಯಾಗಿದೆ. ಈ ಪಳೆಯುಳಿಕೆಯು 270 ದಶಲಕ್ಷ ವರ್ಷಗಳಷ್ಟು ಹಿಂದಿನ [[ಪರ್ಮಿಯನ್]] ಅವಧಿಯಿಂದ ಆಧುನಿಕ ಗಿಂಕ್ಗೊಗೆ ಗಮನಾರ್ಹವಾಗಿ ಸಂಬಂಧಿಸಿದೆ. ಗಿಂಕ್ಗೋಲ್ಸ್ ಗಣದ ಹೆಚ್ಚಾಗಿ ಮೂಲರೂಪದಂತೆ ತೋರುವ ಗುಂಪೆಂದರೆ ಟೆರಿಡೊಸ್ಪರ್ಮಟೊಫೈಟ, ಇದನ್ನು "[[ಬೀಜ ಜರೀಗಿಡ]]"ವೆಂದೂ ಕರೆಯುತ್ತಾರೆ, ನಿರ್ದಿಷ್ಟವಾಗಿ [[ಪೆಲ್ಟಾಸ್ಪರ್ಮೇಲ್ಸ್]] ಗಣ. ಏಕಮೂಲ ವರ್ಗದ ಹತ್ತಿರದ ಈಗ ಇರುವ ಸಂಬಂಧಿಗಳೆಂದರೆ [[ಸೈಕಡ್‌]]‌ಗಳು.<ref>ರಾಯರ್ ''ಮತ್ತು ಇತರರು'' , ಪುಟ 84</ref> ಇವು ಚಲನಶೀಲ ಸ್ಪರ್ಮ್‌ನ ವೈಶಿಷ್ಟ್ಯತೆಯನ್ನು ಹೊಂದಿರುವ, ಅಳಿದುಹೋದ ''G. ಬಿಲೋಬ'' ದೊಂದಿಗೆ ಹಂಚಿಕೊಳ್ಳುತ್ತದೆ. ''ಗಿಂಕ್ಗೊ'' ಜಾತಿಯ ಪಳೆಯುಳಿಕೆಗಳು ಮೊದಲು [[ಆರಂಭಿಕ ಜ್ಯುರಾಸಿಕ್]] ಅವಧಿಯಲ್ಲಿ ಕಂಡುಬಂದಿತು. ಇದು [[ಲಾರೇಶಿಯಾ]]ದ್ಯಂತ ಮಧ್ಯ [[ಜ್ಯುರಾಸಿಕ್]] ಮತ್ತು [[ಆರಂಭಿಕ ಕ್ರಿಟೇಷಿಯಸ್]] ಅವಧಿಯಲ್ಲಿ ವೈವಿಧ್ಯಗೊಳಿಸಲ್ಪಟ್ಟಿತು ಮತ್ತು ಹರಡಿತು. ಇದರ ವೈವಿಧ್ಯತೆಯು ಕ್ರಿಟೇಷಿಯಸ್ ಅವಧಿಯು ಮುಂದುವರಿದಂತೆ ಕ್ಷೀಣವಾಯಿತು ಹಾಗೂ [[ಪೇಲಿಯೊಸೀನ್]] ಅವಧಿಯಲ್ಲಿ ''[[ಗಿಂಕ್ಗೊ ಆಡಿಯಂಟಾಯ್ಡೆಸ್]]'' ಮಾತ್ರ [[ಉತ್ತರಾರ್ಧ ಗೋಳ]]ದಲ್ಲಿ ಉಳಿದುಕೊಂಡ ''ಗಿಂಕ್ಗೊ'' ಜಾತಿಯಾಗಿತ್ತು. ಆ ಸಂದರ್ಭದಲ್ಲಿ [[ದಕ್ಷಿಣಾರ್ಧ ಗೋಳ]]ದಲ್ಲಿ ಸ್ಪಷ್ಟವಾದ ಭಿನ್ನ (ಮತ್ತು ಕಡಿಮೆ ದಾಖಲಾದ) ಜಾತಿಯೊಂದು ಅಸ್ತಿತ್ವದಲ್ಲಿತ್ತು. [[ಪ್ಲಿಯೊಸೀನ್]] ಅವಧಿಯ ಕೊನೆಯಲ್ಲಿ ''ಗಿಂಕ್ಗೊ'' ಪಳೆಯುಳಿಕೆಗಳು, ಆಧುನಿಕ ಜಾತಿಗಳು ಉಳಿದುಕೊಂಡಿರುವ ಕೇಂದ್ರ ಚೀನಾದ ಕೆಲವು ಸಣ್ಣ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಪಳೆಯುಳಿಕೆ-ದಾಖಲೆಯಿಂದ ಕಣ್ಮರೆಯಾದವು. ''ಗಿಂಕ್ಗೊ'' ದ ಉತ್ತರಾರ್ಧ ಗೋಳದ ಪಳೆಯುಳಿಕೆ ಜಾತಿಯನ್ನು ವಿಶ್ವಾಸಾರ್ಹವಾಗಿ ಪ್ರತ್ಯೇಕಿಸಬಹುದೇ ಎಂಬುದು ಅನಿಶ್ಚಿತವಾಗಿದೆ. ಉತ್ತಾರಾರ್ಧ ಗೋಳದಲ್ಲಿ ಸಂಪೂರ್ಣ [[ಸೆನಜಾಯ್ಕ್]] ಅವಧಿಯಲ್ಲಿ ಒಂದು ಅಥವಾ ಎರಡು ಜಾತಿಗಳು ಮಾತ್ರ ಅಸ್ತಿತ್ವದಲ್ಲಿದ್ದವು ಎಂದು ವಿಕಾಸದ ನಿಧಾನಗತಿಯ ಬೆಳವಣಿಗೆ ಮತ್ತು ಈ ಜಾತಿಗಳ ಮರಗಳ ನಡುವಿನ ರೂಪವೈಜ್ಞಾನಿಕ ಹೋಲಿಕೆಯು ಸೂಚಿಸಿದೆ, ಅವುಗಳೆಂದರೆ - ಇಂದಿನ ''G. ಬಿಲೋಬ'' (''G. ಆಡಿಯಂಟಾಯ್ಡೆಸ್'' ಅನ್ನೂ ಒಳಗೊಂಡು) ಮತ್ತು [[ಸ್ಕಾಟ್‌ಲ್ಯಾಂಡ್‌]]‌ನ [[ಪೇಲಿಯೊಸೀನ್]]‌ನ ''[[G. ಗಾರ್ಡ್ನೆರಿ]]'' .<ref>ರಾಯರ್''ಮತ್ತು ಇತರರು'' , ಪುಟ 85</ref>
 
೯೬ ನೇ ಸಾಲು:
</gallery>
 
ಆಧುನಿಕ ಕಾಲದ ''G. ಬಿಲೋಬ'' ವು ಚೆನ್ನಾಗಿ ನೀರಿರುವ ಮತ್ತು ಹರಿದುಹೋಗುವ ಪರಿಸರದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ<ref>ರಾಯರ್ ''ಮತ್ತು ಇತರರು'' , ಪುಟ 87</ref> ಹಾಗೂ ಅಂತಹುದೇ ಪಳೆಯುಳಿಕೆ ''ಗಿಂಕ್ಗೊ'' ಅಂತಹುದೇ ಪರಿಸರದಲ್ಲಿ ಚೆನ್ನಾಗಿ ಬೆಳೆಯುತ್ತಿತ್ತು: ಪಳೆಯುಳಿಕೆ ''ಗಿಂಕ್ಗೊ'' ಪ್ರದೇಶಗಳ ದಾಖಲೆಯು ಅದು ಮೂಲವಾಗಿ ಹಳ್ಳ ಮತ್ತು ನೆರೆಯೊಡ್ಡಗಳುದ್ದಕ್ಕೆ ಕದಡಿದ ಪರಿಸರದಲ್ಲಿ ಬೆಳೆಯುತ್ತದೆಂಬುದನ್ನು ಸೂಚಿಸುತ್ತದೆ.<ref name="Royer 2003"></ref> ಆದ್ದರಿಂದ ''ಗಿಂಕ್ಗೊ'' "ಪರಿಸರ ವಿಜ್ಞಾನದ ವಿರುದ್ಧೋಕ್ತಿ"ಯನ್ನು ಸೂಚಿಸುತ್ತದೆ ಏಕೆಂದರೆ ಅದು ಕದಡಿದ ಪರಿಸರದಲ್ಲಿ ಜೀವಸಲು ಸೂಕ್ತವಾದ ಕೆಲವು ವಿಶೇಷ ಲಕ್ಷಣಗಳನ್ನು (ಅಬೀಜ ಸಂತಾನೋತ್ಪತ್ತಿ) ಹೊಂದಿರುತ್ತದೆ ಹಾಗೂ ಅದರ ಹೆಚ್ಚಿನ ಇತರ ಜೀವನ-ಚರಿತ್ರೆಯ ಲಕ್ಷಣಗಳು (ನಿಧಾನ ಬೆಳವಣಿಗೆ, ದೊಡ್ಡ ಬೀಜದ ಗಾತ್ರ, ತಡವಾದ ಸಂತಾನೋತ್ಪತ್ತಿ ಮಾಡುವ ಅಂಗದ ಬೆಳವಣಿಗೆ) ಕದಡಿತ ಪರಿಸರದಲ್ಲಿ ಬೆಳೆಯುವ ಆಧುನಿಕ ಸಸ್ಯಗಳು ತೋರಿಸುವ ಲಕ್ಷಣಗಳಿಗೆ ವಿರುದ್ಧವಾಗಿವೆ.<ref>ರಾಯರ್ ''ಮತ್ತು ಇತರರು'' , ಪುಟ 92</ref>
 
''ಗಿಂಕ್ಗೊ'' ಕದಡಿದ ಹಳ್ಳದ-ಬದಿಯ ಪರಿಸರದಲ್ಲಿ ಬೆಳೆಯಲು [[ಆಂಜಿಯೊಸ್ಪರ್ಮ್‌(ಆವೃತಬೀಜಿ)]]-ಮುಂಚಿನ ಕಾರ್ಯವಿಧಾನವನ್ನು ಬಳಸಬಹುದೆಂದು ಈ ಜಾತಿಯ ನಿಧಾನಗತಿಯ ವಿಕಾಸವು ಹೇಳುತ್ತದೆ. ಗಿಂಕ್ಗೊ [[ಜರೀಗಿಡ]], [[ಸೈಕಡ್]] ಮತ್ತು [[ಸೈಕಡಿಯಾಡ್]]ಗಳು ಕದಡಿದ ಹಳ್ಳದ-ಬದಿಯ ಪರಿಸರದಲ್ಲಿ ಬೆಳೆಯುತ್ತಿದ್ದ ಸಂದರ್ಭದಲ್ಲಿ, ಹೂಬಿಡುವ ಸಸ್ಯಗಳಿಗಿಂತ ಮೊದಲಿನ ಅವಧಿಯಲ್ಲಿ ತಗ್ಗಾದ, ತೆರೆದ, ಪೊದೆಗಳಿಂದ ತುಂಬಿದ ಮೇಲಾವರಣದಂತೆ ರೂಪುಗೊಂಡು ವಿಕಾಸ ಹೊಂದಿತು. ''ಗಿಂಕ್ಗೊಗಳ''' ದೊಡ್ಡ ಬೀಜಗಳು ಮತ್ತು "ಬೋಲ್ಟಿಂಗ್" ಗುಣವು -ಬದಿಯ ಕೊಂಬೆಗಳು ಉದ್ದವಾಗುವುದಕ್ಕಿಂತ ಮೊದಲು ಅದು 10 ಮೀಟರ್‌ನಷ್ಟು ಎತ್ತರಕ್ಕೆ ಬೆಳೆಯುತ್ತದೆ- ಅಂತಹ ಪರಿಸರಕ್ಕೆ ಮಾರ್ಪಾಡುಗಳಾಗಿರಬಹುದು.''' '' '''ಗಿಂಕ್ಗೊ'' '''''ಜಾತಿಯಲ್ಲಿನ ಭಿನ್ನತೆಯು''' '' ಕ್ರಿಟೇಷಿಯ ಅವಧಿಯಲ್ಲಿ (ಜರೀಗಿಡ, ಸೈಕಡ್ ಮತ್ತು ಸೈಕಡಿಯಾಡ್‌ಗಳೊಂದಿಗೆ) ಹೂಬಿಡುವ ಸಸ್ಯಗಳು ಬೆಳೆದ ಸಂದರ್ಭದಲ್ಲಿ ಕಂಡುಬಂದಿತು ಹಾಗೂ ಕದಡಿದ ಪರಿಸರಕ್ಕೆ ಉತ್ತಮ ಮಾರ್ಪಾಡುಗಳನ್ನು ಹೊಂದುವುದರೊಂದಿಗೆ ಹೂಬಿಡುವ ಸಸ್ಯಗಳು '' ಗಿಂಕ್ಗೊ''ವನ್ನು ಮತ್ತು ಅದರ ಸಂಬಂಧಿ ಸಸ್ಯಗಳನ್ನು ಸ್ಥಾನಾಂತರಿಸಿದವು.<ref>ರಾಯರ್ ಮತ್ತು ಇತರರು'', ಪುಟ 93'' </ref>'' '''
೧೦೩ ನೇ ಸಾಲು:
{{-}}
 
== ಕೃಷಿ ಮತ್ತು ಉಪಯೋಗಗಳು ==
ಗಿಂಕ್ಗೊವನ್ನು [[ಚೀನಾ]]ದಲ್ಲಿ ಬಹುಕಾಲದಿಂದ ಕೃಷಿ ಮಾಡಲಾಗುತ್ತಿದೆ; ಅಲ್ಲಿನ ದೇವಸ್ಥಾನಗಳಲ್ಲಿ ನೆಟ್ಟ ಕೆಲವು ಮರಗಳು ಸುಮಾರು 1,500 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಇದನ್ನು ಯುರೋಪಿಯನ್ನರು ಪಡೆದುದರ ಬಗೆಗಿನ ಮೊದಲ ದಾಖಲೆಯು 1690ರಲ್ಲಿ ಜಪಾನೀಸ್ ದೇವಸ್ಥಾನದ ಉದ್ಯಾನಗಳಲ್ಲಿ ಕಂಡುಬಂದಿದೆ. ಅಲ್ಲಿ ಮರಗಳನ್ನು ಜರ್ಮನ್ ಸಸ್ಯಶಾಸ್ತ್ರಜ್ಞ [[ಎಂಗೆಲ್ಬರ್ಟ್ ಕೇಂಫರ್]] ನೋಡಿಕೊಳ್ಳುತ್ತಿದ್ದನು. [[ಬೌದ್ಧ ಧರ್ಮ]] ಮತ್ತು [[ಕನ್‌ಫ್ಯೂಷಿಯನ್ ಧರ್ಮ]]ದಲ್ಲಿನ ಇದರ ಸ್ಥಿತಿಯಿಂದಾಗಿ, ಗಿಂಕ್ಗೊವನ್ನು ಕೊರಿಯಾ ಮತ್ತು ಜಪಾನಿನ ಕೆಲವು ಭಾಗಗಳಲ್ಲೂ ವ್ಯಾಪಕವಾಗಿ ಬೆಳೆಸಲಾಯಿತು; ಎರಡೂ ಪ್ರದೇಶಗಳಲ್ಲಿ, ಗಿಂಕ್ಗೊಗಳನ್ನು ನೈಸರ್ಗಿಕ ಅರಣ್ಯಗಳಿಗೆ ಹರಡುವುದರೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಅದರ ಪಳಗಿಸುವಿಕೆಯೂ ಕಂಡುಬಂದಿತು.
 
೧೧೭ ನೇ ಸಾಲು:
{{-}}
 
=== ಅಡುಗೆಯ ಬಳಕೆ ===
[[Fileಚಿತ್ರ:Ginkgo Seed.JPG|thumb|right|200px|ಸಾರ್ಕೊಟೆಸ್ಟ ತೆಗೆದ ಗಿಂಕ್ಗೊ ಬೀಜಗಳು]]
 
ಬೀಜಗಳೊಳಗಿನ ಕರಟಕಾಯಿಯಂಥ [[ಗ್ಯಾಮಿಟೊಫೈಟ್]]ಗಳು ಏಷ್ಯಾದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ ಹಾಗೂ ಇವು ಸಾಂಪ್ರದಾಯಿಕ ಚೈನೀಸ್ ಆಹಾರವಾಗಿವೆ. ಗಿಂಕ್ಗೊ ಬೀಜಕೋಶಗಳನ್ನು [[ಕಾಂಗೀ]]ಯಲ್ಲಿ ಬಳಸುತ್ತಾರೆ. ಇವನ್ನು ಹೆಚ್ಚಾಗಿ ಮದುವೆ ಮತ್ತು [[ಚೈನೀಸ್ ಹೊಸವರ್ಷ]]ದಂಥ ವಿಶೇಷ ಸಂದರ್ಭಗಳಲ್ಲಿ ([[ಬುದ್ಧನ ಡಿಲೈಟ್]] ಎನ್ನುವ ಸಸ್ಯಹಾರಿ ಆಹಾರದ ಭಾಗವಾಗಿ) ಉಪಯೋಗಿಸುತ್ತಾರೆ. ಚೈನೀಸ್ ಸಂಸ್ಕೃತಿಯಲ್ಲಿ ಅವನ್ನು ಆರೋಗ್ಯಕ್ಕೆ ಪ್ರಯೋಜನಕಾರಿಗಳೆಂದು ನಂಬಲಾಗುತ್ತದೆ; ಕೆಲವರು ಅವು [[ಕಾಮೋತ್ತೇಜಕ]] ಅಂಶಗಳನ್ನು ಹೊಂದಿವೆಯೆಂದು ಭಾವಿಸುತ್ತಾರೆ. ಜಪಾನೀಸ್ ಅಡುಗೆಯವರು ಗಿಂಕ್ಗೊ ಬೀಜಗಳನ್ನು (''ಗಿನ್ನನ್'' ಎನ್ನುತ್ತಾರೆ) ''[[ಚವನ್‌ಮುಂಶಿ]]'' ಯಂತಹ ತಿನಿಸುಗಳಿಗೆ ಸೇರಿಸುತ್ತಾರೆ. ಬೇಯಿಸಿದ ಬೀಜಗಳನ್ನು ಹೆಚ್ಚಾಗಿ ಇತರ ತಿನಿಸುಗಳೊಂದಿಗೆ ತಿನ್ನಲಾಗುತ್ತದೆ.
೧೨೫ ನೇ ಸಾಲು:
 
ಕೆಲವರು ಹೊರಗಿನ ಮೃದುವಾದ ಆವರಣ ಸಾರ್ಕೊಟೆಸ್ಟದಲ್ಲಿನ ರಾಸಾಯನಿಕಗಳಿಗೆ ಸೂಕ್ಷ್ಮಗ್ರಾಹಿಯಾಗಿರುತ್ತಾರೆ. ಇವರು ಬೀಜಗಳನ್ನು ಬಳಕೆಗಾಗಿ ತಯಾರಿ ನಡೆಸುವಾಗ ಬಿಸಾಡಬಹುದಾದ ಕೈಚೀಲಗಳನ್ನು ಧರಿಸಿಕೊಂಡು, ಎಚ್ಚರಿಕೆಯಿಂದ ಬೀಜಗಳನ್ನು ಕೈಯಿಂದ ಮುಟ್ಟಬೇಕಾಗುತ್ತದೆ. ಇದರಿಂದ ಉಂಟಾಗುವ [[ಚರ್ಮದ ಉರಿಯೂತ]] ಅಥವಾ [[ಗುಳ್ಳೆ]]ಗಳಂತಹ ರೋಲಕ್ಷಣಗಳು [[ವಿಷಕಾರಿ ಐವಿ]]ಯ ಸಂಪರ್ಕದಿಂದ ಉಂಟಾಗುವಂತೆಯೇ ಇರುತ್ತವೆ. ಮೃದುವಾದ ಹೊದಿಕೆಯನ್ನು ತೆಗೆದ ನಂತರ ಬೀಜಗಳು ಕೈಯಿಂದ ಮುಟ್ಟಲು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ.
[[Fileಚಿತ್ರ:Ginkgo biloba JPG1a.jpg|175px|thumb|right|ಟಾರ್ನೈನ (ಬೆಲ್ಜಿಯಂ) ಗಿಂಕ್ಗೊ ಬಿಲೋಬ]]
 
=== ಔಷಧೀಯ ಉಪಯೋಗಗಳು ===
ಗಿಂಕ್ಗೊ ಎಲೆಗಳ ಸತ್ವಗಳು [[ಫ್ಲೇವನಾಯ್ಡ್]] ಗ್ಲೈಕೊಸೈಡ್‌ಗಳನ್ನು ಮತ್ತು ಟರ್ಪೆನಾಯ್ಡ್‌ಗಳನ್ನು ಹೊಂದಿರುತ್ತವೆ ([[ಗಿಂಕ್ಗೊಲೈಡ್]]ಗಳು, [[ಬಿಲೋಬಲೈಡ್]]ಗಳು) ಹಾಗೂ ಇವನ್ನು ಔಷಧ-ವಿಜ್ಞಾನದಲ್ಲಿ ಬಳಸುತ್ತಾರೆ. ''ಗಿಂಕ್ಗೊ'' ಪೂರೈಕೆಗಳನ್ನು ಸಾಮಾನ್ಯವಾಗಿ ಪ್ರತಿ ದಿನಕ್ಕೆ 40–200&nbsp;ಮಿಗ್ರಾಂನಷ್ಟು ಪ್ರಮಾಣದಲ್ಲಿ ತೆಗೆಯಲಾಗುತ್ತದೆ. ಇತ್ತೀಚೆಗೆ [[ಪ್ರಾಯೋಗಿಕ ಪ್ರಯೋಗಗಳು]], [[ಬುದ್ಧಿಮಾಂದ್ಯ]]ಕ್ಕೆ ಚಿಕಿತ್ಸೆ ನೀಡಲು ಅಥವಾ ಸಾಮಾನ್ಯ ಜನರಲ್ಲಿ [[ಆಲ್ಜೈಮರ್ ರೋಗ]]ದ ದಾಳಿಯನ್ನು ತಡೆಗಟ್ಟಲು ''ಗಿಂಕ್ಗೊ'' ನಿಷ್ಪರಿಣಾಮಕಾರಿಯಾಗಿದೆ ಎಂದು ತೋರಿಸಿಕೊಟ್ಟಿವೆ.<ref name="dekosky">{{cite journal |pmid=19017911 |doi=10.1001/jama.2008.683 |year=2008 |author1=Dekosky |first2=JD |first3=AL |first4=RA |first5=DG |first6=JA |first7=OL |first8=G |first9=MC |first10=LP |title=Ginkgo biloba for prevention of dementia: a randomized controlled trial. |volume=300 |issue=19 |pages=2253–62 |journal=JAMA : the journal of the American Medical Association}}</ref><ref name="snitz">{{cite journal |author=Snitz ''et al'' |year=2009 |month=December |title=Ginkgo biloba for Preventing Cognitive Decline in Older Adults |journal=JAMA |volume=302 |issue=24 |pages=2663–2670 |url=http://jama.ama-assn.org/cgi/content/full/302/24/2663?home}}</ref>
 
==== ಜ್ಞಾಪಕ ಶಕ್ತಿ ವರ್ಧನೆಯಲ್ಲಿನ ====
ಗಿಂಕ್ಗೊ [[ನೂಟ್ರಾಪಿಕ್]] ಗುಣಲಕ್ಷಣಗಳನ್ನು ಹೊಂದಿದೆಯೆಂದು ನಂಬಲಾಗುತ್ತದೆ. ಇದನ್ನು ಮುಖ್ಯವಾಗಿ [[ಸ್ಮರಣ ಶಕ್ತಿ]]<ref name="Mahadevan">{{cite journal |pmid=18211362 |doi=10.1111/j.1750-3841.2007.00597.x |year=2008 |author1=Mahadevan |first2=Y |title=Multifaceted therapeutic benefits of Ginkgo biloba L.: chemistry, efficacy, safety, and uses. |volume=73 |issue=1 |pages=R14–9 |journal=Journal of food science |doi_brokendate=21 October 2009}}</ref>
ಮತ್ತು [[ಏಕಾಗ್ರತೆ]] ವರ್ಧಿಸುವ ಹಾಗೂ [[ತಲೆಸುತ್ತುವ]]-ಪ್ರತಿರೋಧಕ ಅಂಶವಾಗಿ ಬಳಸಲಾಗುತ್ತದೆ. ಆದರೆ ಅಧ್ಯಯನಗಳು ಅದರ ಪರಿಣಾಮಕಾರಿತ್ವದ ಬಗ್ಗೆ ಭಿನ್ನಾಭಿಪ್ರಾಯವನ್ನು ತೋರಿಸುತ್ತವೆ. ಸ್ಮರಣ ಶಕ್ತಿ ಕಳೆದುಕೊಳ್ಳುವುದನ್ನು ತಡೆಗಟ್ಟುವ ಗಿಂಕ್ಗೊ ಬಿಲೋಬದ ಸಾಮರ್ಥ್ಯವನ್ನು ನಿರ್ಣಯಿಸುವ ಅತಿದೊಡ್ಡ ಮತ್ತು ದೀರ್ಘಕಾಲದ ಸ್ವತಂತ್ರ ಪ್ರಾಯೋಗಿಕ ಪ್ರಯೋಗವು, ಇದರ ಪೂರೈಕೆಯು ಬುದ್ಧಿಮಾಂದ್ಯವನ್ನು ಅಥವಾ ಆಲ್ಜೈಮರ್‌ನ ರೋಗವನ್ನು ತಡೆಗಟ್ಟುವುದಿಲ್ಲವೆಂದು ತೋರಿಸಿಕೊಟ್ಟಿತು.<ref>{{cite web|url=http://www.nytimes.com/2008/11/19/health/research/18gingko.html|title=Ginkgo Biloba Ineffective Against Dementia, Researchers Find|last=Rabin|first=Roni Caryn|date=November 18, 2008|publisher=[[The New York Times]]|accessdate=12 October 2009}}</ref> ಗಿಂಕ್ಗೊವನ್ನು ಮಾರಾಟ ಮಾಡುತ್ತಿದ್ದ ಸಂಸ್ಥೆಯು ಬಂಡವಾಳ ಒದಗಿಸಿದ ಕೆಲವು ಅಧ್ಯಯನಗಳು ನೀಡಿದ ನಿರ್ಣಯದ ಬಗ್ಗೆ ಕೆಲವು ವಾದವಿವಾದಗಳು ಎದ್ದವು.<ref>{{cite web|url=http://www.slate.com/id/2165042/pagenum/all/|title=Ginkgo Biloba? Forget About It.|publisher=[[Slate (magazine)|Slate]]|last=Koerner|first=Brendan I.|accessdate=12 October 2009}}</ref>
೧೪೨ ನೇ ಸಾಲು:
ಕೆಲವು ಅಧ್ಯಯನಗಳ ಪ್ರಕಾರ, ಗಿಂಕ್ಗೊ ಗಮನಾರ್ಹವಾಗಿ ಆರೋಗ್ಯವಂತರಲ್ಲಿ ಜಾಗರೂಕತೆಯನ್ನು ಸುಧಾರಿಸಬಹುದು.<ref>{{cite journal |pmid=15739076 |doi = 10.1007/s00213-005-2206-6 |year=2005 |author1=Elsabagh |first2=DE |first3=O |first4=EM |first5=SE |title=Differential cognitive effects of Ginkgo biloba after acute and chronic treatment in healthy young volunteers. |volume=179 |issue=2 |pages=437–46 |journal=Psychopharmacology}}</ref><ref>[http://news.bbc.co.uk/2/hi/health/713087.stm BBC ನ್ಯೂಸ್: ಹರ್ಬಲ್ ರೆಮೆಡೀಸ್ "ಬೂಸ್ಟ್ ಬ್ರೈನ್ ಪವರ್"]</ref> ಅಂತಹ ಒಂದು ಅಧ್ಯಯನವು, ಆ ಪರಿಣಾಮವು ಹೆಚ್ಚುಕಡಿಮೆ ತಕ್ಷಣದಲ್ಲಾಗುತ್ತದೆ ಹಾಗೂ ಸೇವಿಸಿದ 2.5 ಗಂಟೆಗಳ ನಂತರ ಅದರ ಉನ್ನತಿಯನ್ನು ತಲುಪುತ್ತದೆ ಎಂದು ಸೂಚಿಸಿದೆ.<ref>{{cite journal |doi=10.1007/s002130000501 |title=The dose-dependent cognitive effects of acute administration of Ginkgo biloba to healthy young volunteers |year=2000 |last1=Kennedy |first1=David O. |first2=Andrew B. |first3=Keith A. |journal=Psychopharmacology |volume=151 |pages=416 |pmid=11026748 |issue=4}}</ref>
 
==== ಬುದ್ಧಿಮಾಂದ್ಯದಲ್ಲಿ ====
ಇಲಿಗಳ ಮೇಲೆ ನಡೆಸಿದ ಬಳಕೆಗೆ-ಮುಂಚಿನ ಪ್ರಯೋಗದ ಧನಾತ್ಮಕ ಫಲಿತಾಂಶಗಳ ಆಧಾರದಲ್ಲಿ ಗಿಂಕ್ಗೊವನ್ನು [[ಆಲ್ಜೈಮರ್‌ನ ರೋಗ]]ದ ಚಿಕಿತ್ಸೆಗೆ ಬಳಸಬಹುದೆಂದು ಸೂಚಿಸಲಾಯಿತು.<ref>[http://newswise.com/articles/view/543715/ ಗಿಂಕ್ಗೊ ಎಕ್ಸ್‌ಟ್ರ್ಯಾಕ್ಟ್ ಹ್ಯಾಸ್ ಮಲ್ಟಿಪಲ್ ಆನ್ ಆಲ್ಜೈಮರ್ ಸಿಂಪ್ಟಮ್ಸ್] ನ್ಯೂಸ್‌ವೈಸ್, 2008ರ ಆಗಸ್ಟ್ 25ರಂದು ಪುನಃಪಡೆಯಲಾಗಿದೆ.</ref> ಆದರೆ ''[[JAMA]]'' ದಲ್ಲಿ 2008ರಲ್ಲಿ ಪ್ರಕಟವಾದ ಯಾದೃಚ್ಛಿಕರಿಸಿದ ನಿಯಂತ್ರಿತ ಪ್ರಾಯೋಗಿಕ ಪ್ರಯೋಗವೊಂದು, ಮಾನವರ [[ಬುದ್ಧಿಮಾಂದ್ಯ]]ದ ಚಿಕಿತ್ಸೆಯಲ್ಲಿ ಇದರ ಬಳಕೆಯು ನಿಷ್ಫಲಕಾರಿಯಾಗಿದೆಯೆಂದು ಕಂಡುಹಿಡಿಯಿತು..<ref name="dekosky"></ref><ref>{{cite news | url = http://news.bbc.co.uk/2/hi/health/7453167.stm | title = Ginkgo 'does not treat dementia' | work = BBC News | date = June 16, 2008}}</ref> ''JAMA'' ದಲ್ಲಿ 2009ರಲ್ಲಿ ಪ್ರಕಟವಾದ ಮತ್ತೊಂದು ಯಾದೃಚ್ಛಿಕರಿಸಿದ ನಿಯಂತ್ರಿತ ಪ್ರಾಯೋಗವು, ಜ್ಞಾನಗ್ರಹಣದ ಕುಗ್ಗುವಿಕೆ ಅಥವಾ ಬುದ್ಧಿಮಾಂದ್ಯವನ್ನು ತಡೆಗಟ್ಟುವಲ್ಲಿ ಗಿಂಕ್ಗೊದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಕಂಡುಹಿಡಿಯಿತು.<ref name="snitz"></ref>
 
==== ಇತರ ರೋಗಲಕ್ಷಣಗಳಲ್ಲಿ ====
ಅನೇಕ ಸಂಘರ್ಷದ ಸಂಶೋಧನಾ ಫಲಿತಾಂಶಗಳ ಹೊರತು, ಗಿಂಕ್ಗೊ ಸತ್ವವು ಮಾನವನ ದೇಹದ ಮೇಲೆ ಮೂರು ಪರಿಣಾಮಗಳನ್ನು ಹೊಂದಿದೆ: ಹೆಚ್ಚಿನ ಅಂಗಾಶಗಳಿಗೆ ಮತ್ತು ಅಂಗಗಳಿಗೆ ರಕ್ತದ ಹರಿಯುವಿಕೆಯನ್ನು (ಲೋಮನಾಳದಲ್ಲಿನ ಸೂಕ್ಷ್ಮ-ರಕ್ತಪರಿಚಲನೆಯನ್ನೂ ಒಳಗೊಂಡು) ಸುಧಾರಿಸುತ್ತದೆ; [[ಸ್ವತಂತ್ರ ರ್ಯಾಡಿಕಲ್]]ಗಳಿಂದಾಗುವ ಆಕ್ಸಿಡೀಕಾರಕ ಜೀವಕೋಶಗಳ ಹಾನಿಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ; ಹಾಗೂ ಅನೇಕ ಹೃದಯರಕ್ತನಾಳದ, ಮೂತ್ರಪಿಂಡಗಳ, ಶ್ವಾಸಕೋಶದ ಮತ್ತು [[ಕೇಂದ್ರ ನರಮಂಡಲದ]] ಕಾಯಿಲೆಗಳು ಉಂಟಾಗಲು ಕಾರಣವಾಗುವ [[ಕಿರುಬಿಲ್ಲೆ-ಸಕ್ರಿಯಗೊಳಿಸುವ ಅಂಶ]]ದ ಹೆಚ್ಚಿನ ಪರಿಮಾಣಗಳನ್ನು (ಕಿರುಬಿಲ್ಲೆಗಳ ಗುಂಪುಗೂಡುವಿಕೆ, ರಕ್ತ ಹೆಪ್ಪುಗಟ್ಟುವಿಕೆ)<ref>{{cite journal |pmid=8691847 |doi=10.1016/0378-8741(96)01379-7 |year=1996 |author1=Smith |first2=K |first3=CL |title=The neuroprotective properties of the Ginkgo biloba leaf: a review of the possible relationship to platelet-activating factor (PAF). |volume=50 |issue=3 |pages=131–9 |journal=Journal of ethnopharmacology}}</ref> ತಡೆಗಟ್ಟುತ್ತದೆ. ಗಿಂಕ್ಗೊವನ್ನು [[ಮರುಕಳಿಸುವ ಕುಂಟು ನಡಿಗೆ]]ಯ ಚಿಕಿತ್ಸೆಗೆ ಬಳಸಲಾಗುತ್ತದೆ.
 
ಕೆಲವು ಅಧ್ಯಯನಗಳು ಗಿಂಕ್ಗೊದಿಂದ [[ಕಿವಿಮೊರೆತ]]ದ ರೋಗಲಕ್ಷಣಗಳನ್ನು ಗುಣಪಡಿಸಬಹುದೆಂದು ಸೂಚಿಸುತ್ತವೆ.<ref>http://www.bixby.org/faq/tinnitus/treatmnt.html#gingko</ref>
 
ಗಿಂಕ್ಗೊ ಸ್ಕ್ಲೆರೊಸಿಸ್‌ನಲ್ಲಿ ಪ್ರಯೋಜನಕಾರಿಯಾಗಿದೆ ಹಾಗೂ ಗಂಭೀರ ಪ್ರತಿಕೂಲ ಪರಿಣಾಮ ದರಗಳನ್ನು ಹೆಚ್ಚಿಸದೆ ಜ್ಞಾನಗ್ರಹಣದಲ್ಲಿ<ref name="ReferenceA">{{cite journal |pmid=17439907 |year=2007 |author1=Lovera |first2=B |first3=K |first4=CD |first5=R |first6=K |first7=K |first8=B |first9=R |first10=D |title=Ginkgo biloba for the improvement of cognitive performance in multiple sclerosis: a randomized, placebo-controlled trial. |volume=13 |issue=3 |pages=376–85 |doi=10.1177/1352458506071213 |journal=Multiple sclerosis (Houndmills, Basingstoke, England)}}</ref> ಮತ್ತು ಬಳಲಿಕೆಯಲ್ಲಿ<ref name="ReferenceA"></ref> ಸಾಧಾರಣ ಮಟ್ಟದ ಉಪಶಮನಗಳನ್ನು ತೋರಿಸುತ್ತದೆ ಎಂದು ಪೂರ್ವಭಾವಿ ಅಧ್ಯಯನಗಳು ಸೂಚಿಸುತ್ತವೆ.
 
2003ರಲ್ಲಿ ಭಾರತದ ಚಂಡೀಗರ್‌ನ ಪೋಸ್ಟ್‌ಗ್ರ್ಯಾಜ್ವೇಟ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್‌ನ ಚರ್ಮಶಾಸ್ತ್ರ ವಿಭಾಗವು ನಡೆಸಿದ ಅಧ್ಯಯನವೊಂದು, [[ವಿಟಿಲಿಗೊ]]ದ ಬೆಳವಣಿಗೆಯನ್ನು ತಡೆಗಟ್ಟಲು ಗಿಂಕ್ಗೊ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ನಿರ್ಣಯಿಸಿದೆ.<ref>{{cite journal |pmid=12780716 |year=2003 |author1=Parsad |first2=R |first3=A |title=Effectiveness of oral Ginkgo biloba in treating limited, slowly spreading vitiligo. |volume=28 |issue=3 |pages=285–7 |journal=Clinical and experimental dermatology |doi=10.1046/j.1365-2230.2003.01207.x}}</ref>
 
==== ಅಡ್ಡ ಪರಿಣಾಮಗಳು ====
ಗಿಂಕ್ಗೊ ವಿಶೇಷವಾಗಿ ರಕ್ತ ಪರಿಚಲನೆಯ ಕಾಯಿಲೆಗಳನ್ನು ಹೊಂದಿರುವವರಿಗೆ ಮತ್ತು [[ಐಬುಪ್ರೋಫೆನ್]], [[ಆಸ್ಪರಿನ್]] ಅಥವಾ [[ವಾರ್ಫರಿನ್]]ನಂತಹ [[ಹೆಪ್ಪುರೋಧಕ]]ಗಳನ್ನು ತೆಗೆದುಕೊಳ್ಳುವವರಿಗೆ ಅನಪೇಕ್ಷಿತ ಪರಿಣಾಮಗಳನ್ನು ಹೊಂದಿರಬಹುದು. ಆದರೆ ಗಿಂಕ್ಗೊ ಆರೋಗ್ಯವಂತ ವ್ಯಕ್ತಿಗಳಲ್ಲಿ ವಾರ್ಫರಿನ್‌ನ ಹೆಪ್ಪುರೋಧಕ ಗುಣಲಕ್ಷಣಗಳ ಅಥವಾ ಫಾರ್ಮಕೊಡೈನಮಿಕ್ಸ್‌ನ ಮೇಲೆ ಯಾವುದೇ ಪರಿಣಾಮವನ್ನು ಹೊಂದಿಲ್ಲವೆಂದು ಇತ್ತೀಚಿನ ಅಧ್ಯಯನಗಳು ಕಂಡುಹಿಡಿದಿದೆ.<ref name="warfarin">{{cite journal |doi=10.1111/j.1365-2125.2005.02322.x |pmid=15801937 |year=2005 |author1=Jiang |first2=KM |first3=WS |first4=AJ |first5=BD |first6=CC |first7=RO |first8=AJ |title=Effect of ginkgo and ginger on the pharmacokinetics and pharmacodynamics of warfarin in healthy subjects. |volume=59 |issue=4 |pages=425–32 |pmc=1884814 |journal=British journal of clinical pharmacology}}</ref><ref name="review">{{cite journal | quotes=no | author= Ernst E, Canter PH, Coon JT| title= Does ginkgo biloba increase the risk of bleeding? A systematic review of case reports | journal= Perfusion| year= 2005| volume= 18| pages= 52&ndash;5652–56 }}</ref> ಕೆಲವು ಪ್ರಕಾರದ ಉಪಶಾಮಕ-ನಿರೋಧಕಗಳನ್ನು ([[ಮೋನೊಅಮೈನ್ ಆಕ್ಸಿಡೀಕಾರಕ ನಿರೋಧಕ]]ಗಳು ಮತ್ತು [[ಸೆರಟೋನಿನ್ ಪುನಃಗ್ರಹಿಸುವ ಪ್ರತಿರೋಧಕ]]ಗಳು<ref>{{cite web| title=MedlinePlus Herbs and Supplements: Ginkgo (Ginkgo biloba L.)| accessdate=10 April 2008| publisher=National Institutes of Health| url=http://www.nlm.nih.gov/medlineplus/druginfo/natural/patient-ginkgo.html#Interactions}}</ref><ref name="UofMarylandMC">{{cite web| title=Ginkgo biloba| accessdate=10 April 2008| publisher=University of Maryland Medical Center| url=http://www.umm.edu/altmed/articles/ginkgo-biloba-000247.htm}}</ref>) ತೆಗೆದುಕೊಳ್ಳುವವರು ಅಥವಾ [[ಗರ್ಭಿಣಿ]]ಯರು ವೈದ್ಯರನ್ನು ಭೇಟಿ ಮಾಡದೆ ಗಿಂಕ್ಗೊವನ್ನು ಸೇವಿಸಬಾರದು.
 
ಗಿಂಕ್ಗೊದ ಅಡ್ಡಪರಿಣಾಮಗಳು ಮತ್ತು ಅಪಾಯಗಳೆಂದರೆ: ರಕ್ತಸೋರುವಿಕೆಯ ಅಪಾಯ ಹೆಚ್ಚಬಹುದು, [[ಜಠರಗರುಳಿನ]] ಅಸ್ವಸ್ಥತೆ, [[ಪಿತ್ತೋದ್ರೇಕ]], [[ವಾಂತಿ]], [[ಭೇದಿ]], ತಲೆನೋವು, ತಲೆಸುತ್ತುವಿಕೆ, ಹೃದಯ [[ಬಡಿತ ಹೆಚ್ಚಾಗುವಿಕೆ]] ಮತ್ತು ಚಡಪಡಿಕೆ.<ref name="UofMarylandMC"></ref><ref>[http://www.drugs.com/npp/ginkgo.html Drugs.comನಿಂದ ಗಿಂಕ್ಗೊದ ಸಂಪೂರ್ಣ ಮಾಹಿತಿ]</ref> ಯಾವುದೇ ಅಡ್ಡಪರಿಣಾಮಗಳು ಅನುಭವಕ್ಕೆ ಬಂದರೆ, ಅದರ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು.
 
==== ಅಲರ್ಜಿಯ ಮುನ್ನೆಚ್ಚರಿಕೆಗಳು ಮತ್ತು ಬಳಸಲು ವಿರುದ್ಧಚಿಹ್ನೆಗಳು ====
[[ವಾರ್ಫರಿನ್]] ಅಥವಾ [[ಕೌಮಡಿನ್]]ನಂತಹ ಔಷಧೀಯ ರಕ್ತ ಹೆಪ್ಪುರೋಧಕಗಳನ್ನು ಸೇವಿಸುವವರು ಗಿಂಗ್ಕೊ ಬಿಲೋಬದ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಮೊದಲು ಅವರ ವೈದ್ಯರನ್ನು ಭೇಟಿ ಮಾಡಬೇಕು ಏಕೆಂದರೆ ಇದು [[ಹೆಪ್ಪುರೋಧಕ-ನಿರೋಧಕ]]ವಾಗಿ ಕಾರ್ಯನಿರ್ವಹಿಸುತ್ತದೆ.
 
೧೬೫ ನೇ ಸಾಲು:
 
ಗಿಂಕ್ಗೊ ಬಿಲೋಬ ಎಲೆಗಳು [[ಉರುಷಿಯಾಲ್]]ಗಳೆನ್ನುವ ಪ್ರಬಲ ಅಲರ್ಜಿಕಾರಕಗಳೊಂದಿಗೆ [[ಉದ್ದ-ಸರಪಳಿಯ ಆಲ್ಕೈಲ್‌ಫೀನಾಲ್‌ಗಳನ್ನೂ]] (ವಿಷಕಾರಿ ಐವಿಯಂತೆ) ಹೊಂದಿರುತ್ತವೆ.<ref>{{cite journal |doi=10.1002/pca.733 |title=Quantification of allergenic urushiols in extracts ofGinkgo biloba leaves, in simple one-step extracts and refined manufactured material(EGb 761) |year=2004 |last1=Schötz |first1=Karl |journal=Phytochemical Analysis |volume=15 |pages=1 |pmid=14979519 |issue=1}}</ref> ಬಹುಹಿಂದಿನಿಂದಲೂ ವಿಷಕಾರಿ ಐವಿ, ಮಾವಿನ ಹಣ್ಣುಗಳು ಮತ್ತು ಇತರ ಉರುಷಿಯಾಲ್-ಉತ್ಪಾದಿಸುವ ಸಸ್ಯಗಳಿಗೆ ಪ್ರಬಲ ಅಲರ್ಜಿಯ ಪ್ರತಿಕ್ರಿಯೆಗಳನ್ನು ಹೊಂದಿರುವವರು ಗಿಂಕ್ಗೊ-ಒಳಗೊಂಡಿರುವ ಗುಳಿಗೆ, ಸಂಯುಕ್ತ ಅಥವಾ ಪದಾರ್ಥಗಳನ್ನು ಸೇವಿಸಿದಾಗ ಪ್ರತಿಕೂಲ ಕ್ರಿಯೆಯ ಪರಿಣಾಮಕ್ಕೆ ಒಳಗಾಗುತ್ತಾರೆ.
[[Fileಚಿತ್ರ:Gingko biloba JPG2b.jpg|thumb|right|ಬೆಲ್ಜಿಯಂನ ಮೋರ್ಲನ್ವೆಲ್ಜ್-ಮ್ಯಾರೀಮಾಂಟ್ ಪಾರ್ಕ್‌ನಲ್ಲಿನ ಗಿಂಕ್ಗೊ ಬಿಲೋಬ]]
 
== ಇವನ್ನೂ ಗಮನಿಸಿ ==
* [[ಆಂಡ್ರಿ ಮೈಚಾಕ್ಸ್]] ಗಿಂಕ್ಗೊವನ್ನು [[ಉತ್ತರ ಅಮೆರಿಕ]]ದಲ್ಲಿ ಪರಿಚಯಿಸಿದನು
* [[ಆಕ್ಸಿಕಾರಕ-ವಿರೋಧಿ]]
೧೭೫ ನೇ ಸಾಲು:
* [[ಪ್ರಕೃತಿ ಚಿಕಿತ್ಸಾ ವಿಧಾನದ ಔಷಧಿ]]
 
== ಆಕರಗಳು ==
{{Reflist|2}}
 
== ಮೂಲಗಳು ==
* {{cite journal |doi=10.1666/0094-8373(2003)029<0084:ECITLF>2.0.CO;2 |year=2003 |volume=29 |pages=84–104 |title=Ecological conservatism in the 'living fossil' ''Ginkgo'' |first1=Dana L. |last1=Royer |first2=Leo J. |last2=Hickey |first3=Scott L. |last3=Wing |journal=Paleobiology |issue=1}}
 
== ಬಾಹ್ಯ ಕೊಂಡಿಗಳು ==
{{wikispecies|Ginkgo biloba}}
{{commons|Ginkgo biloba}}
೧೮೭ ನೇ ಸಾಲು:
* [http://www.conifers.org/gi/gi/index.htm ಜಿಮ್ನೊಸ್ಪರ್ಮ್ ಡೇಟಾಬೇಸ್]
* [http://www.ucmp.berkeley.edu/seedplants/ginkgoales/ginkgo.html ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮ್ಯೂಸಿಯಂ ಆಫ್ ಪೇಲಿಯೊಂಟಾಲಜಿ]
* [http://www.pfaf.org/database/plants.php?Ginkgo+biloba ''ಗಿಂಕ್ಗೊ ಬಿಲೋಬ'' ಮಾಹಿತಿ (ಭವಿಷ್ಯಕ್ಕಾಗಿ ಸಸ್ಯಗಳು)]
* [http://www.nlm.nih.gov/medlineplus/druginfo/natural/patient-ginkgo.html ''ಗಿಂಕ್ಗೊ: ಮೆಡ್‌ಲೈನ್‌ಪ್ಲಸ್ ಸಪ್ಲಿಮೆಂಟ್ಸ್'' - U.S. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್]
* [http://www.umm.edu/altmed/articles/ginkgo-biloba-000247.htm ಗಿಂಕ್ಗೊ ಬಿಲೋಬ ಓವರ್‌ವ್ಯೂ - ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್]
 
[[Categoryವರ್ಗ:ಬೋನ್ಸೈಯಲ್ಲಿ ಬಳಸುವ ಸಸ್ಯಗಳು]]
[[Categoryವರ್ಗ:ಜಿಮ್ನೊಸ್ಪರ್ಮ್‍‌‌ಗಳು]]
[[Categoryವರ್ಗ:ಜೀವಂತವಿರುವ ಪಳೆಯುಳಿಕೆಗಳು]]
[[Categoryವರ್ಗ:ಔಷಧೀಯ ಸಸ್ಯಗಳು]]
[[Categoryವರ್ಗ:ಆಲಂಕಾರಿಕ ಮರಗಳು]]
[[Categoryವರ್ಗ:ಚೀನಾದ ರಾಷ್ಟ್ರೀಯ ಚಿಹ್ನೆಗಳು]]
[[Categoryವರ್ಗ:ಚೀನಾದ ಮರಗಳು]]
[[Categoryವರ್ಗ:ಅಳಿವಿನಂಚಿನಲ್ಲಿರುವ ಸಸ್ಯಗಳು]]
 
[[ar:جنكو]]
 
[[en:Ginkgo biloba]]
[[roa-rup:Ginkgo biloba]]
[[be:Гінкга двухлопасцевы]]
[[bg:Гинко]]
Line ೨೧೧ ⟶ ೨೦೮:
[[da:Tempeltræ]]
[[de:Ginkgo]]
[[et:Hõlmikpuu]]
[[el:Γκίγκο]]
[[en:Ginkgo biloba]]
[[sheo:Ginko]]
[[es:Ginkgo biloba]]
[[eoet:GinkoHõlmikpuu]]
[[eu:Ginkgo]]
[[fa:ژینکو]]
[[fi:Neidonhiuspuu]]
[[fr:Ginkgo biloba]]
[[gl:Xinkgo]]
[[he:גינקגו דו-אונתי]]
[[ko:은행나무]]
[[hi:जिन्को बाइलोबा]]
[[hsb:Rozdwojeny ginkgo]]
[[hr:Dvorežnjasti ginko]]
[[hsb:Rozdwojeny ginkgo]]
[[hu:Ginkgo biloba]]
[[id:Ginkgo]]
[[it:Ginkgo biloba]]
[[ja:イチョウ]]
[[he:גינקגו דו-אונתי]]
[[ka:გინკგო]]
[[ko:은행나무]]
[[la:Ginkgo]]
[[lv:Ginki]]
[[lb:Ginkgo]]
[[li:Ginkgo biloba]]
[[lt:Dviskiautis ginkmedis]]
[[lilv:Ginkgo bilobaGinki]]
[[hu:Ginkgo biloba]]
[[nl:Ginkgo biloba]]
[[ja:イチョウ]]
[[no:Tempeltre]]
[[pl:Miłorząb dwuklapowy]]
[[pms:Ginkgo biloba]]
[[pl:Miłorząb dwuklapowy]]
[[pt:Ginkgo]]
[[ro:Arborele pagodelor]]
[[roa-rup:Ginkgo biloba]]
[[roa-tara:Ginkgo biloba]]
[[ru:Гинкго]]
[[lvsh:GinkiGinko]]
[[simple:Ginkgo]]
[[sk:Ginko dvojlaločné]]
[[sl:Dvokrpi ginko]]
[[sr:Гинко]]
[[sh:Ginko]]
[[fi:Neidonhiuspuu]]
[[sv:Ginkgo]]
[[roa-tara:Ginkgo biloba]]
[[th:แปะก๊วย]]
[[tr:Mabet ağacı]]
"https://kn.wikipedia.org/wiki/ಗಿಂಕ್ಗೊ_ಬಿಲೋಬ" ಇಂದ ಪಡೆಯಲ್ಪಟ್ಟಿದೆ