ಚಂದ್ರಶೇಖರ ಪಾಟೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
==ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ==
ಚಂದ್ರಶೇಖರ ಪಾಟೀಲರು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಈಗಿನ ಅಧ್ಯಕ್ಷರು.
 
==ಚಂಪಾರ ಒಂದು ಕವಿತೆ==
===''ಅತಿಥಿ'''===
*ಹಿಂದಿಬ್ಬರು ಮುಂದಿಬ್ಬರು ರಾಜಭಟ್ಟರ ನಡುವೆ
ನಡೆದಾಗ ದೊಡ್ಡಗೇಟು ಕಿರುಗುಡುತ್ತದೆ
ಒಂದು ಮೂಲೆಗೆ ಗಾಂಧಿ-ಇನ್ನೊಂದು ಮೂಲೆಗೆ ನೆಹೆರು
ಗೋಡೆಯ ತುಂಬಾ ಮತ್ತೊಬ್ಬ ಗಾಂಧಿಯ ಅಮರ ಸಂದೇಶ
 
*ಭೂಗರ್ಭದ ಕಾಲಕೋಶಕ್ಕಾಗಿ ಹೆಸರು-ದೆಸೆ-ಕಿರಿಗೋತ್ರ
ದಾಖಲಾಗುತ್ತದೆ-ಎರಡು ಪೋಜಿನ ಫೋಟೋ ಸಮೇತ
ಮತ್ತೇ ರಾಜಭಟರ ನಡುವೆ ಅತಿಥಿಗೃಹಕ್ಕೆ ಪ್ರವೇಶ
ಸಣ್ಣಸರಳಿನ ಬಾಗಿಲು ಸರಳವಾಗಿ ತೆರೆದು ಸರಳವಾಗಿ ಮುಚ್ಚುತ್ತದೆ
 
*ಮಲಗಲು ಹಾಸಿಗೆ , ಹೊದೆಯಲು ಕಂಬಳಿ, ಹೇಲಲು ಪಾಯಖಾನೆ
ಎಲ್ಲಾ ಒಂದೇ ಕಡೆ ಸರ್ವತಂತ್ರ ಸ್ವತಂತ್ರ ಪ್ರದೇಶ
ಓದಲು ಪಂಚತಂತ್ರ, ಧರ್ಮಶ್ರೀ,ಪುರುಶೋತ್ತಮನ ಸಾಹಸಗಳು
ಬರೆಯಬೇಕಿನಿಸಿದರೆ ಬುಗುರಿದೆ ,ಖಾಲಿ ಗೋಡೆ ಇದೆ
 
*ಹೊತ್ತು ಹೊತ್ತಿಗೆ ಡಾಕ್ಟ್ಟರರ ನಾಲಿಗೆಯ ಶಬರಿ ಸ್ಪರ್ಶದ ಊಟ
ಕಟ್ ಕಟ್ ಬೂಟಿನ ಯೋಗಕ್ಷೇಮ,ಆಕಾಶದಲ್ಲಾಗೀಗ
ವರ್ಣಮಯ ಕ್ರಾಂತಿಯ ಸುದ್ದಿ,ಗಿಳಿವಿಂಡು,ದಾಸರ ಹಾಡು
ಕುಂಡಿಯಹಿಂದೆ ಕೈಕಟ್ಟಿಕೊಂಡು ತಿರಗುಣಿಯ ಓಡಾಟ
 
*ಸಂಜೆ ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ
ಮುಗಿಲಲ್ಲಿ ಎಲ್ಲೋ ಹಕ್ಕಿಯ ಲಗಾಟ ಹೊಡೆದಾಗ
ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ
ಮೈತುಂಬಾ ತುಂಗಭದ್ರೆಯ ಸೆಳವು ಹೆಚ್ಚುತ್ತದೆ -->[['ಗಾಂಧಿ ಸ್ಮರಣೆ']]ಸಂಕಲನದಿಂದ
 
 
{{ಸಾಹಿತಿಗಳು}}
"https://kn.wikipedia.org/wiki/ಚಂದ್ರಶೇಖರ_ಪಾಟೀಲ" ಇಂದ ಪಡೆಯಲ್ಪಟ್ಟಿದೆ